ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಸುದ್ದಿಗಳು News

Posted by vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ದ. ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 09/07/224 ರಂದು ರಜೆಯನ್ನು ಘೋಷಿಸಲಾಗಿದೆ.

 Share: | | | | |


ಪುತ್ತೂರು: ಸಂಟ್ಯಾರು ಬಳಿ ಭೀಕರ ಅಪಘಾತ:ಸುಳ್ಯ ಮೂಲದ ನಾಗರಾಜ್ ಸ್ಥಳದಲ್ಲೇ ಮೃತ್ಯು

Posted by Vidyamaana on 2023-06-28 09:38:12 |

Share: | | | | |


ಪುತ್ತೂರು: ಸಂಟ್ಯಾರು ಬಳಿ ಭೀಕರ ಅಪಘಾತ:ಸುಳ್ಯ ಮೂಲದ ನಾಗರಾಜ್ ಸ್ಥಳದಲ್ಲೇ ಮೃತ್ಯು

ಪುತ್ತೂರು: ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಕಲ್ಲರ್ಪೆಯಲ್ಲಿ ಜೂ 28 ರಂದು ನಡೆದಿದೆ.

ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ.ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ ಪ್ರಚಾರ ಸಭೆಗಳು

Posted by Vidyamaana on 2023-04-26 03:18:31 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ ಪ್ರಚಾರ ಸಭೆಗಳು

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಲಾಗುತ್ತಿದೆ.

ಅಶೋಕ್ ಕುಮಾರ್ ರೈ ಅವರ ಇಂದಿನ ಪ್ರಚಾರ ಸಭೆಗಳು ಹೀಗಿವೆ -

ಬೆಳಿಗ್ಗೆ 9.30ಕ್ಕೆ ಅರಿಯಡ್ಕ, 10.30ಕ್ಕೆ ಮಾಡ್ನೂರು, 11.30ಕ್ಕೆ ಕೊಳ್ತಿಗೆ, ಮಧ್ಯಾಹ್ನ 2.30ಕ್ಕೆ ನೆಟ್ಟಣಿಗೆ ಮುಡ್ನೂರು, 3.30ಕ್ಕೆ ಪಡುವನ್ನೂರು, 4.30ಕ್ಕೆ ಬಡಗನ್ನೂರು, ಸಂಜೆ 6ಕ್ಕೆ ಬೆಟ್ಟಂಪಾಡಿ, 7 ಗಂಟೆಗೆ ನಗರದಲ್ಲಿ ಪ್ರಚಾರ ಸಭೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಉಪ್ಪಳ ಗೇಟ್ | ಖಾಸಗಿ ಬಸ್ ಗೆ ಕಂಟೈನರ್ ಡಿಕ್ಕಿ: ನಾಲ್ವರಿಗೆ ಗಾಯ

Posted by Vidyamaana on 2024-05-13 15:11:55 |

Share: | | | | |


ಉಪ್ಪಳ ಗೇಟ್ | ಖಾಸಗಿ ಬಸ್ ಗೆ ಕಂಟೈನರ್ ಡಿಕ್ಕಿ: ನಾಲ್ವರಿಗೆ ಗಾಯ

ಉಪ್ಪಳ: ಖಾಸಗಿ ಬಸ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಗೇಟ್ ಬಳಿ ನಡೆದಿದೆ.

ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿ ನಿಲ್ಲಿಸಿದ್ದ ಬಸ್ಸನ್ನು ಹಿಂದಿಕ್ಕುವ ರಭಸದಲ್ಲಿ ಕಂಟೈನರ್ ಲಾರಿಯೊಂದು ಮುಂದೆ ಬರುತ್ತಿದ್ದ ಇನ್ನೊಂದು ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ತಲಪಾಡಿ ಯಿಂದ ಕಾಸರಗೋಡಿಗೆ ಹಾಗೂ ಲಾರಿ ಮಂಗಳೂರು ಕಡೆಗೆ ತೆರಳುತ್ತಿತ್ತು.

ಕಾಂಗ್ರೆಸ್‌ನ ಗ್ಯಾರಂಟಿ ಸೂತ್ರ ದೇಶವನ್ನು ದಿವಾಳಿ ಮಾಡುತ್ತದೆ: ಮೋದಿ ವಾಗ್ದಾಳಿ

Posted by Vidyamaana on 2023-05-31 15:50:19 |

Share: | | | | |


ಕಾಂಗ್ರೆಸ್‌ನ ಗ್ಯಾರಂಟಿ ಸೂತ್ರ ದೇಶವನ್ನು ದಿವಾಳಿ ಮಾಡುತ್ತದೆ: ಮೋದಿ ವಾಗ್ದಾಳಿ

ನವದೆಹಲಿ :ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್‌ ಅನುಸರಿಸುತ್ತಿರುವ ಗ್ಯಾರಂಟಿ ಸೂತ್ರ ದೇಶವನ್ನು ದಿವಾಳಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸ್ಥಾನದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ವಿಚಾರ ಉಲ್ಲೇಖಿಸಿದರು.ಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಅನುಸರಿಸುತ್ತಿದೆ. ಆದರೆ, ಅವರು (ಕಾಂಗ್ರೆಸ್ಸಿಗರು) ಕೊಟ್ಟ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಐವತ್ತು ವರ್ಷಗಳ ಹಿಂದೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಇದು ಬಡವರಿಗೆ ಕಾಂಗ್ರೆಸ್ಸಿಗರು ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದ್ದಾರೆ. 

ಬಡವರನ್ನು ದಾರಿ ತಪ್ಪಿಸುವುದು, ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಸಹ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜಸ್ಥಾನಕ್ಕೆ ಏನು ಸಿಕ್ಕಿದೆ? ಮುಖ್ಯಮಂತ್ರಿ, ಸಚಿವರು, ಶಾಸಕರು ತಮ್ಮ ತಮ್ಮಲ್ಲೇ ಜಗಳವಾಡುತ್ತಾರೆ ಎಂದು ಗುಡುಗಿದ್ದಾರೆದೇಶದಲ್ಲಿ 2014ಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು. ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಆದರೆ, ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ನಡೆಸುತ್ತಿತ್ತು ಎಂದು ಮೋದಿ ದೂರಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರವು ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ ಎಂದು ಅವರು ಹೇಳಿದ್ದಾರೆ. 

ರಾಜಸ್ಥಾನ ವಿಧಾನಸಭೆಗೆ ಮುಂದಿನ ಐದು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈ ವರ್ಷ ಪ್ರಧಾನಿ ಮೋದಿ ಐದು ಭಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

Posted by Vidyamaana on 2023-12-19 21:10:16 |

Share: | | | | |


ಕೃಷಿಕರ ಖಾತೆಗೆ ಬಂತು ಲಕ್ಷ ಲಕ್ಷ ಹಣ; ಶಾಸಕ ಅಶೋಕ್ ರೈ ಹೋರಾಟದ ಫಲ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಂಡ ಕೃಷಿಕರಿಗೆ ಮಂಗಳವಾರ ಶುಭ ದಿನ ಯಾಕೆಂದರೆ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದ್ದು ಕೃಷಿಕರ ಮೊಗದಲ್ಲಿ ಸಂತಸದ ಕಳೆ ತುಂಬಿದೆ. ಈ ಸಂತಸಕ್ಕೆ ಕಾರಣರಾದವರು ಪುತ್ತೂರು ಶಾಸಕರು. ಬೆಳೆ ವಿಮೆ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ನೀಡಲಾಗಿದೆ ಎಂದು ಆರೋಪದ ಮಧ್ಯೆ ಕಳೆದ ಅಧಿವೇಶನದಲ್ಲಿ ಶಾಸಕರು ಈ ವಿಚಾರದಲ್ಲಿ ಸರಕಾರದ ಗಮನ ಸೆಳೆದಿದ್ದರು. ವಾರದೊಳಗೆ ವಿಮೆ ಪಾವತಿಯಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು. ಮಂಗಳವಾರದಂದು ವಿಮೆ ಮಾಡಿಸಿಕೊಂಡ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದೆ.


ಹವಾಮಾನ ಆಧಾರಿತ ಮತ್ತು ಬೆಳೆ ವಿಮೆ ಈ ಎರಡೂ ವಿಮೆಯನ್ನು ಕೃಷಿಕರು ಮಾಡಿಸಿಕೊಂಡಿದ್ದರು. ಹವಾಮಾನ ಆಧಾರಿತ ವಿಮೆಗೆ ಅಡಿಕೆ ಮತ್ತು ಬೆಳೆ ವಿಮಾ ವ್ಯಾಪ್ತಿಗೆ ಕಾಳುಮೆಣಸು ಒಳಪಟ್ಟಿತ್ತು. ಹೆಕ್ಟೇರ್‌ಗೆ ೬ ಸಾವಿರದಂತೆ ಕೃಷಿಕರು ವಿಮಾ ಮೊತ್ತವನ್ನು ಪಾವತಿಸಿದ್ದು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ವಿಮೆ ಮಂಜೂರಾಗಿದೆ.


೬ ಸಾವಿರ ವಿಮಾ ಕಂತು ಪಾವತಿಸಿದ ಕೃಷಿಕರ ಖಾತೆಗೆ ೪೦ ಸಾವಿರ ವಿಮಾ ಮೊತ್ತ ಜಮೆಯಾಗಿದ್ದು ದುಪ್ಪಟ್ಟು ಎಂದೇ ಹೇಳಲಾಗಿದೆ.


ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಕೆ ಒಳಪಟ್ಟಿದ್ದು ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಬೆಳೆ ನಷ್ಟ ಅನುಭವಿಸಿದ್ದರೆ ಅವರಿಗೆ ಸರಕಾರದಿಂದ ಹವಾಮಾನ ಆಧರಿತ ಬೆಳೆ ವಿಮೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಬೆಳೆ ವಿಮಾ ವ್ಯಾಪ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಕಾಳುಮೆಣಸು ಒಳಪಟ್ಟಿದ್ದು ಬೆಳೆ ವಿಮೆ ಮಾಡಿಸಿಕೊಂಡವರ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿದ್ದು ಕೃಷಿಕರು ಫುಲ್ ಖುಷಿಯಲ್ಲಿದ್ದಾರೆ.


ಹವಾಮಾನ ಆಧಾರಿತ ಬೆಳೆ ವಿಮೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೃಷಿಕರಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಈ ಭಾಗದ ಕೃಷಿಕರು ನನ್ನ ಗಮನಕ್ಕೆ ತಂದಿದ್ದರು. ಕಳೆದ ಅಧಿವೇಶನದಲ್ಲಿ ಈವಿಚಾರವನ್ನು ಸಚಿವರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ. ಒಂದು ವಾರದೊಳಗೆ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ಭರವಸೆಯನ್ನು ನೀಡಿದ್ದರು. ಅದರಂತೆ ಡಿ. ೧೯ ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮಾ ಪಾವತಿಯಾಗಿದೆ. ಕೃಷಿಕರಲ್ಲಿ ಸಂತಸದ ಅಲೆ ಇದೆ, ಕೃಷಿಕರು ಸಮೃದ್ದರಾದರೆ ಎಲ್ಲರಿಗೂ ಸಂತೋಷ. ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಸರಕಾರ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಪರಿಹಾರ ನೀಡಬಹುದು ಅಥವಾ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನಾದರೂ ಕಂಡು ಹಿಡಯಬಹುದು ಎಂಬ ವಿಶ್ವಾಸ ನನಗಿದೆ.

ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಬೆಂಗಳೂರಿನ ಎಚ್‌.ಬಿ.ಆ‌ರ್. ಲೇಔಟ್‌ನಲ್ಲಿ ಸುಲ್ತಾನ್ ಡೈಮಂಡ್ ಆಯಂಡ್ ಗೋಲ್ಡ್ ಶುಭಾರಂಭ

Posted by Vidyamaana on 2024-07-12 10:58:22 |

Share: | | | | |


ಬೆಂಗಳೂರಿನ ಎಚ್‌.ಬಿ.ಆ‌ರ್. ಲೇಔಟ್‌ನಲ್ಲಿ ಸುಲ್ತಾನ್ ಡೈಮಂಡ್ ಆಯಂಡ್ ಗೋಲ್ಡ್  ಶುಭಾರಂಭ

ಬೆಂಗಳೂರು : ಸುಲ್ತಾನ್ ಡೈಮಂಡ್ಸ್ ಆಯಂಡ್ ಗೋಲ್ಡ್ 12ನೇ ಶಾಖೆಯನ್ನು ಮತ್ತು ಬೆಂಗಳೂರಿನ ಮೂರನೇ ಶಾಖೆಯನ್ನು ಬೆಂಗಳೂರಿನ ಎಚ್.ಬಿ.ಆರ್ ಲೇಔಟ್‌ನಲ್ಲಿ ಗುರುವಾರ ಜನಪ್ರಿಯ ಬಾಲಿವುಡ್ ಚಿತ್ರನಟಿ ಪ್ರಾಚೀ ದೇಸಾಯಿ ಉದ್ಘಾಟಿಸಿದರು.

ಸುಲ್ತಾನ್ ಆಡಳಿತ ನಿರ್ದೇಶಕ ಡಾ. ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಮಾತನಾಡಿ, ನಾವು ಸುಲ್ತಾನ್ ಜ್ಯುವೆಲ್ಲರಿಯ ವಿಶೇಷತೆಗಳನ್ನು ನಗರದ ಜನತೆಗೆ ಪರಿಚಯಿಸಲಿದ್ದು, ನಮ್ಮ ಶೋರೂಮ್ ಗೆ ಭೇಟಿ ನೀಡಿ ಚಿನ್ನಾಭರಣಗಳ ಪ್ರದರ್ಶನವನ್ನು ನೋಡಬಹುದು.

ಈ ಮಳಿಗೆ ಸ್ಥಳೀಯವಾಗಿ 75ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು.

ಸುಲ್ತಾನ್ ಚಿನ್ನದ ಆಮದು ಮಾಡುವ ಪರವಾನಗಿ ಹೊಂದಿದ್ದು, ಆಮದಿತ ಶುದ್ಧ ಚಿನ್ನದ ಬಾರ್ ಗಳನ್ನು ತರಿಸುತ್ತದೆ. ಹಾಗೆಯೇ ತನ್ನದೇ ತಯಾರಿಕಾ ಘಟಕವನ್ನು ಹೊಂದಿದೆ. ಹೀಗಾಗಿ ಶುದ್ಧ ಚಿನ್ನದ, ಅತ್ಯಂತ ಉತ್ಕೃಷ್ಟವಾಗಿ ತಯಾರಾದ ಆಭರಣಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ನಮಗೆ ಸಾಧ್ಯವಾಗುತ್ತದೆ ಎಂದರು.

Recent News


Leave a Comment: