ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ರೈತರೇ ನಡೆಸಿದ ಹೋರಾಟ

Posted by Vidyamaana on 2023-08-16 07:14:31 |

Share: | | | | |


ರೈತರೇ ನಡೆಸಿದ ಹೋರಾಟ

ಪರತಂತ್ರ್ಯದಲ್ಲೂ 14 ದಿನಗಳ ಸ್ವತಂತ್ರ ಆಡಳಿತ: ಹೀಗಿತ್ತು ನೋಡಿ ಸುಧಾರಣಾ ಕ್ರಮಗಳು

ರೈತರೇ ನಡೆಸಿದ ಹೋರಾಟ, ರಕ್ಕಸಪಟ್ಟ (ಮಲರಾಯ) ದೈವದ ಪಾಡ್ದನದಲ್ಲೂ ಉಲ್ಲೇಖ

ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ…


ಬ್ರಿಟಿಷರ ಸೊಕ್ಕನ್ನು ಮುರಿದು 14 ದಿನ ಸ್ವತಂತ್ರ ಆಡಳಿತ ನಡೆಸಿದ ಖ್ಯಾತಿ ತುಳುನಾಡ ರೈತರದ್ದು. ಮಂಗಳೂರಿನಿಂದ ಬ್ರಿಟಿಷರನ್ನು ಓಡಿಸಿ, 1837ರ ಏ. 5ರಿಂದ 19ರವರೆಗೆ ಅಂದರೆ 14 ದಿನಗಳ ಕಾಲ ಆಡಳಿತ ನಡೆಸುವಲ್ಲಿ ಶಕ್ತರಾದರು. ಏ. 5ರಂದು ಬ್ರಿಟಿಷರ ಬಾವುಟ ಮುರಿದು, ಸ್ವತಂತ್ರ ಆಡಳಿತದ ಬಾವುಟ ಹಾರಿಸಿದ ದಿನ. ಏ. 19ರ ರಾತ್ರಿ ಬ್ರಿಟಿಷರು ಮುತ್ತಿಗೆ ಹಾಕಿ, ತುಳುನಾಡ ರೈತರ ಆಡಳಿತವನ್ನು, ಹೋರಾಟವನ್ನು ಹತ್ತಿಕ್ಕಿದ ದಿನ. ಈ ನಡುವಿನ 14 ದಿನಗಳ ಆಡಳಿತ ಹಾಗೂ ಆಡಳಿತವನ್ನು ಪಡೆಯಲು ನಡೆಸಿದ ಹೋರಾಟ ಜನಮಾನಸದಲ್ಲಿ ಸದಾ ಹಸಿರು.

ಮಾಹಿತಿ ತಂತ್ರಜ್ಞಾನ ಇನ್ನೂ ಬೆಳೆದಿರದ ದಿನಗಳವು. ಹಾಗಾಗಿ 14 ದಿನಗಳ ಕಾಲ ನಡೆಸಿದ ಆಡಳಿತ ಹೇಗಿತ್ತು ಎನ್ನುವುದರ ಪೂರ್ಣ ಮಾಹಿತಿ ಸಿಗುವುದು ಕಷ್ಟವೇ. ಬ್ರಿಟಿಷರನ್ನು ಒದ್ದೋಡಿಸಿದ ನಾಯಕರು ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ, ರೈತರು ತಮ್ಮೂರಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಂಡರು. ಮರಳಿ ಬಂದ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ನಾಯಕರನ್ನು ಹಿಡಿದು ಗಲ್ಲಿಗೇರಿಸಿದರು. ಮುಂದೆ ಬೋಪು ದಿವಾನ ಎನ್ನುವವ ತನ್ನ ವೈಯಕ್ತಿಕ ಸೈನ್ಯದ ನೆರವಿನಿಂದ, ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ರೈತರನ್ನು ಹಿಡಿದು ಬ್ರಿಟಿಷರಿಗೊಪ್ಪಿಸಿದ. ಹಾಗಾಗಿ 14 ದಿನಗಳ ಪೂರ್ಣ ಚಿತ್ರಣ ಸಿಗುವುದು ಕಷ್ಟವೇ ಆಯಿತು. ಸಿಕ್ಕ ಮಾಹಿತಿಗಳ ದಾಖಲೀಕರಣ ನಡೆದಿದೆ.

ಹಣದ ಬದಲು ವಸ್ತು ರೂಪದ ಕಂದಾಯ:

ರಾಜರ ಕಾಲದಲ್ಲಿ ರೈತರು ಬೆಳೆದ ಧಾನ್ಯಗಳನ್ನು, ಸುವಸ್ತುಗಳನ್ನು ಕಂದಾಯ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಬ್ರಿಟಿಷರು ಇದನ್ನು ತೆಗೆದು, ಹಣದ ರೂಪದಲ್ಲೇ ಕಂದಾಯ ನೀಡಬೇಕೆಂದು ಕಾನೂನು ರೂಪಿಸಿದರು. ಇದು ರೈತರಿಗೆ ತಲೆನೋವಾಯಿತು. ಹಣದ ರೂಪಕ್ಕೆ ಧಾನ್ಯಗಳನ್ನು ಬದಲಾಯಿಸುವಾಗ, ರೈತರು ಇನ್ನಷ್ಟು ನಷ್ಟವನ್ನೇ ಅನುಭವಿಸಿದರು. ಒಟ್ಟಿನಲ್ಲಿ ಕಂದಾಯ ಪಾವತಿ ಮಾಡುವಾಗ ಎರಡೆರಡು ಪಟ್ಟಿನಷ್ಟು ನಷ್ಟವನ್ನು ಅನುಭವಿಸುವಂತಾಯಿತು. ಹಾಗಾಗಿ ಆಡಳಿತ ಸಿಕ್ಕ ತುಳುನಾಡ ರೈತರ ಎರಡನೇ ಪ್ರಮುಖ ಸುಧಾರಣೆಯೇ ಕಂದಾಯದ ಪ್ರಮಾಣವನ್ನು ಶೇ. 50ರಿಂದ ಶೇ. 10ಕ್ಕೆ ಇಳಿಸಿದ್ದು ಹಾಗೂ ಕಂದಾಯವನ್ನು ವಸ್ತು ರೂಪದಲ್ಲಿ ನೀಡಬಹುದು ಎಂದು ಬದಲಾಯಿಸಿದ್ದು. ರಾಜರುಗಳ ಕಾಲದಲ್ಲಿ ಶೇ. 10ರಷ್ಟು ಕಂದಾಯ ವಿಧಿಸಲಾಗುತ್ತಿತ್ತು.

ಇದರೊಂದಿಗೆ 3 ವರ್ಷಗಳ ಕಾಲ ಯಾವುದೇ ಕಂದಾಯ ಕಟ್ಟಬೇಕಾಗಿಲ್ಲ ಎಂಬ ಆದೇಶವೂ ಸಿದ್ಧಗೊಂಡಿತ್ತು ಎಂದೂ ಹೇಳಲಾಗುತ್ತಿದೆ.

ಉಪ್ಪು, ಹೊಗೆಸೊಪ್ಪಿನ ಕರ ಇಳಿಕೆ:

ಬ್ರಿಟಿಷ್ ವಿರೋಧಿ ಅಲೆ ಮೂಡಲು ಪ್ರಮುಖ ಕಾರಣವೇ ದಿನನಿತ್ಯದ ವಸ್ತುಗಳ ಮೇಲೆ ಕರ ಹೆಚ್ಚಳ ಮಾಡಿದ್ದು. ಅದರಲ್ಲೂ ದಿನನಿತ್ಯದ ಅಡುಗೆಗೆ ಬಳಸುತ್ತಿದ್ದ ಉಪ್ಪು ಉತ್ಪಾದನೆ ಹಾಗೂ ವೀಳ್ಯದೆಲೆ ಮೊದಲಾದವಕ್ಕೆ ಬಳಸುತ್ತಿದ್ದ ಹೊಗೆಸೊಪ್ಪು ಬೆಳೆಸಬಹುದು ಎಂಬ ಹಕ್ಕನ್ನು ಬಂಟ್ವಾಳದ ರಂಗ ಬಾಳಿಗ ಎನ್ನುವವರಿಗೆ ಮಾತ್ರ ನೀಡಲಾಗಿತ್ತು. ಇದನ್ನು ಹಲವಾರು ಮಂದಿ ವಿರೋಧಿಸಿದರು. ಪರಿಣಾಮ ಹೋರಾಟ ರೂಪು ಪಡೆಯಿತು. ಆದ್ದರಿಂದ ತುಳುನಾಡ ರೈತರ ಆಡಳಿತದ ಮೊದಲ ಆಡಳಿತ ಸುಧಾರಣೆಯೇ ಉಪ್ಪು ಹಾಗೂ ಹೊಗೆಸೊಪ್ಪಿನ ಕರವನ್ನು ಕಡಿಮೆ ಮಾಡಿದ್ದು ಹಾಗೂ ಯಾರೂ ಕೂಡ ಮಾರಾಟ ಮಾಡಬಹುದು ಎನ್ನುವ ಕಾನೂನು ಜಾರಿ ಮಾಡಿರುವುದು.

ಪುತ್ತೂರು, ಸುಳ್ಯ ಮರಳಿ ಕೊಡಗಿನ ತೆಕ್ಕೆಗೆ:

ಅಮರ ಸುಳ್ಯ ಹಾಗೂ ಪುತ್ತೂರು ಇಕ್ಕೇರಿ ರಾಜವಂಶಸ್ಥರಲ್ಲಿತ್ತು. ಅದನ್ನು ಹಾಲಿಗಾಗಿ ಹಾಲೇರಿ ರಾಜವಂಶಸ್ಥರಿಗೆ ದಾನವಾಗಿ ನೀಡಿದ್ದರು. ಈ ಪ್ರದೇಶವನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ರೈತರು ಈ ಪ್ರದೇಶವನ್ನು ಮರಳಿ ವಶಪಡಿಸಿಕೊಂಡಾಗ, ಪುತ್ತೂರು ಹಾಗೂ ಅಮರ ಸುಳ್ಯವನ್ನು ಕೊಡಗಿಗೆ ಸೇರಿಸಿಬಿಟ್ಟರು.

ಹೀಗೆ ಒಟ್ಟು 14 ದಿನಗಳ ಕಾಲ ಜನಪರ ಆಡಳಿತವನ್ನು ನೀಡಲು ರೈತ ಮುಖಂಡರು ಪ್ರಯತ್ನಿಸಿದರು. ಆದರೆ ಏ. 19ರ ರಾತ್ರಿ ಬ್ರಿಟಿಷರು ದಾಳಿ ನಡೆಸಿ, ಕಳಕೊಂಡ ಪ್ರದೇಶವನ್ನು ಮರು ವಶಪಡಿಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ರೈತರು ಅಳವಡಿಸಿಕೊಂಡ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲು ಸಾಧ್ಯವಾಗದೇ ಹೋಯಿತು. ಆದರೆ ಇತಿಹಾಸದ ಪುಟದಲ್ಲಿ ಭದ್ರ ಸ್ಥಾನವನ್ನು ಪಡೆದಿದೆ. ಅದರಲ್ಲೂ ಜನಪದದ ತಿರುಳು ಎಂದೇ ಕರೆಯಲ್ಪಡುವ ದೈವಗಳ ಪಾಡ್ದನದಲ್ಲೂ ಇದರ ಉಲ್ಲೇಖ ಆಗಿದೆ ಎನ್ನುವುದು ವಿಶೇಷ.

ಪುತ್ತೂರು ತಾಲೂಕಿನ ಅರಿಯಡ್ಕದಲ್ಲಿ ಆರಾಧನೆ ಪಡೆದುಕೊಳ್ಳುವ ರಕ್ಕಸಪಟ್ಟ ದೈವದ ಪಾಡ್ದನದಲ್ಲಿ ಕಲ್ಯಾಣಪ್ಪನ ದಂಡಿನ ಪ್ರಸ್ತಾಪ ಬರುತ್ತದೆ. ವಿಟ್ಲ ಸೀಮೆಯಲ್ಲಿ ಹೆಚ್ಚು ಆರಾಧನೆ ಪಡೆದುಕೊಳ್ಳುವ ಮಲರಾಯ ದೈವವೇ ಈ ರಕ್ಕಸಪಟ್ಟ ದೈವ. ಅರಿಯಡ್ಕಕ್ಕೆ ತೆಗೆದುಕೊಂಡು ಬಂದು ಆರಾಧನೆ ಪಡೆದುಕೊಂಡ ಬಳಿಕ ರಕ್ಕಸಪಟ್ಟ ದೈವವಾಗಿ ಆರಾಧನೆ ಪಡೆದುಕೊಳ್ಳುತ್ತದೆ. ಆಗಿನ ಆಚಾರ – ವಿಚಾರ, ಆಗು-ಹೋಗುಗಳ ಪ್ರಸ್ತಾಪವನ್ನು ಈ ಪಾಡ್ದನದಲ್ಲಿ ನೋಡಲು ಸಾಧ್ಯ. ಅದೇ ಹೊತ್ತಿನ ವಿದ್ಯಮಾನ ಕಲ್ಯಾಣಪ್ಪನ ದಂಡು ಆಗಿರುವುದರಿಂದ, ಪಾಡ್ದನದಲ್ಲೂ ಪ್ರಸ್ತಾಪ ಆಗಿದೆ.

ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

Posted by Vidyamaana on 2023-07-31 03:13:10 |

Share: | | | | |


ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

ಪುತ್ತೂರು: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ, ಅನಾಧಿ ಕಾಲದಿಂದಲೂ ಟೈಲರಿಂಗ್ ವೃತ್ತಿ ಮಾಡಿಕೊಂಡೇ ಬದುಕನ್ನು ಕಟ್ಟಿದ ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ. ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡು ಬಡತನದಲ್ಲೇ ಜೀವನ ಸಾಗಿಸುವ ಕುಟುಂಬಗಳೂ ಇದೆ, ಟೈಲರಿಂಗ್ ವೃತ್ತಿ ಮಾಡುವ ಬಡ ಟೈಲರ್‌ಗಳಿಗೆ ಜೀವನಕ್ಕೆ ಭದ್ರತೆ ನೀಡಬೇಕದ ಅವಶ್ಯಕತೆ ಇದ್ದು ನಿಮ್ಮ ಬೇಡಿಕೆಗಳ ಬಗ್ಗೆ ವಿಧಾನಸಭೆಯನ್ನು ಧ್ವನಿ ಎತ್ತುವ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜು.3೦ ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಇದರ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಟೈಲರಿಂಗ್ ವೃತ್ತಿಗೆ ಇಂದು ಆಧುನಿಕತೆಯ ಟಚಪ್ ದಾಳಿ ಮಾಡಿದೆ. ಹೊರ ಜಿಲ್ಲೆಗಳಿಂದ ಬರುವ ಫ್ಯಾಷನ್ ಡಿಸೈನ್ ವೃತ್ತಿಯವರು ದುಬಾರಿ ಬೆಲೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಟೈಲರಿಂಗ್ ವೃತ್ತಿಯಲ್ಲೇ ಜೀವನ ಕಟ್ಟಿಕೊಂಡ ಅನೇಕರೂ ಇದ್ದಾರೆ. ಆದರೆ ಬಡ ಟೈಲರ್‌ಗಳು ಅಂದಿನಿಂದ ಇಂದಿನ ತನಕ ಬಡವನಾಗಿಯೇ ತನ್ನ ಕಸುಬನ್ನು ಮಾಡುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಟೈಲರಿಂಗ್ ಕಾರ್ಮಿಕರನ್ನು ಸೇರಿಸುವ ಬಗ್ಗೆ ತಾನು ಆ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸಿ ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಶಾಸಕರು ಸಭೆಯಲ್ಲಿ ಭರವಸೆ ನೀಡಿದರು.

ಕಳೆದ ೨೪ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಇದುವರೆಗೂ ಅದನ್ನು ಯಾವುದೇ ಸರಕಾರ ಪರಿಗಣಿಸಿಲ್ಲ ಎಂದು ಸಮಿತಿಯ ಪ್ರಮುಖರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕರು ಸಭೆಯಲ್ಲಿ , ಸಾರ್ವಜನಿಕ ವೇದಿಕೆಯಲ್ಲಿ ನಾವು ಬೊಬ್ಬೆ ಹೊಡೆದರೆ ಯಾವುದೇ ಪ್ರಯೋಜನವಿಲ್ಲ ಮಾತನಾಡುವಲ್ಲಿ ಮಾತನಾಡಬೇಕು, ಕೇಳುವವರಲ್ಲಿ ಕೇಳಿದರೆ ಅದಕ್ಕೆ ಪರಿಹಾರ ಸಿಗಬಹುದು ಮತ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ತನು ಖಂಡಿತಾ ಪ್ರಯತ್ನ ಪಡುವುದಾಗಿ ಶಾಸಕರು ಹೇಳಿದರು.

ಪುತ್ತೂರು ಕ್ಷೆತ್ರ ಸಮಿತಿಯ ಅಧ್ಯಕ್ಷರಾದ ಜಯರಾಮ ಬಿ ಎನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‌ಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಬಿ ಎ ನಾರಾಯಣ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರಕುಲಾಲ್,ಪುತ್ತೂರು ಸಮಿತಿ ಕಾರ್ಯದರ್ಶಿ ಉಮಾ ಯು ನಾಯ್ಕ್, ಕೋಶಾಧಿಕಾರಿ ಸುಜಾತಾ ಮಂದಾರ, ಪ್ರೇಮಲತಾ ಶೆಟ್ಟಿ, ದಾಮೋದರ ಶೆಟ್ಟಿಗಾರ್, ಕೇಶವ ಕದ್ರಿ, ಯಶೋಧರ್ ಜೈನ್, ನಾಗೇಶ್ ಕುಲಾಲ್  ಉಪಸ್ಥಿತರಿದ್ದರು. ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಸೋಧಕರಾದ ಬಿ ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಮಾನಾಯ್ಕ್ ವಂದಿಸಿದರು. ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಇಂದು ಜು.8 ದ.ಕ. ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಇಲ್ಲ: ಡಿಸಿ ಮುಲ್ಲೈ ಮುಗಿಲನ್

Posted by Vidyamaana on 2023-07-07 23:11:51 |

Share: | | | | |


ಇಂದು ಜು.8 ದ.ಕ. ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಇಲ್ಲ: ಡಿಸಿ ಮುಲ್ಲೈ ಮುಗಿಲನ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡುಬರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮುತ್ತೈ ಮುಗಿಲನ್  ತಿಳಿಸಿದ್ದಾರೆ.


ಸೂಕ್ತವಾದ ರೀತಿಯಲ್ಲಿ ಎಚ್ಚರಿಕೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಪರಿಶೀಲಿಸಿಕೊಂಡು ಶಾಲೆ, ಕಾಲೇಜು ನಡೆಸಲು ಜಿಲ್ಲಾಧಿಕಾರಿ ಸೂಚಿಸಿರುತ್ತಾರೆ

ಚಾರ್ವಾಕ ನಿವಾಸಿ ತಾರಾನಾಥ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-11-05 11:07:32 |

Share: | | | | |


ಚಾರ್ವಾಕ ನಿವಾಸಿ ತಾರಾನಾಥ್  ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ಕಡಬ ತಾಲೂಕಿನ ಚಾರ್ವಾಕ ನಿವಾಸಿ ತಾರಾನಾಥ ಎನ್ನುವವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ಕಡಬ ತಾಲೂಕಿನ ಬೊಮ್ಮಳಿಕೆ ಪದ್ಮನಾಭ ಗೌಡ ಎನ್ನುವವರ ಪುತ್ರ ತಾರಾನಾಥ (39ವ.) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು,  ತನ್ನ ರೂಮ್ ನಲ್ಲೇ ನ.3ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಈ ಬಗ್ಗೆ ಪ್ರಕರಣ ದಾಖಲಾಗಿದೆ. 


ಮೃತರು ತಂದೆ ತಾಯಿ ಪತ್ನಿ ಪುತ್ರನನ್ನು ಅಗಲಿದ್ದಾರೆ.  ನ.5 ರಂದು ಮೃತದೇಹ ತವರೂರಿಗೆ ಆಗಮಿಸಲಿದೆ.

today head line

Posted by Vidyamaana on 2024-07-19 20:37:57 |

Share: | | | | |


today head line

sfsdf


ರಾಜ್ಯದ APL-BPL ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಆರೋಗ್ಯ ಕಾರ್ಡ್ನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

Posted by Vidyamaana on 2023-12-07 08:41:00 |

Share: | | | | |


ರಾಜ್ಯದ APL-BPL ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಆರೋಗ್ಯ ಕಾರ್ಡ್ನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

ಬೆಳಗಾವಿ : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಬಹುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ.ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.‌


ರಾಜ್ಯದ ಬಿಪಿಎಲ್ ಕಾರ್ಡುದಾರರು ₹5 ಲಕ್ಷ ಹಾಗೂ APL ಕಾರ್ಡುದಾರರಿಗೆ ಗರಿಷ್ಠ ₹1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ. ಯೋಜನೆಗೆ ಕೇಂದ್ರದಿಂದ ಶೇ. 34ರಷ್ಟು ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಶೇ.66ರಷ್ಟು ಅನುದಾನವನ್ನ ಒದಗಿಸಲಿದೆ. ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Recent News


Leave a Comment: