ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಮುಳಿಯ ಜ್ಯುವೆಲ್ಸ್‌ನಿಂದ ಸ್ವಾತಂತ್ರ್ಯ ಹೋರಾಟಗಾರರ ಆನ್‌ಲೈನ್‌ ಛದ್ಮವೇಷ ಸ್ಪರ್ಧೆ

Posted by Vidyamaana on 2024-08-07 06:16:09 |

Share: | | | | |


ಮುಳಿಯ ಜ್ಯುವೆಲ್ಸ್‌ನಿಂದ ಸ್ವಾತಂತ್ರ್ಯ ಹೋರಾಟಗಾರರ ಆನ್‌ಲೈನ್‌ ಛದ್ಮವೇಷ ಸ್ಪರ್ಧೆ

ಪುತ್ತೂರು: ಮುಳಿಯ ಜ್ಯುವೆಲ್ಸ್ ಸ್ವಾತಂತ್ರ್ಯ ದಿನದ ಅಂಗವಾಗಿ ಆ.11ರಂದು ಬೆಳಗ್ಗೆ 10ರಿಂದ ಸ್ವಾತಂತ್ರ್ಯ ಹೋರಾಟಗಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಛದ್ಮವೇಷ ಸ್ಪರ್ಧೆಯನ್ನು ಹಾಕಿಕೊಂಡಿದೆ.

ಬೆಳ್ತಂಗಡಿ : ವಿದ್ಯುತ್ ತಂತಿ ಗೆ ಏಣಿ ತಾಗಿ ವ್ಯಕ್ತಿ ಸಾವು

Posted by Vidyamaana on 2023-11-25 11:06:48 |

Share: | | | | |


ಬೆಳ್ತಂಗಡಿ : ವಿದ್ಯುತ್ ತಂತಿ ಗೆ ಏಣಿ ತಾಗಿ ವ್ಯಕ್ತಿ ಸಾವು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ  ಮಲ್ಲರ್ಮಾಡಿ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ,  ವಿದ್ಯುತ್‌ಶಾಕ್‌ಗೆ ಒಳಗಾಗಿ ಕಾರ್ಮಿಕ ಸಾವನ್ನಪ್ಪಿದ  ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

 ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (46)  ಮೃತಪಟ್ಟವರಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಸ್ಥಳೀಯ ಬೊಮ್ಮಣ್ಣ ಗೌಡ ಎಂಬವರ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು, ತೋಟದಲ್ಲಿ ಸೊಪ್ಪು ಕಡಿಯಲು ಅಲ್ಯೂಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್‌ಲೈನ್‌ಗೆ ತಾಗಿ ವಿದ್ಯುತ್‌ಶಾಕ್ ತಗಲಿದೆ, ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಅವರನ್ನು. ಕೂಡಲೇ  ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


*ವಿದ್ಯುತ್ ಲೈನ್ ಸಮಸ್ಯೆ:* ಕಳೆದ ಐದು ,ಆರು ವರ್ಷಗಳಿಂದ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ಲೈನ್ ಬದಲಾಯಿಸಲು ಮೆಸ್ಕಾಂ , ಡಿಸಿಗೆ ಮನವಿ ಮಾಡಿದ್ದರು. ಇಲ್ಲಿವರೆಗೂ ಮೆಸ್ಕಾಂ ಇಲಾಖೆ ಇದರ ಬಗ್ಗೆ ಗಮನಹರಿಸಿಲ್ಲ. ಅದಲ್ಲದೆ ವಿದ್ಯುತ್ ಲೈನ್ ಹಾದುಹೋಗಿರುವ ತೆಂಗಿನ ಮರ , ಅಡಕೆ ಮರ ಸುಟ್ಟ ಹೋಗುತ್ತಿದೆ‌. ಇಲ್ಲಿಗೆ ಯಾವ ಮೆಸ್ಕಾಂ ಸಿಬ್ಬಂದಿ ಮರ ,ಗೆಲ್ಲು ಕಡಿಯಲು ಬರುವುದಿಲ್ಲ ಎಲ್ಲವನ್ನೂ ನಾವು ಸರಿಪಡಿಸಬೇಕಾದ ಪರಿಸ್ಥಿತಿ ಇದೆ‌‌‌. ಹಲವು ಮಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ಮೆಸ್ಕಾಂ ವಿರುದ್ದ ಊರವರು ಮಾಧ್ಯಮ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

Posted by Vidyamaana on 2024-04-09 17:51:34 |

Share: | | | | |


BREAKING: ನಾಳೆಯೇ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಹೀಗೆ ಮಾಡಿ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ( 2nd PUC Examination-1 Result ) ನಾಳೆ ಬೆಳಗ್ಗೆ 10 ಗಂಟೆಗೆ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ( School Education Department ) ತಿಳಿಸಿದೆ. ರಿಸಲ್ಟ್ ಹೇಗೆ ನೋಡಬೇಕು ಅನ್ನೋ ಬಗ್ಗೆ ಮುಂದೆ ಓದಿ.ಈ  ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ- ನ್ನು ದಿನಾಂಕ:01/03/2024 ರಿಂದ 22/03/2024 ರವರೆಗೆ ನಡೆಸಲಾಯಿತು ಎಂದಿದೆ.

ಪುತ್ತೂರು: ಬಡ ಡಯಾಲಿಸಿಸ್ ರೋಗಿಗಳಿಗೆ ಉಚಿತ ಮೆಡಿಸಿನ್ ಕಾರ್ಡ್

Posted by Vidyamaana on 2023-07-16 16:39:48 |

Share: | | | | |


ಪುತ್ತೂರು: ಬಡ ಡಯಾಲಿಸಿಸ್ ರೋಗಿಗಳಿಗೆ ಉಚಿತ ಮೆಡಿಸಿನ್ ಕಾರ್ಡ್

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡುವವರ ಪೈಕಿ ತೀರಾ ಬಡವರಾಗಿದ್ದ ೨೦ ಮಂದಿ ಡಯಾಲಿಸೀಸ್ ರೋಗಿಗಳಿಗೆ ಪ್ರತೀ ತಿಂಗಳು ೧೦೦೦/- ರೂಪಾಯಿಯ ಔಷಧಿ ಮತ್ತು ಡಯಾಲಿಸೀಸ್ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಸೇವಿಸಲು ತಿಂಗಳಿಗೆ  ೪೮೦/- ರೂಪಾಯಿಯ ಕೂಪನ್ ನೀಡುವ ಕಾರ್ಯಕ್ರಮವನ್ನು ಪುತೂರು ಬೊಳ್ವಾರಿನಲ್ಲಿರುವ ಹೆಲ್ತ್ ಪ್ಲಸ್ ಮೆಡಿಕಲ್‌ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಪ್ರಾರಂಭಿಸಲಾಗಿದ್ದು ಜು.೧೫ರಂದು ಒಂದು ವರ್ಷದ ಉಚಿತ ಮೆಡಿಸಿನ್ ಕಾರ್ಡ್‌ನ್ನು ವಿತರಿಸಲಾಯಿತು. ಅನಿವಾಸಿ ಭಾರತೀಯ ಅಬ್ದುಲ್ ಸತ್ತಾರ್ ಮತ್ತು ತೌಸೀರ್ ಅಹಮದ್‌ರವರು ಇದಕ್ಕೆ ಸಹಕರಿಸಿದ್ದಾರೆ.

ಹೆಲ್ತ್ ಪ್ಲಸ್ ಮೆಡಿಕಲ್ಸ್‌ನ ಪಾಲುದಾರರಾದ ಆಸಿಫ್ ಮತ್ತು ಅಕ್ಬರ್‌ರವರು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯಿತಿಯಲ್ಲಿ ಔಷಧಿನೀಡುವ ಕುರಿತು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಜಯದೀಪ್ ಮಾತನಾಡಿ ಈಗಾಗಲೇ ರೋಟರಿ ಮೂಲಕ ೬ ಡಯಾಲಿಸೀಸ್ ಮೆಶಿನ್ ಸರಕಾರಿ ಆಸ್ಪತ್ರೆಗೆ ಬಂದಿದ್ದು ಒಟ್ಟು ೧೨ ಮೆಶಿನ್ ಕಾರ್ಯಚರಿಸುತ್ತಿದೆ. ೯೪ ಜನ ರೋಗಿಗಳ ಪೈಕಿ ತೀರಾ ಬಡವರನ್ನ ಹುಡುಕಿ ಮಾಡುವ ಈ ಸೇವೆ ಅತೀ ಉತ್ತಮವಾದುದು ಆಗಿದೆ. ಸಂಘ ಸಂಸ್ತೆ ಮತ್ತು ಇನ್ನಿತರರಿಂದ ರೋಗಿಗಳಿಗೆ ಸಹಾಯ ಆದಾಗ ಅವರ ಕಷ್ಟ ತಕ್ಕ ಮಟ್ಟಿಗೆ ಪರಿಹಾರ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಫುದ್ದೀನ್ ತಂಙಳ್ ಮಾತನಾಡಿ ರೋಗಿಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯವಾಗಿದ್ದು ಕಷ್ಟದಲ್ಲಿದ್ದಾಗ ಸಹಾಯ ಮಾಡುವವರಿಗೆ, ಇದಕ್ಕೆ ಸಹಾಯ ಮಾಡಿದವರಿಗೆ ದೇವರು ಪ್ರತಿಫಲ ಕೊಡುತ್ತಾನೆ ಎಂದು ಹೇಳಿದರು.

ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿ ಹೆಲ್ತ್ ಪ್ಲಸ್ ಮೆಡಿಕಲ್ ಮೂಲಕ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ನವರು ಕೊಡಮಾಡುವ ಈ ದಾನದಲ್ಲಿ ಸರ್ವ ದರ್ಮದವರು ಇದ್ದು ಇದು ಎಲ್ಲರ ಮನ ಗೆಲ್ಲುವ ಸಂಗತಿಯಾಗಿದೆ. ಸಮಾಜ ಸೇವೆಯಲ್ಲಿ ಅತೀ ಉತ್ತಮ ಸೇವೆ ಇದಾಗಿದ್ದು ಹೆಲ್ತ್ ಸೆಂಟರ್ ನವರ ಸೇವೆಯನ್ನು ಶ್ಲಾಘಿಸಿದರು


ಕಾರ್ಯಕ್ರಮದಲ್ಲಿ ೨೦ ಜನ ರೋಗಿಗಳಿಗೆ ಹೆಲ್ತ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಿದ್ದು ಮುಂದಕ್ಕೆ ದಾನಿಗಳ ನೆರವಿನೊಂದಿಗೆ ಇನ್ನಷ್ಟು ರೋಗಿಗಳಿಗೆ ಸಹಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಮಾಜಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ತಿಳಿಸಿದರು.

ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ

Posted by Vidyamaana on 2023-07-04 02:48:11 |

Share: | | | | |


ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ


ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ, ಮೂಡುಬಿದರೆ, ಉಳ್ಳಾಲ ತಾಲೂಕುಗಳ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಜುಲೈ 4ರಂದು ರಜೆ‌ ಘೋಷಿಸಿ ಜಿಲ್ಲಾಧಿಕಾರಿ‌ ಆದೇಶ ಹೊರಡಿಸಿದ್ದಾರೆ.


ಪುತ್ತೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಇಲ್ಲಿನ ಶಾಲಾ - ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 4 ದಿನ ಆರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಕ್ರಮಗಳನ್ನು ಘೋಷಿಸಿದೆ. ಅದರಂತೆ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ, ಪ್ರವಾಸಿಗರಿಗೆ ಎಚ್ಚರಿಕೆ ಹಾಗೂ ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಲಾಗಿದೆ.

ದ.ಕ.ದಲ್ಲಿ ತಹಶೀಲ್ದಾರ್‌ಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.

ರಜೆ ಬಗ್ಗೆ ನಕಲಿ ಸುದ್ದಿ ಹಬ್ಬಿಸಿದ್ರೆ ಬೀಳುತ್ತೆ FIR : ಪುತ್ತೂರು ಎಸಿ ಸಹ ಕೊಟ್ರು ಎಚ್ಚರಿಕೆ

Posted by Vidyamaana on 2024-07-17 21:34:05 |

Share: | | | | |


ರಜೆ ಬಗ್ಗೆ ನಕಲಿ ಸುದ್ದಿ ಹಬ್ಬಿಸಿದ್ರೆ ಬೀಳುತ್ತೆ FIR : ಪುತ್ತೂರು ಎಸಿ ಸಹ ಕೊಟ್ರು ಎಚ್ಚರಿಕೆ

ಮಂಗಳೂರು: ಜುಲೈ 18 ಗುರುವಾರದಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ನಕಲಿ ಆದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

 ಈ ಹಿಂದಿನ ಡಿ.ಸಿ. ಆದೇಶವನ್ನು ಎಡಿಟ್ ಮಾಡಿ, ಜೂನ್ 18 ಎಂದು ತಿದ್ದಲಾಗಿದೆ. ಇದನ್ನು ಸೃಷ್ಟಿಸಿದವರ ಮೇಲೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು  ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




Leave a Comment: