ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

Posted by Vidyamaana on 2023-03-15 09:47:10 |

Share: | | | | |


ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

ಪುತ್ತೂರು: ಇಲ್ಲಿನ ಪುಣಚದಲ್ಲಿ ಬುಧವಾರ ಮಧ್ಯಾಹ್ನ‌ ಮಳೆಯಾಗಿದೆ.ಪುತ್ತೂರು ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ‌ ಸದ್ದು ಕೇಳಿಬರುತ್ತಿತ್ತು.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇನ್ನು ಕೆಲ ದಿನ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚೆಗೆ ಹವಾಮಾನ ಇಲಾಖೆ, ಕರಾವಳಿ ಸಹಿತ ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ, ಹವಾಮಾನ ಇಲಾಖೆಯ ವರದಿ ನಿಜವಾಗಿದೆ.

ಕಚೇರಿ ಕೆಲಸಗಳಿಗಾಗಿ ನೀವು ದೂರದೂರಿನಿಂದ ಬರುವವರೇ

Posted by Vidyamaana on 2023-05-28 16:55:33 |

Share: | | | | |


ಕಚೇರಿ ಕೆಲಸಗಳಿಗಾಗಿ ನೀವು ದೂರದೂರಿನಿಂದ ಬರುವವರೇ

ಪುತ್ತೂರು: ಶಾಸಕ, ಸಹಾಯಕ ಆಯುಕ್ತರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಸೋಮವಾರ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಅವರು ಮೇ 29ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪುತ್ತೂರಿಗೆ ಆಗಮಿಸಿ, ಸಂಜೆ 4 ಗಂಟೆಯವರೆಗೆ ಚುನಾವಣಾ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ.

ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸೋಮವಾರ ಅಂದರೆ ಮೇ 29ರಂದು ಕಚೇರಿಯಲ್ಲಿ ಲಭ್ಯರಿರುತ್ತಾರೆ.

ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

Posted by Vidyamaana on 2023-09-24 16:55:47 |

Share: | | | | |


ಬಂಟ್ವಾಳ: ಲಾರಿ ಢಿಕ್ಕಿಯಾಗಿ ಬೈಕ್ ಸವಾರ ರಾಜ್ ಕುಮಾರ್ ಮೃತ್ಯು

ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು (ಸೆ.24ರ ಭಾನುವಾರ) ಬೆಳಿಗ್ಗೆ ಪಾಣೆಮಂಗಳೂರಿನ ನೂತನ ಸೇತುವೆಯಲ್ಲಿ ನಡೆದಿದೆ.


ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಮೃತಪಟ್ಟವರು.


ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು.


ವಾಮದಪದವಿನ ಮನೆಯಿಂದ ಸಜೀಪದಲ್ಲಿರುವ ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಢಿಕ್ಕಿಯಾಗಿದೆ.


ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವರ್ಣೋದ್ಯಮದ ಬಿಗ್’ಬಾಸಿನಿಂದ ಪುತ್ತೂರಿನಲ್ಲಿ ಕ’ಮಾಲ್’ ಜಿಲ್ಲಾ ಕೇಂದ್ರದ ಕನಸಿಗೆ ಪೂರಕ ಜಿ.ಎಲ್. ವನ್ ಮಾಲ್

Posted by Vidyamaana on 2023-03-28 08:23:50 |

Share: | | | | |


ಸ್ವರ್ಣೋದ್ಯಮದ ಬಿಗ್’ಬಾಸಿನಿಂದ ಪುತ್ತೂರಿನಲ್ಲಿ ಕ’ಮಾಲ್’  ಜಿಲ್ಲಾ ಕೇಂದ್ರದ ಕನಸಿಗೆ ಪೂರಕ ಜಿ.ಎಲ್. ವನ್ ಮಾಲ್

ಪುತ್ತೂರು: ಸ್ವರ್ಣೋದ್ಯಮದಲ್ಲಿ ಪುತ್ತೂರಿನ ಮಟ್ಟಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಅಗ್ರಸ್ಥಾನಿ. ಇದೀಗ ಜಿ.ಎಲ್. ಸಮೂಹ ಸಂಸ್ಥೆಗಳಿಂದ ಪುತ್ತೂರಿಗೆ ಮತ್ತೊಂದು ಬಹುದೊಡ್ಡ ಗಿಫ್ಟ್ ಸಿದ್ಧವಾಗಿದೆ.

ಜಿ.ಎಲ್. ವನ್ ಮಾಲ್ ಏಪ್ರಿಲ್ 2ರಂದು ಲೋಕಾರ್ಪಣೆಗೊಳ್ಳಲಿದೆ. ಸುಸಜ್ಜಿತ, ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ಪೂರಕವೆಂಬಂತೆ ತಲೆಎತ್ತಿರುವ ಮಾಲ್, ಪುತ್ತೂರಿನ ಮಟ್ಟಿಗೆ ಹೊಸ ಪರಿಚಯವೇ ಸರಿ. ಈ ಮೂಲಕ ಪುತ್ತೂರಿಗೆ ಮಾಲ್ ಕಲ್ಚರ್ ಪಾದಾರ್ಪಣೆ ಮಾಡಿದೆ.

ಪುತ್ತೂರು ಜಿಲ್ಲೆ ಆಗಬೇಕೆನ್ನುವುದು ಇಂದು ನಿನ್ನೆಯ ಕನಸಲ್ಲ. ಆದರೆ ಜಿಲ್ಲೆ ಆಗಬೇಕಾದರೆ ಏನೆಲ್ಲಾ ಮೂಲಸೌಕರ್ಯ ಇರಬೇಕು, ಅವನ್ನು ಹೇಗೆ ತರಿಸಿಕೊಳ್ಳಬೇಕು ಎನ್ನುವ ಗೋಜಿಗೆ ಯಾರೂ ಹೋಗಿಲ್ಲ. ಇಂತಹ ಪ್ರಯತ್ನದಲ್ಲಿ ಪುತ್ತೂರಿಗೆ ಮೊದಲ ಯಶಸ್ಸೆಂದರೆ ಮಾಲ್ ಸಂಸ್ಕೃತಿ. ಅದನ್ನು ಪರಿಚಯಿಸುವ ಕೀರ್ತಿ ಜಿ.ಎಲ್. ಜ್ಯುವೆಲ್ಲರ್ಸಿನ ಮಾಲಕ ಬಲರಾಮ ಆಚಾರ್ಯ ಅವರಿಗೆ ಸಲ್ಲಬೇಕು.

ಹೌದು! ಜಿಲ್ಲಾ ಕೇಂದ್ರ ಆಗಬೇಕೆಂದರೆ ಅಲ್ಲಿ ಮಾಲ್ ಗಳ ಪಾತ್ರವೂ ಪ್ರಮುಖವಾದದ್ದು. ಅಂದರೆ ವ್ಯಾಪಾರ ಮಳಿಗೆಗಳು. ವ್ಯಾಪಾರ ಮಳಿಗೆಗಳ ಆಧುನಿಕ ರೂಪವೇ ಈ ಮಾಲ್.

ಮಾಲ್ ಕಮಾಲ್:

ಪುತ್ತೂರಿನಲ್ಲಿ ಕಮಾಲ್ ಸೃಷ್ಟಿಸಲಿರುವ ಜಿ.ಎಲ್. 1 ಮಾಲ್ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಪುತ್ತೂರಿಗೆ ಪ್ರಥಮ ಮಾಲ್ ಎಂಬ ಹೆಗ್ಗಳಿಕೆಯ ಜೊತೆಗೆ, ಭಾರತ್ ಸಿನಿಮಾಸ್ ಅನ್ನು ಪುತ್ತೂರಿಗೆ ಪರಿಚಯಿಸಿದ ಹೆಚ್ಚುಗಾರಿಕೆ. ವ್ಯಾಪಾರಕ್ಕೆ ಆಧುನಿಕ ಟಚ್ ಎಂಬ ಹಿರಿಮೆಯೂ ಇದರದ್ದು. 1 ಲಕ್ಷ ಚದರ ಅಡಿ ಈ ಮಾಲ್ ನ ಒಟ್ಟು ವಿಸ್ತೀರ್ಣ. ಪಾರ್ಕಿಂಗ್ ತಲೆನೋವಾಗಿರುವ ಪುತ್ತೂರಿನ ಗ್ರಾಹಕರಿಗೆ ಪಾರ್ಕಿಂಗ್ ತಲೆನೋವನ್ನು ಇದು ತಗ್ಗಿಸಲಿದೆ. ಕಾರಣ, ಇಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯಿದ್ದು, ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಾಲ್ ನ ಬೃಹತ್ ಕಟ್ಟಡದಲ್ಲಿ ಎಲಿವೇಟರ್ ವ್ಯವಸ್ಥೆಯಿದ್ದು, ಪುತ್ತೂರಿನ ಕಟ್ಟಡಗಳ ಪೈಕಿ ಎಲಿವೇಟರ್ ಪರಿಚಯಿಸಿದ್ದೂ ಕೂಡ ಇಲ್ಲೇ ಮೊದಲು. ಲಿಫ್ಟ್ ಹೇಗೂ ಇದೆ. ಕೇಂದ್ರಿಯ ಹವಾನಿಯಂತ್ರಿತ ವ್ಯವಸ್ಥೆ ಮಾಲ್ ನ‌ ಹೆಚ್ಚುಗಾರಿಕೆ. ಆಧುನಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ. ಮ್ಯಾಕ್ಸ್, ಈಸಿ ಬೇನಂತಹ ಮಲ್ಟಿ ಬ್ರಾಂಡೆಡ್ ಕಂಪೆನಿಗಳನ್ನು ಕರೆತಂದ ಹೆಗ್ಗಳಿಕೆಯೂ ಜಿ.ಎಲ್‌ದು.

ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

Posted by Vidyamaana on 2023-11-04 09:06:48 |

Share: | | | | |


ಕುರಿಯ : ಸಿಡಿಲು ಬಡಿದು ಮನೆಗೆ ಹಾನಿ

ಪುತ್ತೂರು : ಪುತ್ತೂರು ಸುತ್ತಮುತ್ತಲ ಗ್ರಾಮ ಗಳಲ್ಲಿ ನ 3 ರಂದು ರಾತ್ರಿ  ಗುಡುಗು, ಮಿಂಚು ಸಹಿತ ಮಳೆ ಸುರಿದಿದ್ದು,ಆರ್ಯಾಪು ಗ್ರಾಮದ ಕುರಿಯ ಅಜಲಾಡಿ ನಿವಾಸಿ ರುಖ್ಯ  ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.


ಸಿಡಿಲ ಆಘಾತಕ್ಕೆ ಮನೆಯ ವಯರಿಂಗ್‌ ಸಂಪೂರ್ಣ ಕೆಟ್ಟುಹೋಗಿದೆ.ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಆರ್ಯಾಪು ಗ್ರಾ.ಪಂ. ಸದಸ್ಯ ಯಾಕುಬ್ ಸಾಹೇಬ್ ಭೇಟಿ ನೀಡಿದರು

ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ

Posted by Vidyamaana on 2024-04-14 08:23:42 |

Share: | | | | |


ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ

ಬೆಂಗಳೂರು: ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ನಡೆದಿದೆ. ಜೈಲಿಗೆ ಹೋದ ದಿನವೇ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಮಂಗಳವಾರ ರಾತ್ರಿ ಇಬ್ಬರು ಮಕ್ಕಳನ್ನು ಸಾಯಿಸಿದ್ದ ಗಂಗಾದೇವಿ, ಬುಧವಾರ ಬೆಳಗ್ಗೆ 112 ಗೆ ಕರೆ ಮಾಡಿ, ತಾನು ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಹೋಗಿ ಗಂಗಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಗಂಗಾದೇವಿಯನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಗುರುವಾರ ರಾತ್ರಿ ಜೈಲಿನಲ್ಲೇ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೆನ್ನೆ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: