ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ಸುದ್ದಿಗಳು News

Posted by vidyamaana on 2024-07-24 17:19:41 |

Share: | | | | |


ಶಾಲಾ ಆವರಣದಲ್ಲಿ ಸಾರ್ವಜನಿಕ ಕೃಷ್ಣಾಷ್ಠಮಿ, ಗಣೇಶೋತ್ಸವ, ಹಬ್ಬಗಳ ಆಚರಣೆಗೆ ನಿರ್ಬಂಧ : ಬಿಜೆಪಿ ಆಡಳಿತಾವಧಿಯಲ್ಲೇ ಆದೇಶ

ರಾಜ್ಯದ ಸರಕಾರಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್‌ ಗಳಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದು ಭಾರೀ ಸಂಚಲನವನ್ನೇ ಹುಟ್ಟುಹಾಕಿದೆ. ಇದರಿಂದ ಸಾರ್ವಜನಿಕ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಣೆಯ ಸಂಘಟಕರು ಗೊಂದಲದಲ್ಲಿದ್ದಾರೆ.

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ಫೆ.7 ರಂದು ಮತ್ತು 2023ರ ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಒಗಳಿಗೆ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಏನಿದೆ?

ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ, ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಜೆಪಿಯಿಂದ ಹೋರಾಟ :

ರಾಜ್ಯಾದ್ಯಂತ ಹಲವು ದಶಕಗಳಿಂದ ಶಾಲೆಯ ಕ್ಯಾಂಪಸ್, ಶಾಲಾ ಕಟ್ಟಡದಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜಕೀಯ ಮಾಡಲು ಹೊರಟಿದ್ದು, ಶಾಲಾ ವಠಾರದಲ್ಲಿ ಧಾರ್ಮಿಕ ಆಚರಣೆ ನಡೆಸದಂತೆ ಆದೇಶ ಹೊರಡಿಸಿದೆ. ಇದು ಖಂಡನೀಯವಾಗಿದ್ದು, ಈ ಹಿಂದೆ ನಿಗದಿತ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸುತ್ತೇವೆ. ಇದನ್ನು ತಡೆಯಲು ಬಂದರೆ ಸುಮ್ಮನಿರಲ್ಲ ಎಂದು ಬಿಜೆಪಿ ತಾಕೀತು ಮಾಡಿದೆ. ಇದೇ ರೀತಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲೇ ಆದೇಶ :

2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು ಆದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಒ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಈ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದು ಕಾವೇರತೊಡಗಿದೆ.

 Share: | | | | |


ಹೆಚ್.ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ; ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಮೂಗಿನಲ್ಲಿ ಕಾಣಿಸಿಕೊಂಡ ರಕ್ತ

Posted by Vidyamaana on 2024-07-28 19:04:51 |

Share: | | | | |


ಹೆಚ್.ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ; ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಮೂಗಿನಲ್ಲಿ ಕಾಣಿಸಿಕೊಂಡ ರಕ್ತ

ಬೆಂಗಳೂರು: ವಾಲ್ಮೀಕಿ, ಮುಡಾ ಹಗರಣ ಖಂಡಿಸಿದ ಪಾದಯಾತ್ರೆ ಬಿಜೆಪಿ ಹಾಗೂ ಜೆಡಿಎಸ್​ನಿಂದ ಪಾದಯಾತ್ರೆಗೆ ತೀರ್ಮಾನ ಮಾಡಲಾಗಿದೆ. ಇದೇ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಅವರ ಮೂಗಿನಲ್ಲಿ ರಕ್ತ ಕಾಣಿಸಿಕೊಂಡಿದೆ.

ಸುದಾನ ಶಾಲೆಯ ಗಗನ್ ರಾಜ್ಯ ಮಟ್ಟಕ್ಕೆ ಆಯ್ಕೆ

Posted by Vidyamaana on 2023-09-26 18:51:36 |

Share: | | | | |


ಸುದಾನ ಶಾಲೆಯ ಗಗನ್ ರಾಜ್ಯ ಮಟ್ಟಕ್ಕೆ ಆಯ್ಕೆ

ಪುತ್ತೂರು: ಸುದಾನ ವಸತಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಗಗನ್ ಎ.ಜಿ. ಅವರು ದ.ಕ. ಜ್ಯೂನಿಯರ್ ಅಥ್ಲೆಟಿಕ್ ಮೀಟ್ನ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ

ದ.ಕ. ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ನಡೆದ ದ.ಕ. ಜ್ಯೂನಿಯರ್ ಅಥ್ಲೆಟಿಕ್ ಮೀಟ್ 2023ರ ಕ್ರೀಡಾಕೂಟ ಸೆ. 8ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು. 

ಗಗನ್ ಎ.ಜಿ. ಅವರು ಗಣೇಶ್ ಎ.ಸಿ ಮತ್ತು ಗೀತಾ ದಂಪತಿ ಪುತ್ರ. ಚಂದ್ರಶೇಖರ್ ಮತ್ತು ಶ್ರೀ ನಿಧಿ ಆರ್ಯಾಪು ಇವರಿಂದ ವಿಶೇಷ ತರಬೇತಿಯನ್ನು ಪಡೆದಿದ್ದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪರಾಜ್ ಮತ್ತು ನವೀನ್‌ ಅವರು ಮಾರ್ಗದರ್ಶನ ಮಾಡಿದ್ದಾರೆ. ಶಾಲಾ ಸಂಚಾಲಕ ರೆ ವಿಜಯ್‌ ಹಾರ್ವಿನ್ ಮತ್ತು ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್‌ ಅಭಿನಂದಿಸಿದ್ದಾರೆ.

ಬೆಂಗಳೂರು ಮಂಗಳೂರು ರೈಲು ಸಂಚಾರ ಸದ್ಯಕ್ಕೆ ಅನುಮಾನ: ರೈಲ್ವೆ ಇಲಾಖೆ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

Posted by Vidyamaana on 2024-07-29 08:30:18 |

Share: | | | | |


ಬೆಂಗಳೂರು ಮಂಗಳೂರು ರೈಲು ಸಂಚಾರ ಸದ್ಯಕ್ಕೆ ಅನುಮಾನ: ರೈಲ್ವೆ ಇಲಾಖೆ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನ ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ರದ್ದಾಗಿದೆ. ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಪುನಃಸ್ಥಾಪನೆ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಆಗಸ್ಟ್ 10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಹಳಿಯ ಕೆಳಭಾಗದಲ್ಲಿ ಮಣ್ಣು ಭಾರಿ ಆಳಕ್ಕೆ ಕುಸಿದಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿವೆ.

ವಿಭಾಗೀಯ ರೈಲ್ವೆ ನಿರ್ವಾಹಕಿ (ಡಿಆರ್​ಎಂ) ಶಿಲ್ಪಿ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಎಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಪುನಃಸ್ಥಾಪನೆ ಕಾರ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಟ್ರ್ಯಾಕ್ ಮರುಸ್ಥಾಪಿಸಲು ಪ್ರಗತಿ ಸಾಧಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದೆ.

ವಿವಾಹಿತೆ ನೇಣಿಗೆ ಶರಣು ಪತಿಯ ಹಿಂಸೆಯೇ ಸಾವಿಗೆ ಕಾರಣವಾಯ್ತೇ

Posted by Vidyamaana on 2023-11-04 15:47:14 |

Share: | | | | |


ವಿವಾಹಿತೆ ನೇಣಿಗೆ ಶರಣು  ಪತಿಯ ಹಿಂಸೆಯೇ ಸಾವಿಗೆ ಕಾರಣವಾಯ್ತೇ

ತ್ರಿಶೂರ್ : ಪೆರುಂಬೈಲಾವ್ ಕಲ್ಲುಂಪುರದಲ್ಲಿ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಲ್ಲುಂಪುರಂ ಮೂಲದ ಝೈನುಲ್ ಆಬಿದ್ ಅವರ ಪತ್ನಿ ಸಬೀನಾ (25) ಮೃತ ಮಹಿಳೆಯಾಗಿದ್ದಾಳೆ.ಸಬೀನಾಳ ಪತಿ ಅಬಿದ್ ಮಲೇಷಿಯಾದಲ್ಲಿದ್ದಾರೆ. ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಹಿಳೆ ತನ್ನ ಆರು ವರ್ಷದ ಮಗನನ್ನು ಬೆಳಗ್ಗೆ ಮದರಸಾಕ್ಕೆ ಕಳುಹಿಸಿ, ಎರಡು ವರ್ಷದ ಮಗನನ್ನು ಮಲಗಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸಬೀನಾ ತನ್ನ ಕೊರಳಿಗೆ ಕುಣಿಕೆ ಹಾಕಿದ ಸೆಲ್ಫಿಯನ್ನು ತನ್ನ ತಾಯಿಗೆ ಕಳುಹಿಸಿದ್ದರು.ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಲ್ಲಿ ಸಂಬಂಧಿಕರು ನೀಡಿದ ಕೌಟುಂಬಿಕ ದೌರ್ಜನ್ಯದ ದೂರಿನ ಮೇರೆಗೆ ಮೃತ ಮಹಿಳೆಯ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಸಾವನ್ನಪ್ಪಿದ ದಿನವೇ ಆಕೆಯ ಸಾವಿನಲ್ಲಿ ನಿಗೂಢವಿದೆ ಎಂದು ಆರೋಪಿಸಿ ಸಂಬಂಧಿಕರು ಬಂದಿದ್ದರು.ಆಕೆಯ ಪತಿ ಜೈನುಲ್ ಅಬಿದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮನೆಯಲ್ಲಿ ಸಬೀನಾ ಮತ್ತು ಅವರ ಆರು ಮತ್ತು ಎರಡು ವರ್ಷದ ಮಕ್ಕಳು ಮಾತ್ರ ಇದ್ದರು. ಸಾಯುವ ಮುನ್ನ ಸಬೀನಾ ತನ್ನ ತಾಯಿಗೆ ಕರೆ ಮಾಡಿ ಪತಿ ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ದೂರಿದ್ದರು. 8 ವರ್ಷಗಳ ಹಿಂದೆ ಸಬೀನಾ ವಿವಾಹವಾಗಿದ್ದರು. ಮದುವೆಯಾದ ಆರಂಭದ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.ಆದರೆ ಆಕೆಯ ಪತಿ ಕಳೆದ ಏಳು ವರ್ಷಗಳಿಂದ ಸಬೀನಾಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.ಸಾಯುವ ದಿನ ಬೆಳಿಗ್ಗೆ ಸಬೀನಾ ತನ್ನ ಮನೆಕೆಲಸಗಳನ್ನು ಮುಗಿಸಿ ತನ್ನ ಹಿರಿಯ ಮಗನನ್ನು ಮದರಸಾಕ್ಕೆ ಕಳುಹಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮೊದಲು ವಿದೇಶದಲ್ಲಿದ್ದ ಆಕೆಯ ಪತಿ ಸಬೀನಾಗೆ ಫೋನ್‌ನಲ್ಲಿ ಕರೆ ಮಾಡಿದ್ದಾರೆ. ಇದಾದ ನಂತರ, ಸಬೀನಾಳ ಪೋಷಕರು ತನ್ನ ಮಗಳು ಸಾಯಲು ನಿರ್ಧರಿಸಿ ತನ್ನ ಪತಿಯ ಫೋನ್ ಕರೆಯನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.ಸಾಯುವ ನಿರ್ಧಾರಕ್ಕೆ ಬಂದ ಸಬೀನಾ ಕೊರಳಿಗೆ ಕುಣಿಕೆ ಬಿಗಿದು ಸೆಲ್ಫಿ ತೆಗೆದು ತಾಯಿಗೆ ಕಳುಹಿಸಿದ್ದಾರೆ. ಫೋಟೋ ನೋಡಿ ಗಾಬರಿಗೊಂಡ ತಾಯಿ ಹಲವು ಬಾರಿ ಕರೆಮಾಡಿದರೂ ಸಬೀನಾ ಫೋನ್ ತೆಗೆಯಲಿಲ್ಲ. ನಂತರ ಮಲಪ್ಪುರಂ ಜಿಲ್ಲೆಯ ಕೊಜಿಕಾರದಲ್ಲಿ ವಾಸಿಸುವ ಆಕೆಯ ತಾಯಿ ಆಟೋ ರಿಕ್ಷಾವನ್ನು ಕರೆದು ಕಲ್ಲುಂಪುರ ತಲುಪಿದರು, ಆದರೆ ಅಷ್ಟರಲ್ಲಿ ಸಬೀನಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಬೀನ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಸಬೀನಾ ತಂದೆ ಕೊಜಿಕ್ಕರ ತಿರುಟುಪುಳೈಕ್ಕಲ್ ಸಲೀಂ ಆಗ್ರಹಿಸಿದ್ದಾರೆ. ಪತಿಯ ಫೋನ್ ಕರೆಯೇ ಮಗಳ ಸಾವಿಗೆ ಕಾರಣವಾಯಿತು ಎನ್ನುತ್ತಾರೆ ಸಲೀಂ. ಕುನ್ನಂಕುಲಂ ಠಾಣಾಧಿಕಾರಿ ಯು.ಕೆ.ಶಹಜಹಾನ್ ನೇತೃತ್ವದ ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ

ಮಂಗಳೂರು: ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ಸುವಿಧಾ ತಂತ್ರಾಂಶ ವ್ಯವಸ್ಥೆ

Posted by Vidyamaana on 2023-04-09 04:24:34 |

Share: | | | | |


ಮಂಗಳೂರು: ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ಸುವಿಧಾ ತಂತ್ರಾಂಶ ವ್ಯವಸ್ಥೆ

ಮಂಗಳೂರು :  ರಾಜಕೀಯ ಪಕ್ಷದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಸುವಿಧಾ ಆನ್ ಲೈನ್ ತಂತ್ರಾಂಶವನ್ನು ಜಾರಿಗೆ ತಂದಿದೆ.

ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಅಗತ್ಯವಿರುವ ಸಭೆ, ಸಮಾರಂಭ, ಜಾಥಾ, ವಾಹನ ಇತ್ಯಾದಿಗಳ ಅನುಮತಿಗಾಗಿ ಸುವಿಧಾ ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಇದು ಏಕ ಗವಾಕ್ಷಿ ವ್ಯವಸ್ಥೆಯಾಗಿದ್ದು ಸಲ್ಲಿಕೆಯಾದ ಅರ್ಜಿಗಳನ್ನು ಸಂಬಂಧಿಸಿದ ಚುಣಾವಣಾ ಅಧಿಕಾರಿಗಳು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗಳಿಂದ ಒಪ್ಪಿಗೆ ಪಡೆದು ಅನುಮತಿ ಪತ್ರವನ್ನು ನೀಡುತ್ತಾರೆ. ಅರ್ಜಿದಾರರು ತಮ್ಮ ಅನುಮತಿ ಪತ್ರಗಳನ್ನು ಆನ್‍ಲೈನ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಅರ್ಜಿ ಸ್ವೀಕರಿಸಿ ತ್ವರಿತವಾಗಿ ವಿಲೇ ಮಾಡಲು ಎಲ್ಲಾ ಮತ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ಸುವಿಧಾ ಏಕ ಗವಾಕ್ಷಿ ಕೌಂಟರ್ ಗಳನ್ನು ತೆರೆಯಲಾಗಿದೆ.

ಇನ್ನು ಜಿಲ್ಲಾ ವ್ಯಾಪ್ತಿಯ ಅನುಮತಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಚೋದನಾತ್ಮಕ ಹೇಳಿಕೆ : ವಿಹಿಪ ಸದಸ್ಯ ಶರಣ ಪಂಪ್ ವೆಲ್ ವಿರುದ್ಧ ಸುಮೊಟೊ ಕೇಸ್ ದಾಖಲು

Posted by Vidyamaana on 2023-08-04 04:56:01 |

Share: | | | | |


ಪ್ರಚೋದನಾತ್ಮಕ ಹೇಳಿಕೆ : ವಿಹಿಪ ಸದಸ್ಯ ಶರಣ ಪಂಪ್ ವೆಲ್ ವಿರುದ್ಧ ಸುಮೊಟೊ ಕೇಸ್ ದಾಖಲು

ಉಡುಪಿ : ಉಡುಪಿ ಕಾಲೇಜ್ ಒಂದರಲ್ಲಿ ಹಿಂದೂ ವಿದ್ಯಾರ್ಥಿನಿಯರ ಬಿಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಶ್ವ ಎಂದು ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಸದಸ್ಯ ಶರಣ್ ಪಂಪ್ ವೆಲ್ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸೊಮೊಟೋ ಕೇಸ್ ದಾಖಲಾಗಿದೆ.ವಿಶ್ವ ಹಿಂದೂ ಪರಿಷತ್ ಸದಸ್ಯ ಶರಣ್ ಪಂಪ್ ವೆಲ್ ನಿನ್ನೆ ನಡೆದ ಪ್ರತಿಭಟನೆ ವೇಳೆಯಲ್ಲಿ ಹಿಂದೂ ಮಹಿಳೆಯರು ಶಸ್ತ್ರಾಸ್ತ್ರ ತಲ್ವಾರ್ ಹಿಡಿಯುವಂತೆ ಕರೆ ನೀಡಿದ್ದರು. ಎಸ್.ಐ ಪುನೀತ್ ಅವರು ಶರಣ್ ಪಂಪ್ ವೆಲ್ ಅವರ ಹೇಳಿಕೆ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಾಗಿದೆ.


ಇದರ ಜೊತೆಗೆ ಪ್ರತಿಭಟನೆ ವೇಳೆ ಜೊತೆಗಿದ್ದ ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ವಿರುದ್ಧ ಕೂಡ ಸುಮೊಟೊ ಪ್ರಕರಣ ದಾಖಲಾಗಿದೆ.

Recent News


Leave a Comment: