ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ತೂಫಾನ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ. ನಾಲ್ವರು ಮೃತ್ಯು.

Posted by Vidyamaana on 2023-04-18 09:50:12 |

Share: | | | | |


ತೂಫಾನ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ. ನಾಲ್ವರು ಮೃತ್ಯು.

ಕಡಬ: ತೂಫಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಕಡಬ ಸಮೀಪದ ನೆಟ್ಟಣ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಪ್ರದ್ವಿನ್ ಪರಿಸರ ಪ್ರೇಮಕ್ಕೆ ಬರ್ತ್ ಡೇ ಗಿಫ್ಟ್ ಕೊಟ್ಟ ಮರ

Posted by Vidyamaana on 2023-06-26 10:43:10 |

Share: | | | | |


ಪ್ರದ್ವಿನ್ ಪರಿಸರ ಪ್ರೇಮಕ್ಕೆ ಬರ್ತ್ ಡೇ  ಗಿಫ್ಟ್ ಕೊಟ್ಟ ಮರ

ಪುತ್ತೂರು: ಎರಡು ವರ್ಷದ ಹಿಂದೆ ತನ್ನ ಹುಟ್ಟುಹಬ್ಬದಂದು ನೆಟ್ಟ ಗಿಡದ ಅಡಿಯಲ್ಲೇ ಈ ಬಾರಿ ಮತ್ತೆ ಹುಟ್ಟು ಹಬ್ಬ ಆಚರಿಸುವ ಮೂಲಕ ಪುತ್ತೂರು ಅಂಬಿಕಾ ವಿದ್ಯಾಲಯದ ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರದ್ವಿನ್ ಎಲ್ಲರಿಗೂ ಮಾದರಿಯಾಗಿದ್ದಾನೆ.

ತನ್ನ ಹುಟ್ಟುಹಬ್ಬದಂದು ಪ್ರತೀ ವರ್ಷವೂ ಒಂದು ಗಿಡ ತನ್ನ ಮನೆಯ ಬಳಿ ನೆಡುವ ಮೂಲಕ ಬರ್ತ್‌ಡೇ ಆಚರಣೆ ಮಾಡುತ್ತಿದ್ದಾನೆ. ತನ್ನ ಏಳನೇ ವರ್ಷದ ಹುಟ್ಟುಹಬ್ಬದಂದು ಮನೆಯ ಅಂಗಳದಲ್ಲಿ ನೆಟ್ಟಿದ್ದ ಕದಂಬ ಗಿಡದ ಬುಡದಲ್ಲೇ ಈ ಬರಿ ತನ್ನ ೯ ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದು ಪರಿಸರ ಪ್ರೇಮಿಗಳಿಗೆ ಈ ಮೂಲಕ ತನ್ನ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾನೆ.

ತಾನು ನೆಟ್ಟ ಗಿಡವನ್ನೇ ಹಬ್ಬಕ್ಕಾಗಿ ಬಲೂನ್ ಕಟ್ಟಿ ಶೃಂಗಾರ ಮಾಡಿ ಅದರ ಅಡಿಯಲ್ಲೇ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿ ಈ ಬಾರಿಯ ಹುಟ್ಟುಹಬ್ಬದಂದು ಇನ್ನೊಂದು ಗಿಡವನ್ನು ನೆಟ್ಟಿದ್ದಾನೆ. ಪ್ರದ್ವಿನ್ ಕೋಡಿಂಬಾಡಿ ಗ್ರಾಮದ ಬದಿನಾರು ನಿವಾಸಿ ಜಯಪ್ರಕಾಶ್ ಮತ್ತು ವಿನುತಾ ದಂಪತಿಗಳ ಪುತ್ರ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಬದಿನಾರ್ ಪರಿಸರದ ಬಗ್ಗೆ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಪ್ರೀತಿ ಹುಟ್ಟುವಂತೆ ಮಾಡುವ ಏಕೈಕ ಉದ್ದೇಶದಿಂದ ತನ್ನ ಎರಡೂ ಮಕ್ಕಳ ಹುಟ್ಟು ಹಬ್ಬದಂದು ಪ್ರತೀ ವರ್ಷವೂ ಗಿಡ ನೆಡುವ ಮೂಲಕವೇ ಆಚರಣೆ ಮಾಡುತ್ತೇವೆ. ಇದು ಇನ್ನೊಬ್ಬರಿಗೆ ಪ್ರೇರಣೆಯಗಿ ಯಾರಾದರೂ ಒಂದು ಗಿಡ ನೆಟ್ಟರೂ ನಮಗೆ ಅದುವೇ ದೊಡ್ಡ ಸಂತೋಷ ಎಂದು ಹೇಳುತ್ತಾರೆ.

Watch Video:ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

Posted by Vidyamaana on 2024-06-07 16:38:03 |

Share: | | | | |


Watch Video:ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ?

ಕೇರಳ: ಅಯ್ಯೋ ನನ್ನ ಸಾವು ಕಣ್ಣೆದುರೇ ಪಾಸ್ ಆದಂತೆ ಆಯ್ತು. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇ ಪವಾಡ ಹಾಗೆ ಹೀಗೆ ಅಂತ ಹೇಳೋದನ್ನು ಕೇಳಿದ್ದೀರಿ. ಆದ್ರೇ ಇಲ್ಲೊಬ್ಬ ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ. ಕಂಡೆಕ್ಟರ್ ಸಹಾಯದಿಂದ ಬದುಕಿ ಬಂದ ಬಡಜೀವದ ಬಗ್ಗೆ ಮುಂದೆ ಓದಿ.

ಕೇರಳದ ಮಲಬಾರ್ ಬಸ್ ನಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದನು. ಬಸ್ಸಿನ ಡೋರ್ ಬಳಿಯಲ್ಲೇ ನಿಂತು, ಟಿಕೆಟ್ ಖರೀದಿಸಲು ಮುಂದಾಗಿದ್ದಾನೆ. ಬಸ್ ಕಂಡಕ್ಟರ್ ತನ್ನ ಪಾಡಿಗೆ ತಾನು ಡೋರ್ ಸಮೀಪವೇ ನಿಂತಿದ್ದಂತ ವ್ಯಕ್ತಿಗೆ ಟಿಕೆಟ್ ಕೊಡೋದಕ್ಕೆ ಮುಂದಾಗಿದ್ದಾನೆ.

ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

Posted by Vidyamaana on 2024-03-05 16:13:39 |

Share: | | | | |


ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

ಬೆಳ್ಳಾರೆ : ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ‌.5 ರಂದು ಬೆಳ್ಳಾರೆಯ ಬಾಡಿಗೆ ಮನೆಗೆ ಬೆಳಗ್ಗೆ ದಾಳಿ ಮಾಡಿ ಮನೆಯನ್ನು ಶೋಧ ನಡೆಸಿ ನಂತರ ಬೀಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸಿ ಹೋಗಿರುವ ಅಧಿಕಾರಿಗಳು. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ , ಸಬ್ ಇನ್ಸ್ಪೆಕ್ಟರ್ ಮಂಜಪ್ಪ , ಕಾನ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಾ.5 ರಂದು ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ‌.


*ಪ್ರಕರಣದ ವಿವರ:* 25-10-2023 ರಂದು RC-28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ಸ್ 13 ,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಗೆ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ  ಸಮನ್ಸ್ ನೀಡಿದ್ದಾರೆ‌.


*ಮೊಬೈಲ್ ವಶಕ್ಕೆ:* ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ಬಳಿಕ ಬಿಜು ಬಳಸುತ್ತಿದ್ದ ಮೊಬೈಲ್ ಫೋನ್‌ ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಹಜರು ನಡೆಸಿ ಹೋಗಿದ್ದಾರೆ.

ವಿಟ್ಲ : ಹೊಟೇಲ್ ಬಳಿಯಲ್ಲಿ ಕುಡಿದು ಬಿದ್ದು ವ್ಯಕ್ತಿ ಮೃತ್ಯು

Posted by Vidyamaana on 2024-01-31 15:13:50 |

Share: | | | | |


ವಿಟ್ಲ : ಹೊಟೇಲ್ ಬಳಿಯಲ್ಲಿ ಕುಡಿದು ಬಿದ್ದು ವ್ಯಕ್ತಿ ಮೃತ್ಯು

ವಿಟ್ಲ: ಮಂಗಳೂರು ರಸ್ತೆಯ ವಿಜಯ ಹೊಟೇಲ್ ಬಳಿಯಲ್ಲಿ ವ್ಯಕ್ತಿಯೋರ್ವರು ಕುಡಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.


ಮೃತ ಪಟ್ಟ ವ್ಯಕ್ತಿ ಅಪ್ಪೇರಿಪಾದೆ ನಿವಾಸಿ ಸಂದೀಪ್ (45).


ಕೂಲಿ ಕೆಲಸ ಮಾಡುತ್ತಿದ್ದ ಸಂದೀಪ್ ರವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ವಿಪರೀತ ಕುಡಿತದ ಚಟವಿದ್ದು, ಇದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ,

ಗಂಭೀರ ಕಾಯಿಲೆ ಶಸ್ತ್ರ ಚಿಕಿತ್ಸೆಯಲ್ಲಿ ಅಮೋಘ ಪ್ರಗತಿ

Posted by Vidyamaana on 2024-03-22 14:55:11 |

Share: | | | | |


ಗಂಭೀರ ಕಾಯಿಲೆ ಶಸ್ತ್ರ ಚಿಕಿತ್ಸೆಯಲ್ಲಿ ಅಮೋಘ ಪ್ರಗತಿ

ಪುತ್ತೂರು : ಮಹಾನಗರಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ನಡೆಯುವಂತಹ  ಗಂಭೀರ ಕಾಯಿಲೆಗಳ ಶಸ್ತ್ರಚಿಕಿತ್ಸೆ ಬೊಳುವಾರು ಪ್ರಗತಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದ್ದು ಪುತ್ತೂರಿನಲ್ಲೂ ಕೂಡ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಿದೆಯೆಂಬುದನ್ನು ನುರಿತ ವೈದ್ಯರ ತಂಡ ಸಾಬೀತು ಮಾಡಿದೆ.


ಕೆಲ ದಿನಗಳ ಹಿಂದೆ ಹಳದಿ ಖಾಯಿಲೆಯಿಂದ ಅನಾರೋಗ್ಯಕ್ಕೀಡಾದ ಸ್ಥಳೀಯ ಮಹಿಳೆಯೊಬ್ಬರು ಇಲ್ಲಿನ ವೈದ್ಯರನ್ನು ಸಂಪರ್ಕಿಸಿದಾಗ, ವೈದ್ಯರ ಸೂಚನೆಯಂತೆ ಅವರನ್ನು ಸಿ. ಟಿ ಸ್ಕ್ಯಾನ್, ಪೆಟ್ ಸ್ಕ್ಯಾನಿಂಗ್‌ಗೆ ಒಳಪಡಿಸಿದ್ದರು. ಅವರ ಪ್ಯಾಂಕ್ರಿಯಾಸ್‌ನ ತಲೆಭಾಗದಲ್ಲಿ ಗೆಡ್ಡೆಯೊಂದು ಕಂಡುಬಂದಿತ್ತು.

ಮಹಿಳೆಯು ಸುಮಾರು 70ರ ಅಸುಪಾಸಿನವರಾಗಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ವೈದ್ಯರಿಗೆ ಅತೀ ಸವಾಲೆನಿಸಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆರ್ಥಿಕ ಸಮಸ್ಯೆ ಕಾರಣ ರೋಗಿ ಕುಟುಂಬದವರು ಇಲ್ಲೇ ಕಡಿಮೆ ಖರ್ಚಿಯಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದರು. ಪರಿಣಾಮ ವೈದ್ಯರ ತಂಡ ಸುಮಾರು 7-8 (ವಿಪ್ಪಲ್ ಪ್ರೊಸಿಜರ್) ತಾಸು ಮಹಿಳೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಕೃತಕ ಉಸಿರಾಟ ವ್ಯವಸ್ಥೆ ಮಾಡಿ ಎರಡು ದಿನಗಳ ಕಾಲ ಐಸಿಯು ಮೂಲಕ ಆ ಬಳಿಕ ಆಸ್ಪತ್ರೆಯಲ್ಲೇ ಎರಡು ವಾರಗಳ ಚಿಕಿತ್ಸೆ ನೀಡಿ ಮಹಿಳೆಯು ಗುಣಮುಖರಾಗಿ ಮನೆ ಸೇರುವಲ್ಲಿ ವೈದ್ಯರ ತಂಡ ಯಶಸ್ಸನ್ನು ಕಂಡಿದೆ.


ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿಗ್ಯಾಸ್ಟೋ ಸರ್ಜನ್ ಆಗಿರುವ ಡಾ. ಅಶ್ವಿನ್ ಆಳ್ವರವರ ನೇತೃತ್ವದಲ್ಲಿ ಅರಿವಳಿಕೆ ತಜ್ಞ " ಡಾ. ಅನೀಶ್ ಶರ್ಮಾ, ಸಹ ಸರ್ಜನ್ ಡಾ. ಶ್ರೀ ವರ್ಷಾ ಮತ್ತು ದಾದಿ ಉಷಾ ಮತ್ತು ಚಂದ್ರಿಕಾ ಪ್ರಕ್ಷಿತ್  ಸಿದ್ದೀಕ್ ದೀಪಿಕಾ ಇವರುಗಳ ತಂಡ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದು, ಆಡಳಿತ ಮಂಡಳಿಯೂ ವೈದ್ಯರ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದೆ.

Recent News


Leave a Comment: