ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪುತ್ತೂರು :ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

Posted by Vidyamaana on 2023-10-18 16:55:00 |

Share: | | | | |


ಪುತ್ತೂರು :ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

ಪುತ್ತೂರು: ಪ್ರಸ್ತುತ ರಾಜ್ಯ ಸರಕಾರ ಸುಲಿಗೆಕೋರ ಸರಕಾರವಾಗಿದ್ದು, ಬಿಜೆಪಿ ನಿರಂತರ ಹೋರಾಟ, ಜನಾಂದೋಲನದ ಮೂಲಕ ಜನರನ್ನು ಎಬ್ಬಿಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಮಂಗಳವಾರ ಕಾಂಗ್ರೆಸ್ ಎಟಿಎಂ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಕರ್ನಾಟಕ ಸರಕಾರದ ಸೂಟ್ ಕೇಸ್ ಭರಪೂರ ಭರ್ತಿಯಾಗಿದೆ ಎಂದು ಲೇವಡಿ ಮಾಡಿದ ಅವರು, ರಾಜ್ಯಾದ್ಯಂತ ಜನಸಾಮಾನ್ಯರು ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಈ ಮೂಲಕ ಮುಂದಿನ ನಾಲ್ಕು ವರ್ಷಗಳ ಕಾಂಗ್ರೆಸ್ ಆಡಳಿತ ಹೇಗಿರಬಹುದು ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಸರಕಾರದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ ಮೈಸೂರು ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದ ಕಲಾವಿದನಿಂದ 60 ಶೇ. ಕಮಿಷನ್ ಪಡೆಯುವ ಮಟ್ಟಿಗೆ ಬಂದಿದೆ. ಬಿಜೆಪಿ ಸರಕಾರದ ಸಂದರ್ಭ 40 ಶೇ. ಕಮಿಷನ್ ಸರಕಾರ ಎಂದು ಆರೋಪ ಮಾಡಿರುವ ಪ್ರಸ್ತುತ ಸರಕಾರ ಸೋನಿಯಾ ಗಾಂಧಿಗೆ ಕಪ್ಪ ಕಾಣಿಕೆ ನೀಡುವ ಸಲುವಾಗಿ 40 ಶೇ. ಇದ್ದದ್ದು 80 ಶೇ. ಕಮಿಷನ್ ಆಗಿದೆ. ಇದಕ್ಕೆ ಕಂಟ್ರಾಕ್ಟ್ ದಾರರ ಮನೆಯಲ್ಲಿ ಸಿಕ್ಕಿರುವ ಕೋಟ್ಯಾಂತರ ರೂಪಾಯಿಗಳು ಸಾಕ್ಷಿ ಎಂದು ತಿಳಿಸಿದರು.

ಇಂದು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಪರಿಣಾಮ ರೈತರು ನೆಮ್ಮದಿಯಿಂದ ಇಲ್ಲದಂತಾಗಿದೆ. ತಮಿಳುನಾಡಿಗೆ ಕದ್ದುಮುಚ್ಚಿನ ನೀರು ಬಿಡುವ ಹುನ್ನಾರದ ಮೂಲಕ ತಮಿಳುನಾಡಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೈತರು, ರೈತರ ಮಕ್ಕಳಿಗಾಗಿ ಇರುವ  ಕೇಂದ್ರ ಸರಕಾರದ ಯೋಜನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸರಕಾರದ ಬಳಿ ದುಡ್ಡಿಲ್ಲದಿದ್ದರೆ ನಮ್ಮಲ್ಲಿ ತಿಳಿಸಲಿ, ಭಿಕ್ಷೆ ಬೇಡಿಯಾದರೂ ನಾವು ಹಣ ನೀಡುತ್ತೇವೆ ಎಂದು ಖಾರವಾಗಿ ಹೇಳಿದ ಅವರು, ಜನರಿಗೆ ಮಂಕುಬೂದಿ ಎರಚಿ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನೂ ಮಾಡುತ್ತಿದೆ. ತಕ್ಷಣ ರಾಜ್ಯ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ, ಕೇವಲ ಟೇಪು ಕತ್ತರಿಸುವುದು ಮತ್ತು ಭಾಷಣಕ್ಕೆ ಮಾತ್ರ ಕಾಂಗ್ರೆಸ್ ನ ಪ್ರಮುಖರು ಸೀಮಿತವಾಗಿದ್ದಾರೆ. ಮತ್ತೆ ಅನುದಾನ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ ಅವರು, ಸರಕಾರದ ದುಷ್ಟ ಬುದ್ಧಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಬಿಜೆಪಿಯಿಂದ ಆಗಲಿ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ಅಪ್ಪಯ್ಯ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ, ಆರ್‍.ಸಿ.ನಾರಾಯಣ್, ಹರಿಪ್ರಸಾದ್ ಯಾದವ್, ನಿತೇಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್‍. ಶೆಟ್ಟಿ,.ವಿದ್ಯಾ ಆರ್.ಗೌರಿ, ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಸಲ್ಲಿಸಿದರು.

ಲಡಾಖ್ ಗೆ ಬೈಕ್ ಸವಾರಿ ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Posted by Vidyamaana on 2023-08-19 12:39:01 |

Share: | | | | |


ಲಡಾಖ್ ಗೆ ಬೈಕ್ ಸವಾರಿ ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಆಗಸ್ಟ್ 20 ರಂದು ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಚರಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಲಡಾಖ್ ನ ಪ್ಯಾಂಗಾಂಗ್ ಸರೋವರಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದು, ಜಗತ್ತಿನ ಅತ್ಯಂತ ಸುಂದರ ಸ್ಥಳಗಳಲ್ಲೊಂದು ಎಂದು ನನ್ನ ತಂದೆ ಹೇಳುತ್ತಿದ್ದ ಪಂಗೊಂಗ್‌ ಲೇಕ್‌ನತ್ತ ನಾವು ಸಾಗುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.


ರಾಹುಲ್ ಗಾಂಧಿಯವರು KTM 390 ಅಡ್ವೆಂಚರ್ ನಲ್ಲಿ ಸವಾರಿ ಮಾಡುತ್ತಿದ್ದು, ಇತರ ಸವಾರರು ಅವರನ್ನು ಅನುಸರಿಸುತ್ತಿದ್ದಾರೆ. ಸಂಪೂರ್ಣ ಬೈಕಿಂಗ್ ಗೇರ್ ನಲ್ಲಿ ಹೆಲ್ಮೆಟ್, ಕೈಗವಸುಗಳು, ಸವಾರಿ ಬೂಟುಗಳು ಮತ್ತು ಜಾಕೆಟ್ ನೊಂದಿಗೆ ಲಡಾಖ್ ನ ಸುಂದರವಾದ ಪರ್ವತಗಳ ಮೂಲಕ ತಮ್ಮ ಸವಾರಿಯನ್ನು ಆನಂದಿಸುತ್ತಾರೆ.

ರಾಹುಲ್ ಗಾಂಧಿ ಪ್ರಸ್ತುತ ಲಡಾಖ್ ಪ್ರವಾಸದಲ್ಲಿದ್ದು, ಇದು ಆಗಸ್ಟ್ 25 ರವರೆಗೆ ಅಲ್ಲಿ ಸಮಯ ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ

ಉಳಾಯಿಬೆಟ್ಟು: PWD ಗುತ್ತಿಗೆದಾರ ಸೇರಿ ಮನೆಯ ಸದಸ್ಯರನ್ನು ಕಟ್ಟಿ ಹಾಕಿ, ನಗ ನಗದು ದರೋಡೆ

Posted by Vidyamaana on 2024-06-22 14:26:00 |

Share: | | | | |


ಉಳಾಯಿಬೆಟ್ಟು: PWD ಗುತ್ತಿಗೆದಾರ ಸೇರಿ ಮನೆಯ ಸದಸ್ಯರನ್ನು ಕಟ್ಟಿ ಹಾಕಿ, ನಗ ನಗದು ದರೋಡೆ

ಮಂಗಳೂರು : ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆಗೆ ನುಗ್ಗಿ ಚಾಕು ತೋರಿಸಿ ಮನೆಮಂದಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗ ನಗದನ್ನು ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಉಳಾಯಿಬೆಟ್ಟಿ ನಲ್ಲಿರುವ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಮನೆಗೆ ಸುಮಾರು ಏಳು ಎಂಟು ಮಂದಿ ದರೋಡೆಕೋರರ ತಂಡ ಶುಕ್ರವಾರ ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿ ಮನೆ ಮಂದಿಗೆ ಚಾಕು ತೋರಿಸಿ ಬೆದರಿಸಿ ಬಳಿಕ ಮನೆಮಂದಿಯನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾಗಿದ್ದಾರೆ,

ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

Posted by Vidyamaana on 2024-07-01 12:44:53 |

Share: | | | | |


ಎಸ್ ಪಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

ಹಾಸನ: ಪೊಲೀಸ್‌ ಕಾನ್‌ಸ್ಟೇಬಲ್‌ (Police Constable) ಒಬ್ಬ ತನ್ನ ಪತ್ನಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ (SP) ಕಚೇರಿ ಆವರಣದಲ್ಲೇ ಇರಿದು (Stabbed) ಕೊಂದುಹಾಕಿದ (Murder Case) ಘಟನೆ ಹಾಸನದಲ್ಲಿ ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕಾನ್‌ಸ್ಟೇಬಲ್‌, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

ಅಡ್ಡಹೊಳೆ ; ಹೆದ್ದಾರಿ ಬದಿ ಅಂಗಡಿಯ ಮಹಿಳೆಯ ಸರ ಕಿತ್ತು ಪರಾರಿ ಯತ್ನ, ಬೆಂಗಳೂರು ಮೂಲದ ಯುವಕರಿಬ್ಬರ ಸೆರೆ

Posted by Vidyamaana on 2024-07-17 08:57:05 |

Share: | | | | |


ಅಡ್ಡಹೊಳೆ ; ಹೆದ್ದಾರಿ ಬದಿ ಅಂಗಡಿಯ ಮಹಿಳೆಯ ಸರ ಕಿತ್ತು ಪರಾರಿ ಯತ್ನ, ಬೆಂಗಳೂರು ಮೂಲದ ಯುವಕರಿಬ್ಬರ ಸೆರೆ

ಪುತ್ತೂರು: ಹೆದ್ದಾರಿ ಬದಿಯ ಅಂಗಡಿಯಲ್ಲಿದ್ದ ವೃದ್ದೆಯ ಚಿನ್ನದ ಸರ ಸೆಳೆದು ಪರಾರಿಯಾಗಲು ಯತ್ನಿಸಿದ ಬೆಂಗಳೂರು ಮೂಲದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿ ಬಳಿಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ. 

ನೆಲ್ಯಾಡಿ ಬಳಿಯ ಅಡ್ಡಹೊಳೆಯ ಹೆದ್ದಾರಿ ಬದಿಯ ಡ್ರೈ ಫ್ರುಟ್ಸ್ ಅಂಗಡಿಯಲ್ಲಿ ಒಂಟಿಯಾಗಿದ್ದ ವೃದ್ಧ ಮಹಿಳೆ ತ್ರೇಸ್ಯಮ್ಮ (60) ಅವರ ಕುತ್ತಿಗೆಯಲ್ಲಿದ್ದ ಸರವನ್ನು ಸೆಳೆದು ಯುವಕರು ಪರಾರಿಯಾಗಲು ಯತ್ನಿಸಿದ್ದರು.‌ ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಸೇರಿದ್ದು ಯುವಕರನ್ನು ಹಿಡಿದು ಥಳಿಸಿದ್ದಾರೆ.‌

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

Posted by Vidyamaana on 2023-09-19 15:27:03 |

Share: | | | | |


ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

ಚೆನ್ನೈ: ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ. ಚೆನ್ನೈನ 24 ವರ್ಷದ ರೌಡಿ ಸತ್ಯ (Rowdy Satya) ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್‌ನಲ್ಲಿ (Egmore) ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್‌ (Mizoram model) ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂದಿತು. ಈ ವಿಚಾರ ಬೆನ್ನತಿದ್ದ ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್‌ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದು, ಅಲ್ಲೊಂದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. ಅಲ್ಲದೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ (Chennai) ಬೇಸಿನ್‌ ಬ್ರಿಡ್ಜ್‌ನ (Chennai Basin Bridge) ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್‌ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ (Sivaraj) ಕೊಲೆಯಲ್ಲಿ ಭಾಗಿಯಾಗಿದ್ದ ವಕೀಲ ಅಖಿಲನ್ ಹಾಗೂ ನಾಯಿ ರಮೇಶ್‌ನನ್ನು ಈಗಾಗಲೇ ಮುಗಿಸಿದ್ದ ಈ ತಂಡದ ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾಯುತ್ತಿತ್ತು. ಆತ ಬಿಡುಗಡೆಯಾಗುವುದು ತಿಳಿಯುತ್ತಿದ್ದಂತೆ ಈ ಶಿವರಾಜ್‌ ತಂಡ ಆತನನ್ನು ಮುಗಿಸಲು ಪ್ರೇಮದ ಜಾಲವನ್ನು ಹೆಣೆದಿತ್ತು. ರೌಡಿಗಳು ಹೆಣೆದ ಪ್ರೇಮದ ಜಾಲಕ್ಕೆ ಪ್ರೇಯಸಿಯಾದ ಜೂಲಿ


ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ವಿರೋಧಿ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು. ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು..ಕಳೆದ ಸೆಪ್ಟೆಂಬರ್ 8 ರಂದು ಸತ್ಯನಿಂದ ಕೊಲೆಯಾಗಿದ್ದ ಶಿವರಾಜ್‌ ಹತ್ಯೆಯಾದ ದಿನವಾಗಿದ್ದು, ಅಂದೇ ಶಿವರಾಜ್ ಆಪ್ತರು ಸತ್ಯನ ಹತ್ಯೆಗೆ ಜಾಲ ಹೆಣೆದಿದ್ದರು. ಅಂದು ಜ್ಯೂಲಿ ಸತ್ಯಗೆ ಕರೆ ಮಾಡಿ ಮಾತನಾಡಿದ್ದು, ಇಗ್ಮೋರೆಗೆ ಬರುವಂತೆ ಮನವಿ ಮಾಡಿದ್ದಳು. ಆದರೆ ಸೆಪ್ಟೆಂಬರ್‌ 8 ರಂದು ಬಾರದ ಆತ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರೆಗೆ ಆಗಮಿಸಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿ ಅದಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ.

Recent News


Leave a Comment: