ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

Posted by Vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಜಂ ಇಯ್ಯತುಲ್ ಉಲಾಮಾ ವತಿಯಿಂದ ಬೃಹತ್ ಮೌಲೀದ್‌ ಮಜ್ಲಿಸ್

Posted by Vidyamaana on 2023-10-08 13:32:04 |

Share: | | | | |


ಪುತ್ತೂರು : ಜಂ ಇಯ್ಯತುಲ್ ಉಲಾಮಾ ವತಿಯಿಂದ  ಬೃಹತ್ ಮೌಲೀದ್‌ ಮಜ್ಲಿಸ್

ಪುತ್ತೂರು: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯಿಂದ ಬೃಹತ್ ಮೌಲೀದ್ ಮಜ್ಲಿಸ್ ಕಾರ್ಯಕ್ರಮ ಪುತ್ತೂರು ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು.


  1. ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಅಸೈಯದ್‌ ಅಹಮದ್ ಪೂಕೋಯ ತಂಙಳ್ ನೇತೃತ್ವ ವಹಿಸಿ ದುವಾಶೀರ್ವಚನ ನೀಡಿ ಮಾತನಾಡಿ ಮಿಲಾದುನ್ನೆಬಿಯ ಮಹತ್ವದ ಬಗ್ಗೆ ವಿವರಿಸಿದರು.ಯಾಹ್ಯಾ ತಂಙಳ್    ಪೋಳ್ಯ,ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ,ಪುತ್ತೂರು ಸಾಲ್ಮರ ಸೈಯದ್ ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ,ಅಬ್ಬಾಸ್ ಮದನಿ ಮೊಟ್ಟೆತ್ತಡ್ಕ,ಉಮ್ಮರ್ ಫೈಝಿ ಸಾಲ್ಮರ,ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್‌ ಟಿ ಅಬ್ದುಲ್ ರಝಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್ ಬಪ್ಪಳಿಗೆ ಮೊದಲಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಮೀಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿದರು.ಮೌಲೀದ್‌ ಮಜ್ಲಿಸ್ ಕಾರ್ಯಕ್ರಮದಲ್ಲಿ ಜಂ ಇಯ್ಯತುಲ್ ಉಲಾಮಾದ ಪದಾಧಿಕಾರಿಗಳಾದ ಉಮರ್ ಮುಸ್ಲಿಯಾರ್ ನಂಜೆ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ,ರಶೀದ್ ರಹ್ಮಾನಿ ಪರ್ಲಡ್ಕ, ಅಝೀಝ್ ದಾರಿಮಿ ಕೊಡಾಜೆ, ಸಿದ್ದೀಕ್ ಫೈಝಿ ಮುಕ್ರಂಪಾಡಿ,ಶಾಫಿ ಇರ್ಫಾನಿ ಕಲ್ಲೆಗ, ಆಸಿಫ್ ಅಝ್ಹರಿ ಇರ್ದೆ ಉಪಸ್ಥಿತರಿದ್ದರು.

ಫೀಲ್ಡಿಗೆ ಹೋಗದೆ ಮನೆಯಲ್ಲೇ ಮಲಗಿದ ನಾಯಕ

Posted by Vidyamaana on 2023-05-14 12:22:12 |

Share: | | | | |


ಫೀಲ್ಡಿಗೆ ಹೋಗದೆ ಮನೆಯಲ್ಲೇ ಮಲಗಿದ ನಾಯಕ

ಪುತ್ತೂರು: ಚುನಾವಣಾ ಪ್ರಚಾರಕ್ಕೆಂದು ಪಕ್ಷದ ವತಿಯಿಂದ ಎಲ್ಲಾ ಸೌಲಭ್ಯವನ್ನು ಮಾಡಿಕೊಟ್ಟಿದ್ದು , ಸೌಲಭ್ಯವನ್ನೇ ಬಳಸಿಕೊಂಡಿದ್ದ ಪಕ್ಷವೊಂದರ ನಾಯಕನೋರ್ವ ಪ್ರಚಾರಕ್ಕೆ ತೆರಳದೆ ಮನೆಯಲ್ಲೇ ಮಲಗಿದ್ದರು ಎಂಬ ವಿಚಾರ ಬಹಿರಂಗವಾಗಿದ್ದು ಮತ ಎಣಿಕೆಯ ದಿನ ಈ ವಿಚಾರದ ಬಗ್ಗೆ ಕಾರ್ಯಕರ್ತರೊಳಗೆ ಭಾರೀ ಚರ್ಚೆಯಾಗಿದೆ.

ನಾನು ಪ್ರಚಾರಕ್ಕೆ ತೆರಳಬೇಕಾದರೆ ನನಗೆ ಕಾರು ಕೊಡಬೇಕು, ಕಾರಿಗೊಂಡು ಡ್ರೈವರ್ ಕೊಡಬೇಕು ಮತ್ತು ಖರ್ಚಿಗೂ ಕೊಡಬೇಕು ಎಂದು ಪಕ್ಷದ ಅಭ್ಯರ್ಥಿಯಲ್ಲಿ ಹೇಳಿಕೊಂಡಿದ್ದ ಆ ನಾಯಕ. ನನ್ನ ಕಾರಲ್ಲಿ ಯಾರೂ ಬರಕೂಡದು ನನ್ನದೇ ಆದ ಕೆಲವೊಂದು ಏರಿಯಾ ಇದೆ ಅಲ್ಲಿಗೆ ನಾನೊಬ್ಬನೇ ಪ್ರಚಾರಕ್ಕೆ ತೆರಳಿದರೆ ಮಾತ್ರ ಓಟು ಸಿಗುವುದು ಅವರೆಲ್ಲರೂ ನನ್ನದೇ ಜನ ಎಂದೆಲ್ಲಾ ಹೇಳಿ ನಂಬಿಸಿದ್ದ ಆ ನಾಯಕ ಕಾರು ಮತ್ತು ಖರ್ಚಿನ ಹಣದೊಂದಿಗೆ ತೆರಳಿ ಎಲ್ಲಾ ದಿನವೂ ಮನೆಯಲ್ಲೇ ಮಲಗಿದ್ದ ಎನ್ನಲಾಗಿದೆ. ಮನೆಯಲ್ಲಿ ನಾಯಕ ಮಲಗಿದ್ದ ಬಗ್ಗೆ ಕಾರಿನ ಚಾಲಕ ಯಾರಲ್ಲೋ ತಮಾಷೆಗೆ ಹೇಳಿದ್ದಾನೆ. ತಮಾಷೆಗೆ ಹೇಳಿದ ವಿಚಾರ ಅಭ್ಯರ್ಥಿಯ ಕಿಚಿಗೂ ಮುಟ್ಟಿದೆ ಎನ್ನಲಾಗಿದೆ.

ಚುನಾವಣೆ ಮುಗಿದಿದೆ, ಪ್ರಚಾರವೂ ಮುಗಿದಿದೆ ಎಲ್ಲವೂ ಮುಗಿದ ಬಳಿಕ ಮಲಗಿದ ನಾಯಕ ಎದ್ದಿರಬಹುದು ಎಂದು ವ್ಯಂಗ್ಯವಾಡುತ್ತಿರುವ ಕಾರ್ಯಕರ್ತರು ಆ ನಾಯಕನ ಪಕ್ಷದಿಂದ ಉಚ್ಚಾಟನೆ ಮಾಡಿ ಅವರಿಗೆ ಫುಲ್ ರೆಸ್ಟ್ ಕೊಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಈ ನಾಯಕ ಯಾರು ಎಂಬ ಕುತೂಹಲ ನಿಮಗಿರಬಹುದು ಈ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಆ ವ್ಯಕ್ತಿ ಯಾರು ಎಂಬುದು ನಾವೇ ತಿಳಿಸಲಿದ್ದೇವೆ ಅಲ್ಲಿಯವರೆಗೆ ವೈಟ್ ಮಾಡಿ....

ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಚಿರ ನಿದ್ರೆಗೆ

Posted by Vidyamaana on 2023-12-29 16:22:57 |

Share: | | | | |


ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಚಿರ ನಿದ್ರೆಗೆ

ಉಪ್ಪಿನಂಗಡಿ: ರಾತ್ರಿ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಲಾರಿಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಉಪ್ಪಿನಂಗಡಿಯಲ್ಲಿ ನಡೆದಿದೆ.


ಮೈಸೂರು ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಮೃತ ವ್ಯಕ್ತಿ ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಖಲೀಲ್, ಲೋಡ್ ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು.ಲಾರಿಯ ಕ್ಯಾಬಿನ್‍ನ ಬಾಗಿಲು ಹಾಕಿದ್ದರಿಂದ ಚಾಲಕ ಲಾರಿಯೊಳಗೆ ಮೃತಪಟ್ಟಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಡಿ.29ರಂದು ಲಾರಿಯಿಂದ ವಾಸನೆ ಬರಲಾರಂಭಿಸಿದ್ದು, ಸಂಶಯಗೊಂಡ ಸ್ಥಳೀಯರು ಪರಿಶೀಲಿಸಿದಾಗ ಲಾರಿ ಚಾಲಕ ಮಲಗಿದ್ದಲ್ಲೇ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಲಾರಿಯಿಂದ ಲಾರಿ ಚಾಲಕನ ಮೃತದೇಹವನ್ನು ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಇಬ್ಬರು ಅಧಿಕಾರಿಗಳ ಅಮಾನತು

Posted by Vidyamaana on 2023-11-20 07:40:32 |

Share: | | | | |


ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಇಬ್ಬರು ಅಧಿಕಾರಿಗಳ ಅಮಾನತು

ಬೆಂಗಳೂರು: ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಈಗಾಗಲೇ ಐವರು ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಇಂಧನ ಇಲಾಖೆ ಅಮಾನತು ಮಾಡಿದ್ದು, ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರತಿಕ್ರಿಯಿಸಿ, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಶಾಕ್‌ಗೆ ಒಬ್ಬ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿರುವ ದುರ್ದೈವದ ಘಟನೆ ನಡೆದಿದೆ. ಈ ದುರದೃಷ್ಟಕರ ಸಾವುಗಳಿಗೆ ಕಾರಣವಾದ ಘಟನೆಯ ಕುರಿತು ನಾವು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದರ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಅಪಘಾತಕ್ಕೆ ಕಾರಣರಾದ AE ಮತ್ತು AEE ಯನ್ನು ಅಮಾನತುಗೊಳಿಸಲಾಗಿದೆ ಮತ್ತು ಇದಕ್ಕೆ ಕಾರಣಾದವರು ಮತ್ತಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಐವರ ಬಂಧನ

ವಿದ್ಯುತ್‌ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂ ವೈಟ್‌ಫೀಲ್ಡ್‌ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀರಾಮ್‌,ಅಸಿಸ್ಟೆಂಟ್‌ ಎಂಜಿನಿಯರ್‌ ಚೇತನ್‌, ಎಇಇ ಸುಬ್ರಮಣ್ಯ, ಜೂನಿಯರ್‌ ಎಂಜಿನಿಯರ್‌ ರಾಜಣ್ಣ ಹಾಗೂ ಸ್ಟೇಷನ್‌ ಆಪರೇಟರ್ ಮಂಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಇಬ್ಬರ ಸಾವಿಗೆ ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ?


ವಿದ್ಯುತ್‌ ತಗುಲಿ ತಾಯಿ-ಮಗು ಮೃತಪಡಲು ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಿಗ್ನಲ್ ಬಿದ್ದಿದೆ ಎಂದು ಘಟನೆ ನಡೆದಿದ್ದ ಸ್ಥಳದಲ್ಲಿ ಬಸ್ ಚಾಲಕ ಡೋರ್ ಓಪನ್ ಮಾಡಿದ್ದ. ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಬಸ್ ನಿಲ್ದಾಣವಿತ್ತು. ಆದರೂ ಮೊದಲೇ ನಿಲ್ಲಿಸಿದ್ದರಿಂದ ತಾಯಿ-ಮಗು ಇಳಿದು ನಡೆದುಕೊಂಡು ಹೋಗಿದ್ದರಿಂದ ವಿದ್ಯುತ್‌ ತಂತಿ ತುಳಿದು ದರಂತಕ್ಕೆ ಕಾರಣವಾಗಿದೆ. ಹೀಗಾಗಿ ಬಸ್‌ ಚಾಲಕನ ವಿರುದ್ಧವೂ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.


ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರ ಪ್ರತಿಭಟನೆ


ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವಿಗೀಡಾದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತರ ಕುಟುಂಬಸ್ಥರು, ಸ್ಥಳೀಯರು ಕಾಡುಗುಡಿಯಲ್ಲಿ ಪ್ರತಿಭಟನೆ ನಡೆಸಿದರು. ಬೆಸ್ಕಾಂಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಇದರಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು.ರಸ್ತೆಯಲ್ಲಿ ಬಿದ್ದ ವಿದ್ಯುತ್‌ ತಂತಿ ಮೆಟ್ಟಿ ತಾಯಿ-ಮಗು ಸುಟ್ಟು ಕರಕಲು


ಬೆಂಗಳೂರು: ಬೆಳ್ಳಂಬೆಳಗ್ಗೆಯೇ ರಾಜಧಾನಿಯಲ್ಲಿ ಅತ್ಯಂತ ಆತಂಕಕಾರಿ ಮತ್ತು ಹೃದಯ ಹಿಂಡುವ ಘಟನೆ ನಡೆದಿದೆ. ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ವಿದ್ಯುತ್‌ ಆಘಾತಕ್ಕೆ (Electricuted) ಒಳಗಾಗಿ ಮಗುವಿನೊಂದಿಗೆ ಸುಟ್ಟು ಕರಕಲಾಗಿದ್ದಾರೆ (Mother and Child de

non

). ಬೆಸ್ಕಾಂ ಅಧಿಕಾರಿಗಳ‌ ನಿರ್ಲಕ್ಷ್ಯ (BESCOM Negligence) ಕ್ಕೆ ತಾಯಿ-ಮಗು ಬಲಿಯಾಗಿದ್ದಾರೆ.


ತಾಯಿ ಸೌಂದರ್ಯ ಮತ್ತು ಪುಟ್ಟ ಮಗಳು ಲಿಯಾ ಮೃತಪಟ್ಟ ದುರ್ದೈವಿಗಳು. ವೈಟ್‌ ಫೀಲ್ಡ್‌ ಸಮೀಪದ ಹೋಪ್ ಫಾರ್ಮ್ ಸರ್ಕಲ್‌ ಬಳಿ ದುರ್ಘಟನೆ ನಡೆದಿದೆ.


ಬೆಂಗಳೂರಿನಲ್ಲಿ ವಾಸವಾಗಿದ್ದ ಸೌಂದರ್ಯ ಅವರು ತಮ್ಮ ಪತಿ ಸಂತೋಷ್ ಮತ್ತು ಮಗುವಿನೊಂದಿಗೆ ತಮಿಳುನಾಡಿನ ತಾಯಿ ಮನೆಗೆ ಹೋಗಿದ್ದರು. ಶನಿವಾರ ರಾತ್ರಿ ಅವರು ಅಲ್ಲಿಂದ ಹೊರಟು ಬೆಳಗ್ಗೆ ಬೆಂಗಳೂರಿನ ವೈಟ್‌ ಫೀಲ್ಡ್‌ ಬಳಿ ಬಸ್ಸಿನಿಂದ ಇಳಿದಿದ್ದರು. ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಸ್ಸಿನಿಂದ ಇಳಿದು‌ ಸಂತೋಷ್‌, ಸೌಂದರ್ಯ ಪುಟ್ಟ ಮಗುವನ್ನು ಕಂಕುಳಲ್ಲಿಇಟ್ಟುಕೊಂಡು ಅವರು ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಮನೆ ಕಡೆಗೆ ಸಾಗುತ್ತಿದ್ದರು. ಅವರು ಎ.ಕೆ ಗೋಪಾಲ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.ಈ ವೇಳೆ ರಸ್ತೆ ಬದಿ ತುಂಡಾಡಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್‌ ತಂತಿ ಅವರಿಗೆ ಕಾಣಿಸಲಿಲ್ಲ . ಕತ್ತಲಲ್ಲಿ ಅವರು ವಿದ್ಯುತ್‌ ತಂತಿಯನ್ನು ತುಳಿದಿದ್ದರು. ಮತ್ತು ಒಮ್ಮೆಗೇ ವಿದ್ಯುತ್‌ ಅವರ ದೇಹದಲ್ಲಿ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋಗಿದ್ದಾರೆ.

ಮೊದಲ ರಾತ್ರಿಯೇ ನವದಂಪತಿ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ.

Posted by Vidyamaana on 2023-06-04 15:59:24 |

Share: | | | | |


ಮೊದಲ ರಾತ್ರಿಯೇ ನವದಂಪತಿ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನವ ವಿವಾಹಿತ ದಂಪತಿ ತಮ್ಮ ಮದುವೆಯ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ನಂತರ ಅವರ ಸಾವಿನ ಕಾರಣ ಬಯಲಾಗಿದೆ.22 ವರ್ಷದ ಪ್ರತಾಪ್ ಯಾದವ್ ಮೇ 30 ರಂದು 20 ವರ್ಷದ ಪುಷ್ಪಾ ಅವರನ್ನು ವಿವಾಹವಾದರು.ಪತಿ ಮತ್ತು ಪತ್ನಿ ಇಬ್ಬರೂ ಮದುವೆಯ ನಂತರ ಮೊದಲ ರಾತ್ರಿಗೆಂದು ಅವರ ಕೋಣೆಗೆ ಹೋದರು. ಆದರೆ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.

Recent News


Leave a Comment: