ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

Posted by Vidyamaana on 2023-10-27 07:15:15 |

Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಪುತ್ತೂರು :ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ತರಬೇತಿ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯದಲ್ಲಿ ಪ್ರಾರಂಭವಾಗಲಿದೆ 

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯು ದಿನಾಂಕ 19/11/2023 ರಂದು ಹಾಗೂ ಕೆ.ಪಿ.ಎಸ್.ಸಿ ನೇಮಕಾತಿಯ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯು ದಿನಾಂಕ 4/11/2023 ಮತ್ತು 5 /11 /2023ರಂದು ನಡೆಯಲಿದ್ದು, ಈ ಎರಡು ನೇಮಕಾತಿಗಳ ಅಂತಿಮ ಹಂತದ ಪೂರ್ವ ತಯಾರಿಯ ತರಬೇತಿಯು ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ,

 ವಿದ್ಯಾಮಾತಾ ಅಕಾಡೆಮಿಯ ಪುತ್ತೂರು,  ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಎಂಸಿ ರಸ್ತೆ ,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ.- 574201.

962 046869/9148935808


ವಿದ್ಯಾಮಾತಾ ಅಕಾಡೆಮಿ ಸುಳ್ಯ,

ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣಕನ್ನಡ.

9448527606 ಅನ್ನು ಸಂಪರ್ಕಿಸಲು ಪ್ರಕಟಣೆಯು ತಿಳಿಸಿದೆ.

ಕಾರ್ಕಳ : ಜ.21 ರಿಂದ 26 ರ ವರೆಗೆ ಅತ್ತೂರು ಜಾತ್ರೆ

Posted by Vidyamaana on 2024-01-16 04:43:48 |

Share: | | | | |


ಕಾರ್ಕಳ : ಜ.21 ರಿಂದ 26 ರ ವರೆಗೆ ಅತ್ತೂರು ಜಾತ್ರೆ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು.ಅವರು ಬಸಿಲಿಕಾದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದರು


ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 45 ಹಾಗೂ ಕನ್ನಡ ಭಾಷೆಯಲ್ಲಿ 3 ಹೀಗೆ ಒಟ್ಟು 48 ದಿವ್ಯ ಬಲಿ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಬೆಳ್ತಂಗಡಿ, ಪುತ್ತೂರು, ಮಂಗಳೂರು, ಶಿವಮೊಗ್ಗ ಹಾಗೂ ನವಿಮೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸುವರು. ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 64 ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಬಸಿಲಿಕದ ಬಲ ಬದಿಯಲ್ಲಿ ಅಂದರೆ ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೈಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ ಎಂದರು.


ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ದೇವಾಲಯದ ಎಡಬದಿಯಲ್ಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳಿಗೆ ಕುಡಿಯಲು ಶುದ್ದ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ ಐದು ಸ್ಥಳದಲ್ಲಿ ಮಾಡಲಾಗುವುದು. ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರುನಿವಾಸದ ಎಡ ಬದಿಯಲ್ಲಿ 20 ಶೌಚಾಲಯಗಳು ಇವೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳಿವೆ. ಎಂದರು.ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬಂಧಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ಸುರಕ್ಷಿತೆಯ ಹೊಣೆ ನಿರ್ವಹಿಸಲಿರುವರು. ಯಾತ್ರಿರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹರಕ್ಷದಳ ಹಾಗೂ ಇತರ ಸಿಬಂಧಿಗಳು ನಿರ್ವಹಿಸಲಿರುವರು. ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು, ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ, ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಾಕಾಶ ಕಲ್ಪಿಸಲಾಗಿದೆ. ಕೊಡಂಗೆ ಶ್ರೀ ರೋಬರ್ಟ್ ನೊರೋನ್ಹರವರ ತನಕ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅದರ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ.ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲಾರೆನ್ಸ್ ಧರ್ಮಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲಾರೆನ್ಸ್ ಹೈಸ್ಕೊಲ್ ಶಾಲಾ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ.


ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು - ಅತ್ತೂರು ಕ್ವಾನ್ವೆಂಟ್ ಮಾರ್ಗವಾಗಿ ತಂದು ಎಡಬದಿಯ ಪಂಚಾಯತ್ ಶೌಚಾಲಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯ BSNL MOBILE TOWER ಬಳಿ ಮುಂದೆ ಸಾಗಿ ಎಡಕ್ಕೆ ತಿರುಗಿ V.I.P. ಹಾಗೂ ಇತರ PASS HOLDER ಗಳಿಗಾಗಿ ನಿರ್ಮಿಸಿದ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆಗೊಳಿಸಲಾಗಿದೆ. ವೆಹಿಕಲ್ ಪಾಸ್ ಹೊಂದಿದ ವಾಹನಗಳು, ನಿಲುಗಡೆ ಮಾಡಿದ ವಾಹನಗಳಿಗೆನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೋಲಿಸ್ ಸಿಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕ್ಸಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ.


ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲಾಗಿದೆ. ಬಸಿಲಿಕಾದ ವಠಾರದಲ್ಲಿ ಮೊಂಬತ್ತಿ ಮಾರಟ ಸಂಪೂರ್ಣವಾಗಿ ನಿಷೇದಿಸಲಾಗಿದೆ. ಸಾರ್ವಜನಿಕರ ಹಾಗೂ ಭಕ್ತಾಧಿಗಳ ಸುಗಮ ಸಂಚಾರಕ್ಕಾಗಿ ದೂಪದಕಟ್ಟೆಯಿಂದ ಪ್ರಸಾದ್ ಟೈಲರ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆಯ ಅಂಚಿನಿಂದ ಕ್ರಮವಾಗಿ ಕನಿಷ್ಟ 5 ಅಡಿ ಜಾಗ ಬಿಟ್ಟು ಅಂಗಡಿ ಮುಂಗಟ್ಟು ನಿರ್ಮಿಸುವಂತೆ ಸ್ಥಳೀಯ ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ತಿಳಿಸಲಾಗಿದೆ. ಇದು ಸುರಕ್ಷೆಯ ದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಹಾದುಹೋಗುವ ಯಾವುದೇ ವ್ಯಕ್ತಿಗೆ ದೈಹಿಕ ಕಿರುಕುಳಆಗದಂತೆ ತಡೆಯಲು ಅತೀ ಆವಶ್ಯಕವಾಗಿದೆ.


ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಅತೀ ದೊಡ್ಡ ಹೊಸ ಮೂರ್ತಿಯನ್ನು ಬಸಿಲಿಕದ ಬಲಬದಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಬಿಟ್ಟರೆ ಬೆರೆಲ್ಲೂ ಕಾಣಸಿಗುವುದಿಲ್ಲ. ಎಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಹೊಸ ಮೂರ್ತಿಯನ್ನು ನವ್ಮಿೂೀ ಸಂತ ಲಾರೆನ್ಸರ ಪುಷ್ಕರಣಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಬಸಿಲಿಕದಲ್ಲಿ ಪುಷ್ಕರಣಿ ಹಾಗೂ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಎಕಶಿಲಾ ಪ್ರತಿಮೆ ಇಲ್ಲಿ ನವ್ಮಿೂ ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ ಎಂದರು.


ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೊ, ಆಧ್ಯಾತ್ಮಿಕ ನಿರ್ದೇಶಕ ಉಪಾಧ್ಯಕ್ಷ ವಂ|ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪದಾಧಿಕಾರಿಗಳಾದವಂದೀಶ್ ಮಥಾಯಸ್, ಪ್ರಕಾಶ್ ಪಿಂಟೊ, ರಿತೇಶ್ ಪಿಂಟೊ, ರೋಶನ್ ಸಾಲಿಸ್ ಉಪಸ್ಥಿತರಿದ್ದರು.

ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

Posted by Vidyamaana on 2023-08-30 23:15:16 |

Share: | | | | |


ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

ಮುಲ್ತಾನ್‌ : ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ಥಾನ ತಂಡ ನೇಪಾಲದ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.



ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿ ಭರ್ಜರಿ ಮೊತ್ತವನ್ನು ನೇಪಾಲ ತಂಡದ ಮುಂದಿಟ್ಟಿತು. ನೇಪಾಲ ಪಾಕ್ ಬಿಗಿದಾಳಿಗೆ ಸಿಲುಕಿ 23.4 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟಾಯಿತು. ಪಾಕಿಸ್ಥಾನ 238 ರನ್ ಗಳ ಭಾರಿ ಜಯ ಸಾಧಿಸಿತು. ಶಾದಾಬ್ ಖಾನ್ 4 ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.


ನೇಪಾಲ ಪರ ಆರಿಫ್ ಶೇಖ್ 26 ಮತ್ತು ಸೋಂಪಾಲ್ ಕಾಮಿ 28 ರನ್ ಹೊರತು ಪಡಿಸಿ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.


ಪಾಕಿಸ್ಥಾನ 25 ರನ್ ಆಗುವಷ್ಟರಲ್ಲಿ ಮೊದಲ 2 ವಿಕೆಟ್ ಕಳೆದುಕೊಂಡಿತು.ಫಖರ್ ಜಮಾನ್ 14, ಇಮಾಮ್-ಉಲ್-ಹಕ್ 5 ರನ್ ಗಳಿಸಿದ್ದ ವೇಳೆ ರನೌಟಾದರು.ಆ ಬಳಿಕ ಬಂದ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಂ ಅಬ್ಬರಿಸಿದರು. ತಾಳ್ಮೆಯ ಆಟವಾಡಿ ಶತಕ ಪೂರ್ತಿಗೊಳಿಸಿದರು.151(131 ಎಸೆತ) ರನ್ ಗಳಿಸಿದ್ದ ವೇಳೆ ಕೊನೆಯಲ್ಲಿ ಔಟಾದರು. ಬಾಬರ್ ರೊಂದಿಗೆ ಉತ್ತಮ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ವಿಲಕ್ಷಣ ರನೌಟ್ (ದೀಪೇಂದ್ರ ಸಿಂಗ್) ಆದರು. ಅವರು 44 ರನ್ ಗಳಿಸಿದ್ದರು. ಆಬಳಿಕ ಬಾಬರ್ ಅವರಿಗೆ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ ಔಟಾಗದೆ 109 ರನ್ ಗಳಿಸಿದರು. ಸ್ಪೋಟಕ ಶತಕ ಸಿಡಿಸಿದ ಅವರು ಒಟ್ಟು 71 ಎಸೆತಗಳಲ್ಲಿ 109 ರನ್ ಗಳಿಸಿದರು

ಸೆ.02(ಶನಿವಾರ) ರಂದು ಭಾರತದ ವಿರುದ್ಧ ಪಾಕಿಸ್ಥಾನ ಏಷ್ಯಾ ಕಪ್ ನ ಎ ಗುಂಪಿನ 3 ನೇ ಪಂದ್ಯವನ್ನು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,ಪಲ್ಲೆಕೆಲೆಯಲ್ಲಿ ಆಡಲಿದೆ.

ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

Posted by Vidyamaana on 2024-04-10 06:19:14 |

Share: | | | | |


ಮುಖ್ಯ ಚುನಾವಣಾ ಆಯುಕ್ತರಿಗೆ Z ಶ್ರೇಣಿಯ ಭದ್ರತೆ

ನವದೆಹಲಿ :ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಗೃಹ ಸಚಿವಾಲಯವು ಝಡ್ ಶ್ರೇಣಿಯ ಭದ್ರತೆ ಕಲ್ಪಿಸಿದೆ.ಚುನಾವಣಾ ಆಯೋಗದ ಕಚೇರಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಗಲಾಟೆ ನಡೆಸಿದ್ದರು. ಬೆದರಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಭದ್ರತೆ ನೀಡಿದೆ

ಪ್ರಜ್ವಲ್‌ ರೇವಣ್ಣ ರಾಸಲೀಲೆ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದ ಮೋದಿ, ಹೇಳಿದ್ದೇನು?

Posted by Vidyamaana on 2024-05-07 06:51:24 |

Share: | | | | |


ಪ್ರಜ್ವಲ್‌ ರೇವಣ್ಣ ರಾಸಲೀಲೆ ಪ್ರಕರಣದ ಬಗ್ಗೆ ಕೊನೆಗೂ ಮೌನ ಮುರಿದ ಮೋದಿ, ಹೇಳಿದ್ದೇನು?

ನವದೆಹಲಿ: ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಾತನಾಡಿದ್ದು, ಪ್ರಜ್ವಲ್ ರೇವಣ್ಣರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ ಎಂದು ಸೋಮವಾರ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಜೆಡಿಎಸ್ ಸಂಸದ ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಇಂದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪ ತಡೆ ಸಭೆ

Posted by Vidyamaana on 2023-06-06 07:41:54 |

Share: | | | | |


ಉಪ್ಪಿನಂಗಡಿಯಲ್ಲಿ ಇಂದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪ ತಡೆ ಸಭೆ

ಪುತ್ತೂರು: ಪ್ರಾಕೃತಿಕ ವಿಕೋಪದಿಂದಾಗುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜೂನ್ 6ರಂದು ಮಧ್ಯಾಹ್ನ 3.30ಕ್ಕೆ ಪೂರ್ವಭಾವಿ ಸಭೆ ನಡೆಯಲಿದೆ.

Recent News


Leave a Comment: