ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಎ.16 ಕ್ಕೆ ಪುತ್ತೂರಿಗೆ ಸಿ ಎಂ, ಡಿಸಿಎಂ - ರೋಡ್ ಶೋ: ಕಾರ್ಯಕ್ರಮದ ಪೂರ್ವಭಾವಿ ಸಭೆ

Posted by Vidyamaana on 2024-04-13 07:27:10 |

Share: | | | | |


ಎ.16 ಕ್ಕೆ ಪುತ್ತೂರಿಗೆ ಸಿ ಎಂ, ಡಿಸಿಎಂ - ರೋಡ್ ಶೋ: ಕಾರ್ಯಕ್ರಮದ ಪೂರ್ವಭಾವಿ ಸಭೆ

ಪುತ್ತೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ  ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಪುತ್ತೂರಿಗೆ ಆಗಮಿಸಲಿದ್ದು ಕಿಲ್ಲೆ ಮೈದಾನದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿದ್ದು ಆ ಬಳಿಕ ಕಿಲ್ಲೆ ಮೈದಾನದಲ್ಲಿ ಸಮಾವೇಶದಲ್ಲಿ‌ಭಾಗವಹಿಸಲಿದ್ದು ಸಂಜೆ 5 ಗಂಟೆಗೆ ನಿರ್ಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ‌ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಸಮಾವೇಶವನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

Posted by Vidyamaana on 2024-01-28 05:12:54 |

Share: | | | | |


ಪುತ್ತೂರು : ಅಪ್ರಾಪ್ತ  ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

ಪುತ್ತೂರು:  ಯುವಕನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಪುತ್ತೂರು  ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್‌ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೊಪಿಯ ವಿರುದ್ದ ಪೊಕ್ಕೋ ಪ್ರಕರಣ ದಾಖಲಿಸಲಾಗಿದೆ.

ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Posted by Vidyamaana on 2023-10-21 11:34:00 |

Share: | | | | |


ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿದರು.



ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಜತೆಗಿದ್ದರು

ತುಮಕೂರಿನಲ್ಲಿ ಕಾರಿಗೆ ಬೆಂಕಿ ಮೂವರ ಕೊಲೆ ಪ್ರಕರಣ - ಭರ್ಜರಿ ಚಿನ್ನದ ಆಮಿಷ ತೋರಿಸಿದ್ದ ಆರೋಪಿ

Posted by Vidyamaana on 2024-03-25 19:42:27 |

Share: | | | | |


ತುಮಕೂರಿನಲ್ಲಿ ಕಾರಿಗೆ ಬೆಂಕಿ ಮೂವರ ಕೊಲೆ ಪ್ರಕರಣ - ಭರ್ಜರಿ ಚಿನ್ನದ ಆಮಿಷ ತೋರಿಸಿದ್ದ ಆರೋಪಿ


ಬೆಳ್ತಂಗಡಿ : ತುಮಕೂರಿನಲ್ಲಿ  ಕಾರಿಗೆ ಬೆಂಕಿ ಹಚ್ಚಿ ಮೂವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು. ಪ್ರಕರಣದ ಇಂಚಿಂಚೂ ಮಾಹಿತಿಯನ್ನು ವಿದ್ಯಾಮಾನ ನ್ಯೂಸ್ ನಿಮ್ಮ ಮುಂದೆ ಇಡುತ್ತಿದೆ.

ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸರು ಒಟ್ಟು ಎರಡು ಜನರನ್ನು ಬಂಧಿಸಿದ್ದು ಉಳಿದ ಆರು ಜನರಿಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ಕೆವಿ ಮಾ.25 ರಂದು ತುಮಕೂರು ಎಸ್ಪಿ ಕಚೇರಿಯಲ್ಲಿ ಕರೆದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

22-03-2024 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸ್ ಠಾಣೆಯ ಪಿಎಸ್‌ಐ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ  ಒಂದು ಮಾರುತಿ ಸುಜುಕಿ S-PRESSO ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು, ಯಾರೋ ದುಷ್ಕರ್ಮಿಗಳು ಯಾರೋ 3 ಜನರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿರೋದು ಕಂಡು ಬಂದಿತ್ತು.

ಅದರಂತೆ ಕೋರಾ ಪೊಲೀಸ್ ಪ್ರಕರಣ ದಾಖಲಾಗಿತ್ತು.ನಂತರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ, ಐ.ಪಿ.ಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ ಮರಿಯಪ್ಪ ಮತ್ತು ಬಿ.ಎಸ್ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರಿನ ಪೊಲೀಸರ ತಂಡ ವಿಚಾರಣೆ ನಡೆಸಿದಾಗ ಕರಾಳ ದಂಧೆಯು ಬೆಳಕಿಗೆ ಬಂದಿದೆ.



ಇಬ್ಬರು ಆರೋಪಿಗಳ ಬಂಧನ, ಆರು ಜನರಿಗಾಗಿ ಶೋಧ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತುಮಕೂರಿನ

ಶಿರಾ ಗೇಟ್‌ನಲ್ಲಿ ವಾಸವಿರುವ 1) ಪಾತರಾಜು @ ರಾಜು @ ರಾಜಗುರು @ಕುಮಾರ್,  ಇನ್ನೊರ್ವ ಆರೋಪಿಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಆರು ಜನ ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಮೃತರಿಗೂ ಪ್ರಮುಖ ಆರೋಪಿಗೂ ಹೇಗೆ ಪರಿಚಯ?

ಅಂದ್ಹಾಗೆ ಮೃತರಾದ ಬೆಳ್ತಂಗಡಿಯ ಬೆಳ್ತಂಗಡಿಯ  ಇಶಾಕ್ ಸೀಮಮ್,ಶಾಹುಲ್ ಹಮೀದ್, ಸಿದ್ದಿಕ್ ಇವರಿಗೆ ಪಾತರಾಜನ ಜೊತೆ ಸೇರಿ ಸುಮಾರು 6-7 ತಿಂಗಳಿನಿಂದ ಸಂಪರ್ಕವಿತ್ತು. ಇವರೆಲ್ಲಾ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷ ರೂ ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರಿಂದ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ  ಸಹಚರರಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್,  ನವೀನ್, ವೆಂಕಟೇಶಪುರದ ಕೃಷ್ಣ, ಹೊಂಬಯ್ಯನಪಾಳ್ಯದ ಗಣೇಶ, ನಾಗಣ್ಣನಪಾಳ್ಯದ ಕಿರಣ್, ಕಾಳಿದಾಸನಗರದ ಸೈಮನ್, ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡು ಪ್ಲ್ಯಾನ್ ಮಾಡಿ ಕೊಲೈಗೈದಿದ್ದರು.

ಕೊಲೆಗಾರರಿಗೂ 3 ಕೆ ಜಿ ಚಿನ್ನ ಕೊಡೋದಾಗಿ ಹೇಳಿದ್ದ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು

ಇನ್ನು ಕೊಲೆ ಮಾಡುವ ಪ್ಲ್ಯಾನ್ ವೇಳೆ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು ಕೊಲೆಗಾರರಿಗೂ 3 ಕೆ.ಜಿ ಚಿನ್ನ ಕೊಡೋದಾಹಿ ಆಸೆ ತೋರಿಸಿದಂತೆ. ಇನ್ನು ಪ್ಲ್ಯಾನ್ ನಂತೆ ದಿನಾಂಕ: 22.03.2024 ರಂದು ಬೆಳಗಿನ ಜಾವ 12 ಗಂಟೆ ಸುಮಾರಿಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡುಅವರುಗಳನ್ನು ಮಚ್ಚು, ಲಾಂಗ್ ಮತ್ತು ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.


ಪರಾರಿಯಾದ ಆರು ಜನ ಆರೋಪಿಗಳು

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು ಇನ್ನುಳಿದಂತೆ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24) , ಸಂತೇಪೇಟೆಯ ನವೀನ್(24) ,ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23) ,ಕಾಳಿದಾಸನಗರದ ಸೈಮನ್(18) ಪರಾರಿಯಾಗಿದ್ದು ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ..

ಸುಳ್ಯದ ಸುಹಾಸ್ ಕುಂದಾಪುರದ ಹೊಳೆಯಲ್ಲಿ ಮುಳುಗಿ ನಾಪತ್ತೆ: ಮುಳುಗು ತಜ್ಞರಿಂದ ಶೋಧ

Posted by Vidyamaana on 2023-05-05 15:23:10 |

Share: | | | | |


ಸುಳ್ಯದ ಸುಹಾಸ್ ಕುಂದಾಪುರದ ಹೊಳೆಯಲ್ಲಿ ಮುಳುಗಿ ನಾಪತ್ತೆ: ಮುಳುಗು ತಜ್ಞರಿಂದ ಶೋಧ

ಕುಂದಾಪುರ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (21) ಎಂಬಾತ ಶುಕ್ರವಾರ ಮಧ್ಯಾಹ್ನ ಕುಂದಾಪುರ ತಾಲೂಕಿನ ಬಿದಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಹೊಳೆಗೆ ಸ್ನೇಹಿತರೊಂದಿಗೆ ಜಲಕ್ರೀಡೆಯಾಡಲೆಂದು ಹೋಗಿ ನಾಪತ್ತೆಯಾಗಿದ್ದಾನೆ.

ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಬೆಳಿಗ್ಗೆಯಷ್ಟೇ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದ. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಆಟವಾಡಲು ಬಂದಿದ್ದರು ಎಂದು ತಿಳಿದು ಬಂದಿದೆ.ಇನ್ನು ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾನೆ.ಜೊತೆಗಿದ್ದ ಯುವಕರು ತಕ್ಷಣ ಸ್ಥಳೀಯರಿಗೆ ಸುದ್ಧಿ ತಲುಪಿಸಿದ್ದು, ಕಾಂಗ್ರೆಸ್ ಮುಖಂಡ ಕಾವ್ಯಕ್ಕಿ ಹರಿಪ್ರಸಾದ್ ಶೆಟ್ಟಿಯವರು ಕೋಟ ಪೊಲೀಸರಿಗೆ ಹಾಗೂ ಸುಳ್ಯದ ನಿತಾನಂದ ಮುಂಡೋಡಿಯವರಿಗೆ ಮಾಹಿತಿ ನೀಡಿ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಧಾವಿಸಿದ್ದು, ಸುಹಾಸನನ್ನು ಹುಡುಕುತ್ತಿದ್ದಾರೆ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆಯಲ್ಲಿ ಭಾರೀ ಹರಿವು ಇದ್ದು, ಸುಹಾಸ್ ದೇಹ ಹೊಳೆಯಿಂದ ಹರಿದು ಸಮುದ್ರ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪುತ್ತೂರು ಮೆಸ್ಕಾಂ ತುರ್ತು ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

Posted by Vidyamaana on 2023-08-01 03:54:44 |

Share: | | | | |


ಪುತ್ತೂರು  ಮೆಸ್ಕಾಂ ತುರ್ತು  ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

ಪುತ್ತೂರು: 33ಕೆಪಿ ಮಾಡಾವು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆ.ವಿ. ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.1ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆವಿ ಮಾಡಾವು- ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆವಿ ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. 33/11 ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.



Leave a Comment: