ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |

ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |

ಲೀಡ್ ಬಂದಕೂಡ್ಲೇ ಬೆಂಗಳೂರು ಬಸ್ ಹತ್ತಿ – ಕೈ ಅಭ್ಯರ್ಥಿಗಳಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ

Posted by Vidyamaana on 2023-05-12 12:00:38 |

Share: | | | | |

ಲೀಡ್ ಬಂದಕೂಡ್ಲೇ ಬೆಂಗಳೂರು ಬಸ್ ಹತ್ತಿ – ಕೈ ಅಭ್ಯರ್ಥಿಗಳಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ

ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದು ಇದೀಗ ಮತ ಎಣಿಕೆಗೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣಗೊಳ್ಳಬಹುದೆಂಬ ಸೂಚನೆ ಸಿಕ್ಕಿರುವುದರಿಂದ ರಾಜ್ಯದಲ್ಲಿ ಮೂರೂ ಪಕ್ಷಗಳೂ ‘ಹೈ ಅಲರ್ಟ್’ನಲ್ಲಿವೆ.

ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವ ಸಾಧ್ಯತೆಗಳು ಕಡಿಮೆಯಿದ್ದು ಕಾಂಗ್ರೆಸ್ ಪಕ್ಷ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳನ್ನು ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ನೀಡಿರುವುದು ಆಡಳಿತಾರೂಢ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ ಫಲಿತಾಂಶದ ಬಳಿಕ ‘ಅಪರೇಷನ್ ಕಮಲ’ ನಡೆಯುವ ಸಾಧ್ಯತೆ ದಟ್ಟವಾಗಿರುವ ಕಾರಣ ತನ್ನ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹೊಸ ಪ್ಲ್ಯಾನ್ ಹೆಣೆದಿದ್ದು, ಮೇ13ರಂದು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ನೇರವಾಗಿ ಬೆಂಗಳೂರಿಗೆ ಬರುವಂತೆ ಪಕ್ಷದ ಹೈಕಮಾಂಡ್ ‘ಸ್ಟ್ರಿಕ್ಟ್ ಆದೇಶ’ ರವಾನಿಸಿದೆ.

ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳ ಜೊತೆ ವರ್ಚ್ಯವಲ್ ಮೀಟಿಂಗ್ ನಡೆಸಿದ್ದು ಈ ಸಂದರ್ಭದಲ್ಲಿ ಇಂತಹದ್ದೊಂದು ಸೂಚನೆಯನ್ನು ‘ಕೈ’ ಅಭ್ಯರ್ಥಿಗಳಿಗೆ ರವಾನಿಸಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

Posted by Vidyamaana on 2023-08-03 03:50:29 |

Share: | | | | |

ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

ಪುತ್ತೂರು: ನಾನು ಬೀದರ್ ಜಿಲ್ಲೆಯ ಬಾಲ್ಕಿ ನಿವಾಸಿ ಕಲ್ಲಪ್ಪ. ಊರು ಸುತ್ತುವ ಅಲೆಮಾರಿ ಯುವಕ, ನನ್ನಲ್ಲಿ ಉಚಿತ ಬಸ್ ಪಾಸ್ ಇತ್ತು ಅದನ್ನು ಕಳೆದುಕೊಂಡಿದ್ದೇನೆ.ನನಗೆ ಊರಿಗೆ ಹೋಗಲು ನನ್ನಲ್ಲಿ ನಯಾ ಪೈಸೆ ಇಲ್ಲ ನನಗೆ ಸಹಾಯ ಮಾಡಿ, ನೀವು ಬಡವರಿಗೆ ಸಹಾಯ ಮಾಡುತ್ತೀರಿ ಎಂದು ಯಾರೋ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ. ದಯವಿಟ್ಟು ನನಗೆ ನೆರವು ನೀಡಿ ಎಂದು ಅಂಧ ಯುವಕ ಪುತ್ತೂರು ಶಾಸಕರ ಕಚೇರಿಯಲ್ಲಿ ಬಂದು ಕೇಳಿಕೊಂಡಿದ್ದಾನೆ.

ಯುವಕನ ನೋವನ್ನು ಆಲಿಸಿದ ಶಾಸಕರು ನಿನಗೆ ಎಷ್ಟು ಹಣ ಬೇಕು ನಾನು ಕೊಡುತ್ತೇನೆ, ಸುರಕ್ಷಿತವಾಗಿ ಊರಿಗೆ ಹೋಗಿ ಎಂದು ಅಂಧ ಯುವಕ ಊರಿಗೆ ಹೋಗಲು ಅವನು ಕೇಳಿದಷ್ಟು ಹಣ ನೀಡುವ ಮೂಲಕ ಮಾನವೀಯತೆ ಮೆರೆದರು. ಎಲ್ಲಿಂದಲೋ ಬಂದ ಯುವಕ ಶಾಸಕರ ಬಳಿ ಹಣ ಕೇಳಿದಾಗ ಆತನ ಪೂರ್ವಾ ಪರ ವಿಚಾರಿಸದೆ ಆತ ಬಡವನಾದ ಕಾರಣ ನನ್ನ ಬಳಿ ಬಂದಿದ್ದಲ್ವ ಆತನಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ಶಾಸಕರು ಈ ವೇಳೆ ಹೇಳಿದರು. ಕಚೇರಿಯಲ್ಲಿ ಸೇರಿದ್ದ ಸಾರ್ವಜನಿಕರು‌ ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

Posted by Vidyamaana on 2024-07-23 21:30:52 |

Share: | | | | |

ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕಾ ಸಂಸ್ಥೆ ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾಗಿರುವ ಎಂ.ಆರ್.ಪಿ.ಎಲ್.ನ ಹೈಕ್ಯೂ ರಿಟೇಲ್ ಔಟ್ ಲೆಟ್ ಮಹೇಶ್ವರ ಪೆಟ್ರೋಲಿಯಂ ಜು.21ರಂದು ಮಾಣಿ-ಮೈಸೂರು ರಾಷ್ಟಿಯ ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶುಭಾರಂಭ ಗೊಂಡಿತ್ತು . ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಸ್ಥೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸವಣೂರು ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಸವಣೂರು ಸೀತಾರಾಮ ರೈ, ಸ್ಥಳೀಯ ನಗರ ಸಭಾ ಸದಸ್ಯೆ ಯಶೋಧಾ ಪೂಜಾರಿ ಮತ್ತು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪೆಟ್ರೋಲ್ ಹಾಕುವ ಯಂತ್ರಗಳ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ತೈಲ ತುಂಬುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ವಾಮನ್ ಪೈ ಅವರು ಉಚಿತ ನೈಟ್ರೋಜನ್ ಪೂರೈಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಬಳಿಕ, ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭ ಗೊಂಡಿತ್ತು . ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ಅತಿಥಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಕಾರ್ಯಾಚರಣೆಗೆ ಅಧಿಕೃತ ಚಾಲನೆಯನ್ನು ನೀಡಿದರು.

ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದಿದ್ದ ವಿವೇಕ್ ಶೆಟ್ಟಿ ಶವವಾಗಿ ಪತ್ತೆ

Posted by Vidyamaana on 2024-02-04 07:39:15 |

Share: | | | | |

ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದಿದ್ದ ವಿವೇಕ್ ಶೆಟ್ಟಿ ಶವವಾಗಿ ಪತ್ತೆ

ಕಾಸರಗೋಡು: ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದಿದ್ದ ಯುವಕನೋರ್ವ ಬೇಕರಿ ಅಂಗಡಿಯೊಳಗಡೆ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆಯಲ್ಲಿ ನಡೆದಿದೆ.ಬಂಗ್ರಗುಡ್ಡೆಯ ವಿವೇಕ್ ಶೆಟ್ಟಿ (38) ಮೃತ ಪಟ್ಟವರು.ಬೆಳಿಗ್ಗೆ 10 ಗಂಟೆ ಸುಮಾರಿಗೆ ನೆಲ್ಲಿಕುಂಜೆ ರಸ್ತೆಯ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಟರ್ ಮುಚ್ಚಿರುವುದರಿಂದ ಸಂಶಯಗೊಂಡು ಸಹೋದರ ತೊರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ವಿವೇಕ್ ಗೆ ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ 70 ಲಕ್ಷ ರೂ. ಲಭಿಸಿತ್ತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮೊಬೈಲ್ ಕಳ್ಳತನ ಮಾಡಿ ಆನ್​ಲೈನ್ ಆಯಪ್ ಮೂಲಕ ಹಣ ವರ್ಗಾವಣೆ

Posted by Vidyamaana on 2024-01-13 08:25:36 |

Share: | | | | |

ಮೊಬೈಲ್ ಕಳ್ಳತನ ಮಾಡಿ ಆನ್​ಲೈನ್ ಆಯಪ್ ಮೂಲಕ ಹಣ ವರ್ಗಾವಣೆ

ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ ದುಷ್ಕರ್ಮಿಗಳು ಮೊಬೈಲ್​ನ ಆನ್​ಲೈನ್ ಆಯಪ್ ಮೂಲಕ ₹1.40 ಲಕ್ಷ ಹಣ ವರ್ಗಾವಣೆ ಮಾಡಿಕೊಂಡ ಘಟನೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜ್​​ಗೆ ತೆರಳುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ಮೌಲ್ಯದ ಮೊಬೈಲ್​ ಅನ್ನು ಪ್ರಾಂಶುಪಾಲರ ಜೇಬಿನಿಂದ ಕಳ್ಳತನ ಮಾಡಿದ್ದಾರೆ.ಬಳಿಕ ಮೊಬೈಲ್​​ನಲ್ಲಿದ್ದ ಎಸ್​​ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂಗಳನ್ನ ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಮೊದಲು ₹75 ಸಾವಿರ, ₹50 ಸಾವಿರ ಹಾಗೂ ₹15 ಸಾವಿರ ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಆರೋಪದ ಪ್ರಕರಣ : ಆರೋಪಿ ಖುಲಾಸೆ

Posted by Vidyamaana on 2023-09-24 09:31:09 |

Share: | | | | |

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ   ಆರೋಪದ ಪ್ರಕರಣ : ಆರೋಪಿ ಖುಲಾಸೆ

ಪುತ್ತೂರು : ಆರು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ  ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ  ಸುಳ್ಯ ತಾಲೂಕು ಬಾಳುಗೋಡು  ಗ್ರಾಮದ ಕೋತ್ನಡ್ಕ ನಿವಾಸಿ ಕಿಶೋರ್. ಕೆ.ರವರನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ   ಕಾಂತರಾಜು ಎಸ್ ವಿ ರವರು ನಿರಪರಾಧಿ ಎಂದು ಬಿಡುಗಡೆ ಗೊಳಿಸಲು ಆದೇಶಿಸಿರುತ್ತಾರೆ.

  02/08/2017 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡಕಜೆ ಎಂಬಲ್ಲಿ

 ಸಿಲ್ವೆಸ್ಟರ್ ಡಿಸೋಜರವರ ಹಳೆಯ ಮನೆಯಲ್ಲಿ, ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಕಿಶೋರ್. ಕೆ ರವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೊಂದ ಬಾಲಕಿ ಸುಳ್ಯ  ಪೊಲೀಸ್ ಠಾಣೆಗೆ ವಿಳಂಬವಾಗಿ  ದೂರನ್ನು ನೀಡಿದ್ದರು. ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ  ಕಾಯ್ದೆಯ ಕಲಂ.5 ಮತ್ತು 6 ರ ಅನ್ವಯದಂತೆ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ ಆರೋಪಿ ಎನ್ನಲಾಗಿದ್ದ ಕಿಶೋರ್. ಕೆ.ರವರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು. ನಂತರ ಪೊಲೀಸರು ಆರೋಪಿಯ ವಿರುದ್ಧ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವೇಳೆ ಮಾನ್ಯ ಉಚ್ಚ ನ್ಯಾಯಾಲಯದ  ಆದೇಶದಂತೆ, ಮಂಗಳೂರಿನ ಎರಡನೇ  ಜಿಲ್ಲಾ  ನ್ಯಾಯಾಲಯದಲ್ಲಿದ್ದ ಪ್ರಕರಣವು  ಈ ಪುತ್ತೂರಿನ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ.

 ಹೀಗಿರುವಲ್ಲಿ,ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ   ಕೈಗೆತ್ತಿಕೊಂಡು ಪ್ರಾಸಿಕೂಷನ್ ತನ್ನ ಪರವಾಗಿ ಸುಮಾರು 26 ಸಾಕ್ಷಿಗಳ ಪೈಕಿ  12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ತನಿಖೆ ನಂತರ ಮಾನ್ಯ ನ್ಯಾಯಾಲಯ ಪಕ್ಷಗಾರರ ವಾದ ವಿವಾದವನ್ನು ಆಲಿಸಿತ್ತು. ಈ ಹಂತದಲ್ಲಿ ಆರೋಪಿ ಪರ ವಕೀಲರಾದ  ಮಹೇಶ್ ಕಜೆಯವರು ದೂರು  ಸಲ್ಲಿಸುವಿಕೆಯಲ್ಲಿನ ವಿಳಂಬ,ಆಕೆಯ ವಯಸ್ಸನ್ನು ಸಂಶಯಾ ತೀತವಾಗಿ ಸಾಬೀತುಪಡಿಸುವಲ್ಲಿ ವಿಫಲತೆ ,ಆರೋಪಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ  ಹೋಗಬಹುದಾದ ಸಾಧ್ಯತೆ, ಸಂತ್ರಸ್ಥೆ ಘಟನೆ ನಡೆದಿದೆ ಎನ್ನಲಾದ ಎರಡು ದಿನದ ಮೊದಲು ನಾಪತ್ತೆಯಾಗಿದ್ದು, ಆ ಎರಡು ದಿವಸ ಆಕೆ ಎಲ್ಲಿದ್ದಳು, ಯಾರ ಜೊತೆ ಇದ್ದಳು ಇತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಸಿದೆ ಇರುವುದು,ಆರೋಪಿತ  ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆರೋಪಿಯು ಘಟನಾ  ಸ್ಥಳದಲ್ಲಿದ್ದ ಬಗ್ಗೆ

 ದಾಖಲೆಗಳಿಲ್ಲದಿರುವುದು ,  ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು ,ಇತ್ಯಾದಿಗಳ ಹಿನ್ನೆಲೆಯಲ್ಲಿ  ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ ಮತ್ತು ತನಿಖೆಯಲ್ಲಿನ ವಿರೋಧಾಬಾಸಗಳ ಕಾರಣ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ವಾದಿಸಿದ್ದರು. ಅಂತಿಮವಾಗಿ, ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು  ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತರಾಜು ಎಸ್. ವಿ ರವರು ಪ್ರಾಸಿಕ್ಯೂಷನ್ ತನ್ನ ಕೇಸನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದು ಆ ಕಾರಣ  ಆರೋಪಿಯನ್ನು ನಿರ್ದೋಷಿ ಎಂಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಪ್ರಕರಣ : ಆರೋಪಿ ಖುಲಾಸೆ

 ಪುತ್ತೂರು : ಆರು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ  ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ  ಸುಳ್ಯ ತಾಲೂಕು ಬಾಳುಗೋಡು  ಗ್ರಾಮದ ಕೋತ್ನಡ್ಕ ನಿವಾಸಿ ಕಿಶೋರ್. ಕೆ.ರವರನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ   ಕಾಂತರಾಜು ಎಸ್ ವಿ ರವರು ನಿರಪರಾಧಿ ಎಂದು ಬಿಡುಗಡೆ ಗೊಳಿಸಲು ಆದೇಶಿಸಿರುತ್ತಾರೆ.

  02/08/2017 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡಕಜೆ ಎಂಬಲ್ಲಿ

 ಸಿಲ್ವೆಸ್ಟರ್ ಡಿಸೋಜರವರ ಹಳೆಯ ಮನೆಯಲ್ಲಿ, ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಕಿಶೋರ್. ಕೆ ರವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೊಂದ ಬಾಲಕಿ ಸುಳ್ಯ  ಪೊಲೀಸ್ ಠಾಣೆಗೆ ವಿಳಂಬವಾಗಿ  ದೂರನ್ನು ನೀಡಿದ್ದರು. ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ  ಕಾಯ್ದೆಯ ಕಲಂ.5 ಮತ್ತು 6 ರ ಅನ್ವಯದಂತೆ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ ಆರೋಪಿ ಎನ್ನಲಾಗಿದ್ದ ಕಿಶೋರ್. ಕೆ.ರವರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು. ನಂತರ ಪೊಲೀಸರು ಆರೋಪಿಯ ವಿರುದ್ಧ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವೇಳೆ ಮಾನ್ಯ ಉಚ್ಚ ನ್ಯಾಯಾಲಯದ  ಆದೇಶದಂತೆ, ಮಂಗಳೂರಿನ ಎರಡನೇ  ಜಿಲ್ಲಾ  ನ್ಯಾಯಾಲಯದಲ್ಲಿದ್ದ ಪ್ರಕರಣವು  ಈ ಪುತ್ತೂರಿನ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ.

 ಹೀಗಿರುವಲ್ಲಿ,ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ   ಕೈಗೆತ್ತಿಕೊಂಡು ಪ್ರಾಸಿಕೂಷನ್ ತನ್ನ ಪರವಾಗಿ ಸುಮಾರು 26 ಸಾಕ್ಷಿಗಳ ಪೈಕಿ  12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ತನಿಖೆ ನಂತರ ಮಾನ್ಯ ನ್ಯಾಯಾಲಯ ಪಕ್ಷಗಾರರ ವಾದ ವಿವಾದವನ್ನು ಆಲಿಸಿತ್ತು. ಈ ಹಂತದಲ್ಲಿ ಆರೋಪಿ ಪರ ವಕೀಲರಾದ  ಮಹೇಶ್ ಕಜೆಯವರು ದೂರು  ಸಲ್ಲಿಸುವಿಕೆಯಲ್ಲಿನ ವಿಳಂಬ,ಆಕೆಯ ವಯಸ್ಸನ್ನು ಸಂಶಯಾ ತೀತವಾಗಿ ಸಾಬೀತುಪಡಿಸುವಲ್ಲಿ ವಿಫಲತೆ ,ಆರೋಪಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ  ಹೋಗಬಹುದಾದ ಸಾಧ್ಯತೆ, ಸಂತ್ರಸ್ಥೆ ಘಟನೆ ನಡೆದಿದೆ ಎನ್ನಲಾದ ಎರಡು ದಿನದ ಮೊದಲು ನಾಪತ್ತೆಯಾಗಿದ್ದು, ಆ ಎರಡು ದಿವಸ ಆಕೆ ಎಲ್ಲಿದ್ದಳು, ಯಾರ ಜೊತೆ ಇದ್ದಳು ಇತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಸಿದೆ ಇರುವುದು,ಆರೋಪಿತ  ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆರೋಪಿಯು ಘಟನಾ  ಸ್ಥಳದಲ್ಲಿದ್ದ ಬಗ್ಗೆ

 ದಾಖಲೆಗಳಿಲ್ಲದಿರುವುದು ,  ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು ,ಇತ್ಯಾದಿಗಳ ಹಿನ್ನೆಲೆಯಲ್ಲಿ  ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ ಮತ್ತು ತನಿಖೆಯಲ್ಲಿನ ವಿರೋಧಾಬಾಸಗಳ ಕಾರಣ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ವಾದಿಸಿದ್ದರು. ಅಂತಿಮವಾಗಿ, ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು  ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತರಾಜು ಎಸ್. ವಿ ರವರು ಪ್ರಾಸಿಕ್ಯೂಷನ್ ತನ್ನ ಕೇಸನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದು ಆ ಕಾರಣ  ಆರೋಪಿಯನ್ನು ನಿರ್ದೋಷಿ ಎಂದು ಆದೇಶಿಸಿರುತ್ತಾರೆ. ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ಮಹೇಶ್ ಕಜೆ ಮತ್ತು ಮಂಗಳೂರಿನ  ರಾಜೇಶ್ ರೈಯವರು ವಾದಿಸಿದ್ದರು.ದು ಆದೇಶಿಸಿರುತ್ತಾರೆ. ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ಮಹೇಶ್ ಕಜೆ ಮತ್ತು ಮಂಗಳೂರಿನ  ರಾಜೇಶ್ ರೈಯವರು ವಾದಿಸಿದ್ದರು.

Leave a Comment: