ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಲಾರಿ

Posted by Vidyamaana on 2023-09-22 12:52:00 |

Share: | | | | |


ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಲಾರಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಶುಕ್ರವಾರ ದಾಸಕೋಡಿ ಎಂಬಲ್ಲಿ ನಡೆದಿದೆ.


ಚಾಲಕ ಮತ್ತು ಕ್ಲೀನರ್ ಇಬ್ಬರು ಅಲ್ಪಸ್ವಲ್ಪ ಪ್ರಮಾಣದ ಗಾಯಗಳಿಂದ ಪಾರಾಗಿದ್ದಾರೆ.

ಬೆಂಗಳೂರು ಕಡೆಯಿಂದ ಮಂಗಳೂರಿಗೆ ಇದ್ದಿಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಚರಂಡಿಗೆ ಬಿದ್ದಿದ್ದು, ಈ ಘಟನೆ ಮುಂಜಾನೆ ಸುಮಾರು 4.30 ರವೇಳೆ ಸಂಭವಿಸಿದೆ ಎನ್ನಲಾಗಿದೆ.

ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

Posted by Vidyamaana on 2024-05-11 13:39:56 |

Share: | | | | |


ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

ಮಡಿಕೇರಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂರ್ನಾಡಿನ ಆರಿಫ್ (34) ಮೃತ ದುರ್ದೈವಿ.

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ; ಟ್ರಕ್ ಗೆ ಕಾರು ಡಿಕ್ಕಿ ಐವರು ಪೊಲೀಸರ ಸಾವು

Posted by Vidyamaana on 2023-11-20 15:27:41 |

Share: | | | | |


ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ; ಟ್ರಕ್ ಗೆ ಕಾರು ಡಿಕ್ಕಿ  ಐವರು ಪೊಲೀಸರ ಸಾವು

ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್‌ ಅಧಿಕಾರಿಗಳು  ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ.


ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಆಗಲಿದ್ದ ಕಾರಣ ಪೊಲೀಸರು ಕಾರಿನಲ್ಲಿ ನಗೌರ್‌ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.




ಪೊಲೀಸರ ವಾಹನ ಅತೀ ವೇಗದಿಂದ ಪ್ರಯಾಣಿಸುತ್ತಿತ್ತು. ಈ ವೇಳೆ ಟ್ರಕ್‌ ವೊಂದು ಓವರ್‌ ಟೇಕ್‌ ಮಾಡಿ ಹೋಗಿದೆ. ಇದೇ ಸಂದರ್ಭದಲ್ಲಿ ಮುಂದೆ ಹೋಗುತ್ತಿದ್ದ ಟ್ರಕ್‌ ಅಚಾನಕ್‌ ಆಗಿ ಬ್ರೇಕ್‌ ಹಾಕಿದೆ. ಪರಿಣಾಮ ಪೊಲೀಸರ ವಾಹನ ಟ್ರಕ್‌ ಗೆ ಹೋಗಿ ಢಿಕ್ಕಿ ಹೊಡೆದಿದೆ. ಇದರಿಂದ ವಾಹನದಲ್ಲಿ ಐವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. 


ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತ ಪೊಲೀಸರೆಲ್ಲ ರಾಜಸ್ಥಾನದ ನಾಗೌರ್ ಜಿಲ್ಲೆಯವರೆಂದು ವರದಿ ತಿಳಿಸಿದೆ.

ಫೆ.18ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

Posted by Vidyamaana on 2023-02-17 04:39:36 |

Share: | | | | |


ಫೆ.18ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಪೂರ್ವಶಿಷ್ಟ ಪದ್ಧತಿಯಂತೆ ಫೆ.18 ರಂದು ನಡೆಯಲಿದೆ.

ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು, ರಾತ್ರಿ ಶ್ರೀ ದೇವರ ಬಲಿ ಹೊರಟು, ತಂತ್ರ ಸುತ್ತು ಜರಗಿ ಬಳಿಕ ಹೊರಾಂಗಣದಲ್ಲಿ ಉಡಕೆ, ಚಂಡೆ, ವಾದ್ಯ, ಸರ್ವವಾದ್ಯ ಸುತ್ತುಗಳು ನಡೆಯಲಿದೆ.

ಬಳಿಕ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವದೊಂದಿಗೆ ಉತ್ಸವ ಮುಗಿದು, ತಡರಾತ್ರಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಬಲಿ ಉತ್ಸವ ನೆರವೇರಲಿದೆ. ಜತೆಗೆ ಪಲ್ಲಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದೆ ಎಂದು ಶ್ರೀ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

Posted by Vidyamaana on 2023-04-26 11:44:07 |

Share: | | | | |


ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

 ಬೆಳ್ತಂಗಡಿ :ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿರುವ ಅರುಣ್ ಕುಮಾರ್ ಪುತ್ತಿಲ ಇವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರಆರಿಕೋಡಿಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಧರ್ಮದರ್ಶಿಗಳ ಆಶೀರ್ವಾದವನ್ನು ಪಡೆದುಕೊಂಡರು.

ಅಂತಃಕರಣ ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

Posted by Vidyamaana on 2023-10-16 09:27:16 |

Share: | | | | |


ಅಂತಃಕರಣ  ಶುದ್ದಿಯಾಗಿಟ್ಟುಕೊಳ್ಳುವ ಮೌಲ್ಯ ಅಡಗಿರುವ ಕೃತಿ; ಡಿ ಯದುಪತಿ ಗೌಡ

ಬೆಳ್ತಂಗಡಿ; ಜಾಗತೀಕರಣ, ಉದಾರೀಕರಣ, ಆಧುನೀಕರಣ, ಸಂಸ್ಕೃತೀಕರಣ, ಮೊಬೈಲೀಕರಣ  ಇವೆಲ್ಲದರ ಮಧ್ಯೆ ನಮ್ಮ ಅಂತಃಕರಣ ಮೌಲ್ಯ ಹೇಗೆ ಶುದ್ದಿಯಾಗಿಟ್ಟುಕೊಳ್ಳುವುದು ಎಂಬುದರ ಕುರಿತಾಗಿ

ವಿದ್ಯಾರ್ಥಿಗಳು, ಪೋಷಕರು ಓದಬೇಕಾದ ಕೃತಿಯಾಗಿ ಮೌಲ್ಯ  ಹುಡುಕಾಟದಲ್ಲಿ ಕೃತಿ ಹೊರಬಂದಿದೆ ಎಂದು ಕಸಾಪ ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ‌ ಯದುಪತಿ ಗೌಡ ಹೇಳಿದರು.

ವಾಣಿ ಕಾಲೇಜಿನ ಆವರಣದಲ್ಲಿ ಅ.14 ರಂದು, ಮಾಮರ ಪ್ರಕಾಶನ ಮೈಸೂರು‌ ಅವರು ಹೊರ ತಂದಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ಅವರ ಬರಹಗಳ ಸಂಕಲ "ಮೌಲ್ಯಗಳ ಹುಡುಕಾಟದಲ್ಲಿ" ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. 


ಈ ಪುಸ್ತಕದಲ್ಲಿ 62 ಲೇಖನಗಳಿದ್ದು, ತನ್ನ ಶಿಕ್ಷಕ ವೃತ್ತಿಬದುಕಿನ ಅನುಭವ ಮತ್ತು ಬೇರೆ ಬೇರೆ ಮನಸ್ಥಿತಿಯ ವಿದ್ಯಾರ್ಥಿಗಳ ಒಡನಾಟದ ಅನುಭವದಿಂದ ಈ ಬರಹಗಳು ಅವರ ಮೂಲಕ ಹೊರ ಬಂದಿದೆ. ಸಾಮಾಜಿಕ ಮೌಲ್ಯ ಎಂದರೇನು ಎಂಬುದನ್ನು ಪ್ರಶ್ನಿಸುವ ದಿನಮಾನದಲ್ಲಿ ಶಿಕ್ಷಣ ಅಂದರೆ ಓದು ಮಾತ್ರ ಅಲ್ಲ. ಅದರ ಆಚೆಗೆ ಬದುಕು ಇದೆ. ಸಮಾಜದ ವ್ಯಕ್ತಿಗಳು ಮತ್ತು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಹೋಗಬೇಕಾದ ಮೌಲ್ಯವನ್ನು ಈ ಬರಹಗಳು ಎಚ್ಚರಿಸುತ್ತವೆ. ವ್ಯಕ್ತಿ ವ್ಯಕ್ತಿ ಗಳ ನಡುವಿನ ಸಂಬಂಧ ಇಲ್ಲದ ಶಿಕ್ಷಣ ಮೌಲ್ಯವಿಲ್ಲದ್ದು. ಹಿಂದಿನ ಕಾಲದಲ್ಲಿ ಬಡತನದ ಮಧ್ಯೆಯೂ ಹಿರಿಯರ ಜೀವನದಲ್ಲಿ ನೈತಿಕತೆ, ಜೀವನ ಮೌಲ್ಯ ಉಳಿದುಕೊಂಡಿದ್ದರು ಎಂದವರು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ‌ದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ, ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು ನಿರ್ಮಲವಾಗಿದ್ದರೆ ಬಾಹ್ಯವಾಗಿ ಮತ್ತು ಆಂತರಿಕವಾಗಿ ನಮ್ಮ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ನಮ್ಮ ನಡೆ ನುಡಿಯಲ್ಲಿ ಯಾವುದಾದರೊಂದು ಅಧ್ಯಾಪಕನ ಪ್ರಭಾವ ಇದ್ದೇ ಇರುತ್ತದೆ. ಈಗಿನ ದಿನಮಾನಗಳಲ್ಲಿ ನಾವು ಹೋಗುವ ದಾರಿಯಲ್ಲಿ ಎಡವಿದ್ದೇವೆ ಎಂದೆನಿಸುತ್ತದೆ. ಆಧುನಿಕ ಶಿಕ್ಷಣದ ಶೈಲಿ ಬದಲಾದರೂ ಸ್ಥಿತಿ ಅದೇ ಎಂಬುದು ಮುಖ್ಯ. ಯಾಕೂಬ್ ಅವರ ಈ ಕೃತಿಯಲ್ಲಿ ಭಾವ ಕೇಂದ್ರಿತವಾಗಿ ವಿಚಾರವನ್ನು ಮಂಡಿಸುವ ಶೈಲಿಯ ಬರಹಗಳು ಅಡಗಿವೆ. ಇದು ಸಮಾಜಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.

ಪುಸ್ತಕಕ್ಕೆ ಮುನ್ನುಡಿ‌ ಬರೆದ ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ ಲೇಖಕ ಯಾವತ್ತೂ ತೀರ್ಪುಗಾರ ಅಲ್ಲ. ತನ್ನ ಒಳಶೋಧದ ಪರಿಣಾಮಗಳನ್ನು ಹೇಳುವವನು ಅಷ್ಟೇ. ಆತನ ಅನುಭವಗಳು ಸಹೃದಯನ ಓದಿನ‌ ಪರಿಣಾಮವಾಗಿ ಅವನ ಅನುಭವವಾಗಿ ಅವನು ಕಂಡುಕೊಳ್ಳುವ ಸತ್ಯವೇ ಅವರವರ ಮೌಲ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಬೆಳ್ತಂಗಡಿ ಘಟಕ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗೆ ಹೆಸರಾದ ಅಂತಾರಾಷ್ಟ್ರೀಯ ಸಂಸ್ಥೆ. ಇದೀಗ ಸಾಹಿತ್ಯಿಕ ಸೇವೆಗೂ ಮುಂದಡಿಇಟ್ಟಿದೆ. ಮೌಲ್ಯಗಳ ಬಗ್ಗೆ ಬರೆದ ಈ‌ಕೃತಿ ಹೊರತರಲು ವೇದಿಕೆ ಒದಗಿಸಿರುವುದು ನಮ್ಮ ಜವಾಬ್ದಾರಿ ಕೂಡ ಎಂದರು. 

ಲೇಖಕ ಯಾಕೂಬ್ ಎಸ್ ಕೊಯ್ಯೂರು ಅವರು ಪ್ರತಿಕ್ರಿಯಿಸಿ, ನನ್ನ ಅನುಭವ ಮತ್ತು ಆಲೋಚನೆಗಳಿಗೆ ಅಕ್ಷರ ರೂಪ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದೆ. ಜನರ ಪ್ರತಿಕ್ರಿಯೆ, ಹಿರಿಯರ ಸಲಹೆಯ ಮೂಲಕ ಅದಕ್ಕೆ ಈಗ ಪುಸ್ತಕದ ರೂಪ ಬಂದಿದೆ ಎಂದರು.


ಕಾರ್ಯಕ್ರಮ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಅಬ್ದುಲ್ ಖಾದರ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಅಝರ್ ವಂದಿಸಿದರು. ಸಹಸಂಯೋಜಕರಾದ ಹರೀಶ್‌ ಹೆಗ್ಡೆ, ಹರ್ಷದ್, ಹೆರಾಲ್ಡ್ ಪಿಂಟೋ, ಶಾಹುಲ್ ಹಮೀದ್ ಸಹಕರಿಸಿದರು. ಸಂಘಟಕರ ಕಡೆಯಿಂದ ಯಾಕೂಬ್ ಎಸ್ ಕೊಯ್ಯೂರು ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಯ್ದ ಪ್ರತನಿಧಿಗಳು ಭಾಗಿಯಾಗಿದ್ದರು.

Recent News


Leave a Comment: