ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

Posted by Vidyamaana on 2023-10-07 04:49:46 |

Share: | | | | |


ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ  ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ನಂತರ ಭಯಾನಕ ಹಿಂಸಾಚಾರ ನಡೆದ ಎಲ್ಲಾ ಮನೆಗಳಿಗೆ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಯಲ್ಲಿ ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ತಲವಾರು ತೋರಿಸಿ ಪೊಲೀಸರಿಗೆ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ ಸಂತ್ರಸ್ತರಿಗೆ ಸಾಂತ್ವನ ತಿಳಿಸಿದರು.


ಶಿವಮೊಗ್ಗ ರಾಗಿಗುಡ್ಡದಲ್ಲಿ ಲಕ್ಷ್ಮೀ ಎಂಬವರು ತಾಳಿ ಅಡವಿಟ್ಟು ಆಟೋ ಖರೀದಿಸಿದ್ದು ಮತಾಂದರ ಕ್ರೂರತೆಗೆ ಆಟೋ ಜಖಂಗೊಂಡಿದೆ. ಹಲವು ಮನೆಗಳ ಕಿಟಕಿ, ಬಾಗಿಲು , ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿದ್ದು ನೆನೆಸಿಕೊಂಡು ನಿವೃತ್ತ ಶಿಕ್ಷಕಿ ಬೇಸರ ವ್ಯಕ್ತಪಡಿಸಿದರು. ಈಗಲೂ ಹಿಂದೂಗಳು ಅಲ್ಲಿ ಭಯದ ವಾತಾವರಣದಲ್ಲಿ ಬದುಕು ಸವೆಸುತ್ತಿದ್ದಾರೆ. ಈ ಘಟನೆಯಲ್ಲಿ ಭಯೋತ್ಪಾದಕ ಬೆಂಬಲಿಗರ ಕೈವಾಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪುತ್ತಿಲ ತಂಡ ಹೇಳಿತು.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಸರ್ಕಾರ ಈ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

ಕುರಿಯ ಹಿ ಪ್ರಾ ಶಾಲೆ ನೂತನ ವಿವೇಕ ಕೊಠಡಿ ಉದ್ಗಾಟನೆ

Posted by Vidyamaana on 2023-12-26 20:17:28 |

Share: | | | | |


ಕುರಿಯ ಹಿ ಪ್ರಾ ಶಾಲೆ  ನೂತನ ವಿವೇಕ ಕೊಠಡಿ ಉದ್ಗಾಟನೆ

ಪುತ್ತೂರು: ಕುರಿಯ ಸರಕಾರಿ ಹಿ ಪ್ರಾ ಶಾಲೆ ಇಲ್ಲಿ‌ನಿರ್ಮಾಣವಾದ ನೂತನ ವಿವೇಕ ಕೊಠಡಿಯನ್ನು ಶಾಸಕರಾದ ಅಶೋಕ್ ರೈ ಉದ್ಘಾಟಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಪ್ರತಿಭಾವಂತರಾಗಿದ್ದು ಸೂಕ್ತ ಅವಕಾಶ ಕಲ್ಪಿಸಿದ್ದಲ್ಲಿ ಅವರು ದೊಡ್ಡ ಸಾಧಕರಾಗಬಹುದು ಎಂದು ಶಾಸಕರು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಣಣವನ್ನು ನೀಡಲಾಗುತ್ತದೆ. ಮಕ್ಕಳಿಗೆ ಶಾಲೆ ಮತ್ತು ಮನೆಯಲ್ಲಿ ಉತ್ತಮ ವಾತಾವರಣ‌ನಿರ್ಮಾಣವಾಗಬೇಕು.ಶಾಲೆಯಲ್ಲಿರುವ ಶಿಕ್ಷಕರು ಸಮನ್ವಯತೆಯಿಂದ ಕೆಲಸವನ್ನು ಮಾಡಬೇಕು. ಸಮನ್ವಯತೆ ಕೊರತೆಯ ಬಗ್ಗೆ ಅನೇಕ‌ದೂರುಗಳು ಕೇಳಿ ಬರುತ್ತಿದ್ದು ಆ ರೀತುಯಾಗದಂತೆ ಶಿಕ್ಷಕರುಗಳು ಎಚ್ಚರವಹಿಸಬೇಕಿದೆ ಎಂದು ಹೇಳಿದರು.


ಗ್ಯಾರಂಟಿ ಯೋಜನೆ ಮಕ್ಕಳ ಶಿಕ್ಣಣಕ್ಕೆ ಬಳಕೆ

ಸರಕಾರದ ಐದು ಗ್ಯಾರಂಟಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಬಳಕೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಮಹಿಳೆಯರ ಕೈ ಗಟ್ಟಿ ಮಾಡುವ ಉದ್ದೇಶ ಈ ಗ್ಯಾರಂಟಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈಯವರು ಮಾತನಾಡಿ ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಸರಕಾರಿ ಶಾಲೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು. ಮನೆಯೊಂದರಲ್ಲಿ ಆರಂಭವಾದ ಕುರಿಯ ಸರಕಾರಿ ಶಾಲೆ ಆ ಬಳಿಕ ಮುಳಿ ಹುಲ್ಲಿನ ಮಾಡಿನ ಶಾಲೆಯಾಗಿ ರೂಪುಗೊಂಡು ಆ ಬಳಿಕ ಉತ್ತರೋತ್ತರ ಅಭಿವೃದ್ದಿ ಹೊಂದಿದೆ. ಸಾವಿರಾರು ಮಕ್ಕಳು ವಿದ್ಯೆ ಕಲಿತ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ವಿಚಾರವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಗ್ರಾಪಂ ಸದಸ್ಯರುಗಳಾದ ಬೂಡಿಯಾರ್ ಪುರುಷೋತ್ತಮ ರೈ, ಯಾಕೂಬ್ ಕುರಿಯ, ನಾಗೇಶ್ ಎಂ, ಕಲಾವತಿ, ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ,ಕ್ಲಸ್ಟರ್ ಸಿಆರ್ ಪಿ ಪರಮೇಶ್ವರಿ, ನಿವೃತ್ತ ಬ್ಯಾಂಕ್ ಮೆನೆಜರ್ ನಾರಾಯಣ ರೈ, ಶಿಕ್ಷಕಿಯರಾದ  ಮಮತಾ, ರಶ್ಮಿತಾ ,ರಮ್ಯ, ಸಮದ್ ಕುರಿಯಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಾದ ನವೀನ್ ಕುಮಾರ್ ಕೆ ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಕವಿತಾ ವಂದಿಸಿದರು. ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ : ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ LIC ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ

Posted by Vidyamaana on 2023-10-02 07:54:25 |

Share: | | | | |


ಬಂಟ್ವಾಳ : ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ LIC  ಏಜೆಂಟ್ ನಾರಾಯಣ ಕುಲಾಲ್  ಆತ್ಮಹತ್ಯೆ

ಬಂಟ್ವಾಳ : ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಅ 02 ಸೋಮವಾರ ಮುಂಜಾನೆ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.


    ಮೃತನನ್ನು ಸೂರಿಕುಮೇರ್ ನಿವಾಸಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ.


  ಅ 2 ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿಯನ್ನು ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಗೈದಿರಬೇಕು ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.


   ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಅಲ್ಲಿ ಸೇರಿದವರು ಮೃತನನ್ನು ಗುರುತಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.


   ಪ್ರಥಮ ನೋಟದಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಷ್ಟೆ.

ಖಾಸಗಿ ಕ್ಷಣದ ಫೋಟೋ ತೋರಿಸಿ ವೈದ್ಯನಿಂದ ಮಹಿಳೆಗೆ ಬ್ಲ್ಯಾಕ್‌ಮೇಲ್..!

Posted by Vidyamaana on 2024-05-17 08:12:31 |

Share: | | | | |


ಖಾಸಗಿ ಕ್ಷಣದ ಫೋಟೋ ತೋರಿಸಿ ವೈದ್ಯನಿಂದ ಮಹಿಳೆಗೆ ಬ್ಲ್ಯಾಕ್‌ಮೇಲ್..!

ರಾಮನಗರ(ಮೇ.17): ಖಾಸಗಿ ಫೋಟೋ - ವಿಡಿಯೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವಿನಾಯಕನಗರ ಬಡಾವಣೆ ನಿವಾಸಿ ಪರಸಪ್ಪ ಖಾಸಗಿ ಫೋಟೋ - ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಮಹಿಳೆ ಕೋರಿದ್ದಾರೆ.

ಲೋಕಸಭಾ ಚುನಾವಣೆ ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

Posted by Vidyamaana on 2024-03-24 04:48:37 |

Share: | | | | |


ಲೋಕಸಭಾ ಚುನಾವಣೆ  ಕಾಂಗ್ರೆಸ್ ನ 46 ಅಭ್ಯರ್ಥಿಗಳ ಪಟ್ಟಿ ಪ್ರಕಟ  ದಕ್ಷಿಣ ಕನ್ನಡದ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್ ಗೆ ಟಿಕೆಟ್

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನ 46 ಅಭ್ಯರ್ಥಿಗಳ ನಾಲ್ಕೆನೇ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿರುವಳ್ಳೂರಿನಿಂದ ಸ್ಪರ್ಧಿಸಲಿದ್ದಾರೆ.

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಸಿಕಾಂತ್ ಸೆಂಥಿಲ್ ಗೆ ತಮಿಳುನಾಡಿನ ತಿರುವಳ್ಳೂರಿನಿಂದ ಟಿಕೆಟ್ ನೀಡಲಾಗಿದೆ.ಅಸ್ಸಾಂ 1, ಅಂಡಮಾನ್ ನಿಕೋಬಾರ್ 1, ಚತ್ತೀಸ್ ಗಡ್ 1, ಜಮ್ಮು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.

ಕೊಲೆ ಬೆದರಿಕೆ ಆರೋಪ: ವಿಷ ಸೇವಿಸಿ ವಿದ್ಯಾರ್ಥಿನಿ ಆಶಾ ಆತ್ಮಹತ್ಯೆ

Posted by Vidyamaana on 2023-10-14 13:13:40 |

Share: | | | | |


ಕೊಲೆ ಬೆದರಿಕೆ ಆರೋಪ: ವಿಷ ಸೇವಿಸಿ ವಿದ್ಯಾರ್ಥಿನಿ ಆಶಾ ಆತ್ಮಹತ್ಯೆ

ಹಾಸನ: ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಹೆದರಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ನಡೆದಿದೆ.

       ಆಶಾ (20) ಮೃತ ಯುವತಿ. ಬೇಲೂರು ಪಟ್ಟಣದ ಕಾಲೇಜುವೊಂದರಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾಳನ್ನು ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಆಲೂರು ತಾಲೂಕು ಕಾಟೀಹಳ್ಳಿ ಗ್ರಾಮದ ಮಂಜುನಾಥ ಎಂಬಾತ ಪ್ರೀತಿಸುತ್ತಿದ್ದ. ಇತ್ತೀಚೆಗೆ ಇದೇ ಮಂಜುನಾಥ ಬೇರೊಂದು ಹುಡುಗಿ ಜೊತೆ ಸುತ್ತಾಡುತ್ತಿದ್ದ. ಇದನ್ನು ಗಮನಿಸಿದ ಆಶಾ ಮಂಜುನಾಥನನ್ನು ಹೀಗೇಕೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಳು. ನೀನು ನನ್ನನ್ನು ಹೀಗೆಲ್ಲಾ ಪ್ರಶ್ನೆ ಮಾಡಬೇಡ. ಪ್ರಶ್ನಿಸಿದರೆ ಕೊಲೆ ಮಾಡುತ್ತೇನೆ. ಅಷ್ಟೇ ಅಲ್ಲ, ನೀನು ನನ್ನೊಂದಿಗೆ ಸುತ್ತಾಡಿರುವ ಫೋಟೋ, ಮೆಸೇಜ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ, ನಿಂದಿಸಿದ್ದ ಎಂದ ಆರೋಪಿಸಲಾಗಿದೆ.

Recent News


Leave a Comment: