ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಹರೀಶ್ ಪೂಂಜ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

Posted by Vidyamaana on 2024-05-23 17:53:31 |

Share: | | | | |


ಹರೀಶ್ ಪೂಂಜ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ :ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ಮಂಗಳೂರು,ಶಾಸಕ ಹರೀಶ್ ಪೂಂಜ ಪೊಲೀಸರು, ತಹಸೀಲ್ದಾರನ್ನು ನಿಂದಿಸಿ ಬೆಳ್ತಂಗಡಿ ನಾಗರಿಕರಿಗೆ ಅವಮಾನ ಮಾಡಿದ್ದಾರೆ. ರೌಡಿಯಂತೆ ವರ್ತಿಸಿ ಇಡೀ ಜಿಲ್ಲೆಗೆ ಕಳಂಕ ತಂದಿದ್ದಾರೆ. ರೌಡಿ ರೀತಿ ವರ್ತಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ತಾಕತ್ತಿದ್ದರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಜನರಿಂದ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹರೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಕ್ಷೇತ್ರವನ್ನು ರತ್ನವರ್ಮ ಹೆಗ್ಗಡೆ, ವೈಕುಂಠ ಬಾಳಿಗಾ, ಸುಬ್ಬಯ್ಯ ಹೆಗಡೆ, ವಸಂತ ಬಂಗೇರರಂತವರು ಪ್ರತಿನಿಧಿಸಿದ್ದರು. ವಸಂತ ಬಂಗೇರ ಐದು ಬಾರಿ ಶಾಸಕರಾಗಿ ಗೌರವ ತಂದುಕೊಟ್ಟಿದ್ದಾರೆ. ಹರೀಶ್ ಪೂಂಜ ಈಗ ವಸಂತ ಬಂಗೇರ ಮಾಡಲು ಹೋಗಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಬಂಗೇರ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವರು, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಕೆಲಸ ಮಾಡುತ್ತಿದ್ದರು. ಯಾವತ್ತೂ ಭ್ರಷ್ಟಾಚಾರಿ, ರೌಡಿಗಳ ಪರ ಕೆಲಸ ಮಾಡಿದವರಲ್ಲ.

ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾಗಿ ಚಂದ್ರ ನಾಯ್ಕ್

Posted by Vidyamaana on 2023-12-05 15:59:14 |

Share: | | | | |


ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾಗಿ ಚಂದ್ರ ನಾಯ್ಕ್

ಪುತ್ತೂರು: ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಪಂಜ ಹೋಬಳಿಯಿಂದ ವರ್ಗಾವಣೆಗೊಂಡಿರುವ ಚಂದ್ರ ನಾಯ್ಕ್ ಡಿ.4ರಂದು ಅಧಿಕಾರ ಸ್ವೀಕರಿಸಿದ್ದಾರೆ.


ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಪುಣ್ಚಪ್ಪಾಡಿ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿದ್ದ ಚಂದ್ರ ನಾಯ್ಕ ಆಹಾರ ನಿರೀಕ್ಷಕರಾಗಿ ಭಡ್ತಿಹೊಂದಿ ಕಡಬಕ್ಕೆ ವರ್ಗಾವಣೆಗೊಂಡಿದ್ದರು. ನಂತರ ವರ್ಗಾವಣೆಗೊಂಡು ಸುಳ್ಯ ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಉಪ್ಪಿನಂಗಡಿ ಹೋಬಳಿಗೆ ವರ್ಗಾವಣೆಗೊಂಡಿದ್ದಾರೆ

ಪುತ್ತೂರು ನಗರಸಭಾ ಉಪಚುನಾವಣೆ : ತೆರವಾದ ಎರಡು ಸ್ಥಾನಗಳಿಗೆ ಇಂದು (ಡಿ. 27)ಚುನಾವಣೆ

Posted by Vidyamaana on 2023-12-27 10:05:49 |

Share: | | | | |


ಪುತ್ತೂರು ನಗರಸಭಾ ಉಪಚುನಾವಣೆ : ತೆರವಾದ ಎರಡು ಸ್ಥಾನಗಳಿಗೆ ಇಂದು (ಡಿ. 27)ಚುನಾವಣೆ

ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ (ಡಿ.27) ಉಪಚುನಾವಣೆ ನಡೆಯಲಿದೆ.ಬಹಳ ಕೂತೂಹಲ ಮೂಡಿಸಿರುವ ನಗರಸಭಾ ಉಪಚುನಾವಣೆಗೆ ಕೆಲ ಗಂಟೆಗಳಷ್ಟೇ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಪಕ್ಷೇತರರಾಗಿ ಚುನಾವಣಾ ಕಣದಲ್ಲಿದ್ದಾರೆ.


ವಾರ್ಡ್-11 ನೆಲ್ಲಿಕಟ್ಟೆಯ ಉಪಚುನಾವಣೆಯು ಕೊಂಬೆಟ್ಟು ಶಾಲೆಯಲ್ಲಿ ಹಾಗೂ ವಾರ್ಡ್-1 ರಕ್ತೇಶ್ವರಿ ವಠಾರದ ಉಪಚುನಾವಣೆಯು ಸುದಾನಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.ಅಭ್ಯರ್ಥಿಗಳ ವಿವರ :


ಬಿಜೆಪಿಯಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ, ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಕಣದಲ್ಲಿದ್ದಾರೆ.

ಕಾಂಗ್ರೆಸ್ ನಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ಕಣದಲ್ಲಿದ್ದಾರೆ.

ಪುತ್ತಿಲ ಪರಿವಾರದಿಂದ ವಾರ್ಡ್ 11 ರ ಅಭ್ಯರ್ಥಿಯಾಗಿ ಚಿಂತನ್ ಪಿ., ವಾರ್ಡ್ 1 ರ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ಕಣದಲ್ಲಿದ್ದಾರೆ.



(ಡಿ.27) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.


ನಗರ ಸಭಾ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿ.8 ರಿಂದ 30 ರ ತನಕ ಜಾರಿಯಲ್ಲಿರಲಿದೆ.

ಇಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ -ಮತಯಾಚನೆ

Posted by Vidyamaana on 2023-05-08 01:32:03 |

Share: | | | | |


ಇಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ -ಮತಯಾಚನೆ

ಪುತ್ತೂರು: ಪ್ರತಿಯೊಬ್ಬ ಕಾರ್ಯಕರ್ತನೂ ನಮ್ಮ ಸ್ಟಾರ್ ಪ್ರಚಾರಕ ಎಂಬ ಘೋಷವಾಕ್ಯದೊಂದಿಗೆ ಮೇ 8ರಂದು ಮಧ್ಯಾಹ್ನ ಗಂಟೆ 1ರಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಕಾರ್ಯಕರ್ತರೊಂದಿಗೆ ಬೊಳುವಾರುನಿಂದ ದರ್ಬೆ ವೃತ್ತದ ತನಕ ಬೃಹತ್ ರೋಡ್ ಶೋ ಮತ್ತು ಮತಯಾಚನೆ ನಡೆಯಲಿದೆ.

ನಮ್ಮ ಚಿಹ್ನೆ ಬ್ಯಾಟ್ ಎಂಬ ಘೋಷಣೆಯೊಂದಿಗೆ ಹಿಂದುತ್ವಕ್ಕಾಗಿ ಕಾರ್ಯಕರ್ತರ ಗೆಲುವಾಗಲಿ ಎಂದು ಮಹಾಸಂಗಮ ರೋಡ್ ಶೋ ನಡೆಯಲಿದೆ.ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋದಲ್ಲಿ ಭಾಗವಹಿಸುವಂತೆ ಅವರ ಬೆಂಬಲಿಗರು ವಿನಂತಿಸಿದ್ದಾರೆ.

ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

Posted by Vidyamaana on 2024-04-04 12:53:09 |

Share: | | | | |


ವಿಟ್ಲ : ಬಸ್-ಪಿಕಪ್‌ ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

ವಿಟ್ಲ-ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡ ಘಟನೆ ನಡೆದಿದೆ.

ಪುತ್ತೂರು : ಮದುವೆಗೂ ಮುಂಚೆ ಮತ ಚಲಾಯಿಸಿದ ಮದುಮಗಳು

Posted by Vidyamaana on 2024-04-26 18:30:10 |

Share: | | | | |


ಪುತ್ತೂರು : ಮದುವೆಗೂ ಮುಂಚೆ ಮತ ಚಲಾಯಿಸಿದ ಮದುಮಗಳು

ಪುತ್ತೂರು : ಇಂದು (ಏ.26) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮದುಮಗಳು ಮದುವೆಗೂ ಮುಂಚೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

Recent News


Leave a Comment: