ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಕೌಶಿಕ್ ಆತ್ಮಹತ್ಯೆ

Posted by Vidyamaana on 2023-07-19 10:21:59 |

Share: | | | | |


ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಕೌಶಿಕ್ ಆತ್ಮಹತ್ಯೆ

ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.ಮಾಳ ಮುಳ್ಳೂರು ನಿವಾಸಿ ಕೌಶಿಕ್(17) ಮೃತ ದುರ್ದೈವಿ.


ಕೌಶಿಕ್ ಬಜಗೋಳಿಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಕೌಶಿಕ್ ತಂದೆ,ತಾಯಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

Posted by Vidyamaana on 2024-03-05 21:27:17 |

Share: | | | | |


ಪ್ರೀತಿ ನಿರಾಕರಿಸಿದ  ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

ಹಾಸನ : ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿಯಾಗಿದ್ದು, ಶರತ್‌ (23) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು  ಭೂಮಿಕಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಶರತ್ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ವಿದ್ಯಾರ್ಥಿನಿ ಭೂಮಿಕಾ ಶಾಲೆ ಮುಗಿಸಿ ಮನೆಗೆ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿದ ಶರತ್‌ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.


ಕೊಲೆ ಮಾಡಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜ್ವಲ್ ವೀಡಿಯೋ ಪ್ರಕರಣ:ಬಿಜಯಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ

Posted by Vidyamaana on 2024-04-29 07:18:07 |

Share: | | | | |


ಪ್ರಜ್ವಲ್ ವೀಡಿಯೋ ಪ್ರಕರಣ:ಬಿಜಯಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ

ಬೆಂಗಳೂರು ,ಏ.28: ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರಿನ ಎಡಿಜಿಪಿ ಬಿಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ.ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

ಬಿಜಯ ಕುಮಾರ್ ಸಿಂಗ್ ತಂಡದ ಮುಖ್ಯಸ್ಥರು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಖಾಸಗಿ ವೀಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

Posted by Vidyamaana on 2023-07-08 15:04:02 |

Share: | | | | |


ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಪ್ರಾಯೋಜಕತ್ವದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಸ್ವೀಕಾರ ಹಾಗೂ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಪದಸ್ವೀಕಾರ ಸಮಾರಂಭ ಜುಲೈ 9ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲಿನಲ್ಲಿ ನಡೆಯಲಿದೆ.

ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಶ್ರೇಯಸ್, ಖಜಾಂಚಿಯಾಗಿ ಮಹೇಶ್ಚಂದ್ರ ಮತ್ತು ಅವರ ತಂಡ ಪದಸ್ವೀಕಾರ ಮಾಡಲಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ:

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಜ್ಯೋತಿಕಾ, ಕಾರ್ಯದರ್ಶಿಯಾಗಿ ಧನುಷಾ, ಐಪಿಪಿಯಾಗಿ ಗಣೇಶ್ ಎನ್. ಕಲ್ಲರ್ಪೆ ನೇಮಕಗೊಂಡಿದ್ದಾರೆ. ಸಭಾಪತಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಲಿದ್ದಾರೆ.

ಉಪಾಧ್ಯಕ್ಷರಾಗಿ ವಿಶಾಲ್, ಜತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ, ಕೋಶಾಧಿಕಾರಿಯಾಗಿ ಸುಕನ್ಯಾ, ಸಮುದಾಯ ಸೇವಾ ನಿರ್ದೇಶಕರಾಗಿ ವಿಜಯ್, ವೃತ್ತಿ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಮಹೇಶ್ಚಂದ್ರ, ಸಂಘ ಸೇವಾ ನಿರ್ದೇಶಕರಾಗಿ ಶಶಿಧರ್ ಕೆ. ಮಾವಿನಕಟ್ಟೆ, ಬುಲೆಟಿನ್ ಎಡಿಟರ್ ಆಗಿ ಶ್ರೀಕಾಂತ್ ಬಿರಾವು, ಕ್ರೀಡಾ ನಿರ್ದೇಶಕರಾಗಿ ಹಿಮಾಂಶು ಕುಮಾರ್, ಸಾಂಸ್ಕೃತಿಕ ನಿರ್ದೇಶಕರಾಗಿ ಸುಬ್ರಹ್ಮಣಿ, ಪಿ.ಆರ್.ಓ. ಆಗಿ ನವೀನ್ ಬನ್ನೂರು, ಸಾರ್ಜಂಟ್ ಆಗಿ ಮುರಳಿ ನೇಮಕಗೊಂಡಿದ್ದಾರೆ.

ಕಾಸರಗೋಡು ಖಾಸಗಿ ಬಸ್ ಪಲ್ಟಿ, ಚಾಲಕ ಚೇತನ್ ಕುಮಾರ್ ಮೃತ್ಯು ; 20 ಮಂದಿ ಪ್ರಯಾಣಿಕರಿಗೆ ಗಾಯ

Posted by Vidyamaana on 2024-03-18 20:29:07 |

Share: | | | | |


ಕಾಸರಗೋಡು ಖಾಸಗಿ ಬಸ್ ಪಲ್ಟಿ, ಚಾಲಕ ಚೇತನ್ ಕುಮಾರ್ ಮೃತ್ಯು ; 20 ಮಂದಿ ಪ್ರಯಾಣಿಕರಿಗೆ ಗಾಯ

ಕಾಸರಗೋಡು: ಪೆರಿಯ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸಾವನ್ನಪ್ಪಿದ ಘಟನೆ ಮಾ.18 ರ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.. ಇಪ್ಪತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.  ಮಧೂರು ರಾಮನಗರ ಮೂಲದ ಚೇತನ್ ಕುಮಾರ್ (37) ಮೃತ ವ್ಯಕ್ತಿ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಸ್ಸಿನಲ್ಲಿದ್ದ ಎಲ್ಲರನ್ನೂ ಇಲ್ಲಿಂದ ಹೊರತೆಗೆದ ಬಳಿಕ ಅಗ್ನಿಶಾಮಕ ದಳದವರು ತಂದ ಕ್ರೇನ್ ಬಳಸಿ ಬಸ್ ಅನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಯಿತು. ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಾಜ್ಯದಲ್ಲಿ ತಾಜಾ ಬಿಯರ್ ಪೂರೈಕೆಗೆ ರಾಜ್ಯ ಸರಕಾರ ಚಿಂತನೆ

Posted by Vidyamaana on 2023-09-14 16:04:30 |

Share: | | | | |


ರಾಜ್ಯದಲ್ಲಿ ತಾಜಾ ಬಿಯರ್ ಪೂರೈಕೆಗೆ ರಾಜ್ಯ ಸರಕಾರ ಚಿಂತನೆ

ಬೆಂಗಳೂರು: ಬಿಯರ್ ಪ್ರಿಯರಿಗೆ ಇದು ಸಿಹಿಸುದ್ದಿಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾಪ್ (ಡ್ರಾಫ್ಟ್) ಬಿಯರ್ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಕ್ರಮದಲ್ಲಿ, ಚಿಲ್ಲರೆ ಮಾರಾಟದ ಬಿಯರ್ (RVB) ಮಳಿಗೆಗಳಿಗೆ ಹೊಸ ಸ್ವತಂತ್ರ ಅಥವಾ ಸ್ಟ್ಯಾಂಡ್ ಅಲೋನ್ ಪರವಾನಗಿಗಳನ್ನು ನೀಡುವ ಕುರಿತು ಸರ್ಕಾರವು ಚಿಂತನೆ ಮಾಡುತ್ತಿದೆ.ಆದರೆ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಡ್ರಾಫ್ಟ್, ಅಥವಾ ಡ್ರಾಫ್ಟ್ ಬಿಯರ್ ಟ್ಯಾಪ್ನಿಂದ ನೇರವಾಗಿ ಗ್ರಾಹಕರಿಗೆ ನೀಡಲಾಗ್ತದೆ.

ಬಾಟಲ್ ಬಿಯರ್ಗೆ ಹೋಲಿಸಿದರೆ ಇದು ತಾಜಾ ಆಗಿದ್ದು, ಗರಿಗರಿಯಾದ ರುಚಿ ಮತ್ತು ಆಹ್ಲಾದಕರ ನೊರೆಯನ್ನು ಹೊಂದಿದೆ. ಈಗಿನಂತೆ, ಆರ್ ವಿಬಿಯನ್ನು ಕ್ಲಬ್ಗಳು (CL4), ಹೋಟೆಲ್ಗಳು ಮತ್ತು ಬೋರ್ಡಿಂಗ್ ಲಾಡ್ಜ್ಗಳು (CL7), ಬಾರ್- ರೆಸ್ಟೋರೆಂಟ್ಗಳು (CL9) ಮತ್ತು ಸ್ಟಾರ್ ಹೋಟೆಲ್ಗಳು (CL-6A) ಗೆ ಲಗತ್ತಿಸಲಾದ ಪರವಾನಗಿಯಾಗಿ ನೀಡಲಾಗುತ್ತದೆ.

ಆರ್ ವಿಬಿಗಾಗಿ ಅಬಕಾರಿ ಪರವಾನಗಿ ಶುಲ್ಕವು 15,000 ರೂಪಾಯಿ ಆಗಿದೆ, ಇದನ್ನು ವಾರ್ಷಿಕವಾಗಿ ಮುಖ್ಯ ಪರವಾನಗಿ ಶುಲ್ಕದೊಂದಿಗೆ ಪರವಾನಗಿದಾರರು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಪ್ರತಿಯೊಂದು ಪರವಾನಿಗೆ ವರ್ಗಗಳಿಗೆ ಮಳಿಗೆಗಳ ಸ್ಥಳವನ್ನು ಅವಲಂಬಿಸಿ ಪರವಾನಗಿ ಶುಲ್ಕವು ವಿಭಿನ್ನವಾಗಿದೆ. ನಗರ ಪಾಲಿಕೆ ಮಿತಿಯಲ್ಲಿರುವವರು ಅತ್ಯಂತ ದುಬಾರಿಯಾಗಿದೆ. ಸ್ವತಂತ್ರ ಆರ್ ವಿಬಿಗಳಿಗೆ ಪರವಾನಗಿಗಳನ್ನು ನೀಡುವ ಅಭ್ಯಾಸವು ಮೊದಲು ಪ್ರಚಲಿತವಾಗಿದ್ದು, ದಶಕದ ಹಿಂದೆ ನಿಲ್ಲಿಸಲಾಯಿತು.

ಕರ್ನಾಟಕದಲ್ಲಿರುವ 733 ಆರ್ ವಿಬಿ ಪರವಾನಗಿಗಳಲ್ಲಿ 64 ಮಾತ್ರ ಸ್ವತಂತ್ರ ಮಳಿಗೆಗಳಾಗಿವೆ. ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿವೆ. “ಬಿಯರ್ ಕುಡಿಯುವವರಲ್ಲಿ ಕೆಗ್ ಅಥವಾ ಟ್ಯಾಪ್ ಬಿಯರ್ಗೆ ದೊಡ್ಡ ಬೇಡಿಕೆಯಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ -- ರಾಜ್ಯದ 11 ನಗರ ಪಾಲಿಕೆಗಳಲ್ಲಿ ಸ್ವತಂತ್ರ, ವಿಶಿಷ್ಟ ಆರ್ವಿಬಿ ಮಳಿಗೆಗಳಿಗೆ ಪರವಾನಗಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

ವಿಷಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಚರ್ಚೆಯು ಆರಂಭಿಕ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಸ್ವತಂತ್ರ ಆರ್ ವಿಬಿಗಾಗಿ ಪರವಾನಗಿ ಶುಲ್ಕವು ವಾರ್ಷಿಕವಾಗಿ ಸುಮಾರು 2 ಲಕ್ಷ ರೂಪಾಯಿಗಳಾಗಿರುತ್ತದೆ. ಆರ್ ವಿಬಿಯನ್ನು ಸ್ಥಾಪಿಸಲು ಷರತ್ತುಗಳಿವೆ. ಜನರಿಂದ ಪ್ರತಿಕ್ರಿಯೆಯನ್ನು ಪಡೆಯಲು ಸರ್ಕಾರವು ಸಾರ್ವಜನಿಕ ಸೂಚನೆಯನ್ನು ನೀಡುತ್ತದೆ.

ಸೂಕ್ತ ಪ್ರಕ್ರಿಯೆಯ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬೆಂಗಳೂರು, ಭಾರತದ ಅತಿದೊಡ್ಡ ಟ್ಯಾಪ್ ಬಿಯರ್ ಮಾರುಕಟ್ಟೆ: ಉದ್ಯಮದ ಮೂಲಗಳ ಪ್ರಕಾರ, ಬೆಂಗಳೂರು ಟ್ಯಾಪ್ ಬಿಯರ್ಗೆ ಭಾರತದ ಅತಿದೊಡ್ಡ ಮಾರುಕಟ್ಟೆಯಾಗಿದೆ, ಇದರಲ್ಲಿ ಕ್ರಾಫ್ಟ್ ಬಿಯರ್ ನೀಡುವ ಮೈಕ್ರೋಬ್ರೂವರಿಗಳು ಸೇರಿವೆ. ಬೆಂಗಳೂರಿನಲ್ಲಿ 65 ಮೈಕ್ರೋಬ್ರೂವರಿಗಳಿವೆ, ಕೆಲವು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಚ್ಚಲ್ಪಟ್ಟವು. ನಗರವೊಂದರಲ್ಲೇ ಈಗ ಸುಮಾರು 35 ಹೊಸ ಮೈಕ್ರೋಬ್ರೂವರಿಗಳು ಕಾರ್ಯನಿರ್ವಹಣೆ ಆರಂಭ ಹಂತದಲ್ಲಿವೆ ಎಂದು ಆಹಾರ ಮತ್ತು ಪಾನೀಯ (F & ಬB) ಉದ್ಯಮದ ಮೂಲಗಳು ತಿಳಿಸಿವೆ. ಸದ್ಯಕ್ಕೆ, ಡ್ರಾಫ್ಟ್ ಬಿಯರ್ ವಿಭಾಗದಲ್ಲಿ ಕಿಂಗ್ಫಿಶರ್, ಬಡ್ವೈಸರ್, ಬಿರಾ, ಗೀಸ್ಟ್ ಮತ್ತು ಟಾಯ್ಟ್, ತಮ್ಮ ಸ್ವಂತ ಕ್ರಾಫ್ಟ್ ಬಿಯರ್ ಅನ್ನು ತಯಾರಿಸುವ ಮೈಕ್ರೋಬ್ರೂವರಿಗಳನ್ನು ಹೊಂದಿವ. 16 ರೀತಿಯ ಟ್ಯಾಪ್ ಬಿಯರ್ಗಳು ಲಭ್ಯವಿದ್ದು, ದಿನದಿಂದ ದಿನಕ್ಕೆ ಬೆಳೆಯುತ್ತಿವೆ ಎಂದರು.



Leave a Comment: