ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪಾರ್ಥ ಪುರುಷರಿಗಾಗಿ ವೈವಿಧ್ಯಮಯ ಕಲೆಕ್ಷನ್ಸ್ ಪ್ರದರ್ಶನ

Posted by Vidyamaana on 2023-10-27 09:20:11 |

Share: | | | | |


ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪಾರ್ಥ ಪುರುಷರಿಗಾಗಿ ವೈವಿಧ್ಯಮಯ ಕಲೆಕ್ಷನ್ಸ್ ಪ್ರದರ್ಶನ

ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪುರುಷರಿಗಾಗಿ ಪಾರ್ಥ ಹೆಸರಿನಲ್ಲಿ ವಿಶೇಷ ಕಲೆಕ್ಷನ್‌ಗಳ ಪ್ರದರ್ಶನ ಮತ್ತು ಮಾರಾಟ ಶುಭಾರಂಭಗೊಂಡಿದೆ.


ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸ೦ಗ್ರಹ


ಪಾರ್ಥವನ್ನು ಅ.25ರಂದು ನಾಯರ್ ಕನ್ ಸ್ಟಕ್ಷನ್ ಮಾಲಕರಾದ ಸೂರಜ್ ನಾಯ‌ರ್ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅತ್ಯುತ್ತಮ ಸೇವೆ ಮತ್ತು ವಿಫುಲವಾದ ಸಂಗ್ರಹವಿದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದು, ಈ ಪಾರ್ಥ ಸಂಗ್ರಹದಿಂದ ಸಂಸ್ಥೆಯ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.


ಪಾರ್ಥ ಪುರುಷರಿಗಾಗಿನ ಅಪೂರ್ವ ಸಂಗ್ರಹದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಫಿಶ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಸೇರಿದಂತೆ ಇನ್ನಷ್ಟು ವಿನೂತನ ವಿನ್ಯಾಸದ ವಿಶಿಷ್ಟ ಚಿನ್ನಾಭರಣಗಳ ಸಂಗ್ರಹ ಇಲ್ಲಿ ಅನಾವರಣಗೊಂಡಿದೆ.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ಮ್ಯಾನೇಜರ್ ಶಂಕರ್ ಮೋಹನ್, ಸ್ಟೋರ್ ಮ್ಯಾನೇಜರ್ ಶೇಖರ್ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

BMTC ಯಲ್ಲಿ 17 ಕೋಟಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಶ್ರೀರಾಮ್ ಮುಲ್ಕವನ ಬಂಧನ

Posted by Vidyamaana on 2023-10-04 19:35:09 |

Share: | | | | |


BMTC ಯಲ್ಲಿ 17 ಕೋಟಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಶ್ರೀರಾಮ್ ಮುಲ್ಕವನ ಬಂಧನ

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯ(BMTC) ಮಾಜಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಒಬ್ಬರನ್ನು ಹಿರಿಯ ಅಧಿಕಾರಿಗಳ ನಕಲಿ ಸಹಿ ಮತ್ತು ಕಳೆದ ಮೂರು ವರ್ಷಗಳಲ್ಲಿ ಅನರ್ಹ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಬಿಎಂಟಿಸಿಗೆ 17 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟುಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.


💥 *ವಿದ್ಯಮಾನ Youtube Channel* *Subscribe ಆಗಿಲ್ವಾ..?*

ಬಂಧಿತ ಆರೋಪಿ ಶ್ರೀರಾಮ್ ಮುಲ್ಕವನ ಎನ್ನುವವರಾಗಿದ್ದು, ಆಪಾದಿತ ವಂಚನೆಗೆ ಸಂಬಂಧಿಸಿದಂತೆ ಬಿಎಂಟಿಸಿ ನಡೆಸಿದ ಆಂತರಿಕ ತನಿಖೆಯ ಸಮಯದಲ್ಲಿ ಹೆಸರು ಹೊರಬಂದ ನಂತರ ಬಿಎಂಟಿಸಿಯ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡಿದ ಶ್ರೀರಾಮ್ ಸೇರಿ ಇತರ ಆರು ಸಹೋದ್ಯೋಗಿಗಳನ್ನು ಅಮಾನತುಗೊಳಿಸಲಾಗಿತ್ತು.


ಅಸಿಸ್ಟೆಂಟ್ ಸೆಕ್ಯುರಿಟಿ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ಸಿ.ಕೆ. ಗಂಭೀರ ವಂಚನೆಯನ್ನು ಪತ್ತೆ ಹಚ್ಚಿದ ನಂತರ ಅಕ್ಟೋಬರ್ 2 ರಂದು ಅಮಾನತುಗೊಂಡ ಏಳು ಬಿಎಂಟಿಸಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೂರುದಾರರ ಪ್ರಕಾರ, ಆಪಾದಿತ ವಂಚನೆಯಿಂದಾಗಿ ನಿಗಮವು ಒಟ್ಟು 17 ಕೋಟಿ ರೂ.ಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಎಫ್‌ಐಆರ್‌ನಲ್ಲಿ ಮಾರ್ಚ್ 2020 ರಿಂದ ಸೆಪ್ಟೆಂಬರ್ 2023 ರ ನಡುವೆ ವಂಚನೆ ನಡೆದಿದೆ ಎಂದು ಹೇಳಲಾಗಿದೆ, ಇದರಿಂದಾಗಿ ನಿಗಮವು ಎರಡು ವಿಭಿನ್ನ ಪ್ರಕರಣಗಳಲ್ಲಿ 10.5 ಕೋಟಿ ರೂ. ಮತ್ತು 6.91 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.

ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್ ಉಸ್ತುವಾರಿ

Posted by Vidyamaana on 2023-06-09 08:52:56 |

Share: | | | | |


ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್ ಉಸ್ತುವಾರಿ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಬಿಜೆಪಿಯೊಂದಿಗೆ ವಿಲೀನವಾದ ಪುತ್ತಿಲ ಪರಿವಾರ: ಡಾ.ಸುರೇಶ್ ಪುತ್ತೂರಾಯ ಏನಂದ್ರು

Posted by Vidyamaana on 2024-03-14 22:44:41 |

Share: | | | | |


ಬಿಜೆಪಿಯೊಂದಿಗೆ ವಿಲೀನವಾದ ಪುತ್ತಿಲ ಪರಿವಾರ: ಡಾ.ಸುರೇಶ್ ಪುತ್ತೂರಾಯ ಏನಂದ್ರು

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ಡಾ. ಸುರೇಶ್ ಪುತ್ತೂರಾಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.


ಅರುಣ್ ಕುಮಾರ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಡಾ. ಸುರೇಶ್ ಪುತ್ತೂರಾಯ ಅವರು ಕೂಡ ಸಾಕಷ್ಟು ಕೆಲಸ ಮಾಡಿದ್ದರು. ಇದೀಗ ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಡಾ. ಪುತ್ತೂರಾಯ ಅವರು ಮನದುಂಬಿ ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅರುಣ್‌ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಗೊಂಡಿರುವುದು ಸಂತೋಷವಾಗಿದೆ. ಇದಕ್ಕೆ ಮೊದಲೇ ಈ ಕೆಲಸ ಆಗಬೇಕಿತ್ತು. ತಡವಾಗಿಯಾದರೂ ಬಿಜೆಪಿ ಸೇರ್ಪಡೆ ಉತ್ತಮ ಬೆಳವಣಿಗೆ ಎಂದಿದ್ದಾರೆ.

ಮುಂದೆ ನಾಯಕರು, ಕಾರ್ಯಕರ್ತರು ಒಂದೇ ಮನಸ್ಸಿನಿಂದ ಕೆಲಸ ಮಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹಿಂದಿನ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಒಂದೇ ಮನಸ್ಸಿನಿಂದ ಕಾರ್ಯತತ್ಪರರಾಗಬೇಕು. ಇನ್ನು ಮುಂದೆ ಒಂದೇ ಪರಿವಾರ. ಅದು ಮೋದಿ ಪರಿವಾರ ಎಂದರು.

ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

Posted by Vidyamaana on 2024-04-02 17:35:20 |

Share: | | | | |


ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ನಗರದ ಹೊರವಲಯದಲ್ಲಿರುವ ಮಂಜಲ್ಪಡುವಿನಲ್ಲಿ ವ್ಯವಹರಿಸುತ್ತಿರುವ ಮಂಗಲ್ ಸ್ಟೋರ್ಸ್‌ ನೂತನ ಮಳಿಗೆ "ಮಂಗಲ್ ಹೈಪರ್ ಮಾರ್ಕೆಟ್" ಪುತ್ತೂರಿನ ಹೃದಯ ಭಾಗದಲ್ಲಿರುವ ಜಿ.ಎಲ್.ಒನ್ ಮಾಲ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್. ಕೆ ಆನಂದ್ ಮತ್ತು ಜಿಎಲ್.ಒನ್ ಮಾಲ್‌ನ ಮಾಲಕ ಬಲರಾಮ ಆಚಾರ್ಯರವರು ದೀಪ ಪ್ರಜ್ವಲಿಸಿದರು.

ಮಾಲ್ ಪರಿಪೂರ್ಣತೆಗೆ ಹೈಪರ್ ಮಾರ್ಕೆಟ್ ಅವಶ್ಯ : ಬಲರಾಮ ಆಚಾರ್ಯ:

ಬಲರಾಮ ಆಚಾರ್ಯ ಮಾತನಾಡಿ, ಜಿ.ಎಲ್.ಒನ್ ಮಾಲ್ ಆರಂಭಗೊಂಡು ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಕಾಕತಾಳೀಯವೆಂಬಂತೆ ಇಂದು ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ಇಲ್ಲಿಗೆ ಹೈಪರ್ ಮಾರ್ಕೆಟ್ ಬರಬೇಕೆಂದು ಪ್ರಯತ್ನಪಟ್ಟಿದ್ದೆವು. ಹೊಸ ಅವಕಾಶ ಹುಟ್ಟಿಕೊಂಡು ಹೈಪರ್ ಮಾರ್ಕೆಟ್ ಶುಭಾರಂಭಗೊಂಡಿದೆ. ಮಾಲ್ ಪರಿಪೂರ್ಣವಾಗಿ ಇರಬೇಕಾದರೆ ಒಂದು ಹೈಪರ್ ಮಾರ್ಕೆಟ್ ಅವಶ್ಯಕತೆ ಇದೆ. ಇದು ಎಲ್ಲಾ ಗ್ರಾಹಕರಿಗೆ ಉಪಯುಕ್ತವಾಗಲಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ದಾನ ಧರ್ಮ ಮಾಡಲು ಮನಸ್ಸು ಬೇಕು – ಪಂಜಿಗುಡ್ಡೆ ಈಶ್ವರ ಭಟ್:


ಪುತ್ತೂರು : ನಗರಸಭಾ ಉಪಚುನಾವಣೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Posted by Vidyamaana on 2023-12-15 14:39:55 |

Share: | | | | |


ಪುತ್ತೂರು : ನಗರಸಭಾ ಉಪಚುನಾವಣೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ  ನಾಮಪತ್ರ ಸಲ್ಲಿಕೆ

ಪುತ್ತೂರು : ನಗರಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಇಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಸಲಾಯಿತು.ಕಾಂಗ್ರೆಸ್ ನಿಂದ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ರವರು ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.


ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ



Leave a Comment: