ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

Posted by Vidyamaana on 2024-01-07 10:56:52 |

Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

ಬೆಂಗಳೂರು : ಬೆಂಗಳೂರು ನಗರದ ಓಲ್ಡ್ ಮದ್ರಾಸ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ನಿರ್ವಾಣ ಸ್ಪಾ ಮೇಲೇ ಸಿಸಿಬಿ ದಾಳಿ ನಡೆಸಿದ್ದರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.ಸ್ಪಾ ಮಾಲೀಕ ಅನೀಲ್ ಎಂದು ಹೇಳಲಾಗುತ್ತಿದ್ದು, ಬೇರೆ ರಾಜ್ಯದಿಂದ ಆಗಮಿಸಿ ಇಲ್ಲಿ ಸ್ಪಾ ನಡೆಸುತ್ತಿದ್ದ, ಆದರೆ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದದ್ದು ಬಯಲಾಗಿದೆ.ಆರೋಪಿಯೂ ಹೊರ ರಾಜ್ಯ ವಿದೇಶದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.


ಸಿಸಿಬಿ ಮಹಿಳಾ ಸಂರಕ್ಷಣಾ ದಳವು ದಾಳಿ ನಡೆಸಿದ ವೇಳೆ ಒಟ್ಟು 44 ಮಹಿಳೆಯರನ್ನು ಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಹುಮಡಿ ಕಟ್ಟಡದ 1 ಮತ್ತು 6ನೇ ಫ್ಲೋರ್ ನಲ್ಲಿ ಈ ದಂದೆ ನಡೆಯುತ್ತಿತ್ತು.


ಹೊರ ರಾಜ್ಯ ಹಾಗೂ ದೇಶದಿಂದ ಯುವತಿಯರನ್ನು ಕರೆದೊಯ್ದು ಆರೋಪಿ ವೇಶ್ಯಾವಾಟಿಕೆಯಲ್ಲಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎದೆ ಝಲ್​ ಎನಿಸುವ ಹುಡುಗಿಯ ಡೇಂಜರಸ್ ಸ್ಟಂಟ್! ವೈರಲ್​ ವೀಡಿಯೋ

Posted by Vidyamaana on 2024-06-20 16:47:02 |

Share: | | | | |


ಎದೆ ಝಲ್​ ಎನಿಸುವ ಹುಡುಗಿಯ ಡೇಂಜರಸ್ ಸ್ಟಂಟ್! ವೈರಲ್​ ವೀಡಿಯೋ

ನವದೆಹಲಿ: ಪುಣೆಯ ಜಂಬೂಲ್ ವಾಡಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಯುವತಿಯೊಬ್ಬಳು ಸಾಹಸ ಪ್ರದರ್ಶಿಸಿದ್ದಾಳೆ. ಹಾನಿಗೊಳಗಾದ ಕಟ್ಟಡದ ಮೇಲಕ್ಕೆ ಯುವತಿ ಮತ್ತು ಇಬ್ಬರು ಯುವಕರು ಹತ್ತಿದ್ದಾರೆ. ಒಬ್ಬ ಕ್ಯಾಮೆರಾ ಹಿಡಿದಿದ್ದರೆ, ಇನ್ನೊಬ್ಬ ಕಟ್ಟಡದ ಮೇಲೆ ನೇರವಾಗಿ ಮಲಗಿದ್ದಾನೆ.ಹುಡುಗಿ ಸಾಹಸ ಮಾಡಲು ಪ್ರಾರಂಭಿಸಿ, ಮೇಲಿಂದ ಕೆಳಕ್ಕೆ ಇಳಿದಿದ್ದು, ಆ ವೇಳೆ ಯುವಕ ಯುವತಿಯ ಕೈ ಹಿಡಿದಿದ್ದ. ಆಗ ಒಂದು ಕೈಯಿಂದ ಹುಡುಗನ ಕೈ ಹಿಡಿದುಕೊಂಡು ವಿಡಿಯೋ ತೆಗೆದಿದ್ದಾಳೆ.

ಸಿಎಂ ಜನತಾ ದರ್ಶನ ಕ್ಕೆ ಭರ್ಜರಿ ರೆಸ್ಪಾನ್ಸ್: 3,812 ಅರ್ಜಿ ಸ್ವೀಕಾರ, ಇತ್ಯರ್ಥಕ್ಕೆ 15 ದಿನಗಳ ಡೆಡ್ ಲೈನ್

Posted by Vidyamaana on 2023-11-28 07:05:17 |

Share: | | | | |


ಸಿಎಂ ಜನತಾ ದರ್ಶನ ಕ್ಕೆ ಭರ್ಜರಿ ರೆಸ್ಪಾನ್ಸ್: 3,812 ಅರ್ಜಿ ಸ್ವೀಕಾರ, ಇತ್ಯರ್ಥಕ್ಕೆ 15 ದಿನಗಳ ಡೆಡ್ ಲೈನ್

ಬೆಂಗಳೂರು : ಸೋಮವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬರೋಬ್ಬರಿ 3,812 ಅರ್ಜಿಗಳು ಸಲ್ಲಿಕೆಯಾಗಿದ್ದಾವೆ. ಇವುಗಳ ವಿಲೇವಾರಿಗೆ ಸಿಎಂ ಸಿದ್ಧರಾಮಯ್ಯ 15 ದಿನಗಳ ಡೆಡ್ ಲೈನ್ ಅನ್ನು ಅಧಿಕಾರಿಗಳಿಗೆ ನೀಡಿದ್ದಾರೆ.ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟಾರೆ 3812 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ.


ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.


ಸ್ಛಳದಲ್ಲೇ ಪರಿಹಾರ


ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ 9 ಲಕ್ಷ ರೂ. ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ, ಇದನ್ನುಪಾವತಿಸುವಷ್ಟು ಆರ್ಥಿಕ ಚೈತನ್ಯ ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗಿರಲಿಲ್ಲ. ಹಾಗಂತ, ಶಾಲೆಗೆ ಅತಿ ಅಗತ್ಯವಾಗಿದ್ದ ಸಿ.ಎ. ನಿವೇಶನವನ್ನು ಕೈಬಿಡುವಂತೆಯೂ ಇರಲಿಲ್ಲ. ಇದಕ್ಕೇನು ಪರಿಹಾರ? ಎಂದು ಯೋಚಿಸಿದ ಶಾಲಾ ಆಡಳಿತ ಮಂಡಳಿ ಇಂದು ಜನತಾ ದರ್ಶನಕ್ಕೆ ಬಂದು ತಮ್ಮ ಅಹವಾಲು ಸಲ್ಲಿಸಿತು. ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಕೂಡಲೇ ಆನ್ ಲೈನ್ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವ ಮೂಲಕ ಅಂಧಮಕ್ಕಳ ಬದುಕಿಗೆ ನೆಮ್ಮದಿಯ ಸೂರು ಕಲ್ಪಿಸಿದರು. ಇಂತಹ ಪ್ರಕರಣ ಸೇರಿದಂತೆ ಅನೇಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಸಿಎಂ ಸಿದ್ಧರಾಮಯ್ಯ ಸ್ಪಂದಿಸಿದರು.


ಒಟ್ಟಾರೆ ಜನರ ಬಳಿಗೇ ಆಡಳಿತವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಜನರಿಂದಲೇ ನೇರವಾಗಿ ಅಹವಾಲುಸ್ವೀಕರಿಸಿ ಸ್ಪಂದಿಸುವ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಿದರು. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದರು.

ಕೊಯಿಲ ಯುವಕ ಸಂದೇಶ್ ಮಾಸ್ಕತ್ ನಲ್ಲಿ ಆತ್ಮಹತ್ಯೆ

Posted by Vidyamaana on 2023-05-30 01:47:06 |

Share: | | | | |


ಕೊಯಿಲ ಯುವಕ ಸಂದೇಶ್ ಮಾಸ್ಕತ್ ನಲ್ಲಿ ಆತ್ಮಹತ್ಯೆ

ರಾಮಕುಂಜ: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಅಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನ ಮೇ 28ರಂದು ನಡೆದಿದೆ.

ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಸಂದೇಶ್ (32ವ.) ಆತ್ಮಹತ್ಯೆ ಮಾಡಿಕೊಂಡವರು. ಇವರು ಓಮನ್ ದೇಶದ ಮಸ್ಕತ್‌ನಲ್ಲಿ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಇಬ್ಬರು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಇವರ ಸಂಬಂಧಿ ಯುವಕ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬವರು ಸಹ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದರು. ಮೇ 29ರಂದು ಸಂದೇಶ್ ಅವರು ಬೇಗ ಕೆಲಸ ಮುಗಿಸಿ ಕೊಠಡಿಗೆ ಬಂದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಾದ ಕೆಲ ಹೊತ್ತಿನ ಬಳಿಕ ಚರಣ್‌ ಅವರು ಸಂದೇಶ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಬಂದ್ ಆಗಿತ್ತು. ಕರೆದರೂ ಯಾವುದೇ ಉತ್ತರ ಬಾರದೇ ಇದ್ದಾಗ ಸಂಶಯಗೊಂಡು ಗಾಬರಿಯಿಂದ ಸಂದೇಶರವರ ಸಹೋದರ ಸಂತೋಷ್‌ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಸಂತೋಷ್ ತನ್ನಲ್ಲಿದ್ದ ಕೀಯಿಂದ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಸಂದೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಸ್ಕತ್‌ನಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿದು ಮ೦ಗಳವಾರ ಅಥವಾ ಬುಧವಾರ ಮೃತದೇಹ ಊರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

8 ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು: ಸಂದೇಶ್ ಸಹೋದರ ಸಂತೋಷರವರು 7 ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನ್ನೈನಲ್ಲಿ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದವರು 8 ತಿಂಗಳ ಹಿಂದೆಯಷ್ಟೇ ಮತ್‌ಗೆ ತೆರಳಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿರಿ ಇಲ್ಲದ ಉದ್ಯೋಗ ಇದ್ದು ಯಾವುದೇ ಸಮಸ್ಯೆಗಳೂ ಇರಲಿಲ್ಲ. ಅಣ್ಣ ತಮ್ಮ ಜೊತೆಯಾಗಿಯೇ ಇದ್ದು ಸಂತೋಷವಾಗಿಯೇ ಇದ್ದರು. ಕೇವಲ ಒಂದು ಲೈನ್ ಸಾರಿ ಅಣ್ಣ ಎಂದು ಬರೆದಿಟ್ಟು ಸಂದೇಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸಂದೇಶ್‌ ತಾಯಿ ವಿಮಲ, ಸಹೋದರರಾದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಸಂತೋಷ್ ಹಾಗೂ ಊರಿನಲ್ಲಿ ಆಟೋ ಚಾಲಕನಾಗಿರುವ ಸತೀಶ್ ಅವರನ್ನು ಅಗಲಿದ್ದಾರೆ.

ಧರ್ಮಸ್ಥಳ ಸಿರಿ ಸಂಸ್ಥೆಯ ಹೊಸ ಉತ್ಪನ್ನಗಳ ಲೋಕಾರ್ಪಣೆ

Posted by Vidyamaana on 2023-10-17 07:26:33 |

Share: | | | | |


ಧರ್ಮಸ್ಥಳ ಸಿರಿ ಸಂಸ್ಥೆಯ ಹೊಸ ಉತ್ಪನ್ನಗಳ ಲೋಕಾರ್ಪಣೆ

ಧರ್ಮಸ್ಥಳ: ದಿನ ನಿತ್ಯದ ಪೂಜೆ, ದೇವರ ಧ್ಯಾನ ಹಾಗೂ ಪ್ರಾರ್ಥನೆ ಸಮಯದಲ್ಲಿ ದೀಪ ಮತ್ತು ಧೂಪ ಬಳಸುವುದು ನಮ್ಮ ಸಂಪ್ರದಾಯವಾಗಿದೆ. ಸಿರಿ ಸಂಸ್ಥೆಯ ನೂತನ ಉತ್ಪನ್ನಗಳಾದ ಶೃತಿ, ಸ್ತುತಿ, ಸಂಯಮ ಮತ್ತು ಶ್ರದ್ಧಾ ಎಂಬ ಹೊಸ ಅಗರ್ ಬತ್ತಿಗಳನ್ನು ಮೈಸೂರಿನ ಸೈಕಲ್ ಬ್ರಾಂಡ್ ಅಗರ್ ಬತ್ತಿ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ನೂತನ ಉತ್ಪನ್ನಗಳು ಎಲ್ಲರ ಮನೆ-ಮನಗಳನ್ನು ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು.


ನೂತನ ಉತ್ಪನ್ನಗಳಿಂದ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸಲಿದೆ ಎಂದು ಹೆಗ್ಗಡೆಯವರು ತಿಳಿಸಿದರು.ಸೈಕಲ್ ಬ್ರಾಂಡ್ ಅಗರ್ ಬತ್ತಿಯ ಸಿ.ಇ.ಒ. ಅರ್ಜುನ್‌ರಂಗ ಮತ್ತು ವಿಜಿರೋಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಲಕ್ಷ್ಮೀ ವಿಜಯ್ ಕುಮಾರ್ ಶುಭಾಶಂಸನೆ ಮಾಡಿದರು.


ಸಿರಿ ಸಂಸ್ಥೆಗೆ ನಾಲ್ಕು ಸಂಚಾರಿ ವಾಹನಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಸ್ತಾಂತರಿಸಲಾಯಿತು. ಸಿ.ಒ.ಒ. ಅನಿಲ್ ಕುಮಾರ್ ಉಪಸ್ಥಿತರಿದ್ದರು.ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ್ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಪ್ರಸನ್ನ ಯು. ಧನ್ಯವಾದವಿತ್ತರು. ಜೀವನ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ಅತ್ತಾವುಲ್ಲಾ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2024-02-15 11:24:39 |

Share: | | | | |


ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ಅತ್ತಾವುಲ್ಲಾ  ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಅತ್ತಾವುಲ್ಲಾ (22) ಮೃತ ಯುವಕ.ಅತ್ತಾವುಲ್ಲಾ ರವರ ಸಂಬಂಧಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.


ಅತ್ತಾವುಲ್ಲಾ ತಾಯಿಯೊಂದಿಗೆ ವಾಸವಾಗಿದ್ದು, ಮಡಂತ್ಯಾರಿನ ಕಾಲೇಜಿನಲ್ಲಿ ದ್ವಿತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು.


ಅತ್ತಾವುಲ್ಲಾ ಸುಮಾರು 1 ½ ತಿಂಗಳಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾದಂತೆ ವರ್ತಿಸುತ್ತಿದ್ದು, ಫೆ.14 ರಂದು ರಾತ್ರಿ ಆತನ ತಾಯಿ ನೆರೆಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ಮನೆಗೆ ಬಂದು ನೋಡಿದಾಗ ಅತ್ತಾವುಲ್ಲಾ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅತ್ತಾವುಲ್ಲಾ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ., ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಹೊರತು ಆತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುಡಿಆರ್ ನಂಬ್ರ 03/2024 ಕಲಂ:174 CRPC ರಂತೆ ಪ್ರಕರಣ ದಾಖಲಾಗಿದೆ.



Leave a Comment: