ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಬಂಟ್ವಾಳ : ಹಾಡ ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

Posted by Vidyamaana on 2024-07-14 13:28:10 |

Share: | | | | |


ಬಂಟ್ವಾಳ : ಹಾಡ ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಬಂಟ್ವಾಳ : ಹಗಲು ಹೊತ್ತಿನಲ್ಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಶನಿವಾರ ನಡೆದಿದೆ.

ಇರಾ ನಿವಾಸಿ ವನಿತಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 4.14 ಲಕ್ಷ ರೂ.ಮೌಲ್ಯದ 69 ಗ್ರಾಂ. ಚಿನ್ನಾಭರಣ ದೋಚಿದ್ದಾರೆ.

ಅಮೆರಿಕ : ಗುಂಡಿನ ದಾಳಿಗೆ ಭಾರತೀಯ ಡಾಕ್ಟರೇಟ್‌ ವಿದ್ಯಾರ್ಥಿ ಆದಿತ್ಯ ಮೃತ್ಯು

Posted by Vidyamaana on 2023-11-24 11:31:31 |

Share: | | | | |


ಅಮೆರಿಕ : ಗುಂಡಿನ ದಾಳಿಗೆ ಭಾರತೀಯ ಡಾಕ್ಟರೇಟ್‌ ವಿದ್ಯಾರ್ಥಿ ಆದಿತ್ಯ ಮೃತ್ಯು

ವಾಷಿಂಗ್ಟನ್:‌ ಭಾರತೀಯ ಮೂಲದ ಡಾಕ್ಟರೇಟ್‌ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದೊಂದು ದುರಂತ, ಆಕಸ್ಮಿಕ, ಆಘಾತಕಾರಿ ಘಟನೆ ಎಂದು ಮೆಡಿಕಲ್‌ ಯೂನಿರ್ವಸಿಟಿ ಪ್ರಕಟನೆಯಲ್ಲಿ ತಿಳಿಸಿದೆ.ಭಾರತದ ಆದಿತ್ಯ ಅದ್ಲಾಖಾ(26ವರ್ಷ) ಸಿನ್ಸಿನಾಟಿ ಮೆಡಿಕಲ್‌ ಸ್ಕೂಲ್‌ ನಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್‌ ವಿದ್ಯಾರ್ಥಿಯಾಗಿದ್ದರು ಎಂದು ಡಬ್ಲ್ಯುಎಕ್ಸ್‌ ಐಎಕ್ಸ್‌ ಟಿವಿ ವರದಿ ಮಾಡಿದೆ.


ಗೋಡೆಗೆ ಡಿಕ್ಕಿ ಹೊಡೆದ ಕಾರಿನೊಳಗೆ ಆದಿತ್ಯ ಪತ್ತೆಯಾಗಿದ್ದ ಎಂದು ಸಿನ್ಸಿನಾಟಿ ಪೊಲೀಸ್‌ ಲೆಫ್ಟಿನೆಂಟ್‌ ಜೋನಾಥನ್‌ ಕನ್ನಿಂಗ್‌ ಹ್ಯಾಮ್‌ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವುದು ಕಂಡುಬಂದಿತ್ತು.ಗುಂಡಿನ ದಾಳಿಗೆ ಒಳಗಾಗಿರುವ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವಾಹನದ ಚಾಲಕರೊಬ್ಬರು 9111ಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.


ಕೂಡಲೇ ಸ್ಥಳಕ್ಕಾಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಆದಿತ್ಯ ಉಸಿರಾಡುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎರಡು ದಿನದ ಬಳಿಕ ಆದಿತ್ಯ ಕೊನೆಯುಸಿರೆಳೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂಗಿಯ ಮಕ್ಕಳ ಕಿಡ್ನಾಪ್: ಗಂಡು ಮಗು ಹತ್ಯೆ ಮಾಡಿ ಹೂತು ಹಾಕಿದ ಮಹಿಳೆ

Posted by Vidyamaana on 2023-12-02 04:15:42 |

Share: | | | | |


ತಂಗಿಯ ಮಕ್ಕಳ ಕಿಡ್ನಾಪ್: ಗಂಡು ಮಗು ಹತ್ಯೆ ಮಾಡಿ ಹೂತು ಹಾಕಿದ ಮಹಿಳೆ

ಗುಡಿಬಂಡೆ: ಮಹಿಳೆಯೊಬ್ಬಳು ತಂಗಿಯ ಮಕ್ಕಳನ್ನೇ ಕಿಡ್ನಾಪ್ ಮಾಡಿ ಗಂಡು ಮಗುವನ್ನು ಹತ್ಯೆಗೈದ ಬೆಚ್ಚಿ ಬೀಳುವ ಘಟನೆ ನಡೆದಿದೆ.


ಗುಡಿಬಂಡೆ ಪೊಲೀಸ್ ವೃತ್ತದ ಪೆರೇಸಂದ್ರ ಪೊಲೀಸ್ ಠಾಣೆಯ ವ್ಯಾಪ್ತಿಯ ಮುತ್ತಕದಹಳ್ಳಿ ಗ್ರಾಮದ ನಿವಾಸಿ ಅಂಬಿಕ ಎಂಬಾಕೆ ತನ್ನ ತಂಗಿಯ ಮಗನಾದ ಮಧುಕುಮಾರ್ (6) ಎಂಬಾತನನ್ನು ಕೊಲೆ ಮಾಡಿ, ಮಾವಿನ ತೋಟದಲ್ಲಿ ಹೂತು ಹಾಕಿ, ಮಗಳಾದ ಮನುಶ್ರೀಯನ್ನು ಕಿಡ್ನಾಪ್ ಮಾಡಿದ್ದಾಳೆ.


ಗುರುವಾರ ಅಂಬಿಕಾ ತನ್ನ ತಂಗಿಯಾದ ಅನಿತಾಳ ಇಬ್ಬರು ಮಕ್ಕಳಾದ ಗಂಡು ಮಗ ಮಧುಕುಮಾರ್, ಹೆಣ್ಣು ಮಗಳಾದ ಮನುಶ್ರೀಯನ್ನು ಮನೆಯಿಂದ ಕನಕ ದಾಸರ ಜಯಂತಿ ಹೋಗುವುದಾಗಿ ಹೊರಗಡೆ ಕರೆದುಕೊಂಡು ಬಂದು, ಗ್ರಾಮದ ಪಕ್ಕದ ಮಾವಿನ ತೋಟದಲ್ಲಿ ಮಧುಕುಮಾರ್ ರನ್ನು ಕೊಲೆ ಮಾಡಿ ಹೂತು ಹಾಕಿದ್ದು, ಹೆಣ್ಣು ಮಗಳಾದ ಮನುಶ್ರೀಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾಳೆ.


ಹೆಣ್ಣು ಮಗಳನ್ನು ಬೆಂಗಳೂರಿನ ಆಟೋದಲ್ಲಿ ಕರೆದುಕೊಂಡು ಹೋಗುವಾಗ ಆಕೆಯ ನಡುವಳಿಕೆ ಹಾಗೂ ಸಂಭಾಷಣೆಯ ಮೇಲೆ ಅಟೋ ಚಾಲಕನಿಗೆ ಅನುಮಾನ ಬಂದಿದ್ದು, ಅಟೋ ಚಾಲಕನ ಸಮಯ ಪ್ರಜ್ಞೆ ಮೆರೆದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕೆರೆದುಕೊಂಡು ಹೋಗಿದ್ದು, ಪೊಲೀಸ್ ಸಿಬಂದಿಯವರು ಆಕೆಯನ್ನು ವಿಚಾರಣೆ ಮಾಡಿದಾಗ ನಡೆದ ವಿಚಾರವನ್ನು ಅಂಬಿಕಾ ಬಾಯಿ ಬಿಟ್ಟಿರುತ್ತಾಳೆ.ತತ್ ಕ್ಷಣ ಬೆಂಗಳೂರಿನ ಪೊಲೀಸ್ ಸಿಬಂದಿ ಪೆರೇಸಂದ್ರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಅವರು ಆಕೆಯನ್ನು ಗ್ರಾಮಕ್ಕೆ ಕೆರೆತಂದು ವಿಚಾರಣೆ ಮಾಡಿದ ನಂತರ ಕೊಲೆ ಮತ್ತು ಕಿಡ್ನಾಪ್ ಬಗ್ಗೆ ಬಾಯಿ ಬಿಟ್ಟಿರುತ್ತಾಳೆ, ಗುರುವಾರ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು.



ತಂಗಿಯ ಮೇಲಿನ ಕೋಪಕ್ಕೆ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, ಸ್ಥಳಕ್ಕೆ ಎಸ್.ಪಿ ನಾಗೇಶ್, ಡಿವೈಎಸ್.ಪಿ ಶಿವಕುಮಾರ್, ವೃತ್ತ ನಿರೀಕ್ಷಕ ನಯಾಜ್ ಬೇಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕ್ರೂರ ಕೃತ್ಯ ಎಸಗಲು ಮೂಲ ಕಾರಣ ಪೊಲೀಸರ ತನಿಖೆಯಿಂದಲೇ ಹೊರ ಬರಬೇಕಾಗಿದೆ.

ಕರುನಾಡಿನ ಗಂಧದ ಗುಡಿ ಯಲ್ಲೇ ಶ್ರೀಗಂಧದ ಎಣ್ಣೆಗೆ ಬರ

Posted by Vidyamaana on 2023-12-19 07:21:41 |

Share: | | | | |


ಕರುನಾಡಿನ ಗಂಧದ ಗುಡಿ ಯಲ್ಲೇ ಶ್ರೀಗಂಧದ ಎಣ್ಣೆಗೆ ಬರ

ಬೆಂಗಳೂರು, ಡಿಸೆಂಬರ್ 19: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL)ಸ್ಯಾಂಡಲ್​ ಸೋಪ್​ (Sandal Soap) ತಯಾರಿಕೆಗೂ ಈಗ ಶ್ರೀಗಂಧದ ಎಣ್ಣೆಯ ಕೊರತೆ ಉಂಟಾಗಿದೆ! ನೈಸರ್ಗಿಕವಾದ ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ತಯಾರಿಸುವ ಕೆಎಸ್​ಡಿಎಲ್​ಗೆ ಇದೀಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಶ್ರೀಗಂಧದ ಮರಗಳ ಅತಿಯಾದ ಕಡಿಯುವಿಕೆ, ಕಳ್ಳಸಾಗಾಣಿಕೆಯ ಪರಿಣಾಮ ಇದೀಗ ಸಾಕಷ್ಟು ಪ್ರಮಾಣದಲ್ಲಿ ಶ್ರೀಗಂಧದ ಎಣ್ಣೆ ದೊರೆಯದಾಗಿದೆ. ಹೀಗಾಗಿ ಕಂಪನಿಯು ಆಸ್ಟ್ರೇಲಿಯಾದಿಂದ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ವರದಿಯಾಗಿದೆ.


ಕೆಎಸ್​ಡಿಎಲ್ 500 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಉತ್ಪಾದನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮರುರೂಪಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.


ನೈಸರ್ಗಿಕ ಶ್ರೀಗಂಧದ ಎಣ್ಣೆಯನ್ನು ಬಳಸುವ ಮೂಲಕ ಸಾಬೂನು ತಯಾರಿಸುವ ಜಾಗತಿಕ ಮಟ್ಟದ ಏಕೈಕ ಸಂಸ್ಥೆ ಕೆಎಸ್​ಡಿಎಲ್ ಎಂದು ಕಂಪನಿ ಹೇಳಿಕೊಂಡಿದೆ. ಇದೀಗ ಸಾಬೂನು ತಯಾರಿಕೆಗೆ ಬೇಕಾಗಿರುವ ಪ್ರಮುಖ ಕಚ್ಚಾ ವಸ್ತುವಾದ ಶ್ರೀಗಂಧದ ಎಣ್ಣೆಗಾಗಿ ಬೇರೆ ದೇಶದ ಮೊರೆ ಹೋಗಬೇಕಾಗಿ ಬಂದಿದೆ. ಕಂಪನಿಯು ಆಸ್ಟ್ರೇಲಿಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ವರ್ಷ 4,000 ಕೆಜಿ ಶ್ರೀಗಂಧದ ಎಣ್ಣೆ ಆಮದು ಮಾಡಿಕೊಂಡಿದೆ. ಈ ವರ್ಷ 7,000 ಕೆಜಿ ಶ್ರೀಗಂಧದ ಎಣ್ಣೆಯನ್ನು ಆಮದುಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.


ಈ ಮಧ್ಯೆ, ಶ್ರೀಗಂಧದ ಗಿಡಗಳನ್ನು ನೆಟ್ಟು ಬೆಳೆಸುವ ವಿಚಾರವಾಗಿ ರಾಜ್ಯ ಸರ್ಕಾರವು ಅಭಿಯಾನ ಹಮ್ಮಿಕೊಂಡಿದೆ. 700 ರೈತರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಶ್ರೀಗಂಧವನ್ನು ಬೆಳೆಯಲು 4,000 ಎಕರೆ ಭೂಮಿಯನ್ನು ಗುರುತಿಸಲಾಗಿದೆ.


ಈ ಹಿಂದೆ ಶ್ರೀಗಂಧವನ್ನು ಎಲ್ಲಿ ಬೆಳೆದರೂ ಅದು ರಾಜ್ಯದ ಆಸ್ತಿಯಾಗಿತ್ತು. ಈಗ ಸರ್ಕಾರ ಆ ಷರತ್ತನ್ನು ತೆಗೆದು ರೈತರಿಗೆ ತಮ್ಮ ಹೊಲಗಳಲ್ಲಿ ಗಿಡ ನೆಟ್ಟು ಬೆಳೆಸಲು ಅನುಕೂಲ ಮಾಡಿಕೊಟ್ಟಿದೆ. ಅವರು ಮರಗಳನ್ನು 20 ವರ್ಷಗಳ ಅವಧಿಯ ನಂತರ ಅರಣ್ಯ ಇಲಾಖೆ ಅಥವಾ ಕೆಎಸ್‌ಡಿಎಲ್‌ಗೆ ಮಾರಾಟ ಮಾಡಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.


ಕಂಪನಿಯು 2026 ರ ಮಾರ್ಚ್ ವೇಳೆಗೆ 4,000 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಯೋಜನೆಯು ಹೊಸ ಕೊಡುಗೆಗಳೊಂದಿಗೆ ಇತರ ಮಾರುಕಟ್ಟೆಗಳಿಗೆ ವಿಸ್ತರಿಸುವುದು, ದೃಢವಾದ ಕಚ್ಚಾ ವಸ್ತುಗಳ ಪೂರೈಕೆ ಸರಪಳಿ ಮತ್ತು ಉತ್ಪಾದನಾ ನೆಲೆಯನ್ನು ಬೆಳೆಸುವುದು ಮತ್ತು ಹೊಸ ಉತ್ಪನ್ನ ವಿಭಾಗಗಳನ್ನು ಆರಂಭಿಸುವುದನ್ನು ಒಳಗೊಂಡಿದೆ ಎನ್ನಲಾಗಿದೆ.

ವಿದ್ಯುತ್ ಶಾಕ್ ಹೊಡೆದು ನವವಿವಾಹಿತ ಲೈನ್ ಮ್ಯಾನ್ ದುರಂತ ಸಾವು! ಪತಿಯ ಸಾವು ಕಂಡು ಅಘಾತಕ್ಕೊಳಗಾದ ಪತ್ನಿ

Posted by Vidyamaana on 2023-10-04 12:00:24 |

Share: | | | | |


ವಿದ್ಯುತ್ ಶಾಕ್ ಹೊಡೆದು ನವವಿವಾಹಿತ ಲೈನ್ ಮ್ಯಾನ್ ದುರಂತ ಸಾವು! ಪತಿಯ ಸಾವು ಕಂಡು ಅಘಾತಕ್ಕೊಳಗಾದ ಪತ್ನಿ

ಚಿಕ್ಕಬಳ್ಳಾಪುರ: ಬೆಸ್ಕಾಂನಲ್ಲಿ ಕರ್ತವ್ಯನಿರತ ಲೈನ್ ಮ್ಯಾನ್ ವಿದ್ಯುತ್ ಜಂಪ್ ಕಟ್ ಆಗಿರುವುನ್ನು ಸರಿಪಡಿಸಲು ಹೋಗಿ ವಿದ್ಯುತ್ ಶಾಕ್ ನಿಂದ ದುರಂತ ಸಾವು ಕಂಡಿರುವ ಘಟನೆ ನಡೆದಿದೆ. ಪತಿಯ ಸಾವು ಕಂಡ ಆತನ ಪತ್ನಿ ನವವಿವಾಹಿತೆ ಅಘಾತಕ್ಕೊಳಗಾಗಿದ್ದಾರೆ. ಆತನ ಹೆಸರು ವಿವೇಕ್ ಪಾಟೀಲ್, ಬೆಳಗಾವಿ ಜಿಲ್ಲೆ ರಾಯಬಾಗ್ ತಾಲೂಕಿನ ಉಬ್ಬರವಾಡಿ ನಿವಾಸಿ. ಚಿಕ್ಕಬಳ್ಳಾಪುರ ಜಿಲ್ಲಾ ಬೆಸ್ಕಾಂ ವಿಭಾಗದಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡ್ತಿದ್ದ. ನಿನ್ನೆ ನಂದಿ ವಿಭಾಗದ ಕೋಳವನಹಳ್ಳಿ ಬೊಮ್ಮನಹಳ್ಳಿ ಮಾರ್ಗದಲ್ಲಿ ತ್ರೀ ಫೇಸ್ ಮಾರ್ಗದಲ್ಲಿ ಜಂಪ್ ಕಟ್ ಆಗಿದೆ ಅಂತ ಜಂಪ್ ಹಾಕಲು ವಿದ್ಯುತ್ ಕಂಬ ಹತ್ತಿದ್ದಾನೆ. ಆಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಆನಂದಕುಮಾರ್. ಕೆ ಕಾರ್ಯಪಾಲಕ ಇಂಜಿನಿಯರ್, ಚಿಕ್ಕಬಳ್ಳಾಪುರ ಬೆಸ್ಕಾಂ ಮಾಹಿತಿ ನೀಡಿದ್ದಾರೆ.ವಿವೇಕ್ ಪಾಟೀಲ್ ಮಾರ್ಗದಾಳಾಗಿದ್ದು ನಿನ್ನೆ ಸಂಜೆ ಜಂಪ್ ಹಾಕುವಾಗ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಮಾರ್ಗದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಆದರೂ ಜಂಪ್ ಹಾಕಲು ಮುಂದಾದಾಗ ಘಟನೆ ನಡೆದಿದೆ. ವಿವೇಕ್ ಪಾಟೀಲ್ ಇತ್ತಿಚಿಗೆ ಮದುವೆಯಾಗಿದ್ದು ಪತ್ನಿಯನ್ನು ಚಿಕ್ಕಬಳ್ಳಾಪುರದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮದುವೆಯಾಗಿ ವರ್ಷದೊಳಗೆ ಪತಿ ಕಳೆದುಕೊಂಡಿರುವ ವಿವೇಕ್ ಪತ್ನಿ ವರ್ಷಾ, ಗಂಡನನ್ನು ನೆನೆದು ಆಘಾತಕ್ಕೊಳಗಾಗಿದ್ದಾರೆ.


ಅಸಲಿಗೆ ಜಂಪ್ ಕಟ್ ಆಗಿರುವ ಸ್ಥಳ ಬೇರೊಬ್ಬ ಮಾರ್ಗದಾಳುವಿಗೆ ಸಂಬಂಧಿಸಿದ್ದು. ಆತ ಅನಾರೋಗ್ಯದಿಂದಿರುವ ಹಿನ್ನೆಲೆ ಮಾರ್ಗದಾಳು ವಿವೇಕ್ ಸಂಬಂಧಿಸಿದ ಮಾರ್ಗದ ವಿದ್ಯುತ್ ಸ್ಥಗಿತಗೊಳಿಸದೆ ಹಾಗೂ ಮುಂಜಾಗ್ರತೆ ಕೈಗೊಳ್ಳದೆ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದೇ ಆತನ ಸಾವಿಗೆ ಕಾರಣ ಎನ್ನಲಾಗಿದೆ. ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.ಕೋಲಾರದ ಇಟಿಸಿಎಂ ವೃತ್ತದಲ್ಲಿ ಸಾರ್ವಜನಿಕವಾಗಿ ಕತ್ತು ಕೊಯ್ದುಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ರೆಹಮತ್ ಉಲ್ಲಾ ಬೇಗ್ (35) ಕತ್ತು ಕೊಯ್ದುಕೊಂಡು ಮೃತಪಟ್ಟ ವ್ಯಕ್ತಿ. ರೆಹಮತ್, ಕೋಲಾರ ಜಿಲ್ಲೆ ಕೆಜಿಎಫ್​ ತಾಲೂಕಿನ ಬೇತಮಂಗಲ ನಿವಾಸಿಯಾಗಿದ್ದು, ಗ್ಯಾಸ್ ಸ್ಟವ್ ರಿಪೇರಿ ಕೆಲಸ ಮಾಡಿಕೊಂಡಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಿಂದ ಕತ್ತು ಕೊಯ್ದುಕೊಂಡಿದ್ದ ರೆಹಮತ್ ಉಲ್ಲಾ ಬೇಗ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

Posted by Vidyamaana on 2024-04-14 20:23:09 |

Share: | | | | |


ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

ಮಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಬೃಹತ್ ಸಮಾವೇಶ ಮುಗಿಸಿದ ಬಳಿಕ ಪ್ರಧಾನಿ ಮೋದಿ ಮಂಗಳೂರು ತಲುಪಿದರು.

Recent News


Leave a Comment: