ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಬೇಕು: ಹೈಕೋರ್ಟ್‌

Posted by Vidyamaana on 2024-01-03 07:33:20 |

Share: | | | | |


ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಬೇಕು: ಹೈಕೋರ್ಟ್‌

ಬೆಂಗಳೂರು : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಬೇಡಿಕೆ ಮತ್ತು ಸ್ವೀಕಾರ ಕುರಿತು ಸ್ಪಷ್ಟ ಪುರಾವೆಗಳಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್‌ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣವನ್ನು ರದ್ದುಪಡಿಸಿದೆ.ಲಂಚ ಸ್ವೀಕಾರ ಆರೋಪದ ಮೇಲೆ ತಮ್ಮ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕಾಂತ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೆಕ್ಷನ್ 7(ಎ) ಪ್ರಕಾರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದಾಳಿ ನಡೆಸುವಂತಹ ಸಂದರ್ಭದಲ್ಲಿ ಆರೋಪಿ ಸರ್ಕಾರಿ ಅಧಿಕಾರಿ ಮುಂದೆ ಕೆಲಸ ಬಾಕಿಯಿದ್ದು, ಅದನ್ನು ನಿರ್ವಹಿಸಲು ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರಬೇಕಾಗುತ್ತದೆ ಹಾಗೂ ಲಂಚ ಸ್ವೀಕರಿಸಿರಬೇಕಾಗುತ್ತದೆ. ಆಗಷ್ಟೇ ಆರೋಪ ಸಾಬೀತುಪಡಿಸಲು ಸಾಧ್ಯವಿದೆ ಎಂದು ಪೀಠ ಹೇಳಿದೆ.


ಈ ಪ್ರಕರಣದಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಶೋಧನೆ ನಡೆಸಿದ್ದ ಎಸಿಬಿ ತನಿಖಾಧಿಕಾರಿಗಳು ಅರ್ಜಿದಾರರ ಕೈಯಲ್ಲಿದ್ದ 9,390 ರು. ಮತ್ತು ಅವರ ಜೇಬಿನಿಂದ 50 ರು. ವಶಕ್ಕೆ ಪಡೆದುಕೊಂಡಿದ್ದರು. ಆ ಮೊತ್ತವನ್ನು ಕಚೇರಿಯಲ್ಲಿ ದಾಖಲೆಗಳ ನೋಂದಣಿಗಾಗಿ ಶುಲ್ಕ ಸ್ವೀಕರಿಸಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ. ಹೀಗಿರುವಾಗ ಅರ್ಜಿದಾರರು ಬೇಡಿಕೆಯಿಟ್ಟು ಲಂಚ ಸ್ವೀಕರಿಸಿದ್ದಾರೆ ಎಂಬ ಅಂಶ ನಿಗೂಢವಾಗಿದೆ.ಮೇಲಾಗಿ ಎಸಿಬಿ ಅಧಿಕಾರಿಗಳು ಶೋಧನೆ ವೇಳೆ ಅರ್ಜಿದಾರರು ಬೇಡಿಕೆಯಿಟ್ಟ ಲಂಚ ಸ್ವೀಕರಿಸಿದ ಘಟನೆಯ ಪಂಚನಾಮೆ ಮಾಡಿಲ್ಲ. ಆದ್ದರಿಂದ ಪ್ರಕರಣ ವಿಚಾರಣೆಗೆ ಮುಂದುವರೆಸಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ. ಪ್ರಕರಣದ ವಿವರ:


ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಬ್ಬಂದಿ ಸಾರ್ವಜನಿಕರ ಕೆಲಸ ನಿರ್ವಹಣೆಗಾಗಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ. ಹೀಗಾಗಿ, ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸತ್ಯಾಂಶ ಪರಿಶೀಲಿಸಬೇಕು ಹಾಗೂ ಅಗತ್ಯ ಕ್ರಮ ಜರುಗಿಸಬೇಕು ಎಂದು ಕೋರಿ 2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿಗೆ ಅನಾಮಧೇಯ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಪೊಲೀಸರು, ಗದಗ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಭೇಟಿ ನೀಡಿ ಶೋಧಿಸಿದ್ದರು. ಈ ವೇಳೆ ಅರ್ಜಿದಾರರ ಕೈಯಲ್ಲಿ 9,390 ರು. ಇದ್ದವು. ಆ ಹಣ ವಶಪಡಿಸಿಕೊಂಡಿದ್ದ ಎಸಿಬಿ ಪೊಲೀಸರು, ಶ್ರೀಕಾಂತ್‌ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಲಂಚ ಸ್ವೀಕರಿಸಿದ ಆರೋಪದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಶ್ರೀಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

ಕಲ್ಲಡ್ಕ ಝಮಾನ್ ಬಾಯ್ಸ್ ವತಿಯಿಂದ ರಕ್ತ ದಾನ ಶಿಬಿರ

Posted by Vidyamaana on 2023-07-31 05:25:54 |

Share: | | | | |


ಕಲ್ಲಡ್ಕ ಝಮಾನ್ ಬಾಯ್ಸ್ ವತಿಯಿಂದ ರಕ್ತ ದಾನ ಶಿಬಿರ

ಬಂಟ್ವಾಳ : ಮನುಷ್ಯನ ರಕ್ತವು ಇನ್ನೊಂದು ಜೀವವನ್ನು ಉಳಿಸಲು ಬಳಕೆಯಾಗಬೇಕೇ ವಿನಃ ರಸ್ತೆಯಲ್ಲಿ ಚೆಲ್ಲುವಂತಾಗಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು. 


ಅವರು ಕಲ್ಲಡ್ಕ ಝಮಾನ್ ಬಾಯ್ಸ್ ಇದರ ಆಶ್ರಯದಲ್ಲಿ ಬ್ಲಡ್‌ ಡೋನರ್ಸ್ ಮಂಗಳೂರು,   ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಹಾಗೂ ಯೆನೆಪೋಯ ಆಸ್ಪತ್ರೆ ಮಂಗಳೂರು ಇವುಗಳ ಸಹಕಾರದೊಂದಿಗೆ

ಮರ್ಹೂಂ ಬಿ.ಕೆ ಇದ್ದಿನಬ್ಬ ಕಲ್ಲಡ್ಕ ಇವರ ಸ್ಮರಣಾರ್ಥ ಕಲ್ಲಡ್ಕ  ಗಂಗಾಧರ ಸಂಕೀರ್ಣದ  ಮರ್ಹೂಂ ಹಾಜಿ ಅಬ್ದುಲ್ಲಾ , ಮರ್ಹೂಂ ರಾಝಿಕ್ ಕುಪ್ಪೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ಸೌಹಾರ್ಧ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .


    ರಕ್ತದ ಅವಶ್ಯಕತೆ ಬಂದಾಗ ಯಾರೂ ಯಾವ ಜಾತಿ, ಧರ್ಮ, ಪಂಗಡದವನ ರಕ್ತ ಎಂಬುದನ್ನು ನೋಡುವುದಿಲ್ಲವೋ, ಇದೇ ಮನೋಸ್ಥಿತಿಯನ್ನು ನೈಜ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಭಾರತದ ಭವ್ಯ ಜಾತ್ಯಾತೀತ ಪರಂಪರೆಗೆ ಶಕ್ತಿ ತುಂಬಲಿದೆ ಎಂದರು.


  ಶಿಬಿರವನ್ನು ಕಲ್ಲಡ್ಕ ಮುಹಿಯದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ,

ಉದ್ಘಾಟಿಸಿದರು,  ಇರ್ಶಾದ್ ದಾರಿಮಿ ಅಲ್ ಜಝರಿ ಶುಭ ಹಾರೈಸಿದರು. ಝಮಾನ್ ಬಾಯ್ಸ್ ಅಧ್ಯಕ್ಷ ಮಹಮ್ಮದ್ ಸಜ್ಜಾದ್ ಅಧ್ಯಕ್ಷತೆ ವಹಿಸಿದ್ದರು.


    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಲಡ್ಕ ಗಂಗಾಧರ ಸಂಕೀರ್ಣದ ಮಾಲಕ ಶಾಂತರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಸ್.ಡಿ.ಪಿ.ಐ. ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಮಂಗಳೂರು ಬ್ಲಡ್‌ ಡೋನರ್ಸ್ ಅಧ್ಯಕ್ಷ ನವಾಝ್ ನರಿಂಗಾನ, ಗೋಳ್ತಮಜಲು ಹಜಾಜ್ ಸಮೂಹ ಸಂಸ್ಥೆಯ ಪಾಲುದಾರ ಇಮ್ತಿಯಾಝ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಕೆ.ಜಬ್ಬಾರ್ ಬೋಳಿಯಾರ್, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಕೆ.ಸಿ.ರೋಡ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಮಾತನಾಡಿ ಶುಭ ಹಾರೈಸಿದರು.


   ಇದೇ ವೇಳೆ ಶಾಂತರಾಮ ಶೆಟ್ಟಿ, ಸಾಹುಲ್ ಹಮೀದ್ ಕಾಶಿಪಟ್ನ ಹಾಗೂ ಡಾ.ಸಮ್ರೀನಾ,  ಅವರನ್ನು ಸನ್ಮಾನಿಸಲಾಯಿತು.

241 ಮಂದಿ ರಕ್ತದಾನ ಮಾಡಿದರು.


    ಕಲ್ಲಡ್ಕ ಮೆಸ್ಕಾಂ ಶಾಖಾಧಿಕಾರಿ ಮಹಾಬಲ, ಬ್ಲಡ್ ಡೋನರ್ಸ್ ಗೌರವಾಧ್ಯಕ್ಷ ಗೌರವಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಉದ್ಯಮಿಗಳಾದ ಜಿ.ಎಸ್.ಸಿದ್ದೀಕ್ ಕಲ್ಲಡ್ಕ, ನವಾಝ್ ಕೆ.ಎನ್, ಬಿ.ಕೆ.ಫೈರೋಝುದ್ದೀನ್ ಬಿ.ಕೆ ನಗರ, ಕೆ.ಎಸ್.ಫೈರೋಝ್ ಕಲ್ಲಡ್ಕ, ಶಾಫಿ ಕಲ್ಲಡ್ಕ , ಎಸ್.ಆರ್. ರಫೀಕ್ ಗೋಳ್ತಮಜಲು, ವಿಟ್ಲ ಪಡ್ನೂರು ಗ್ರಾ.ಪಂ.ಮಾಜಿ ಸದಸ್ಯ ಸಿದ್ದೀಕ್ ಸರವು, ಕಾಂಗ್ರೆಸ್ ಸೇವಾದಳ ಜಿಲ್ಲಾ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು


    ಇರ್ಫಾನ್ ಕಲ್ಲಡ್ಕ ಸ್ವಾಗತಿಸಿ, ಫಾರೂಕ್ ಎಫ್ ತ್ರೀ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಕೇರಳ; ಮನೆಯಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಮಲಯಾಳಂ ನಟಿ ಅಪರ್ಣಾ

Posted by Vidyamaana on 2023-09-01 06:55:17 |

Share: | | | | |


ಕೇರಳ; ಮನೆಯಲ್ಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಮಲಯಾಳಂ ನಟಿ ಅಪರ್ಣಾ

ತಿರುವನಂತಪುರಂ: ಸೆ 1: ಹಲವಾರು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ 31 ವರ್ಷದ ಖ್ಯಾತ ನಟಿ ಅಪರ್ಣಾ ಪಿ.ನಾಯರ್ ಅವರು ತಮ್ಮ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 


ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರ್ಣಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ


ನಟಿ ಅಪರ್ಣಾ ನಾಯರ್ ಅವರ ಹಠಾತ್ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದಂತಾಗಿದೆ. ಅಲ್ಲದೆ ಇವರ ಅಭಿಮಾನಿ ಬಳಗಕ್ಕೆ ನಟಿ ಮೃತಪಟ್ಟಿರುವ ವಿಚಾರ ಅರಗಿಸಿಕೊಳ್ಳಲು ಆಗದಂತಾಗಿದೆ.


ಆತ್ಮಹತ್ಯೆಗೆ ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲವಾಗಿದ್ದು ತಾವು ಗುರುವಾರ ಸಂಜೆ ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಪೋಸ್ಟ್ ಗಳನ್ನು ಹಾಕಿದ್ದು ಇದರಲ್ಲಿ ಆಕೆ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದಾರೆ ಎನ್ನಲಾಗಿದ್ದು ಅಲ್ಲದೆ ಕೊನೆಯದಾಗಿ ತನ್ನ ಮಗಳ ಫೋಟೋ ವನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.


ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಂ ಬಾಲನ್ ವಕೀಲ್, ಕಲ್ಕಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಪರ್ಣಾ ನಟಿಸಿದ್ದಾರೆ. ಚಂದನಮಜ, ಆತ್ಮಸಖಿ ಸೇರಿದಂತೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಅವರು ತ್ರಯಾ ಮತ್ತು ಕೃತಿಕಾ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

Posted by Vidyamaana on 2023-03-13 10:37:47 |

Share: | | | | |


ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

ಬೆಳ್ಳಾರೆ : ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು.

      ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬಾಳಬೇಕು.ಪ್ರೀತಿ ವಿಶ್ವಾಸ,ನಂಬಿಕೆ ಇದ್ದರೆ ಸಮಸ್ಯೆ ನಿವಾರಣೆ ಸಾಧ್ಯ ಮತ್ತು 

ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ IPS  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಷನಲ್ಲಿ ಎಸ್ಪಿ ಧರ್ಮಪ್ಪ ಹೊಂದಿಸಿದರು. ನಿವೃತ್ತ ಎ ಎಸ್ ಐ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.

ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

Posted by Vidyamaana on 2024-02-20 14:29:04 |

Share: | | | | |


ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡು ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.ಕಾಗ್ನಿ ಲಿನ್ ಕಾರ್ಟರ್(36)  ಆತ್ಮಹತ್ಯೆ ಮಾಡಿಕೊಂಡು ಪ್ರಾಣತೆತ್ತಿರುವುದನ್ನು ಅವರ ಸ್ನೇಹಿತರು ಸೋಶಿಯಲ್‌ ಮೀಡಿಯಾದಲ್ಲಿ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ. ಅವರು ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸ್ನೇಹಿತರು ಹೇಳಿದ್ದಾರೆ.

2000 ಇಸವಿಯಲ್ಲಿ ನೀಲಿ ಚಿತ್ರದ ಲೋಕಕ್ಕೆ ಕಾಲಿಟ್ಟ ಅವರು ತನ್ನ ಕೆಲಸಕ್ಕಾಗಿ ಹಲವು ಅಮೇರಿಕನ್‌ ಅಡಲ್ಟ್‌ ವಿಡಿಯೋ ಪ್ರಶಸ್ತಿ(AVN Awards) ಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಗಾಯಕಿಯಾಗಿ, ಕ್ಲಬ್‌ ನಲ್ಲಿ ನೃತ್ಯಗಾರ್ತಿಯಾಗಿಯೂ ಹಾಗೂ ಮಾಡೆಲ್‌ ಆಗಿಯೂ ಅನೇಕ ವರ್ಷ ಮನರಂಜಿಸಿದ್ದರು.

2019 ರಲ್ಲಿ ಅವರು ಲಾಸ್ ಏಂಜಲೀಸ್‌ನಿಂದ ಮರಳಿ ಪೋಲ್ ಡ್ಯಾನ್ಸ್‌ನಲ್ಲಿ ತೊಡಗಿಕೊಂಡಿದ್ದರು. ಇದಾದ ನಂತರ ಅವರು ತಮ್ಮದೇ ಆದ ಸ್ಟುಡಿಯೋ ತೆರೆದು ವಯಸ್ಕ ಚಿತ್ರಗಳ ಬದಲು ಪೋಲ್ ಡ್ಯಾನ್ಸ್‌ನತ್ತ ಹೆಚ್ಚಿನ ಗಮನ ಹರಿಸಿದ್ದರು.ಕಳೆದ ಕೆಲ ಸಮಯದಿಂದ ಕಾಗ್ನಿಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಅವರ ಸ್ನೇಹಿತು ಹೇಳಿರುವುದಾಗಿ ವರದಿ ತಿಳಿಸಿದೆ.ಅವರ ಸ್ನೇಹಿತರು ʼಗೋ ಫಂಡ್‌ ಮಿʼ ಮೂಲಕ ನಟಿಯ ನೆನಪಿಗೆ ಹಾಗೂ ಅವರ ತಾಯಿಯ ನೆರವಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ

ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

Posted by Vidyamaana on 2024-05-04 11:37:44 |

Share: | | | | |


ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

ಕೊಣನೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಕೆರೆ ಮೀನು ತಿಂದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (46) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತಪಟ್ಟವರು. ಅಲ್ಲದೆ,15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನೀರಿಲ್ಲದೇ ಬತ್ತಿದ್ದ ಗ್ರಾಮದ ಕೆರೆ ಕೆಸರಿನಲ್ಲಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದು ಅಡುಗೆ ಮಾಡಿದ್ದರು. ಬಳಿಕ ಸಂತೋಷದಿಂದ ತಿಂದಿದ್ದಾರೆ



Leave a Comment: