ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಬಾಳೆಹೊನ್ನೂರು :ಅಲ್ ಬದ್ರಿಯಾ ಜುಮಾ ಮಸೀದಿ ಯಲ್ಲಿ ಸಂಭ್ರಮದ ಈದುಲ್ ಅಝಾ ಆಚರಣೆ

Posted by Vidyamaana on 2023-06-30 01:53:34 |

Share: | | | | |


ಬಾಳೆಹೊನ್ನೂರು :ಅಲ್ ಬದ್ರಿಯಾ ಜುಮಾ ಮಸೀದಿ ಯಲ್ಲಿ ಸಂಭ್ರಮದ ಈದುಲ್ ಅಝಾ ಆಚರಣೆ

ಚಿಕ್ಕಮಗಳೂರು: ಬಾಳೆಹೊನ್ನೂರಿನ ಮಸೀದಿಕೆರೆಯ ಅಲ್ ಬದ್ರಿಯಾ ಜುಮಾ ಮಸೀದಿಯಲ್ಲಿ ತ್ಯಾಗ,ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬ ಆಚರಿಸಲಾಯಿತು.ನಮಾಝ್‌ಗೆ ನೇತೃತ್ವವನ್ನು ನೀಡಿದ ಮಸೀದಿಯ ಖತೀಬರಾದ ಸ್ವಾದಿಕ್ ಸಖಾಫಿ ಕರಿಂಬಿಲ ರವರು ತ್ಯಾಗ,ಬಲಿದಾನ,ಶಾಂತಿ ಸೌಹಾರ್ದತೆಯ ಬಗ್ಗೆ ಭಾಷಣ ಮಾಡಿದರು.ನಮಾಝ್‌ನ ನಂತರ SSF ಮಸೀದಿಕೆರೆ ಯುನಿಟ್ ಇದರ ವತಿಯಿಂದ ಸೆ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ವಿದ್ಯಾರ್ಥಿ ಸಮಾವೇಶ ಹಾಗೂ ನವೆಂಬರ್ ತಿಂಗಳಿನಲ್ಲಿ ಮುಂಬೈ‌ನ ಏಕತಾ ಉದ್ಯಾನದಲ್ಲಿ ನಡೆಯಲಿರುವ SSF ನ ಐವತ್ತನೇ ಸಂಭ್ರಮಾಚರಣೆಯ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಗೋಲ್ಡನ್‌ ಕಿ ಮುಹಬ್ಬತ್ ಎಂಬ ಹೆಸರಿನೊಂದಿಗೆ ಸರ್ವ ಧರ್ಮೀಯರಿಗೂ ಸಿಹಿ ವಿತರಿಸಿದರು.ಈ ವೇಳೆ SYS ಮಸೀದಿಕೆರೆ ಯುನಿಟ್‌ನ ಅಧ್ಯಕ್ಷರಾದ ಇಬ್ರಾಹಿಂ,ಕಾರ್ಯದರ್ಶಿ ಉಮರ್,SSF ಚಿಕ್ಕಮಗಳೂರು ಜಿಲ್ಲಾ ದ‌ಅವಾ ಕಾರ್ಯದರ್ಶಿ ಜಾಶಿರ್‌ ಹಿಮಮಿ ಸಖಾಫಿ,SSF ಬಾಳೆಹೊನ್ನೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ರಮೀಝ್ ಅಕ್ಷರನಗರ, ಮಸೀದಿಕೆರೆ ಯುನಿಟ್‌ನ ಕಾರ್ಯದರ್ಶಿಯಾದ ಖಲಂದರ್ ಮಸೀದಿಕೆರೆ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಪುತ್ತೂರಿನ ಫ್ಯಾಶನ್ ಲೋಕದ ಮಹಾಉತ್ಸವ ಆ 01 ರಿಂದ ಪ್ರಾರಂಭ

Posted by Vidyamaana on 2023-07-31 14:33:54 |

Share: | | | | |


ಪುತ್ತೂರಿನ ಫ್ಯಾಶನ್ ಲೋಕದ ಮಹಾಉತ್ಸವ  ಆ 01 ರಿಂದ ಪ್ರಾರಂಭ

ಪುತ್ತೂರು: ಫ್ಯಾಮಿಲಿ ಶೋರೂಂ ರಾಧಾಸ್’ನಲ್ಲಿ ಪುತ್ತೂರಿನ ಫ್ಯಾಶನ್ ಲೋಕದ ಮಹಾ ಉತ್ಸವ ಮಾನ್ಸೂನ್ ಮೇಳ ನಾಳೆಯಿಂದ (ಆಗಸ್ಟ್ 1) ಆರಂಭಗೊಳ್ಳಲಿದೆ.

ವಸ್ತ್ರ ಪ್ರಿಯರು ಕಾತರದಿಂದ ಕಾಯುತ್ತಿದ್ದ ಮಹಾ ಉತ್ಸವ ಕೊನೆಗೂ ಸಮೀಪಿಸಿದೆ. ದೊಡ್ಡ ಅವಕಾಶ, ಅತಿದೊಡ್ಡ ಸಂಗ್ರಹ, ಅತ್ಯಂತ ದೊಡ್ಡ ಉತ್ಸವ ಇದಾಗಿದ್ದು, ವೈವಿಧ್ಯಮಯ ವಸ್ತ್ರಗಳು ಗ್ರಾಹಕರ ಮುಂದೆ ತೆರೆದುಕೊಳ್ಳಲಿದೆ.

ಪ್ರತಿದಿನ ಹೊಸ ಸಂಗ್ರಹದೊಂದಿಗೆ ಬರುವುದಷ್ಟೇ ಅಲ್ಲ, ರಾಧಾ’ಸ್ ಮಾನ್ಸೂನ್ ಮೇಳದಲ್ಲಿ ಅತೀ ಕಡಿಮೆ ಬೆಲೆಗೆ ಗ್ರಾಹಕರನ್ನು ತಲುಪುವುದು ವಿಶೇಷ. ಈ ಮಾನ್ಸೂನ್ ಮೇಳದಲ್ಲಿ ವಸ್ತ್ರಗಳನ್ನು ಖರೀದಿಸಿ ನಂಬರ್ ವನ್ ಶಾಪಿಂಗ್ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸಿಲ್ಕ್ಸ್, ಟೆಕ್ಸ್’ಟೈಲ್, ರೆಡಿಮೇಡ್ ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಪ್ರತಿಷ್ಠಿತ ಫ್ಯಾಮಿಲಿ ಶೋರೂಂ ರಾಧಾ’ಸ್, ಗ್ರಾಹಕರಿಗೆ ಮಾನ್ಸೂನಿನ ರಸದೌತಣ ಉಣಬಡಿಸಲು ತಯಾರಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇರುವುದು ಗ್ರಾಹಕರ ದೃಷ್ಟಿಯಿಂದ ಅನುಕೂಲಕರ. ಗ್ರಾಹಕರಿಗಾಗಿ ಸಿದ್ಧವಾಗಿರುವ ಮಾನ್ಸೂನ್ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

Posted by Vidyamaana on 2024-06-27 21:21:41 |

Share: | | | | |


ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ. ಹೊಳೆ,ಕೆರೆ,ಭಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರವಹಿಸಿ. ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ,ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ. ಬಾವಿ ಕುಸಿಯುತ್ತಿರುವ ಘಟನೆಗಳು ನಡೆದಿದ್ದು ಬಾವಿಯಿಂದ ದೂರ ಇರಿ. ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಡಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ. ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ. 

ಸಿಎಂ ವಿರುದ್ಧ ಸುಳ್ಳು ಸುದ್ದಿ: 7 ಮಂದಿ ವಿರುದ್ಧ FIR

Posted by Vidyamaana on 2024-04-10 22:03:09 |

Share: | | | | |


ಸಿಎಂ ವಿರುದ್ಧ ಸುಳ್ಳು ಸುದ್ದಿ: 7 ಮಂದಿ ವಿರುದ್ಧ FIR

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಗಳ ಮತ ಬೇಡ, ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆಂದು ಸುದ್ದಿಪತ್ರಿಕೆಯ ವರದಿ ರೀತಿಯಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಹಿಂದುಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು‌. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಂರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಬಗ್ಗೆ ಹರೀಶ್‌ ನಾಗರಾಜು ಎಂಬವರು ಪೊಲೀಸರಿಗೆ ದೂರು ನೀಡಿದ್ದರು.


ಅವರ ದೂರಿನ ಆಧಾರದ ಮೇಲೆ ಬೆಂಗಳೂರು ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66, 66ಸಿ ಮತ್ತು 66ಡಿ ಹಾಗೂ ಐಪಿಸಿ ಸೆಕ್ಷನ್‌ 153ಎ, 120ಬಿ, 419, 469, 471, 505(2) ಮತ್ತು 468ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

Posted by Vidyamaana on 2024-03-05 09:03:13 |

Share: | | | | |


ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜೀನಾಮೆ

ನವದೆಹಲಿ (ಮಾರ್ಚ್ 05): ಮೂರನೇ ಬಾರಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP N

non

da) ಅವರು ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುತರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೆಪಿ ನಡ್ಡಾ ಅವರು ಹಿಮಾಚಲ ಪ್ರದೇಶ ರಾಜ್ಯಸಭಾ ಸದಸ್ಯತ್ವ(Himachal pr

non

esh Rajya Sabha MP) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ನಡ್ಡಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.


ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಿರುವ ಜೆಪಿ ನಡ್ಡಾ ಅವಧಿ ಏಪ್ರಿಲ್ ತಿಂಗಳಿಗೆ ಅಂತ್ಯವಾಗಲಿದೆ. ಇದಕ್ಕೂ ಮೊದಲೇ ಜೆಪಿ ನಡ್ಡಾ ಅವರು ಗುಜರಾತ್‌ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಸಕ್ತ ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ ನೀಡಿದ್ದಾರೆ.ಇನ್ನು ಜೆಪಿ ನಡ್ಡಾ ಅವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಡ್ಡಾ ಅವರ ಅಧಿಕಾರವಧಿಯಲ್ಲಿ 2024ರ ಜೂನ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಅಮಿತ್‌ ಶಾ ಈ ಘೋಷಣೆ ಮಾಡಿದ್ದರು. ಈ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯನ್ನು ನಡ್ಡಾ ನೇತೃತ್ವದಲ್ಲೇ ಎದುರಿಸಲಿದೆ. ನಡ್ಡಾ ಅವರು 2019ರಲ್ಲಿ ಅಮಿತ್‌ ಶಾ ಅವರ ಬಳಿಕ ಮಧ್ಯಂತರ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ 2020ರಿಂದ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ: ಆಮಂತ್ರಣ ಬಿಡುಗಡೆ

Posted by Vidyamaana on 2022-12-15 07:40:02 |

Share: | | | | |


ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ: ಆಮಂತ್ರಣ ಬಿಡುಗಡೆ

ಪುತ್ತೂರು: ವಿಶ್ವಕರ್ಮ ಯುವ ಸಮಾಜದ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜನವರಿ ೮ರಂದು ನಡೆಯಲಿರುವ ವಿಶ್ವಕರ್ಮ ಸಮಾಜದ ವಟುಗಳ ೮ನೇ ಬಾರಿಯ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಮಾಡಲಾಯಿತು.

ಸಮಾಜದ ಹಿರಿಯರು, ಕೂಡುವಳಿಕೆ ಮೊಕ್ತೇಸರ ಕೆ. ಕೃಷ್ಣ ಆಚಾರ್ಯ ದೀಪ ಬೆಳಗಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. 

ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ಮಾತನಾಡಿ, ಜ. ೮ರಂದು ವಿಶ್ವಕರ್ಮ ಯುವ ಸಮಾಜ ಪುತ್ತೂರು, ವಿಶ್ವಬ್ರಾಹ್ಮಣ ಸೇವಾ ಸಂಘ ಪುತ್ತೂರು ಮತ್ತು ವಿಶ್ವಕರ್ಮ ಮಹಿಳಾ ಮಂಡಲಿ ಪುತ್ತೂರು ಇದರ ಸಹಕಾರದೊಂದಿಗೆ ವಿಶ್ವಕರ್ಮ ಸಮಾಜದ ವಟುಗಳಿಗೆ ೮ನೇ ಬಾರಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಬಂಟ್ವಾಳ ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಹಾಗೂ ಪುತ್ತೂರಿನ ನಿವೃತ್ತ ಉಪಖಜಾನಾಧಿಕಾರಿ ವಿಠಲಾಚಾರಿ ಬಿ. ಮುಖ್ಯಅತಿಥಿಯಾಗಿರುವರು. ಈಗಾಗಲೇ ವಟುಗಳ ನೊಂದಾವಣಿ ಕಾರ್ಯ ಆರಂಭವಾಗಿದ್ದು ವಿವಿಧ ಜಿಲ್ಲೆಗಳಿಂದ ಸುಮಾರು ೨೫ಕ್ಕೂ ಹೆಚ್ಚು ವಟುಗಳು ಭಾಗವಹಿಸುವ ನೀರಿಕ್ಷೆಯಿದೆ ಎಂದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಸ್.ಎನ್. ಜಗದೀಶ ಆಚಾರ್ಯ ಮಾತನಾಡಿ, ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭಹಾರೈಸಿದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೊಕ್ಕಡ ಅವರು ವಿವಿಧ ಸಮಿತಿಗಳ ರಚನೆ ಹಾಗೂ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ತಿಳಿಸಿದರು. 

ಸಲಹಾ ಸಮಿತಿ ಸದಸ್ಯರಾದ ಭುಜಂಗ ಆಚಾರ್ಯ, ರಮೇಶ ಆಚಾರ್ಯ ಮಾಮೇಶ್ವರ, ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯಶ್ರೀ ವಾದಿರಾಜ್, ಉಷಾ ಸದಾನಂದ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಆಚಾರ್ಯ ವರದಿ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಆನಂದ ಆಚಾರ್ಯ ಪ್ರಾರ್ಥಿಸಿ, ಖಜಾಂಚಿ ವಸಂತ ಆಚಾರ್ಯ ಬಿ. ವಂದಿಸಿದರು.




Leave a Comment: