ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಗ್ಯಾಸ್ ಸಿಲಿಂಡರ್ ಲಾರಿ ಮತ್ತು ಎಳನೀರು ಟೆಂಪೋ ಮುಖಾಮುಖಿ ಡಿಕ್ಕಿ

Posted by Vidyamaana on 2023-10-16 20:33:52 |

Share: | | | | |


ಗ್ಯಾಸ್ ಸಿಲಿಂಡರ್ ಲಾರಿ ಮತ್ತು ಎಳನೀರು ಟೆಂಪೋ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು: ಗ್ಯಾಸ್ ಸಿಲಿಂಡರ್ ಲಾರಿ ಮತ್ತು ಎಳನೀರು ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಎಳನೀರು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾದ ಘಟನೆ ಮೂಡಿಗೆರೆ ಬಳಿಯ ಕೊಟ್ಟಿಗೆಹಾರದಲ್ಲಿ ನಡೆದಿದ್ದು ಚಾರ್ಮಾಡಿ ಘಾಟಿಯಲ್ಲಿ 5 ಕಿ.ಮೀ. ಉದ್ದಕ್ಕೆ ಟ್ರಾಫಿಕ್ ಜಾಮ್ ಆಗಿದೆ.‌


ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಸೋಮವಾರ ಸಂಜೆ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಎಳನೀರು ತುಂಬಿದ್ದ 407 ವಾಹನ ಪಲ್ಟಿಯಾಗಿದ್ದು ರಸ್ತೆಯ ತುಂಬೆಲ್ಲಾ ಎಳನೀರು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಿಂದ ಕೊಟ್ಟಿಗೆಹಾರ- ಚಾರ್ಮಾಡಿ ಘಾಟ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ನೂರಾರು ವಾಹನಗಳು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಅಪಘಾತದಲ್ಲಿ ಲಾರಿ ಮತ್ತು 407 ಎರಡೂ ವಾಹನದ ಇಬ್ಬರು ಚಾಲಕರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯಿಂದ ಕಾಲು ಸಿಲುಕಿಕೊಂಡಿದ್ದ ಲಾರಿ ಚಾಲಕನನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಣಕಲ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಳೆಯ ನಡುವೆ ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ

ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

Posted by Vidyamaana on 2023-05-24 12:47:41 |

Share: | | | | |


ರಾಜ್ಯ ರಾಜಕಾರಣದಲ್ಲಿ ವಸಂತ್ ಬಂಗೇರರ ಹೆಸರು ಮತ್ತೆ ಮುನ್ನೆಲೆಗೆ

ಬೆಳ್ತಂಗಡಿ: ಖಡಕ್ ರಾಜಕಾರಣಿ ಎಂದೇ ಖ್ಯಾತಿ ಪಡೆದ ಬೆಳ್ತಂಗಡಿ ಮಾಜಿ ಶಾಸಕ ವಸಂತ್ ಬಂಗೇರರನ್ನು ರಾಜಕೀಯದಲ್ಲಿ ಸಕ್ರೀಯವಾಗಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಖಡಕ್ ವ್ಯಕ್ತಿತ್ವದಿಂದ ಜನಾನುರಾಗಿಯಾಗಿದ್ದ ವಸಂತ್ ಬಂಗೇರರನ್ನು ಎಂ.ಎಲ್.ಸಿ. ಮಾಡಿ, ಸಚಿವರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸಿಎಂ ಇಂಗಿತ. ಈ ಮೂಲಕ ಕರಾವಳಿ ರಾಜಕೀಯವನ್ನು ಮತ್ತೆ ಸಕ್ರೀಯಗೊಳಿಸುವುದು ಚಾಣಕ್ಯ ಸಿದ್ದರಾಮಯ್ಯರ ತಂತ್ರ ಎಂದು ಹೇಳಲಾಗಿದೆ.

BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

Posted by Vidyamaana on 2024-05-01 04:35:20 |

Share: | | | | |


BREAKING: ಈಶ್ವರಪ್ಪನ ಪುತ್ರನಿಗೂ ಶುರುವಾಯ್ತು ಅಶ್ಲೀಲ ಸಿಡಿ ಭಯ!:ಅಶ್ಲೀಲ ವಿಡಿಯೊ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿವೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೂ ಆದೇಶಿಸಿದೆ. ಈ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.ಹೀಗಾಗಿ ಅವರು ನಿರ್ಬಂಧಕಾಜ್ಞೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಬೆನ್ನಲ್ಲೇ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್ ಅವರಿಗೂ ಅಶ್ಲೀಲ ಸಿಡಿ ಭೀತಿ ಎದುರಾಗಿದೆ.

ಲಕ್ಷಾಂತರ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿ ಕಳವು ಪ್ರಕರಣ - ಅಸ್ಸಾಂ ಮೂಲದ ಆಲಂ ಪೊಲೀಸ್ ವಶಕ್ಕೆ

Posted by Vidyamaana on 2023-12-16 07:03:22 |

Share: | | | | |


ಲಕ್ಷಾಂತರ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿ ಕಳವು ಪ್ರಕರಣ - ಅಸ್ಸಾಂ ಮೂಲದ  ಆಲಂ ಪೊಲೀಸ್ ವಶಕ್ಕೆ

ಬಂಟ್ವಾಳ : ಕಳೆದ ನವೆಂಬರ್ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಸಫಲರಾಗಿದ್ದಾರೆ.


ಬಂಧಿತ ಆರೋಪಿಯನ್ನು ಅಸ್ಸಾಂ ಮೂಲದ ಮುಹಮ್ಮದ್ ಶೈರೂಫ್ ಆಲಂ ಎಂದು ಹೆಸರಿಸಲಾಗಿದೆ. ಈತ ಪುದು ಗ್ರಾಮದ ಅಮೆಮಾರ್ ನಿವಾಸಿ ಸಿವಿಲ್ ಇಂಜಿನಿಯರ್ ಹಮ್ಮಬ್ಬ ಮರ್ಝೂಕ್ ಅವರಿಗೆ ಸೇರಿದ ಸುಮಾರು 9.23 ಲಕ್ಷ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸಾಮಾಗ್ರಿಗಳಾದ ಕಬ್ಬಿಣದ ಶೀಟ್, ಕಬ್ಬಿಣದ ಜಾಕ್ ಹಾಗೂ ಸ್ಕಫೋಲ್ಡಿಂಗ್ ಸೇರಿದಂತೆ ಒಟ್ಟು 9,23,200/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಮನೆಯ ಶೆಡ್ಡಿನಿಂದ ಕಳವುಗೈದು ಪರಾರಿಯಾಗಿದ್ದ

ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-02-19 12:22:54 |

Share: | | | | |


ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ನಿಧನ

ಕುಂಬಳೆ: ಬಸ್‌ ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.


ಕಾಸರಗೋಡು-ಧರ್ಮತ್ತಡ್ಕ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್‌‌ನ ಚಾಲಕ ಕುಂಟಗರಡ್ಕದ ಅಬ್ದುಲ್‌ ರಹಿಮಾನ್‌ (42) ಮೃತ ವ್ಯಕ್ತಿ. ಧರ್ಮತ್ತಡ್ಕದಿಂದ ಬಸ್ ಕಾಸರಗೋಡಿಗೆ ತೆರಳುತ್ತಿದ್ದು, ಕುಂಟಗರಡ್ಕಕ್ಕೆ ತಲಪಿದಾಗ ಅಬ್ದುಲ್ ರಹಿಮಾನ್‌ಗೆ ಎದೆನೋವು ಕಾಣಿಸಿಕೊಂಡಿದೆ.


ಅಬ್ದುಲ್ ರಹಿಮಾನ್ ತಕ್ಷಣ ಬಸ್‌‌ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಆ ಬಳಿಕ ಅವರು ಕುಸಿದು ಬಿದ್ದಿದ್ದಾರೆ.


ಅವರನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ..ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಕಬಕ ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರೌಢಶಾಲಾ ಮಟ್ಟದ ಫುಟ್ಬಾಲ್ ಪಂದ್ಯ

Posted by Vidyamaana on 2023-09-12 11:08:54 |

Share: | | | | |


ಕಬಕ ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರೌಢಶಾಲಾ ಮಟ್ಟದ ಫುಟ್ಬಾಲ್ ಪಂದ್ಯ

ಪುತ್ತೂರು: ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಸೆ. 9ರಂದು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ ಅವರ ನೇತೃತ್ವದಲ್ಲಿ ನಡೆಯಿತು. 

ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಪಿ. ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. 

ಕಬಕ ಗ್ರಾಮ  ಪಂಚಾಯತ್ ಉಪಾಧ್ಯಕ್ಷ, ಸದಸ್ಯರು, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ., ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ ಹಾಗೂ ಗಣ್ಯರು  ಉಪಸ್ಥಿತರಿದ್ದರು. 

ಶಾಲಾ ಮುಖ್ಯಗುರು ಸುರೇಖಾ ಸ್ವಾಗತಿಸಿ, ಸುಮಿತ್ರಾ ವಂದಿಸಿದರು. ಶಿಕ್ಷಕಿ ಶಾಂತ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಹಕರಿಸಿದರು.

Recent News


Leave a Comment: