ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪತ್ನಿಯ ಕಿರುಕುಳ ಆರೋಪ: ಮನನೊಂದು ಸಾವಿಗೆ ಶರಣಾದ ನವವಿವಾಹಿತ ಕಿರಣ್

Posted by Vidyamaana on 2023-08-02 12:14:01 |

Share: | | | | |


ಪತ್ನಿಯ ಕಿರುಕುಳ ಆರೋಪ: ಮನನೊಂದು ಸಾವಿಗೆ ಶರಣಾದ ನವವಿವಾಹಿತ ಕಿರಣ್

ಹಾಸನ: ನವವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ನಡೆದಿದೆ.

ಕಿರಣ್ ಬಿ.ಬಿ. (26) ಮೃತ ಯುವಕ. ಇನ್ನು ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ ಕಿರಣ್, ಬೇಕರಿ ನಡೆಸುತ್ತಿದ್ದ. ಕಳೆದ ಫೆ.19 ರಂದು ದಂಡಿಗನಹಳ್ಳಿ ಹೋಬಳಿಯ ವಗರಹಳ್ಳಿ ಗ್ರಾಮದ ಸ್ಪಂದನಾ (24) ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ನಂತರ ಪತ್ನಿ ಸ್ಪಂದನಾ ಸೇರಿ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ ಅಷ್ಟರಲ್ಲಿಯೇ ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಬಗ್ಗೆ ಕಿರಣ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಜೈಲುಪಾಲಾಗಿದ್ದ ಕಿರಣ್,ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಎಲ್ಲಾ ಘಟನೆಯಿಂದ ಮನನೊಂದು ಜುಲೈ 31ರ ರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

Posted by Vidyamaana on 2023-09-17 15:25:04 |

Share: | | | | |


ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಕಬಕ ಮಹಾದೇವಿ ದೇವಸ್ಥಾನದಲ್ಲಿ ಅವರ ಆಯುಷ್ಯ,ಆರೋಗ್ಯ ವೃದ್ಧಿಗಾಗಿ ಮತ್ತು ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಮಹಾದೇವಿ ಅನುಗ್ರಹಿಸಲಿ ಎಂದು ಕುಂಕುಮಾರ್ಚನೆ ಸೇವೆ ಮಾಡುವುದರ ಮೂಲಕ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ,ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ,ಎಸ್.ಟಿ ಮೋರ್ಚ ಪ್ರ.ಕಾರ್ಯದರ್ಶಿ ಹರೀಶ್ ಬಿಜತ್ರೆ, ಪುಣಚ ಮಹಾಶಕ್ತೀ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ,ಮಾಣಿಲ ಬಿಜಿಪಿ ಪ್ರಮುಖರಾದ ಗೀತಾನಂದ ಶೆಟ್ಟಿ,ರಾಜೇಶ್ ಬಾಳೆಕಲ್ಲು,ಕಬಕ ಶಕ್ತೀ ಕೇಂದ್ರದ ಜಯರಾಮ್ ನೆಕ್ಕರೆ, ಪಂಚಾಯತ್ ಸದಸ್ಯರಾದ ರುಕ್ಮಯ ಗೌಡ,ಯತೀಶ್ ಪದ್ನಡ್ಕ,ವಿಟ್ಲ ಮುಡ್ನೂರು ಪಂ.ಅಧ್ಯಕ್ಷರಾದ ಪುನೀತ್ ಮಾಡತ್ತಾರು,ಕಿಶೋರ್ ನಾಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ಏತ್ ಇತ್ತಂಡ ದಾನೆ..! : ಬಹುಕೋಟಿ ಉದ್ಯಮಿ ಬೀದಿ ನಾಯಿಗಳ ದಾಳಿಗೆ ಬಲಿ!

Posted by Vidyamaana on 2023-10-23 21:09:08 |

Share: | | | | |


ಏತ್ ಇತ್ತಂಡ ದಾನೆ..! : ಬಹುಕೋಟಿ ಉದ್ಯಮಿ ಬೀದಿ ನಾಯಿಗಳ ದಾಳಿಗೆ ಬಲಿ!

ಅಹಮದಾಬಾದ್, ಅ 23: ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್​ನಲ್ಲಿ ಮೃತಪಟ್ಟಿದ್ದಾರೆ.


ವಾಘ್ ಬಕ್ರೀ ಟೀ ಗ್ರೂಪ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅವರು ಸಾವನ್ನಪ್ಪಿದ್ದಾರೆ. ತಮ್ಮ ಮನೆ ಬಳಿ ನಿಂತಿದ್ದಾಗ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರು. ಬೀದಿ ನಾಯಿಗಳು ದಾಳಿ ಮಾಡಿದಾಗ ಪರಾಗ್‌ ದೇಸಾಯಿ ಅವರು ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಬ್ರೈನ್ ಹೆಮರೇಜ್‌ನಿಂದ 49 ವರ್ಷದ ಪರಾಗ್ ದೇಸಾಯಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


ಪರಾಗ್ ದೇಸಾಯಿ ಅವರು ಕಳೆದ ಅಕ್ಟೋಬರ್ 15ರಂದು ಮನೆ ಬಳಿ ನಿಂತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿದ್ದವು. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ದಾಳಿಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಾಗ್ ದೇಸಾಯಿ ಅವರನ್ನು ಸ್ಥಳೀಯ ಶೆಲ್ಬಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.


ಬೀದಿ ನಾಯಿಯ ದಾಳಿಯಲ್ಲೂ ಹಲವು ಗಂಭೀರ ಗಾಯಗಳಾಗಿದ್ದು, ಬ್ರೇನ್ ಹೆಮರೇಜ್‌ಗೆ ತುತ್ತಾಗಿದ್ದರು. ಶೆಲ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ದೇಸಾಯಿ ಅವರನ್ನು ಝೈಡಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬ್ರೇನ್ ಹೆಮರೇಜ್‌ನಿಂದ ಉದ್ಯಮಿ ಪರಾಗ್ ದೇಸಾಯಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.


ಪರಾಗ್ ದೇಸಾಯಿ ಅವರು 2 ಸಾವಿರ ಕೋಟಿ ರೂಪಾಯಿ ವಹಿವಾಟಿನ ವಾಘ್ ಬಕ್ರೀ ಟೀ ಗ್ರೂಪ್‌ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಗುಜರಾತ್‌ನಲ್ಲಿ ವಾಘ್ ಬಕ್ರೀ ಟೀ ಗ್ರೂಪ್‌ ಅನ್ನೋ ಬ್ರಾಂಡ್ ಹಾಗೂ ಕಂಪನಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪರಾಗ್ ಅವರು ಪ್ರಮುಖರು. ಪರಾಗ್ ದೇಸಾಯಿ ಅವರ ಸಾವು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ.

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಡಿ.5 ರವೆರೆಗೆ ಆರೋಪಿ ನ್ಯಾಯಾಂಗ ಬಂಧನ

Posted by Vidyamaana on 2023-11-22 15:47:10 |

Share: | | | | |


ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಡಿ.5 ರವೆರೆಗೆ ಆರೋಪಿ ನ್ಯಾಯಾಂಗ ಬಂಧನ

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಪ್ರವೀಣ್ ಚೌಗಲೆ ಯನ್ನು ಉಡುಪಿ ಕೋರ್ಟಿಗೆ ಬುಧವಾರ ಹಾಜರುಪಡಿಸಲಾಯಿತು. ಆತನಿಗೆ ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ಮುಗಿಸಿ ಆರೋಪಿಯನ್ನು ಮಲ್ಪೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. ಈ ಮೊದಲು ಪೊಲೀಸರು ನವೆಂಬರ್ 28 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರೂ ಮಹಜರು ಪ್ರಕ್ರಿಕೆ ಪೂರ್ಣಗೊಂಡಿರುವ ಕಾರಣ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.


ಘಟನೆಯ ವಿವರ:  ನವೆಂಬರ್​ 12ರಂದು ನೇಜಾರಿನ ತೃಪ್ತಿ ಲೇಔಟ್‌ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್‌ ಮೊಹಮ್ಮದ್‌ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ನಾನ್‌ (23), ಅಯ್ನಾಝ್ (21), ಪುತ್ರ ಅಸೀಮ್‌ (14) ಹತ್ಯೆಗೀಡಾಗಿದ್ದರು.

ಮತ್ತೆ ಯಾರ ಕೈಗೂ ಸಿಗದೆ ಮನೆ ಸೇರಿದ ಅನಂತಕುಮಾರ್ ಹೆಗಡೆ

Posted by Vidyamaana on 2024-03-24 13:14:15 |

Share: | | | | |


ಮತ್ತೆ ಯಾರ ಕೈಗೂ ಸಿಗದೆ ಮನೆ ಸೇರಿದ ಅನಂತಕುಮಾರ್ ಹೆಗಡೆ

ಕಾರವಾರ: ಬರೋಬ್ಬರಿ ನಾಲ್ಕೂವರೆ ವರ್ಷಗಳ ಕಾಲ ಯಾರ ಸಂಪರ್ಕಕ್ಕೂ ಬಾರದೆ ಸೈಲೆಂಟ್ ಆಗಿದ್ದ ಉತ್ತರ ಕನ್ನಡ (Uttara Kann

non

a) ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde), ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇರುವಂತೆ ಮತ್ತೆ ಆಕ್ಟಿವ್ ಆಗಿದ್ದರು. ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದು ಆರಂಭಿಸಿದ್ದ ಅನಂತಕುಮಾರ್ ಹೆಗಡೆ ಇದೀಗ ಮತ್ತೆ ಯಾರ ಸಂಪರ್ಕಕ್ಕೂ ಸಿಗದೆ ಮನೆ ಸೇರಿದ್ದಾರೆ.ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಅನಂತಕುಮಾರ್ ಹೆಗಡೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದಿಂದ ಯಾರ ಹೆಸರು ಕೂಡ ಘೋಷಣೆ ಆಗಿರಲಿಲ್ಲ. ಯಾವಾಗ ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾಯ್ತೋ ಅಂದಿನಿಂದ ಅನಂತಕುಮಾರ್ ಹೆಗಡೆ ಸೈಲೆಂಟ್ ಆಗಿದ್ದಾರೆ.ಈ ಬಾರಿ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ನಾಲ್ಕೂವರೆ ವರ್ಷಗಳ ನಂತರ ಸಾರ್ವಜನಿಕ ರಂಗಕ್ಕೆ ಎಂಟ್ರಿಕೊಟ್ಟ ಹೆಗಡೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಇದೇ ವಿಶ್ವಾಸದಲ್ಲಿ ಕಾರ್ಯಕರ್ತರ ಸಭೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು. ಆದರೆ, ಎರಡನೇ ಪಟ್ಟಿಯಲ್ಲಿ ತನ್ನ ಹೆಸರು ಘೋಷಣೆ ಆಗದಿರುವುದನ್ನು ಕಂಡ ಹೆಗಡೆ, ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆ ಮತ್ತೆ ಯಾರ ಕೈಗೂ ಸಿಗದೆ ಶಿರಸಿ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿದಲ್ಲೇ ಕುಳಿತುಕೊಂಡಿದ್ದಾರೆ.ಶಿರಸಿಯಲ್ಲಿದ್ದರೂ ಯಾವೊಬ್ಬ ಕಾರ್ಯಕರ್ತನನ್ನೂ ಹೆಗಡೆ ಭೇಟಿ ಆಗುತ್ತಿಲ್ಲ. ಮತ್ತೊಮ್ಮೆ ಮೋದಿ ಘೋಷಣೆಯಡಿ ಪ್ರಚಾರ ಆರಂಭಿಸಿದ್ದ ಹೆಗಡೆ, 2ನೇ ಪಟ್ಟಿ ಬಿಡುಗಡೆ ಬಳಿಕ ಒಂದೇ ಒಂದು ಸಭೆಯನ್ನೂ ಮಾಡಿಲ್ಲ.ಯಾರೇ ನಿಂತ್ರೂ ಎಲ್ರೂ ಒಗ್ಗಟ್ಟಾಗಿ ಮತ್ತೆ ಮೋದಿಯನ್ನ ಪ್ರಧಾನಿ ಮಾಡಬೇಕು. ಈಗ ನಾವು ಯಾವುದೇ ಕಾರಣಕ್ಕೂ ವಿರಮಿಸಬಾರದೆಂದು ಕಾರ್ಯಕರ್ತರಿಗೆ ಹೇಳಿದ್ದ ಅನಂತಕುಮಾರ್ ಹೆಗಡೆಯೇ ಇದೀಗ ಕಾರ್ಯಕರ್ತರ ಸಂಪರ್ಕಕ್ಕೆ ಸಿಗದೆ ಮನೆಯಲ್ಲೇ ವಿರಮಿಸಿದ್ದಾರೆ.

ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ದೇಣಿಗೆ ಹಸ್ತಾಂತರ

Posted by Vidyamaana on 2023-03-12 04:27:34 |

Share: | | | | |


ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ದೇಣಿಗೆ ಹಸ್ತಾಂತರ

ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 5 ಲಕ್ಷ ರೂ. ದೇಣಿಗೆ ಚೆಕ್ ನ್ನು ಹಸ್ಥಾಂತರಿಸಿದರು.

ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಮಜಲುಮಾರು ಮುಕ್ವೆ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಯಂ.ಬೆಳಿಯಪ್ಪ ಗೌಡ ಕೆದ್ಕಾರ್, ಸದಸ್ಯರುಗಳಾದ ಗಣೇಶ್ ಭಟ್, ಯಂ.ರವಿ ಮಣಿಯ, ಕೆ.ಗಿರೀಶ್ ರೈ ಮಣಿಯ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಉಪಸ್ಥಿತರಿದ್ದರು.



Leave a Comment: