ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸುದ್ದಿಗಳು News

Posted by vidyamaana on 2024-07-25 16:43:22 |

Share: | | | | |


ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

 ಮುಂಬೈ: ಇಂಜಿನಿಯರ್ ಒಬ್ಬರು ತಮ್ಮ ಕಾರನ್ನು ಅಟಲ್ ಸೇತುವಿನಲ್ಲಿ ನಿಲ್ಲಿಸಿ ಸೇತುವೆಯಿಂದ ಕೆಳಗೆ ಹಾರಿದ್ದಾರೆ. ಈ ದೃಶ್ಯ ಅಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಸೇತುವೆಯಿಂದ ಕೆಳಗೆ ಹಾರಿದವರನ್ನು ಡೊಂಬಿವಿಲಿಯ ಪಲ್ಲವ ನಗರದ ನಿವಾಸಿ ಕರ್ತುರಿ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಮಧ್ಯಾಹ್ನ 12.35ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಆಟಲ್ ಸೇತು ಬ್ರಿಡ್ಜ್ ಮೇಲೆ ಬಂದಿದ್ದು, ಸೇತುವೆ ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಟೋಲ್ ಕಂಟ್ರೋಲ್‌ ರೂಮ್‌ನವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನವಶೇವ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.

ಕೂಡಲೇ ಎಂಟಿಹೆಚ್‌ಎಲ್‌ನಿಂದ ರಕ್ಷಣಾ ತಂಡ ಹಾಗೂ ಕರಾವಳಿ ಭದ್ರತಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ತೊಂದರೆಯಿಂದಲೇ ಶ್ರೀನಿವಾಸ್ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿ ಕೇವಲ ತನ್ನ ಪರ್ಸ್ ಮಾತ್ರ ಬಿಟ್ಟು ಶ್ರೀನಿವಾಸ್ ಸಮುದ್ರಕ್ಕೆ ಹಾರಿದ್ದಾರೆ. ಈ ಪರ್ಸ್‌ನಲ್ಲಿ ಆಧಾರ್ ಕಾರ್ಡ್‌, ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಐಡಿ ಕಾರ್ಡ್ ಇತ್ತು. ಡೆತ್‌ನೋಟ್ ಆಗಲಿ, ಫೋನ್ ಆಗಲಿ ಕಾರಿನಲ್ಲಿ ಪತ್ತೆಯಾಗಿಲ್ಲ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮನ್ ಬಾಗ್ವಾನ್ ಹೇಳಿದ್ದಾರೆ.

ಬಿಟೆಕ್ ಮಾಡಿದ್ದ ಶ್ರೀನಿವಾಸ್ ಮುಂಬೈನ ಲೋಧಾದಲ್ಲಿ 2023ರಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ಇದಕ್ಕೂ ಮೊದಲು ಅರಬ್ ರಾಷ್ಟ್ರ ಕುವೈತ್‌ನಲ್ಲಿ ಕೆಲಸ ಮಾಡಿದ್ದರು. 2023ರಲ್ಲಿ ಮುಂಬೈಗೆ ವಾಪಸಾದ ಅವರು ಲೋಧಾ ಗ್ರೂಪ್‌ಗೆ ಕೆಲಸಕ್ಕೆ ಸೇರಿದ್ದರು. ಇದಾದ ನಂತರ ಇವರು ತಮ್ಮ ಪಾಲುದಾರರ ಜೊತೆಗೂಡಿ ಇಲೆಕ್ಟ್ರಿಕ್ ಕಂಟ್ರಾಕ್ಟ್ ಕೆಲಸ ಶುರು ಮಾಡಿದ್ದರು. ಶ್ರೀನಿವಾಸ್ ಪತ್ನಿಯಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ಶ್ರೀನಿವಾಸ್ ಈ ಹಿಂದೆಯೂ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಸಮಯಕ್ಕೆ ಸರಿಯಾಗಿ ಯಾರೋ ಪಾರು ಮಾಡಿದ್ದರಿಂದ ಅವರ ಜೀವ ಉಳಿದಿತ್ತು ಎಂದು ಪತ್ನಿ ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶ್ರೀನಿವಾಸ್ ಕಡೆಯದಾಗಿ ಸಂಬಂಧಿಕರೊಬ್ಬರ ಜೊತೆ ಮಾತನಾಡಿದ್ದು, ಈ ವೇಳೆ ಅವರು ಸಹಜವಾಗಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದುವರೆಗೂ ನೀರಿಗೆ ಹಾರಿದ ಶ್ರೀನಿವಾಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಮೊದಲ ಪ್ರಕರಣ ಅಲ್ಲ ಈ ಹಿಂದೆ ಮಹಿಳಾ ವೈದ್ಯರೊಬ್ಬರು ಅಟಲ್ ಸೇತುವಿನಿಂದ ಕೆಳಗೆ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

 Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

Posted by Vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

ಬಿಜೆಪಿಯೊಂದಿಗೆ ವಿಲೀನವಾದ ಪುತ್ತಿಲ ಪರಿವಾರ: ಡಾ.ಸುರೇಶ್ ಪುತ್ತೂರಾಯ ಏನಂದ್ರು

Posted by Vidyamaana on 2024-03-14 22:44:41 |

Share: | | | | |


ಬಿಜೆಪಿಯೊಂದಿಗೆ ವಿಲೀನವಾದ ಪುತ್ತಿಲ ಪರಿವಾರ: ಡಾ.ಸುರೇಶ್ ಪುತ್ತೂರಾಯ ಏನಂದ್ರು

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ಡಾ. ಸುರೇಶ್ ಪುತ್ತೂರಾಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.


ಅರುಣ್ ಕುಮಾರ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಡಾ. ಸುರೇಶ್ ಪುತ್ತೂರಾಯ ಅವರು ಕೂಡ ಸಾಕಷ್ಟು ಕೆಲಸ ಮಾಡಿದ್ದರು. ಇದೀಗ ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಡಾ. ಪುತ್ತೂರಾಯ ಅವರು ಮನದುಂಬಿ ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅರುಣ್‌ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಗೊಂಡಿರುವುದು ಸಂತೋಷವಾಗಿದೆ. ಇದಕ್ಕೆ ಮೊದಲೇ ಈ ಕೆಲಸ ಆಗಬೇಕಿತ್ತು. ತಡವಾಗಿಯಾದರೂ ಬಿಜೆಪಿ ಸೇರ್ಪಡೆ ಉತ್ತಮ ಬೆಳವಣಿಗೆ ಎಂದಿದ್ದಾರೆ.

ಮುಂದೆ ನಾಯಕರು, ಕಾರ್ಯಕರ್ತರು ಒಂದೇ ಮನಸ್ಸಿನಿಂದ ಕೆಲಸ ಮಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹಿಂದಿನ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಒಂದೇ ಮನಸ್ಸಿನಿಂದ ಕಾರ್ಯತತ್ಪರರಾಗಬೇಕು. ಇನ್ನು ಮುಂದೆ ಒಂದೇ ಪರಿವಾರ. ಅದು ಮೋದಿ ಪರಿವಾರ ಎಂದರು.

ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

Posted by Vidyamaana on 2023-12-07 13:15:26 |

Share: | | | | |


ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯತ್ನಾಳ್ ಒಬ್ಬ ದ್ವೇಷದ ರಾಜಕಾರಣಿ, ಮಹಾನ್ ಸುಳ್ಳುಗಾರ, ಚುನಾವಣೆ ಗೆಲ್ಲಲು ಈ ರೀತಿ ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ನಂಟಿರುವ ಪೀರಾ ಮೌಲಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಬಿಜೆಪಿ ನಾಯಕ ಯತ್ನಾಳ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಅವರ ಜೊತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಅವರು ಸುಮ್ಮನಿದ್ದರು? ಪೀರಾ ಮೌಲಿ ಅವರು ಆರೋಪ ಸಾಬೀತು ಮಾಡಿ ಎಂದು ಹೇಳಿದ್ದಾರೆ.


ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈಗ ಆರೋಪ ಮಾಡುತ್ತಿರುವ ಯತ್ನಾಳ್, ಅವರದ್ದೇ ಸರ್ಕಾರ ಇದ್ದಾಗ ಏನು ಮಾಡ್ತಿದ್ರು? ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪ್ರಯತ್ನ ಮಾಡಿದ್ದರು. ಎರಡೂ ಸಿಗಲಿಲ್ಲ ಅದಕ್ಕೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

Posted by Vidyamaana on 2023-04-06 06:28:39 |

Share: | | | | |


ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

ಉಪ್ಪಿನಂಗಡಿ : ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ನೆಕ್ಕಿಲಾಡಿ ಸಮೀಪದ ಮಹಿಳೆ ಎ.5 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪೋಟೊವನ್ನು ನಕಲು ಮಾಡಲಾಗಿದೆಯೋ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೋಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ

ಕ್ರಿಸ್ಮಸ್: ಬನ್ನೂರು ಚರ್ಚ್ನಲ್ಲಿ ವಾಳೆವಾರು ಸಾಂಸ್ಕೃತಿಕ ಸ್ಪರ್ಧೆ

Posted by Vidyamaana on 2022-12-16 13:37:29 |

Share: | | | | |


ಕ್ರಿಸ್ಮಸ್: ಬನ್ನೂರು ಚರ್ಚ್ನಲ್ಲಿ ವಾಳೆವಾರು ಸಾಂಸ್ಕೃತಿಕ ಸ್ಪರ್ಧೆ

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ದ.11 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾಳೆವಾರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಹೆಣ್ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ಯುವಕರಿಗೆ, ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಲಿಂಬೆ ಚಮಚ ಓಟ, ಬಲೂನ್ ಹೊಡೆಯುವುದು, ಸ್ಟ್ರಾದ ಸಹಾಯದಿಂದ ಒಂದು ಗ್ಲಾಸಿನಿಂದ ಮತ್ತೊಂದು ಗ್ಲಾಸಿಗೆ ನೀರನ್ನು ಹಾಕುವುದು, ಚೆಂಡು ಪಾಸ್ ಮಾಡುವುದು, ಮದುವೆ ಜೋಡಿಗಳಿಗೆ ಬಲೂನ್ ಹೊಡೆಯುವ ಸ್ಪರ್ಧೆ ಮುಂತಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ರವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ ವಾಳೆಯ ಸದಸ್ಯರೊಂದಿಗೆ ಆಟದಲ್ಲಿ ತೊಡಗಿಸಿಕೊಂಡರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ವಿವಿಧ ವಾಳೆಯ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಉಪಸ್ಥಿತರಿದ್ದರು.

ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ

Posted by Vidyamaana on 2023-12-12 04:48:39 |

Share: | | | | |


ಇಂದು ಪುತ್ತೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ  ವಿದ್ಯುತ್ ವ್ಯತ್ಯಯ

ಪುತ್ತೂರು: ಮಾಣಿ ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಹಾಗೂ 110/33/11ಕೆವಿ ಮಾಡಾವು ವಿದ್ಯುತ್‌ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.12 ರಂದು ಮಂಗಳವಾರ ಪೂರ್ವಾಹ್ನ 10:00 ರಿಂದ ಸಾಯಂಕಾಲ 5:00 ವರೆಗೆ  ಮಾಡಾವು-ಕಾವು-ಸುಳ್ಯ, 33ಕೆವಿ ಮಾಡಾವು-ಬೆಳ್ಳಾರೆ ಮತ್ತು 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು ವಿದ್ಯುತ್ ಮಾರ್ಗ ಹಾಗೂ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ವಿದ್ಯುತ್ ಮಾರ್ಗಗಳ ವಿದ್ಯುತ್‌ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಮಾಡಾವು. 33/11ಕೆವಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮತ್ತು ಕಾವು ವಿದ್ಯುತ್ “ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡಗರ್‌ಳು ಮತ್ತು 33/11ಕೆವಿ ಕುಂಬ್ರ ವಿದ್ಯುತ್‌ ಉಪಕೇಂದ್ರದ 11ಕೆವಿ ದೇರ್ಲ, 11ಕೆವಿ ಮಾದ್ದ ಮತ್ತು 11ಕೆವಿ ಸುಳ್ಯಪದವು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ



Leave a Comment: