ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಸಮಾಜದ ಶಿಲ್ಪಿಯಾಗಿ ಶಿಕ್ಷಕ - ವಿಶಾಲಾಕ್ಷಿ. ಕೆ. ಶಿಕ್ಷಕರು

Posted by Vidyamaana on 2024-09-05 02:50:40 |

Share: | | | | |


ಸಮಾಜದ ಶಿಲ್ಪಿಯಾಗಿ ಶಿಕ್ಷಕ - ವಿಶಾಲಾಕ್ಷಿ. ಕೆ. ಶಿಕ್ಷಕರು

ಗುರು ಬ್ರಹ್ಮ:ಗುರು ವಿಷ್ಣು: ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರಬ್ರಹ್ಮ :ತಸ್ಮೈ ಶ್ರೀ ಗುರವೇ ನಮಃ 

   ಅಕ್ಕರೆಯ ತೈಲವನ್ನೆರೆದು ಜ್ಞಾನ ದೀವಿಗೆಯನ್ನು ಬೆಳಗಿ, ನನ್ನ ಜೀವನಕ್ಕೆ ಬೆಳಕು ತೋರಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟು, ಮತ್ತೆ ಅಕ್ಕರೆಯ ತೈಲವೆರೆಸಿ ,ಕಿರು ಹಣತೆಗಳ ಬೆಳಗಲು ದಾರಿ ತೋರಿದ ಪರಬ್ರಹ್ಮ ಸ್ವರೂಪಿ ನನ್ನೆಲ್ಲ ಗುರುಗಳಿಗೆ ಸಾಷ್ಟಾಂಗ ನಮಿಸುತ್ತ, ಶಿಕ್ಷಕ ವೃತ್ತಿ ಬದುಕಿನ ಧನ್ಯತೆಯ ಅಭಿಮಾನವನ್ನು ಹಂಚಿಕೊಳ್ಳಬಯಸುತ್ತಿರುವೆನು. 

       ವೃತ್ತಿಗಳಲ್ಲಿ ಅತ್ಯಂತ ಗೌರವಾನ್ವಿತ ಮತ್ತು ತೃಪ್ತಿ ನೀಡಬಲ್ಲ ಹೆಮ್ಮೆಯ ವೃತ್ತಿ ಎಂದರೆ, ಅದು ಶಿಕ್ಷಕ ವೃತ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಉಳಿದೆಲ್ಲ ವೃತ್ತಿಗಳಲ್ಲಿರುವವರು ಕೇವಲ ಸಮಾಜದೊಡನೆ ಅಥವಾ ಯಾಂತ್ರಿಕ ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರೆ, ಶಿಕ್ಷಕರು ಜೀವಂತ ದೇವರುಗಳೆಂಬ ಹೂ ಮನಸಿನ ಮಕ್ಕಳ ಜೊತೆ ಸದಾ ಸಂತೋಷದಿಂದಿರುವವರು. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ತುಂಬಾ ಭಾಗ್ಯವಂತರು ಎಂದೇ ಹೇಳಬಹುದು. 

     ಸುಮಾರು ಮೂರು ವರ್ಷದ ನಂತರ ಅಮ್ಮನ ಬೆಚ್ಚನೆಯ ಮಡಿಲಿನಿಂದ ಶಾಲೆ ಎನ್ನುವ ಹೊಸ ಪರಿಸರವನ್ನು ಕುತೂಹಲದಿಂದ, ಭಯದಿಂದ ಪ್ರವೇಶಿಸುವ ಮಗುವಿಗೆ ಅಲ್ಲಿನ ಶಿಕ್ಷಕಿಯೇ ಸರ್ವಸ್ವವಾಗಿ ಕಾಣುತ್ತಾಳೆ. ಅದು ತನ್ನ ತಾಯಿ ಸ್ವರೂಪವನ್ನು ಶಿಕ್ಷಕಿಯಲ್ಲಿ ಕಾಣುತ್ತಾ ತಾಯಿಯ ಮಮತೆಯನ್ನು ನಿರೀಕ್ಷಿಸುತ್ತಿರುತ್ತದೆ. ಆ ಸಮಯದಲ್ಲಿ ಶಿಕ್ಷಕರಾದ ನಾವು ಕೊಡುವ ಧೈರ್ಯ ಭರವಸೆ ಪ್ರೀತಿ ಕಾಳಜಿಯು ಮಗು ನಮ್ಮನ್ನು ಸದಾ ಅನುಕರಿಸುವಂತೆ ಮಾಡುತ್ತದೆ. ಒಮ್ಮೆ ಮಕ್ಕಳು ಶಿಕ್ಷಕರಡೆಗೆ ಆಕರ್ಷಿತರಾದರೆ ಮುಂದೆ ಅವರು ಶಿಕ್ಷಕರು ಕಲಿಸುವ ಯಾವುದೇ ವಿಷಯವನ್ನು ತುಂಬಾ ಇಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕಲಿಯುತ್ತಾರೆ .

     

ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿದ ದಂಪತಿ

Posted by Vidyamaana on 2023-09-05 01:57:39 |

Share: | | | | |


ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿದ ದಂಪತಿ

ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿ ದಂಪತಿ ಅಂದರ್ ಆದ ಘಟನೆ ಸುಳ್ಯದಲ್ಲಿ ನಡೆದಿದೆ.


ಕೇರಳದಿಂದ 3 ಪವನ್ ಚಿನ್ನದ ಸರವನ್ನು ಕದ್ದ ಕಿಲಾಡಿ ಸರ್ಜಾನ್ ದಂಪತಿ ಅದನ್ನು 22 ದಿನಗಳ ಹಿಂದೆ ಸುಳ್ಯದ ಚಿನ್ನದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದರು. ಅಲ್ಲದೇ ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಅದನ್ನು ಮಾರಾಟ ಮಾಡಿದ್ದರು. ಅಂಗಡಿ ಮಾಲೀಕರು ಕಿಲಾಡಿ ದಂಪತಿಗೆ 1 ಲಕ್ಷದ 43 ಸಾವಿರ ರೂಪಾಯಿ ನೀಡಿದ್ದರು


ಆದರೆ ಇದೀಗ ಈ ಸರದ ಹಿಂದಿನ ಅಸಲಿಯತ್ತು ಬಯಲಾಗಿದ್ದು ದಂಪತಿ ಕಳ್ಳರು ಅನ್ನೋದು ಗೊತ್ತಾಗಿದೆ. ಕೇರಳ ಪೊಲೀಸರು ಆರೋಪಿ ಸರ್ಜಾನ್ ಇದೇ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಅದರಂತೆ ಸೆಪ್ಟೆಂಬರ್ 2 ರಂದು ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಬಳಿಯಿರುವ ಚಿನ್ನದಂಗಡಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದ್ದಾರೆ.ಇದೀಗ ಕೇರಳ ಪೊಲೀಸರು ಬಂದು ವಿಚಾರಿಸಿ ಚಿನ್ನವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಹಿಂದೆಯೂ ಆತ ಮೂರು ಕಡೆ ಹೀಗೆಯೇ ವಂಚಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂದು ತಿಳಿದು ಬಂದಿದೆ. ಸ್ಥಳ ಮಹಜರಿಗೆ ಪೊಲೀಸರ ಜೊತೆ ಬಂದಿರುವ ಕಳ್ಳ ವಾಪಸ್ ನಾನು ಹಣ ನೀಡುವುದಾಗಿ ಜ್ಯುವೆಲರ್ಸ್ ಮಾಲೀಕರಿಗೆ ಹೇಳಿದ್ದಾನೆ ಎನ್ನಲಾಗಿದೆ.

ಮಂಗಳೂರು : ಮೋದಿ ರೋಡ್ ಶೋ ಕಾರ್ಯಕ್ರಮದ ಬಳಿಯ ಕಟ್ಟಡದಲ್ಲಿ ಅಗ್ನಿ ಅವಘಡ..

Posted by Vidyamaana on 2024-04-14 21:04:38 |

Share: | | | | |


ಮಂಗಳೂರು : ಮೋದಿ ರೋಡ್ ಶೋ ಕಾರ್ಯಕ್ರಮದ ಬಳಿಯ ಕಟ್ಟಡದಲ್ಲಿ ಅಗ್ನಿ ಅವಘಡ..

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದ ಬಳಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡವಾದ ಘಟನೆ ನಡೆದಿದೆ.

ಯುವತಿಯ Instagram ಐಡಿ ಹ್ಯಾಕ್ ಮದುವೆಗೆ ಮುನ್ನ ಆಕೆಯ ಅಶ್ಲೀಲ ಫೋಟೋ ವಿಡಿಯೋ ಪೋಸ್ಟ್

Posted by Vidyamaana on 2023-12-25 12:18:58 |

Share: | | | | |


ಯುವತಿಯ Instagram ಐಡಿ ಹ್ಯಾಕ್ ಮದುವೆಗೆ ಮುನ್ನ ಆಕೆಯ ಅಶ್ಲೀಲ ಫೋಟೋ ವಿಡಿಯೋ ಪೋಸ್ಟ್

ಭದೋಹಿ: ಮದುವೆಗೂ ಮುನ್ನ ಯುವತಿಯೊಬ್ಬಳ ಇನ್‌ಸ್ಟಾಗ್ರಾಂ ಐಡಿಯನ್ನು ಹ್ಯಾಕ್ ಮಾಡಿ ಆಕೆಯ ಚಿತ್ರವನ್ನು ಎಡಿಟ್ ಮಾಡಿ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಿದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.ಔರೈ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮದನ್‌ಲಾಲ್ ಮಾತನಾಡಿ, ಖಮಾರಿಯಾ ಪೊಲೀಸ್ ಔಟ್‌ಪೋಸ್ಟ್ ಬಳಿ ವಾಸಿಸುವ 28 ವರ್ಷದ ವ್ಯಕ್ತಿ ಡಿಸೆಂಬರ್ 20 ರಂದು ಪೊಲೀಸ್ ಅಧೀಕ್ಷಕ (ಎಸ್‌ಪಿ) ಅವರನ್ನು ಭೇಟಿಯಾಗಿ ಅವರು ಯುವತಿಯ ಇನ್‌ಸ್ಟಾಗ್ರಾಮ್ ಫೋಟೋ ಎಂದು ದೂರು ನೀಡಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಆಕೆ ಅಶ್ಲೀಲ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದಿಷ್ಟ ಖಾತೆಗೆ 500 ರೂಪಾಯಿ ಕಳುಹಿಸುವ ಮೂಲಕ ವೀಡಿಯೊವನ್ನು ನೋಡಬಹುದು ಎಂದು ಸಂದೇಶವನ್ನು ಪೋಸ್ಟ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ತನ್ನ ಭವಿಷ್ಯದ ಪತ್ನಿಯನ್ನು ನಿಂದಿಸಲು ಮತ್ತು ಕಿರುಕುಳ ನೀಡಲು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಐಟಿ ಕಾಯ್ದೆಯಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಎಪ್ರಿಲ್ 14ರಂದು ಮೋದಿ ಮಂಗಳೂರಿಗೆ ; ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

Posted by Vidyamaana on 2024-04-13 04:44:24 |

Share: | | | | |


ಎಪ್ರಿಲ್ 14ರಂದು ಮೋದಿ ಮಂಗಳೂರಿಗೆ ; ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಮಂಗಳೂರು, ಎ.12: ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 14ರಂದು ಮಂಗಳೂರಿನ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್‌ ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 


ಪ್ರಧಾನ ಮಂತ್ರಿಗಳ ಭದ್ರತೆ ಹಾಗೂ ಸಾರ್ವಜನಿಕರ ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿ ಅಂದು ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಮಂಗಳೂರು ನಗರದಲ್ಲಿ ವಾಹನಗಳ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ಸಂಚಾರದ/ನಿಲುಗಡೆಯ ನಿಷೇಧಿತ ಸ್ಥಳ ಹಾಗೂ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ. 


ಪ್ರಧಾನಮಂತ್ರಿಗಳ ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್‌ಬಾಗ್ – ಬಲ್ಲಾಳ್‌ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ – ಹಂಪನಕಟ್ಟೆ ವರೆಗೆ ಮಧ್ಯಾಹ್ನದಿಂದ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವ ವರೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.


1. ಕಾರ್ ಸ್ಟ್ರೀಟ್ – ಕುದ್ರೋಳಿ – ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.

2. ಕೆ.ಎಸ್.ಅರ್.ಟಿ.ಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿ.ವಿ.ಎಸ್ ಕಡೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.

4. ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್‌ನಿಂದ (ಲೇಡಿಹಿಲ್) ನಾರಾಯಣಗುರು ವೃತ್ತದ ಕಡೆಗೆ ಬರುವ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.

5. ಮಣ್ಣಗುಡ್ಡ ಜಂಕ್ಷನ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.

6. ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.

7. ಕೆ.ಎಸ್.ಆರ್.ಟಿ.ಸಿ ಯಿಂದ ಲಾಲ್‌ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)/ ಪಿವಿಎಸ್ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇದಿಸಿದೆ.

8. ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್, ಎಂ.ಜಿ. ರೋಡ್ ಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

9. ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗದ್ದೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆ ಯಿಂದ ನವಭಾರತ್ ಸರ್ಕಲ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

10. ಎಂ.ಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

ಕಾರವಾರ ; ಜ್ಯೋತಿಷಿ ಸಲಹೆ, ಮೊದಲ ಬಾರಿಗೆ ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ

Posted by Vidyamaana on 2023-10-07 18:44:40 |

Share: | | | | |


ಕಾರವಾರ ; ಜ್ಯೋತಿಷಿ ಸಲಹೆ,  ಮೊದಲ ಬಾರಿಗೆ ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ

ಕಾರವಾರ: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪಿತೃಕಾರ್ಯ ನೆರವೇರಿಸಲಾಗುತ್ತದೆ. ಆದರೆ ಮುಸ್ಲಿಂ ಕುಟುಂಬವೊಂದು ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದೆ. ಧಾರವಾಡ ಧಾನೇಶ್ವರಿ ನಗರದ ಶಂಸಾದ್ ಎಂಬುವರು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು ಇಲ್ಲಿನ ಪಿತೃಶಾಲೆಯಲ್ಲಿ ಪೂರೈಸಿದರು.


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಸಾದ್​, ನಾವು ಮೊದಲಿನಿಂದಲೂ ಕುಂಡಲೀ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರು. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಬೆಳೆದವರು. ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಬಳಿ ಹೋಗಿದ್ದೆವು. ಅವರು ತಿಳಿಸಿದಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳ್ಗೆ ಸಿಗಲಿ ಎಂಬ ಉದ್ದೇಶದಿಂದ ಈ ಪಿತೃ ಕಾರ್ಯ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.


ಜ್ಯೋತಿಷಿಗಳ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ನಾಗರಾಜ ಭಟ್ ಗುರ್ಲಿಂಗ್ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ. ಗೋಕರ್ಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು, ವಿದೇಶಿಗರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬವೊಂದು ಪಿತೃಕಾರ್ಯ ನೆರವೇರಿಸಿದ್ದು, ಇದೇ ಮೊದಲು ಎಂದು ಹೇಳಲಾಗಿದೆ.

Recent News


Leave a Comment: