ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

Posted by Vidyamaana on 2024-01-07 10:56:52 |

Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

ಬೆಂಗಳೂರು : ಬೆಂಗಳೂರು ನಗರದ ಓಲ್ಡ್ ಮದ್ರಾಸ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ನಿರ್ವಾಣ ಸ್ಪಾ ಮೇಲೇ ಸಿಸಿಬಿ ದಾಳಿ ನಡೆಸಿದ್ದರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.ಸ್ಪಾ ಮಾಲೀಕ ಅನೀಲ್ ಎಂದು ಹೇಳಲಾಗುತ್ತಿದ್ದು, ಬೇರೆ ರಾಜ್ಯದಿಂದ ಆಗಮಿಸಿ ಇಲ್ಲಿ ಸ್ಪಾ ನಡೆಸುತ್ತಿದ್ದ, ಆದರೆ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದದ್ದು ಬಯಲಾಗಿದೆ.ಆರೋಪಿಯೂ ಹೊರ ರಾಜ್ಯ ವಿದೇಶದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.


ಸಿಸಿಬಿ ಮಹಿಳಾ ಸಂರಕ್ಷಣಾ ದಳವು ದಾಳಿ ನಡೆಸಿದ ವೇಳೆ ಒಟ್ಟು 44 ಮಹಿಳೆಯರನ್ನು ಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಹುಮಡಿ ಕಟ್ಟಡದ 1 ಮತ್ತು 6ನೇ ಫ್ಲೋರ್ ನಲ್ಲಿ ಈ ದಂದೆ ನಡೆಯುತ್ತಿತ್ತು.


ಹೊರ ರಾಜ್ಯ ಹಾಗೂ ದೇಶದಿಂದ ಯುವತಿಯರನ್ನು ಕರೆದೊಯ್ದು ಆರೋಪಿ ವೇಶ್ಯಾವಾಟಿಕೆಯಲ್ಲಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

Posted by Vidyamaana on 2024-05-29 06:32:45 |

Share: | | | | |


ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ  ಆಶಿಫ್ ಮುಕ್ವೆ ಅಧ್ಯಕ್ಷ, ಸುಹೈಲ್ ಬಡಕೋಡಿ ಕಾರ್ಯದರ್ಶಿ

ಪುತ್ತೂರು: SDTU ಇದರ ಸಹ ಸಂಘಟನೆಯಾದ ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ವಾರ್ಷಿಕ ಕಾರ್ಯಕ್ರಮ ಯೂನಿಯನ್ ಅಧ್ಯಕ್ಷ ಮೊಹಮ್ಮದ್ ಕುಞ ಬಾಬ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನೀಶ್ ಹಾಲ್ ನಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಹಮೀದ್ ಕೆ. ಎಸ್ ವಾಚಿಸಿದರೆ, ಕಾರ್ಯದರ್ಶಿ ಹನೀಫ್ ಪೈಸಾರಿ ಸ್ವಾಗತಿಸಿದರು. ಬಳಿಕ ನೂತನ ಸಮಿತಿ ರಚನೆ ನಡೆಸಲಾಯಿತು

ಯೂನಿಯನ್ ಉಸ್ತುವಾರಿಯಾಗಿ ಶಮೀರ್ ನಾಜೂಕು, ಅಧ್ಯಕ್ಷರಾಗಿ ಆಶಿಫ್ ಮುಕ್ವೆ, ಉಪಾಧ್ಯಕ್ಷರಾಗಿ ಶಾಕಿರ್ ಬೆಳಂದೂರು, ಕಾರ್ಯದರ್ಶಿಯಾಗಿ ಸುಹೈಲ್ ಬಡಕೋಡಿ, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ಸಾಲ್ಮರ

ಬೋಳಿಯಾರು ಚೂರಿ ಇರಿತ ಪ್ರಕರಣ ; ಐವರು ಆರೋಪಿಗಳ ಬಂಧನ, ಮಸೀದಿ ಮುಂಭಾಗದಲ್ಲಿ ಘೋಷಣೆ ಕೂಗಿದ್ದಾರೆಂದು ಮತ್ತೊಂದು ಕೇಸು, ಸಿಸಿಟಿವಿ ಆಧರಿಸಿ ಐವರ ವಿರುದ್ಧ ಪ್ರಕರಣ ದಾಖಲು

Posted by Vidyamaana on 2024-06-10 20:32:43 |

Share: | | | | |


ಬೋಳಿಯಾರು ಚೂರಿ ಇರಿತ ಪ್ರಕರಣ ; ಐವರು ಆರೋಪಿಗಳ ಬಂಧನ, ಮಸೀದಿ ಮುಂಭಾಗದಲ್ಲಿ ಘೋಷಣೆ ಕೂಗಿದ್ದಾರೆಂದು ಮತ್ತೊಂದು ಕೇಸು, ಸಿಸಿಟಿವಿ ಆಧರಿಸಿ ಐವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಜೂನ್ 10: ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ಚೂರಿಯಿಂದ ದಾಳಿ ನಡೆಸಿದ ಘಟನೆ ಸಂಬಂಧಿಸಿ ಕೋಣಾಜೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಕೀರ್(28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್(35), ಸವಾದ್ (18) ಮತ್ತು ಮೋನು ಅಲಿಯಾಸ್ ಹಫೀಜ್ (24) ಬಂಧಿತರು.

ಇದೇ ವೇಳೆ, ಬೋಳಿಯಾರು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ಪಿ.ಕೆ ಅಬ್ದುಲ್ಲಾ ನೀಡಿದ ದೂರಿನಂತೆ ಕೋಣಾಜೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಬಳಿಕ ಕೆಲವು ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆಮೂಲಕ ಅಲ್ಲಿದ್ದ ಮುಸ್ಲಿಂ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಇದರ ಸಿಸಿಟಿವಿ ವಿಡಿಯೋವನ್ನೂ ಮಸೀದಿಯವರು ಬಿಡುಗಡೆ ಮಾಡಿದ್ದಾರೆ.

ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

Posted by Vidyamaana on 2024-06-11 20:34:39 |

Share: | | | | |


ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

ಪುತ್ತೂರು: ನರಿಮೊಗರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ (40 ವ.) ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಸಂಜೆ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೊದಲ ಅಧಿವೇಶನದ ವೇಳೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

Posted by Vidyamaana on 2024-07-06 21:47:26 |

Share: | | | | |


ಮೊದಲ ಅಧಿವೇಶನದ ವೇಳೆ ಹಲವು ಕೇಂದ್ರ ಸಚಿವರನ್ನು ಭೇಟಿ  ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ್ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದನಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮೊದಲ ಅಧಿವೇಶನದ ವೇಳೆ ಹಲವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಕೇಂದ್ರ ಬಂದರು, ಶಿಪ್ಪಿಂಗ್‌ ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್‌ ಅವರನ್ನು ಅವರ ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಎನ್‌ಎಮ್‌ಪಿ‌ಎ ಯ ಅಭಿವೃದ್ಧಿಯ ದೃಷ್ಟಿಯಿಂದ ಇರುವ ಸಾಧ್ಯತೆಗಳು, ಸಾಗರ್‌ಮಾಲಾ ಯೋಜನೆ ಅಡಿಯಲ್ಲಿ ಲಕ್ಷದ್ವೀಪಕ್ಕೆ ತೆರಳುವ ಹಡಗುಗಳಿಗೆ ಮೀಸಲಾದ ಜೆಟ್ಟಿ ಮತ್ತು ಕ್ರೂಸ್ ಟರ್ಮಿನಲ್ ನಿರ್ಮಾಣದ ಕುರಿತು ಚರ್ಚೆ ನಡೆಸಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ದೆಹಲಿಯ ಸಚಿವಾಲಯದಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಪ್ರಗತಿ, ಸಮಸ್ಯೆ ಮತ್ತು ಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ

ಹಾಸನ :ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ದೀಪಾ ಆತ್ಮಹತ್ಯೆ

Posted by Vidyamaana on 2024-05-09 21:39:05 |

Share: | | | | |


ಹಾಸನ :ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ದೀಪಾ ಆತ್ಮಹತ್ಯೆ

ಹಾಸನ : ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿಯನ್ನು ದೀಪಾ (34) ಎಂದು ಗುರುತಿಸಲಾಗಿದೆ. ದೀಪಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

Recent News


Leave a Comment: