ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಉಳ್ಳಾಲ: ಗೃಹ ಪ್ರವೇಶ ನಡೆದ ಐದೇ ದಿನದಲ್ಲಿ ಮನೆಯೊಡತಿ ಅಶ್ವಿನಿ ಬಂಗೇರ ಆತ್ಮಹತ್ಯೆ

Posted by Vidyamaana on 2023-06-08 07:03:56 |

Share: | | | | |


ಉಳ್ಳಾಲ: ಗೃಹ ಪ್ರವೇಶ ನಡೆದ ಐದೇ ದಿನದಲ್ಲಿ ಮನೆಯೊಡತಿ ಅಶ್ವಿನಿ ಬಂಗೇರ ಆತ್ಮಹತ್ಯೆ

ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಮೂಲತ: ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25) ಆತ್ಮ ಹತ್ಯೆಗೈದ ಯುವತಿ.ನಿನ್ನೆ ರಾತ್ರಿ ಅಶ್ವಿನಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಲೆನ್ನಲಾಗಿದ್ದು ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ.

ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ.ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.  ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತ ಎಂಬವರಿಂದ  ಮನೆಯೊಂದನ್ನು ಖರೀದಿಸಿ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ ,ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರೆನ್ನಲಾಗಿದೆ.

ಹಲವು ಸಂಕಷ್ಟಗೊಳಗಾದ ಅಶ್ವಿನಿ‌ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಮೃತ ದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.

ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ

Posted by Vidyamaana on 2024-02-15 13:02:04 |

Share: | | | | |


ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ

ಬಂಟ್ವಾಳ : ಚಲಿಸುತ್ತಿರುವ ರೈಲಿನಿಂದ ಯುವತಿಯೋರ್ವಳು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್ ಸಮೀಪದ ಕೈಕುಂಜೆ ಎಂಬಲ್ಲಿ ಗುರುವಾರ ಬೆಳಿಗ್ಗೆ 6. 30 ರ ವೇಳೆಗೆ ನಡೆದಿದೆ.


    ಈಕೆ ತುಮಕೂರು ಜಿಲ್ಲೆಯ ನಯನ್ ಎಂ.ಜಿ.(27) ಆಗಿರಬಹುದು ಎಂದು ಅವಳ ಬ್ಯಾಗ್ ನಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್ ನ ಮಾಹಿತಿಯಂತೆ ಅಂದಾಜಿಸಲಾಗಿದೆ.


    ಆಧಾರ್ ಕಾರ್ಡ್ ನಲ್ಲಿ c/o ಎಮ್. ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದ್ದು ಆಕೆ ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದಾಳೆ.

ಅವಳು ಕುಳಿತು ಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿಗಳು ಬಿ.ಸಿ.ರೋಡಿನ ಕಚೇರಿಗೆ ನೀಡಿ ವಿಚಾರ ತಿಳಿಸಿದ್ದಾರೆ.

ಆಕೆಯ ಸ್ಪಷ್ಟ ವಿಳಾಸ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಆಕಸ್ಮಿಕವಾಗಿ ಕೈತಪ್ಪಿ ಬಿದ್ದಿರಬಹುದೇ ಎಂದು ಇನ್ನೂ ಖಚಿತಗೊಂಡಿಲ್ಲ.

    ರೈಲಿನಲ್ಲಿದ್ದ ಪ್ರಯಾಣಿಕರು ರೈಲಿನಿಂದ  ಹಾರಿದ ಬಗ್ಗೆ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹವನ್ನು ಗೂಡಿನಬಳಿಯ   ಮಹಮ್ಮದ್ ಮಮ್ಮು ನೇತ್ರತ್ವದ ಜೀವರಕ್ಷಕ ತಂಡದ ಇರ್ಶಾದ್ ಡ್ರೀಮ್ಸ್, ಮನ್ಸೂರ್ ವಝೀರ್ ಅವರು ಮೇಲಕ್ಕೆತ್ತಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ರೈಲ್ವೇ ಪೊಲೀಸರು ಹಾಗೂ ಬಂಟ್ವಾಳ ನಗರ ಪೋಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ 

ದೇವಪ್ಪ, ಸಿಬ್ಬಂದಿ ವಿಜಯ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಗುಡ್ಡ ಕುಸಿಯುವ ಸಾಧ್ಯತೆ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

Posted by Vidyamaana on 2024-07-18 19:57:14 |

Share: | | | | |


ಗುಡ್ಡ ಕುಸಿಯುವ ಸಾಧ್ಯತೆ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ಮಡಿಕೇರಿ : ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಭಾಗದಲ್ಲಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಹಿತಾಸಕ್ತಿಯಿಂದ ಜು.18 ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ

ಬಂಟ್ವಾಳ : ಹಾಡ ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

Posted by Vidyamaana on 2024-07-14 13:28:10 |

Share: | | | | |


ಬಂಟ್ವಾಳ : ಹಾಡ ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಬಂಟ್ವಾಳ : ಹಗಲು ಹೊತ್ತಿನಲ್ಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಶನಿವಾರ ನಡೆದಿದೆ.

ಇರಾ ನಿವಾಸಿ ವನಿತಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 4.14 ಲಕ್ಷ ರೂ.ಮೌಲ್ಯದ 69 ಗ್ರಾಂ. ಚಿನ್ನಾಭರಣ ದೋಚಿದ್ದಾರೆ.

ಮಂಗಳಮುಖಿ ಸ್ನೇಹದಿಂದ ಲಿಂಗ ಪರಿವರ್ತನೆಗೆ ಮುಂದಾದ 3 ಮಕ್ಕಳ ತಾಯಿ

Posted by Vidyamaana on 2023-10-07 12:45:59 |

Share: | | | | |


ಮಂಗಳಮುಖಿ ಸ್ನೇಹದಿಂದ ಲಿಂಗ ಪರಿವರ್ತನೆಗೆ ಮುಂದಾದ 3 ಮಕ್ಕಳ ತಾಯಿ

ಹಾವೇರಿ, ಅಕ್ಟೋಬರ್​ 4: ಮೂರು ಮಕ್ಕಳ ತಾಯಿಯೊಬ್ಬರು (Mother) ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ. ಮಂಗಳಮುಖಿಯ (Transgender) ಸ್ನೇಹದಿಂದಾಗಿ ಸದರಿ ಮಹಿಳೆಯು ಈ ಪರಿವರ್ತನೆ ಬಯಸಿದ್ದಾರೆ. ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಮಹಿಳೆಯೊಬ್ಬರ ಕಥೆ. ಈ ಮಧ್ಯೆ, ಇದೇ ವಿಷಯವಾಗಿ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸದರಿ ಮಹಿಳೆಯು ಮೂಲತಃ ವಿಜಯಪುರ ಜಿಲ್ಲೆಯವರು. ಸುಮಾರು 40 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ (Ranebennur, Haveri district) ವಾಸವಿದ್ದಾರೆ. ಮಂಗಳಮುಖಿಯ ಜೊತೆಗೆ ಸ್ನೇಹದಿಂದಾಗಿ ಗಂಡನಿಗೆ ವಿಚ್ಚೇದನ ನೀಡಿ, ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ. ಈ ಮಧ್ಯೆ, ಮಂಗಳಮುಖಿ ಜೊತೆಗಿನ ಸಹವಾಸದಿಂದಾಗಿ ಮಹಿಳೆಗೆ ಡ್ರಗ್ಸ್ ಚಟ ಹತ್ತಿದೆ.ಈ ಬೆಳವಣಿಗಳಿಂದಾಗಿ ಆ ಮಹಿಳೆಯು ಮಂಗಳಮುಖಿಯ ಜೊತೆಗೆ ಜೀವನ ನಡೆಸುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಆದರೆ ಮಹಿಳೆ ಲಿಂಗ ಪರಿವರ್ತನೆ ಬಯಸಿದ್ದರಾದರೂ, ತಾಂತ್ರಿಕ ದೋಷದಿಂದ ಅದು ಸಾಧ್ಯವಾಗಿಲ್ಲ.


ಹಾವೇರಿ ಇಡಾರಿ ಸಂಸ್ಥೆಯ ಮೂಲಕ ಸಮಾಲೋಚನೆ ನಡೆಸಿ ಲಿಂಗ‌ ಪರಿವರ್ತನೆಗೆ ಸದ್ಯ ತಡೆಯೊಡ್ಡಲಾಗಿದೆ. ಸದರಿ ಮಹಿಳೆಯು ತನ್ನ ಜೊತೆಗೆ ತನ್ನ ಎರಡು ಮಕ್ಕಳಿಗೂ ಲಿಂಗ ಪರಿವರ್ತನೆ ಮಾಡಿಸಲು ಮುಂದಾಗಿದ್ದರು ಎಂಬ ಆತಂಕಕಾರಿ ಮಾಹಿತಿ ದೊರೆತಿದೆ.

ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

Posted by Vidyamaana on 2021-06-30 18:30:00 |

Share: | | | | |


ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ಬಡ ಕುಟುಂಬಕ್ಕೆ ವಿಜಯ ಸಾಮ್ರಾಟ್ ತಂಡ ನಿರ್ಮಾಣ ಮಾಡಿಕೊಟ್ಟ ಮನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.

ಗೋಪಾಲಶೆಟ್ಟಿ ಅವರ ಕುಟುಂಬ ಭದ್ರವಾದ ಮನೆ ಇರದೇ ಪರಿತಪಿಸುತ್ತಿದ್ದ ಸಂಕಷ್ಟ ಹಾಗೂ ಈ ದಂಪತಿ ಪುತ್ರಿಯ ವಿದ್ಯಾಭ್ಯಾಸದ ಸಮಸ್ಯೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿದ ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ, ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಂಡದ ಸದಸ್ಯರು ಕೈಲಾದಷ್ಟು ನೆರವು ನೀಡಿ, ಕುಟುಂಬಕ್ಕಾಗಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಡಿ. ೧೦ರಂದು ಈ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು ಹಾಗೂ ಅತಿಥಿಗಳು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ನೀಡಿ, ಶುಭಹಾರೈಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯುವ ಸಾಮ್ರಾಟ್ ತಂಡದ ಯುವಕರ ಕಾರ್ಯವನ್ನು ಶ್ಲಾಘಿಸಿದರು.

ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಏಕ, ಪಿಡಿಒ ಚಿತ್ರಾ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮುಖಂಡ ರಾಮದಾಸ್, ವಿಜಯ ಸಾಮ್ರಾಟ್ ತಂಡದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Recent News


Leave a Comment: