ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಏರ್ ಇಂಡಿಯಾ ಗಗನಸಖಿ ಕೊಲೆ ಪ್ರಕರಣದ ಆರೋಪಿ ವಿಕ್ರಂ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ

Posted by Vidyamaana on 2023-09-08 21:50:08 |

Share: | | | | |


ಏರ್ ಇಂಡಿಯಾ ಗಗನಸಖಿ ಕೊಲೆ ಪ್ರಕರಣದ ಆರೋಪಿ ವಿಕ್ರಂ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ

ಮುಂಬೈ: ಗಗನಸಖಿ ಒಬ್ಬರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಅಂಧೇರಿಯ ಪೊಲೀಸ್ ಠಾಣೆಯಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಬೈನ ಮರೋಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ 23 ವರ್ಷದ ಗಗನಸಖಿಯನ್ನು ಕೊಂದ ಆರೋಪದಲ್ಲಿ ವಿಕ್ರಂ ಅತ್ವಾಲ್ ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಗಗನಸಖಿ ರೂಪಲ್ ಒಗ್ರೆ ಅಂಧೇರಿಯ ಅಪಾರ್ಟ್ಮೆಂಟ್ ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಛತ್ತೀಸ್ ಗಢ ಮೂಲದ ಅವರು ವಿಮಾನಯಾನ ಸಂಸ್ಥೆಯಲ್ಲಿ ತರಬೇತಿಗಾಗಿ ಏಪ್ರಿಲ್ ನಲ್ಲಿ ಮುಂಬೈಗೆ ಬಂದಿದ್ದರು.

ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ ನ ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಎಂಬುವವನ್ನು ಪೊಲೀಸರು ಬಂಧಿಸಿದ್ದರು. ಆದರೆ ಶುಕ್ರವಾರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

Posted by Vidyamaana on 2024-01-31 13:19:17 |

Share: | | | | |


ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು  ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ವಾರ್ತಾಭಾರತಿಯ ವರದಿಗಾರ ಪುತ್ತೂರು ಬನ್ನೂರು ನಿವಾಸಿ  ಇಬ್ರಾಹೀಂ ಖಲೀಲ್ ಬನ್ನೂರು ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


 ಅತ್ಯುತ್ತಮ ಕ್ರೀಡಾ ವರದಿಗಾಗಿ ಇಬ್ರಾಹೀಂ ಖಲೀಲ್‌ ಬನ್ನೂರು ಅವರಿಗೆ ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿಯನ್ನು ಘೋಷಿಸಲಾಗಿದೆ.


ಇಬ್ರಾಹೀಂ ಖಲೀಲ್ ಅವರ ವರದಿ :


ಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರ!


ದಾವಣಗೆರೆಯಲ್ಲಿ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಕಳೆಂಜ ದೇಂತಡ್ಕ ವಿಷ್ಣುಮೂರ್ತಿ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು

Posted by Vidyamaana on 2023-10-18 10:53:44 |

Share: | | | | |


ಕಳೆಂಜ ದೇಂತಡ್ಕ ವಿಷ್ಣುಮೂರ್ತಿ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು

ಉಪ್ಪಿನಂಗಡಿ: ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸದ ವೇಳೆ ಪೆರ್ನೆಯ ಕಳೆಂಜ ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ ಬೆನ್ನಿಗೆಯೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ವರದಿಯಾಗಿದೆ.


ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಮಯದಲ್ಲಿ ದೇವರಿಗೆ ಭಕ್ತಾದಿಯೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು. ಈ ಮಾಲೆ ಹಾಗೂ ಈ ಹಿಂದೆ ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿದ್ದು ಆದಿತ್ಯವಾರದಂದು ಆಡಳಿತಾಧಿಕಾರಿಯ ಸಮ್ಮುಖದಲ್ಲಿ ನಡೆದ ಪರಿಶೀಲನೆಯ ವೇಳೆ ಆಭರಣಗಳು ನಾಪತ್ತೆಯಾಗಿರುವ ವಿಚಾರವು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ದೇವಳದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟುರವರು ಚಿನ್ನಾಭರಣದೊಂದಿಗೆ ಮಂಗಳವಾರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಅವರು ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ  ಅಡಮಾನ ಇರಿಸಿ ಹಣ ಪಡೆದಿದ್ದು ಅಲ್ಲಿಂದ ಆಭರಣವನ್ನು ಬಿಡಿಸಿಕೊಂಡು ನೇರವಾಗಿ ಠಾಣೆಗೆ ಬಂದಿದ್ದರು. ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಈ ಮಧ್ಯೆ ದೇವಾಲಯದಲ್ಲಿ ಇತ್ತೆನ್ನಲಾದ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ನೀಡಿದ್ದ 2 ಪವನ್ ತೂಕದ ಚಿನ್ನದ ಸರ ಇನ್ನೂ ನಾಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆದಿದೆ.

ಸೆ.2 ರಿಂದ 24: ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ

Posted by Vidyamaana on 2023-09-01 16:45:23 |

Share: | | | | |


ಸೆ.2 ರಿಂದ 24: ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಸೆ.2 ರಿಂದ 24ರ ತನಕ ಭಕ್ತರು ಮನೆ ಮನೆಯಲ್ಲಿ ” ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.ಅವರು ಶ್ರೀ ದೇವಳದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವಳದಲ್ಲಿ ಬೇರೆ ಬೇರೆ ರೀತಿಯಲ್ಲಿ ಶತರುದ್ರ, 1008 ಕಾಯಿ ಗಣಪತಿ ಹೋಮ ಸಹಿತ ವಿವಿಧ ಕಾರ್ಯಕ್ರಮಗಳು ದೇವರ ಸಾನಿಧ್ಯಕ್ಕಾಗಿ ಆಗಾಗ ನಡೆಯುತ್ತಿದೆ. ಅದೇ ರೀತಿಯಲ್ಲಿ ದೇವರ ಅನುಗ್ರಹ, ಹಿಂದು ಬಾಂದವರ ಏಕತೆಗಾಗಿ, ಲೋಕಕಲ್ಯಾಣಾರ್ಥವಾಗಿ ಏಕಾದಶಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ಸಂಕಲ್ಪ ಮಾಡಿದಂತೆ ಮಹಾಲಿಂಗೇಶ್ವರ ದೇವರ ಪ್ರತಿಯೊಬ್ಬ ಭಕ್ತರು ಶ್ರೀದೇವರ ನಾಮವನ್ನು ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ 11,880 ಬಾರಿ ಈ ಜಪವನ್ನು ಮಾಡಬೇಕು. ಸೆ.2 ರಿಂದ ದಿನಕ್ಕೆ 1080 ಜಪದಂತೆ 11 ದಿನಗಳ ಜಪ ಮಾಡಬೇಕು. ಇದು ನಿರಂತರ ಮಾಡಬೇಕಾಗಿಲ್ಲ. ಅಸೌಕ್ಯದ ಸಂದರ್ಭದಲ್ಲಿ ಸಮಸ್ಯೆ ಆಗದಂತೆ 23 ದಿನ ಕಾಲವಕಾಶ ನೀಡಲಾಗಿದೆ. ಜಪವನ್ನು ಅವರವರ ಮನೆಯಲ್ಲೇ ಮಾಡಲಾಗುತ್ತದೆ. ಆದರೆ ಸಂಕಲ್ಪ ಮಾತ್ರ ಆಯಾ ಭಾಗದ ಧಾರ್ಮಿಕ ಕೇಂದ್ರ, ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಮಾಡಬೇಕು ಎಂದು ತಿಳಿಸಿದರು

ಏಕಾಗ್ರತೆ ಜಾಗೃತವಾಗಬೇಕಾದರೆ ನಿರಂತರ ಜಪ

ಮಾಡಬೇಕು:

ಬ್ರಹ್ಮಶ್ರೀ ವೇ ಮೂ ರವೀಶ್ ತಂತ್ರಿ ಕುಂಟಾರು ಅವರು ಮಾತನಾಡಿ ಮನುಷ್ಯನಲ್ಲಿರುವ ಏಕಾಗ್ರತೆಗಾಗಿ ಕಲಿಯುಗದಲ್ಲಿ ಸಂಘಟಿತರಾಗಿ ದೇವರನ್ನು ಭಜಿಸಬೇಕು. ಆಗಮ ಶಾಸ್ತ್ರದಲ್ಲಿ ದೈವಿಕವಾಗಿ ಕಾರ್ಯಗಳು ನಡೆಯುವ ಸಂದರ್ಭ ದೇವತಾ ಚೈತನ್ಯಕ್ಕೆ ಅರ್ಚಕರು ಸಮರ್ಪಣೆ ಮಾಡಬೇಕು. ಅಷ್ಟು ಮಾತ್ರವಲ್ಲದೆ ಜನತೆಯು ಬಂದು ಅಲ್ಲಿ ಸಮರ್ಪಣಾ ಭಾವದಿಂದ ಬರುವ ಪ್ರಕ್ರಿಯೆ ನಡೆಯಬೇಕು. ಆ ರೀತಿ ಭಕ್ತರು ಸೇರಿದಾಗ ಚೈತನ್ಯ ವೃದ್ಧಿಯಾಗುತ್ತದೆ. ಇವತ್ತು ದೇವಾಲಯದಲ್ಲಿ ನಾವು ಮಾಡಿಕೊಂಡು ಬರುವ ಭಜನೆ, ನಾಮಸಂಕೀರ್ತನೆ, ಪಾರಾಯಣ ಕೂಡಾ ಚೈತನ್ಯ ವೃದ್ಧಿಗೆ ಪೂರಕವಾಗಿ ಇರುವಂತಹದ್ದು, ಒಂದೊಂದು ದೇವರಿಗೂ ಒಂದೊಂದು ಸಂಖ್ಯಾ ಪ್ರಾದಾನ್ಯತೆ ಇದೆ. ಶಿವ ದೇವರಿಗೆ ಪ್ರಾದಾನ್ಯತೆ ಇರುವುದು ಏಕಾದಶ ಸಂಖ್ಯೆ. ಆ ಪ್ರಾದಾನ್ಯತೆಯೊಂದಿಗೆ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ತೀರ್ಮಾನ ಮಾಡಿರುವುದು. ಈ ಜಪ ಮಾಡವುದಿರಂದ ಆ ಪರಿಸರದಲ್ಲಿರುವ ಎಲ್ಲಾ ಋಣಾತ್ಮಕ ಚೈತನ್ಯಗಳು ದೂರವಾಗುತ್ತದೆ. ವ್ಯಕ್ತಿಗತವಾಗಿ ನಾವು ಜಪಮಾಡಿಕೊಂಡು ಬರುವಾಗ ನಮ್ಮ ಆತ್ಮದಲ್ಲಿರುವ ಪಾಪತ್ವ ಕೂಡಾ ತೊಲಗುತ್ತದೆ. ಇವತ್ತು ನಮ್ಮಲ್ಲಿರುವ ಆಧ್ಯಾತ್ಮಿಕವಾಗಿರುವ ಚೈತನ್ಯ ವೃದ್ಧಿ ಕಡಿಮೆ ಆಗಿರುವುದರಿಂದ ಚಾಂಚಾಲ್ಯತೆ ಹುಟ್ಟಿದೆ. ಇದರಿಂದ ವಿಶ್ವಾಸ, ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಲಾಗುವುದಿಲ್ಲ. ನಮ್ಮಲ್ಲಿರುವಏಕಾಗ್ರತೆ ಜಾಗೃತವಾಗಬೇಕು. ಏಕಾಗ್ರತೆ ಜಾಗೃತವಾಗಬೇಕಾದರೆ ನಾವು ನಿರಂತರವಾಗಿ ಜಪ ಮಾಡಿಕೊಂಡು ಬರಬೇಕು ಎಂದು ಅವರು ಹೇಳಿದ ಅವರು ಈ ಎಲ್ಲಾ ಉದ್ದೇಶವಿರಿಸಿಕೊಂಡು ನಮ್ಮ ಮುಂದೆ ಪವಿತ್ರವಾಗಿರುವ ಕ್ಷೇತ್ರದದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬೋದಿಸಿರುವ ಬ್ರಹ್ಮಕಲಶ ಎಲ್ಲವು ಸಾಂಗವಾಗಿ ನೆರವೇರಬೇಕಾದರೆ ಈ ಎಲ್ಲಾ ಭಕ್ತಕೋಟಿ ಜನರು ಪರಿಪೂರ್ಣ ಸಮರ್ಪಣಾ ಭಾವದಿಂದ ದೇವಸನ್ನಿಧಿ ಸೇರಿಕೊಂಡಾಗ ಪೂರ್ಣ ಆಗುತ್ತದೆ. ಆ ಸಂಕಲ್ಪದಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಇದರಲ್ಲಿ ಬೇಕಾಗಿರುವುದು ಮನುಷ್ಯನ ಭಕ್ತಿ ಮತ್ತು ಶ್ರದ್ಧೆ ಮಾತ್ರ. ಭಕ್ತಿ ಸಮರ್ಪಣೆಯಿಂದ ಮಾಡುವ ಯಾವುದೇ ವಿಚಾರಗಳಿಗೂ ಕೂಡಾ ಯಾವುದೇ ಕಟ್ಟು ಪಾಡು ಧರ್ಮಶಾಸ್ತ್ರ ಇರಿಸಿಲ್ಲ. ಎಲ್ಲಿಯೂ ಬೇಕಾದರೂ ದೇವರ ನಾಮ ಸಂಕೀರ್ತನೆ ಮಾಡಬಹುದು. 1080 ನಾಮಜಪ ಮಡುವ ಸಂದರ್ಭದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶುಚೀರ್ಭೂತರಾಗಿ ಜಪ ಮಾಡುವ ಮೂಲಕ ಅವರ ಆನ್ನೋದ್ದಾರ ಆಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಬಿ.ಕೆ.ವೀಣಾ ಉಪಸ್ಥಿತರಿದ್ದರು.ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ: ಜಪ ಮಾಡುವವರು ತಮ್ಮ ಮನೆಗಳಲ್ಲಿ ಪ್ರಾತಃಕಾಲ ಅಥವಾ ಸಾಯಂಕಾಲ ಅಥವಾ ಎರಡು ಹೊತ್ತು ತಮ್ಮ ಅನುಕೂಲದಂತೆ ಶುಚೀರ್ಭೂತರಾಗಿ ದೇವರ ಮುಂದೆ ಮಣೆ, ಚಾಪೆ ಅಥವಾ ಮೇಲೆ ಕುಳಿತು, ದೀಪ ಹಚ್ಚಿ ಹಣೆಗೆ ಗಂಧ / ವಿಭೂತಿ/ಕುಂಕುಮ ಹಚ್ಚಿ ದಿನಕ್ಕೆ 1080 ಬಾರಿ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಜಪ ಮಾಡುವುದು. 108 ನಾಣ್ಯಗಳ ಮೂಲಕ ಪ್ರತಿದಿನ 1080 ಜಪ, ಹಾಗು 11 ದಿನಗಳಲ್ಲಿ 11,880 ಜಪ ಮಾಡುವುದು. ಮನೆಗೆ ಒಂದರ ಜಪ ಮಾಡಿದ 108 ನಾಣ್ಯಗಳನ್ನು ಸಮರ್ಪಿಸಿ ರೂ. 108 ರ ಸೇವಾಚೀಟಿ ಮಾಡಿಸಿಕೊಳ್ಳುವುದು. 108 ಜಪಕ್ಕೆ ಒಂದು ಸಲದಂತೆ ಒಟ್ಟು 11,880 ಜಪಕ್ಕೆ 110 ಸಲ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂದು ಬರೆಯುವುದು. ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ ಮಾಡಿ 11 ದಿನ ಪರ್ಯಂತ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳ ಮನೆಮನೆಗಳಲ್ಲಿ ಮಾಡುವ ಜಪದಿಂದ ಲೋಕ ಕಲ್ಯಾಣವಾಗಲಿ ಎಂದು ಸರ್ವರೂ ಪ್ರಾರ್ಥಿಸುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾಹಿತಿ ನೀಡಿದರು. ದೇವಸ್ಥಾನದಲ್ಲಿ ಮತ್ತು ಕೆಲವು ಕಡೆಗಳಲ್ಲಿ ಸೆ.2ರಂದು ಸಂಕಲ್ಪ ನಡೆಯುತ್ತದೆ. ಉಳಿದ ಕಡೆ ಬೇರೆ ದಿನ ಸಂಕಲ್ಪ ಮಾಡಬಹುದು. ದೇವಸ್ಥಾನ ಸೇರಿ 108 ಕಡೆಗಳಲ್ಲಿ ಈ ಸಂಕಲ್ಪ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನ. ಧಾರ್ಮಿಕ ಕೇಂದ್ರ, ಭಜನಾ ಮಂದಿರ, ಧಾರ್ಮಿಕ ಶಿಕ್ಷಣ ಕೇಂದ್ರ, ಕೆಲವೊಂದು ಶಾಲೆಗಳಲ್ಲೂ ಜಪ ಯಜ್ಞ ನಡೆಯುತದೆ ಎಂದರು.

ಉಪ್ಪಿನಂಗಡಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ

Posted by Vidyamaana on 2023-08-14 15:37:15 |

Share: | | | | |


ಉಪ್ಪಿನಂಗಡಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ

ಪುತ್ತೂರು:  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಗುತ್ತಿರುವ ಅಭಿವೃದ್ದಿ ಮತ್ತು ಜನಪರ ಯೋಜನೆಗಳನ್ನು ಮನಗಂಡು ಇಂದು ಅನೇಕ ಮಂದಿ ಬಿಜೆಪಿಗರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದು ಉಪ್ಪಿನಂಗಡಿಯಲ್ಲಿ ನಡೆದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿ ಬೆಂಬಲಿತರು ಕಾಂಗ್ರೆಸ್‌ಗೆ ಸೇರಿದ್ದು ಅತ್ಯಂತ ಸಂತೋಷದ ವಿಚಾರವಾಗಿದ್ದು ಇದರಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಉಪ್ಪಿನಂಗಡಿ ಗ್ರಾಪಂ ಇಂದು ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಮುಂದೆ ಉಪ್ಪಿನಂಗಡಿ ಗ್ರಾಪಂ ನ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ ಬೆಂಬಲಿತರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ವಾರ್ಡನ್ನು ಅಭಿವೃದ್ದಿ ಮಾಡಿಲ್ಲ ಇದೇ ಕಾರಣಕ್ಕೆ ಜನ ಇಂದು ಕಾಂಗ್ರೆಸ್‌ಗೆ ತಂಢೋಪತಂಡವಾಗಿ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಇಂದು ಜನರ ಮನಸ್ಸನ್ನು ತಲುಪಿದೆ. ಮುಂದೆ ಅನೇಕ ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಪಂ ಸದಸ್ಯರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರನ್ನು ಪಕ್ಷಕ್ಕೆ ಸೇರಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಗ್ರಾಪಂ ಆಡಳಿತವನ್ನು ಕಾಂಗ್ರೆಸ್ ಬಿಜೆಪಿಯಿಂದ ಕಸಿದುಕೊಂಡಿದೆ. ಆರ್ಯಾಪು ಗ್ರಾಪಂ ನ ನಿಕಟಪೂರ್ವ ಉಪಾಧ್ಯಕ್ಷರು ಸಹಿತ ಇಬ್ಬರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ . ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ , ಸಿದ್ದರಾಮಯ್ಯ ಸರಕಾರದ ಬಡವರ ಪರ ಯೋಜನೆಗಳು ಜನರನ್ನು ಕಾಂಗ್ರೆಸ್‌ನತ್ತ ಆಕರ್ಷಿಸುವಂತೆ ಮಾಡಿದೆ ಎಂದು ಶಾಸಕರು ಹೇಳಿದರು.

ಪಕ್ಷಕ್ಕೆ ಸೇರ್ಪಡೆಯಾದವರನ್ನು ಅತ್ಯಂತ ಗೌರವಾದರಗಳಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಹೇಳಿದ ಶಾಸಕರು ಇಂದು ನನಗೆ ಅತ್ಯಂತ ಸಂತೋಷ ದಿನವಾಗಿದೆ ಎಂದು ಹೇಳಿದರು. ಉಪ್ಪಿನಂಗಡಿ ಗ್ರಾಪಂ ನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಬಡವರ ಕೆಲಸಗಳು ಆಗಲಿದೆ ಇದರಲ್ಲಿ ಯಾವುದೇ ಅನುಮಾನವೇ ಬೇಡ. ಪಕ್ಷಕ್ಕೆ ಇನ್ನಷ್ಟು ಮಂದಿಯನ್ನು ಸೇರ್ಪಡೆಗೊಳಿಸುವ ಮೂಲಕ ನಾವು ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಿ ಕ್ಷೇತ್ರದ ಪ್ರತೀ ಮನೆಗೂ ಕಾಂಗ್ರೆಸ್‌ನ ಯೋಜನೆಗಳು ದೊರಕುವಂತೆ ಮಾಡಬೇಕು ಎಂದು ಹೇಳಿದರು.ಪಕ್ಷೇತರ ಸದಸ್ಯರಾದ ಸಣ್ಣಣ್ಣ ಮಡಿವಾಳ, ನಾಲ್ವರು ಎಸ್‌ಡಿಎಪಿಐ ಸದಸ್ಯರಾದ ರಶೀದ್, ಸೌಧ, ಮೈಶಿದಿ ಮತ್ತು ನೆಬಿಸಾ ರವರು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲ ನೀಡಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಪಕ್ಷೇತರ ಸದಸ್ಯರನ್ನು ಶಾಸಕರು ಶಾಲು ಹೊದಿಸಿ ಗೌರವಿಸಿದರು.

ಬಿಜೆಪಿ ಆಡಳಿತದ ವೈಫಲ್ಯದಿಂದ ಕಾಂಗ್ರೆಸ್ ಸೇರಿದ್ದಾರೆ

ಹಿಂದಿನ ಅವಧಿಯಲ್ಲಿದ್ದ ಬಿಜೆಪಿ ಗ್ರಾಪಂ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೇ ಇರುವ ಕಾರಣ ಬಿಜೆಪಿ ಬೆಂಬಲಿತರು ಅಭಿವೃದ್ದಿಯ ದೃಷ್ಟಿಯಿಂದ ಕಾಂಗ್ರೆಸ್ ಸೇರಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಣ್ಣನ್ನ ಅವರು ಬೆಂಬಲ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಎಸ್‌ಡಿಪಿಐ ಯವರು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಪ್ಪಿನಂಘಡಿ ಬಿಜೆಪಿ ಮುಕ್ತವಾಗಲಿದೆ , ಜನರು ನಮಗೆ ಖಂಡಿತವಾಗಿಯೂ ಆಶೀರ್ವಾದ ಮಡಲಿದ್ದಾರೆ. ಇನ್ನಷ್ಟು ಬಿಜೆಪಿ ಬೆಂಬಲಿತ ಸದಸ್ಯರು ನಮ್ಮ ಶಾಸಕರ ಅಭಿವೃದ್ದಿ ಕೆಲಸವನ್ನು ಮನಗಂಡು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿಯವರು ಹೇಳಿದರು.

ವಿಟ್ಲ ಉಪ್ಪಿನಗಂಡಿ ಬ್ಲಾಕ್ ಮಾಜಿ ಅಧ್ಯಕ್ಷಮುರಳೀಧರ್ ರೈ ಮಠಂತಬೆಟ್ಟು ಮಾತನಾಡಿ ಗ್ರಾಪಂ ಉಪ್ಪಿನಂಗಡಿ ಗ್ರಾಪಂ ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗ್ರಾಪಂ ಸದಸ್ಯರುಗಳಾದ ಯು ಟಿ ತೌಸೀಫ್, ಅಬ್ದುಲ್‌ರಹಿಮಾನ್ ಮಠ, ಇಬ್ರಾಹಿಂ ಪುಳಿತ್ತಡಿ, ವಿನಾಯಕ ಪೈ, ವಿಟ್ಲ ಉಪ್ಪಿನಂಗಡಿ ಮಾಜಿ ಬ್ಲಾಕ್ ಅಧ್ಯಕ್ಷರಾದ ಪ್ರವೀಣ್‌ಚಂಧ್ರ ಆಳ್ವ, ಡಿಸಿಸಿ ಕಾರ್ಯದರ್ಶಿ ಉಮಾನಾಥ ಶೆಟ್ವ ಪೆರ್ನೆ, ಮಹಮ್ಮದ್ ಕೆಂಪಿ, ಸಿದ್ದಿಕ್ ಕೆಂಪಿ, ಶಬ್ಬೀರ್ ಕೆಂಪಿ, ಸೋಮನಾಥ ರಾಮನಗರ, ವೆಂಕಪ್ಪ ಪೂಜಾರಿ, ಕೃಷ್ಣ ರಾವ್ ಅರ್ತಿಲ, ಅಝೀಝ್ ಬಸ್ತಿಕ್ಕಾರ್, ಉಮೇಶ್ ರಾಮನಗರ , ಮಜೀದ್ , ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸುಶಾನ್ ಶೆಟ್ಟಿ, ಸುಮಿತ್ ಶೆಟ್ಟಿ, ದಾಮೋಧರ ಭಂಡಾರ್ಕರ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಝೀರ್ ಮಠ, ವಲಯಾಧ್ಯಕ್ಷ ಆದಂ ಮಠ, ಕೃಷ್ಣಪ್ಪ ಎನ್, ಇಬ್ರಾಹಿಂ ಆಚಿ ಕೆಂಪಿ, ಝಕರಿಯ್ಯಾ ಕೊಡಿಪ್ಪಾಡಿ, ಮುಸ್ತಫಾ, ಯು ಟಿ ಫೌಝರ್, ರಫೀಕ್ ಝೆನ್  ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ವಿಶಾಲ ಗಾಣಿಗ ಕೊಲೆ ಕೇಸ್

Posted by Vidyamaana on 2024-02-03 17:52:10 |

Share: | | | | |


ಉಡುಪಿ ವಿಶಾಲ ಗಾಣಿಗ ಕೊಲೆ ಕೇಸ್

ಉಡುಪಿ, ಫೆ 03: ಸುಮಾರು ಮೂರು ವರ್ಷಗಳ ಹಿಂದೆ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೊಪಿಯನ್ನು ಕೊನೆಗೂ ಬಂಧಿಸಲಾಗಿದೆ.


ತಲೆ ಮರೆಸಿಕೊಂಡಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ಎಂಬ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಲಕ್ನೋದಲ್ಲಿ ಬಂಧಿಸಿದ್ದಾರೆ.

2021ನೇ ಜುಲೈ ತಿಂಗಳಿನಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆಕೆಯ ಗಂಡ ರಾಮಕೃಷ್ಣ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು.




ವಿಶಾಲ ಕೊಲೆ ಪ್ರಕರಣದಲ್ಲಿ ಆಕೆಯ ಗಂಡ ರಾಮಕೃಷ್ಣ ಪ್ರಮುಖ ಆರೋಪಿಯಾಗಿದ್ದಾನೆ. ರಾಮಕೃಷ್ಣನಿಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್‌ನಿಗೂ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ ಇನ್ನೋರ್ವ ಆರೋಪಿ ಧರ್ಮೇಂದ್ರ ಕುಮಾರ್ 


ಈತನಿಗೆ ಬಲೆ ಬೀಸಿದ್ದ ಬ್ರಹ್ಮಾವರ ಠಾಣಾ ಪೊಲೀಸರು ಪಿಎಸ್ಐ ಮಧು ಬಿ. ಇ ಹಾಗೂ ಠಾಣಾ ಸಿಬ್ಬಂದಿಗಳಾದ ಶಾಂತರಾಜ್ ಎಎಸ್‌ಐ, ಸುರೇಶ ಬಾಬುರವರ ತಂಡವು ದಿನಾಂಕ ಫೆ.02 ರಂದು ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ದಿನಾಂಕ ಫೆ.03 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Recent News


Leave a Comment: