ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಅಡ್ಡಹೊಳೆ ; ಹೆದ್ದಾರಿ ಬದಿ ಅಂಗಡಿಯ ಮಹಿಳೆಯ ಸರ ಕಿತ್ತು ಪರಾರಿ ಯತ್ನ, ಬೆಂಗಳೂರು ಮೂಲದ ಯುವಕರಿಬ್ಬರ ಸೆರೆ

Posted by Vidyamaana on 2024-07-17 08:57:05 |

Share: | | | | |


ಅಡ್ಡಹೊಳೆ ; ಹೆದ್ದಾರಿ ಬದಿ ಅಂಗಡಿಯ ಮಹಿಳೆಯ ಸರ ಕಿತ್ತು ಪರಾರಿ ಯತ್ನ, ಬೆಂಗಳೂರು ಮೂಲದ ಯುವಕರಿಬ್ಬರ ಸೆರೆ

ಪುತ್ತೂರು: ಹೆದ್ದಾರಿ ಬದಿಯ ಅಂಗಡಿಯಲ್ಲಿದ್ದ ವೃದ್ದೆಯ ಚಿನ್ನದ ಸರ ಸೆಳೆದು ಪರಾರಿಯಾಗಲು ಯತ್ನಿಸಿದ ಬೆಂಗಳೂರು ಮೂಲದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿ ಬಳಿಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ. 

ನೆಲ್ಯಾಡಿ ಬಳಿಯ ಅಡ್ಡಹೊಳೆಯ ಹೆದ್ದಾರಿ ಬದಿಯ ಡ್ರೈ ಫ್ರುಟ್ಸ್ ಅಂಗಡಿಯಲ್ಲಿ ಒಂಟಿಯಾಗಿದ್ದ ವೃದ್ಧ ಮಹಿಳೆ ತ್ರೇಸ್ಯಮ್ಮ (60) ಅವರ ಕುತ್ತಿಗೆಯಲ್ಲಿದ್ದ ಸರವನ್ನು ಸೆಳೆದು ಯುವಕರು ಪರಾರಿಯಾಗಲು ಯತ್ನಿಸಿದ್ದರು.‌ ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಸೇರಿದ್ದು ಯುವಕರನ್ನು ಹಿಡಿದು ಥಳಿಸಿದ್ದಾರೆ.‌

ಇಂದಲ್ಲ ನಾಳೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ: ಕೆ.ಎಸ್.ಈಶ್ವರಪ್ಪ

Posted by Vidyamaana on 2023-10-19 18:11:00 |

Share: | | | | |


ಇಂದಲ್ಲ ನಾಳೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಡಿ.ಕೆ.ಶಿವಕುಮಾರ್ ಎಷ್ಟು ಅಕ್ರಮ ಆಸ್ತಿ ಹಾಗೂ ಹಣ ಸಂಗ್ರಹ ಮಾಡಿದ್ದರು ಎಂದು ತನಿಖೆಯಿಂದ ಹೊರಬಂದು, ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ ಬಂದು ಈಗ ಬೇಲ್ ನಲ್ಲಿದ್ದಾರೆ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಡಿಕೆಶಿ ಇಂದಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.



ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋದಾಗ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವ ಶಾಸಕರೂ ಕೂಡಾ ಅಲ್ಲಿರಲಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಯೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರುಗಳಿಗೆ ಸರ್ಕಾರ ಇರುವುದೇ ಬೇಡವಾಗಿದೆ. ರಾಜ್ಯದ ಜನರಿಗೂ ಸಹ ಸರ್ಕಾರ ಬೇಡವಾಗಿದೆ. ಇದರಿಂದಾಗಿ ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾಕೆ ಪ್ರಯತ್ನಿಸಬಾರದು ಎಂದರು.

ರಜೆಯ ಮೋಜು ತಂದ ಆಪತ್ತು ಆಟವಾಡಲೆಂದು ತೆರಳಿದ್ದ ಬಾಲಕ ದುರ್ಮರಣ

Posted by Vidyamaana on 2024-01-15 20:15:09 |

Share: | | | | |


ರಜೆಯ ಮೋಜು ತಂದ ಆಪತ್ತು ಆಟವಾಡಲೆಂದು ತೆರಳಿದ್ದ ಬಾಲಕ ದುರ್ಮರಣ

ಬೆಳ್ತಂಗಡಿ : ರಜೆ ಇದ್ದ ಕಾರಣ ಪಕ್ಕದ ಮನೆಗೆ ಹೋದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಏಳು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಪಣಕಜೆಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಮೊಹಮ್ಮದ್ ಹನೀಫ್ ಎಂಬವರ ಎರಡನೇ ಪುತ್ರ ಎರಡನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅನಾನ್(7) ಎಂಬಾತ ಜ.15 ರಂದು ಸಂಜೆ ಮನೆಯ ಪಕ್ಕದ ಮಕ್ಕಳ ಜೊತೆ ಆಟ ಆಡಲು ಹೋಗಿದ್ದ. ಪಕ್ಕದ ಮನೆಯ ಬಾವಿ ಕಟ್ಟೆ ಇಲ್ಲದ ಬಾವಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮನೆಯವರು ತಕ್ಷಣ ಮಗುವನ್ನು ಬಾವಿಯಿಂದ ತೆಗೆದು ಬಾಬಾ ಆಂಬುಲೆನ್ಸ್‌ ಮೂಲಕ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಮುಂದಾದಾಗ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಸ್ಥಳ ಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಆಸ್ಪತ್ರೆಗೆ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಭೇಟಿ ನೀಡಿ ಮನೆಯವರಿಗೆ ಸ್ವಂತಾನ ಹೇಳಿದ್ದಾರೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

Posted by Vidyamaana on 2024-06-15 11:22:21 |

Share: | | | | |


ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ  ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

ಪುತ್ತೂರು: ಕೋರ್ಟ್ ರಸ್ತೆ ಪಂಚಮುಖಿ ಫ್ರೆಂಡ್ಸ್ ವತಿಯಿಂದ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಶುಕ್ರವಾರ ಮಧ್ಯಾಹ್ನ ಅನ್ನದಾನ ಸೇವೆ ಜರಗಿತು.


ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ: ಸಿಎಂಗೆ ಅಕ್ಕಾತಾಯಿಯ ಹಾರೈಕೆ

Posted by Vidyamaana on 2024-08-27 01:30:16 |

Share: | | | | |


ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ: ಸಿಎಂಗೆ ಅಕ್ಕಾತಾಯಿಯ ಹಾರೈಕೆ

ಬೆಳಗಾವಿ: ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ ಎಂದು ರಾಯಬಾಗ್ ತಾಲ್ಲೂಕಿನ‌ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಮುಖ್ಯಮಂತ್ರಿಗಳಿಗೆ ಆಶೀರ್ವಾದ ಮಾಡಿದರು.ಗೃಹಲಕ್ಷ್ಮಿ ಹಣದಲ್ಲಿ ಗ್ರಾಮಕ್ಕೇ ಹೋಳಿಗೆ ಊಟ ಹಾಕಿದ ಅಕ್ಕಾತಾಯಿ ಲಂಗೂಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ವಿಮಾನ‌ ನಿಲ್ದಾಣದಲ್ಲಿ‌ ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿದ ಬಳಿಕ‌ ಅಕ್ಕಾತಾಯಿ ಸಿಎಂಗೆ ಆಶೀರ್ವದಿಸಿದರು.

ಕೈ ಮೇಲಾಗ್ಲಿ-ದೇಶ ಆಳು ದೊರೆಯೇ. ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ. ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದರು.

ಅಕ್ಕಾತಾಯಿ ಜೊತೆ ಬಂದಿದ್ದ ಮುತ್ತೈದೆಯರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ, ನಾವು ಲಕ್ಷ್ಮೀದೇವಿಗೆ ಪೂಜೆ ಮಾಡೀವಿ. ಕಂಟಕ ನಾಶ ಆಗ್ಲಿ ಅಂತ ದೇವಿಗೆ ಕೈಮುಗಿದೀವಿ ಎಂದು ಹಾರೈಸಿದರು.

ಸರಕಾರಿ ಬಸ್ ಮತ್ತು ಲಾರಿ ಮುಖಾಮುಖಿ: ಇಬ್ಬರ ದುರ್ಮರಣ

Posted by Vidyamaana on 2024-01-24 18:53:59 |

Share: | | | | |


ಸರಕಾರಿ ಬಸ್ ಮತ್ತು ಲಾರಿ ಮುಖಾಮುಖಿ: ಇಬ್ಬರ ದುರ್ಮರಣ

ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊಪ್ಪಳ ರಸ್ತೆಯ ಹಳ್ಳಿಕೇರಿ- ಬನ್ನಿಕೊಪ್ಪ ನಡುವೆ ಜರುಗಿದೆ.


ಕೊಪ್ಪಳದಿಂದ ಗದಗ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಗದಗದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಲಾರಿ ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಲಾರಿ ಚಾಲಕ ವಿನೋದಕುಮಾರ್‌ ಹಾಗೂ ಕೊಪ್ಪಳ ಜಿಲ್ಲೆಯ ಭಾಗ್ಯನಗರ ನಿವಾಸಿ ಗೀತಾ ಎನ್ನಲಾಗಿದೆ. ಮೃತ ಮಹಿಳೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ಹೊರಟಿದ್ದರು ಎನ್ನಲಾಗಿದೆ.ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭುಗೌಡ, ಇನ್ಸ್‌ಪೆಕ್ಟರ್ ಮಂಜುನಾಥ್ ಕುಸಗಲ್ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Recent News


Leave a Comment: