ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಪುರುಷರಕಟ್ಟೆ: ಹೊತ್ತಿ ಉರಿದ ವಿಶ್ವಸ್ ಹಾರ್ಡ್ ವೇ‌ರ್ ಅಂಗಡಿ

Posted by Vidyamaana on 2024-09-01 07:29:08 |

Share: | | | | |


ಪುರುಷರಕಟ್ಟೆ: ಹೊತ್ತಿ ಉರಿದ ವಿಶ್ವಸ್ ಹಾರ್ಡ್ ವೇ‌ರ್ ಅಂಗಡಿ

ಪುತ್ತೂರು: ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

Posted by Vidyamaana on 2023-08-16 02:24:59 |

Share: | | | | |


ಇಂದು (ಆ16) ವಕೀಲರ ಸಂಘದಲ್ಲಿ ಆಟಿದ ಗೌಜಿ

ಪುತ್ತೂರು: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ಆ. 16ರಂದು ಮಧ್ಯಾಹ್ನ 1 ಗಂಟೆಗೆ ಪರಾಶರ ಸಭಾಂಗಣದಲ್ಲಿ ಆಟಿದ ಗೌಜಿ ಕಾರ್ಯಕ್ರಮ ನಡೆಯಲಿದೆ.

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, ಎಸಿಜೆಎಂ, ತಾ.ಕಾ.ಸೇ. ಸಮಿತಿ ಅಧ್ಯಕ್ಷ ಗೌಡ ಆರ್.ಪಿ. ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ. ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಪ್ರೀಯಾ ರವಿ ಜೊಗ್ಲೇಕರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಹಾಗೂ ತಾ.ಕಾ.ಸೇ. ಸಮಿತಿ ಸದಸ್ಯ ಕಾರ್ಯದರ್ಶಿ ಅರ್ಚನಾ ಕೆ. ಉಣ್ಣಿತ್ತಾನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ. ಶಿವಣ್ಣ ಎಚ್.ಆರ್., 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆ.ಎಂ.ಎಫ್.ಸಿ. ಯೋಗೇಂದ್ರ ಶೆಟ್ಟಿ ಉಪಸ್ಥಿತರಿರುವರು.

ಸುಳ್ಯದ ಹಿರಿಯ ವಕೀಲ ಜಗದೀಶ ಹುದೇರಿ ಅವರು ಆಟಿಯ ಆಶಯ ಭಾಷಣ ಮಾಡಲಿದ್ದಾರೆ. ಬಳಿಕ ಆಟಿ ವಿಶೇಷ ಊಟದ ವ್ಯವಸ್ಥೆ ಇದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್

Posted by Vidyamaana on 2024-03-01 12:20:35 |

Share: | | | | |


ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್

ಬೆಂಗಳೂರು : ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್ ಲೀಸ್ಗೆ ಪಡೆದಿದ್ದರು. ಮೂರು ತಿಂಗಳು ಕಳೆಯುತ್ತಿದ್ದಂತೆ ಅವ್ರಿಗೆ ಕಾದಿತ್ತು ಮುಂದೆ ಶಾಕ್. ಬಾಗಿಲಿಗೆ ಬಂದ ಬ್ಯಾಂಕಿ ನೋಟಿಸ್ ನೋಡಿ ಶಾಕ್ ಆಗಿದ್ರು.ಏಕಾಏಕಿ ಬ್ಯಾಂಕಿನವರು ಮನೆಗೆ ಬೀಗ ಜಡಿದಿದ್ದು, ಪ್ಲಾಟ್ ಲೀಸ್ಗೆ ಪಡೆದವರು ಅತ್ತ ಇರಲು ಮನೆ ಇಲ್ಲದೆ, ಇತ್ತ ಕೊಟ್ಟ ಹಣವು ಇಲ್ಲದ ಬೀದಿ ಪಾಲಾಗಿದ್ದಾರೆ.. ಅಷ್ಟಕ್ಕೂ ಈ ಘಟನೆ ನಡೆದಿದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ..


ಹೀಗೆ ಫೋಟೋದಲ್ಲಿ ಪೋಸ್ ಕೋಡುತ್ತಿರುವ ಇವ್ರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ನಿವಾಸಿಗಳಾದ ಅಜಿತ್ ಕುಮಾರ್ ಮತ್ತು ಸುಜತಾ. ವಂಚನೆಯನ್ನೆ ಕಾಯಕ ಮಾಡಿಕೊಂಡಿರುವ ಇವ್ರು ಆನೇಕಲ್ ಪೊಲೀಸರ ಅತಿಥಿಯಾಗಿದ್ದಾರೆ. ಹೌದು ಚಂದಾಪುರ ರಸ್ತೆಯಲ್ಲಿನ ಯುಬಿಎಚ್ಸಿ ಅಪಾರ್ಟ್ಮೆಂಟ್ನಲ್ಲಿನ ತಮ್ಮ ಎರಡು ಪ್ಲಾಟ್ಗಳ ಮೇಲೆ ಬರೋಬ್ಬರಿ ಐವತ್ತು ಲಕ್ಷ ಲೋನ್ ಪಡೆದ ಅಸಾಮಿಗಳು ಅದೇ ಪ್ಲಾಟ್ ಗಳನ್ನು ಲೀಜ್ಗೆ ನೀಡಿ ಲಕ್ಷ ಲಕ್ಷ ವಸೂಲಿ ಮಾಡಿದ್ದಾರೆ. ಬಳಿಕ ಬ್ಯಾಂಕ್ ಲೋನ್ ಕಟ್ಟದೇ ಎಸ್ಕೇಪ್ ಆಗಿದ್ದಾರೆ. ಮೂರ್ನಾಲ್ಕು ನೋಟಿಸ್ ಕೊಟ್ಟ ಬ್ಯಾಂಕಿನವರು ಪ್ಲಾಟ್ ವಾಸಿಗಳನ್ನು ಉಟ್ಟಬಟ್ಟೆಯಲ್ಲಿ ಹೊರ ಹಾಕಿ ಬೀಗ ಜಡಿದಿದ್ದಾರೆ.ಇನ್ನೂ ರಿಯಲ್ ಎಸ್ಟೇಟ್ ಹೆಸರಲ್ಲಿ ರೀಲ್ ಬಿಟ್ಟು ಯಾಮಾರಿಸುವ ಅಜಿತ್ ಮತ್ತು ಸುಜತಾ ದಂಪತಿ ತಾವು ರಿಯಲ್ ಎಸ್ಟೇಟ್ ನಲ್ಲಿ ಒಳ್ಳೆಯ ಬಿಸಿನೆಸ್ ಮಾಡುತ್ತಿದ್ದೆವೆ. ತಮ್ಮದು ಸಾಕಷ್ಟು ಪ್ಲಾಟ್, ವಿಲ್ಲಾ ಮತ್ತು ನಿವೇಶನಗಳಿದ್ದು, ಕಡಿಮೆ ಬೆಲೆಗೆ ಲೀಜ್ ಮತ್ತು ಮಾರಾಟ ಮಾಡುತ್ತೆವೆ ಎಂದು ಜಾಹಿರಾತು ನೀಡುತ್ತಾರೆ. ಇವರ ಬಿಲ್ಡ್ ಅಪ್ ಕಂಡು ಇಂದು ಪ್ಲಾಟ್ ಲೀಜ್ ಪಡೆದವರು ಅಕ್ಷರಶಃ ಹಣ ಮತ್ತು ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನೂ ಸಾಕಷ್ಟು ಮಂದಿಗೆ ಅಜಿತ್ ದಂಪತಿ ಮಕ್ಮಲ್ ಟೋಪಿ ಹಾಕಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಂಚನೆಗಳೊಗಾದ ಗ್ರಾಹಕರು ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


ಇನ್ನೂ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕ ದಂಪತಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದು, ಲಕ್ಷಾಂತರ ರೂಪಾಯಿ ಹಣ ನೀಡಿ ಮನೆ ಲೀಸ್ಗೆ ಪಡೆದಿದ್ದ ಗ್ರಾಹಕರು ಅತ್ತ ನೀಡಿದ ಹಣವೂ ಕೈ ಸೇರದೆ ಇತ್ತ ಇರಲು ಮನೆಯು ಸಹ ಇಲ್ಲದೆ ಬೀದಿಗೆ ಬೀಳುವಂತಾಗಿದ್ದು ಮಾತ್ರ ವಿಪರ್ಯಾಸ ಸಂಗತಿ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಕ್ರಿದ್ ಸಡಗರ

Posted by Vidyamaana on 2024-06-17 21:21:40 |

Share: | | | | |


ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಕ್ರಿದ್ ಸಡಗರ

ಪುತ್ತೂರು : ಈದ್-ಉಲ್-ಅಝ್‌ಹಾ ಬಕ್ರಿದ್ ಹಬ್ಬವನ್ನು ಜಿಲ್ಲೆಯಾದ್ಯಂತೆ ಸಡಗರದಿಂದ ಆಚರಿಸಲಾಯಿತು 

ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿ, ಈದ್ಗಾಗಳಲ್ಲಿ ನಡೆದ ಸಾಮೂಹಿಕ ನಮಾಜ್‌ ಭಕ್ತಿ-ಭಾವದ ಅಲೆಯನ್ನು ಎಬ್ಬಿಸಿತು.

Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್

Posted by Vidyamaana on 2023-10-12 07:26:22 |

Share: | | | | |


Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್

ನ್ಯೂಯಾರ್ಕ್ : ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವೈರಲ್ ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ತಮಾಷೆಯಾಗಿದ್ದರೆ ಇನ್ನು ಕೆಲವು ಜೀವಕ್ಕೆ ಅಪಾಯ ಒಡ್ಡುವ ರೀತಿಯಲ್ಲಿರುತ್ತವೆ. ಇಲ್ಲಿ ಇರುವ ವಿಡಿಯೋ ಕೂಡ ನೋಡುವಾಗ ಮೈ ಜುಂ ಎನ್ನುತ್ತದೆ.

Shocking Video:

ಅಂದಹಾಗೆ ಈ ವಿಡಿಯೋ ಕಂಡುಬಂದಿದ್ದು ನ್ಯೂಯಾರ್ಕ್ ನಲ್ಲಿ ಇಲ್ಲಿ ಓರ್ವ ಯುವಕ ವೇಗವಾಗಿ ಚಲಿಸುತ್ತಿರುವ ಮೆಟ್ರೋ ರೈಲಿನ ಮೇಲೆ ನಿಂತು ಸಾಹಸ ಪ್ರದರ್ಶನ ಮಾಡಿದ್ದಾನೆ ಈತನ ಅಪಾಯಕಾರಿ ಸ್ಟಂಟ್ ಅಲ್ಲಿನ ರೈಲ್ವೆ ನಿಲ್ದಾಣದಲ್ಲಿದ್ದ ಓರ್ವ ಸೆರೆ ಹಿಡಿದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವಕನ ಈ ಸಾಹಸಕ್ಕೆ ಬಾರಿ ಆಕ್ರೋಶ ವ್ಯಕ್ತವಾಗಿದೆ.


ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಟಾಪಿಕಲ್‌ಟೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಯುವಕ ತನ್ನ ಜೀವವನ್ನು ಅಪಾಯಕ್ಕೆ ತಳ್ಳಿ ಮಾಡಿರುವ ಸಾಹಸಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಮಂದಿ ಈ ಯುವಕನ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ, ಇನ್ನೂ ಕೆಲವರು ಆತ ಯಾವುದೋ ವಿಡಿಯೋ ನೋಡಿ ಈ ರೀತಿ ಹುಚ್ಚಾಟ ಆಡುತ್ತಿದ್ದಾನೆ ಆತನನ್ನು ಬಂಧಿಸುವಂತೆ ಕೇಳಿಕೊಂಡಿದ್ದಾರೆ.

ಇನ್ನೂ ಕೆಲವರು ಆ ಯುವಕ ನಿಜ ಜೀವನದಲ್ಲಿ ಸಬ್‌ವೇ ಸರ್ಫ್ ಆಡಲು ಬಯಸಿರಬೇಕು ಹಾಗಾಗಿ ರೈಲಿನ ಮೇಲಿಂದ ಓದುತ್ತಿದ್ದಾನೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

ಪುತ್ತೂರು : ವಿಶ್ವಕರ್ಮ ಮಹೋತ್ಸವ ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

Posted by Vidyamaana on 2023-09-17 18:44:13 |

Share: | | | | |


ಪುತ್ತೂರು : ವಿಶ್ವಕರ್ಮ ಮಹೋತ್ಸವ ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

ಪುತ್ತೂರು: ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿದರು. ಬಳಿಕ ಪುತ್ತೂರು ಪೇಟೆಯ ಮುಖ್ಯರಸ್ತೆಯಿಂದಾಗಿ ಸಾಗಿದ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ಸಾಗಿತು.


ಇಂದು ಮಹತ್ವಾಕಾಂಕ್ಷಿ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ; ಏನಿದು ಸ್ಕೀಮ್.? ಯಾರಿಗೆ ಲಾಭ.? ಡಿಟೈಲ್ಸ್ ಇಲ್ಲಿದೆ

https://vidyamaana.com/news/prime-Minister-modi-launched-ambitious-Vishwakarma-project-today

ಮೆರವಣಿಗೆಯಲ್ಲಿ ಚೆಂಡೆ, ಕುಣಿತ ಭಜನೆ, ವಿಶ್ವಕರ್ಮ ದೇವರ ಸ್ತಬ್ದಚಿತ್ರ ಗಮನ ಸೆಳೆಯಿತು. ಇದನ್ನನುಸರಿಸಿ ವಿಶ್ವಕರ್ಮ ಸಮುದಾಯದವರು ಮೆರವಣಿಗೆಯಲ್ಲಿ ಸಾಗಿಬಂದರು.ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳಾದ ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ,


ವಿಶ್ವಕರ್ಮ ಯುವ ಸಮಾಜ, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಶ್ರೀ ಆನೆಗೊಂದಿ ಗುರು ಸೇವಾ ಪರಿಷತ್ತಿನ ಪುತ್ತೂರು ವಲಯ, ಪುತ್ತೂರು ವಿಶ್ವಕರ್ಮ ಯುವ ಮಿಲನ್, ಪಂಚಮುಖಿ ಗೆಳೆಯರ ಬಳಗ ಕೋರ್ಟ್‌ ರಸ್ತೆ ಪುತ್ತೂರು, ವಿಶ್ವಕರ್ಮ ಮಹಿಳಾ ಮಂಡಳಿ, ಬೀರಮಲೆ ವಿಶ್ವಕರ್ಮ ಸೇವಾ ಸಂಘ, ಬೀರಮಲೆ ಗಾಯತ್ರಿ ಮಹಿಳಾ ಮಂಡಳಿ, ಉಪ್ಪಿನಂಗಡಿ ವಿಶ್ವಕರ್ಮ ಸೇವಾ ಸಂಘ, ಬೊಳುವಾರು ಭಾವನಾ ಕಲಾ ಆರ್ಟ್ಸ್, ಬೀರಮಲೆ ವಿಶ್ವಕರ್ಮ ಯುವಕ ಸಂಘ, ಉಪ್ಪಿನಂಗಡಿ ಕಾಳಿಕಾಂಬಾ ಮಹಿಳಾ ಸಂಘ, ದ.ಕ. ಜಿಲ್ಲಾ ಕಬ್ಬಿಣ ಕೆಲಸಗಾರರ ಸಂಘ ಸಹಕರಿಸಿತು.



Leave a Comment: