ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು ಟಿ ಖಾದರ್

Posted by Vidyamaana on 2023-12-05 19:55:17 |

Share: | | | | |


ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು  ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು ಟಿ ಖಾದರ್

ಪುತ್ತೂರು: ಕಳೆದ ಬಾರಿ ನಡೆದ ವಿಧಾನಸಬಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಸ್ಪೀಕರ್ ಯು ಟಿ ಖಾದರ್ ಬಹುಮಾನ ನೀಡಿ ಗೌರವಿಸಿದ್ದಾರೆ.


ಶಾಸಕರಾದ ಅಶೋಕ್ ರೈಯವರು ಕಳೆದ ಬಾರಿ ಚೊಚ್ಚಲ ಅದಿವೇಶನದಲ್ಲಿ ಭಾಗವಹಿಸಿದ್ದರು. ಸದನಕ್ಕೆ ಸಮಯಕ್ಕೆ ಸರಿಯಗಿ ಹಾಜರಾಗುವ ಸದಸ್ಯರಿಗೆ ಬಹುಮಾ ನೀಡಿ ಗೌರವಿಸಲಾಗುವುದು ಎಂದು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯು ಟಿ ಖಾದರ್ ಅವರು ಘೋಷಣೆ ಮಾಡಿದ್ದರು. ಕಳೆದ ಬಾರಿಯ ಅಧಿವೇಶನಕ್ಕೆ ಒಟ್ಟು ೧೦ ಮಂದಿ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಅದಿವೇಶನ ಮುಗಿಯುವ ತನಕವೂ ಸದನದಲ್ಲೇ ಇದ್ದರು. ಹತ್ತು ಮಂದಿಯ ಪೈಕಿ ಪುತ್ತೂರು ಶಾಸಕರಾದ ಅಶೋಕ್ ರ‍್ಯಯವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಅಧಿವೇಶನ ಕೊನೇ ಗಳಿಗೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಶಾಸಕ ಅಶೋಕ್ ರಐಯವರನ್ನು ಬಹುಮಾನ ನೀಡಿ ಗೌರವಿಸಿದರು.


ಚೊಚ್ಚಲ ಅಧಿವೇಶನದಲ್ಲಿ ೧೪ ಪ್ರಶ್ನೆಗಳನ್ನು ಕೇಳುವ ಮೂಲಕ ಸುದ್ದಿಯಾಗಿದ್ದ ಶಾಸಕ ಅಶೋಕ್ ರೈಯವರು ತುಳು ಭಾಷೆಯಲ್ಲಿ ಸದನದಲ್ಲಿ ಮಾತನಾಡುವ ಮೂಲಕ ಕೋಟ್ಯತರ ತುಳುವರ ಮನಸ್ಸನ್ನು ಗೆದ್ದಿದ್ದರು. ೧೪ ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳು ಬಡವರ ಪರವಾಗಿ ಇದ್ದದ್ದು ಇನ್ನೊಂದು ವಿಶೇಷವಾಗಿತ್ತು.

ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಅತ್ತೆ-ಸೊಸೆ ಅರೆಸ್ಟ್! ಕಾರಣ ಹೀಗಿದೆ?

Posted by Vidyamaana on 2024-02-12 15:29:08 |

Share: | | | | |


ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟ ಅತ್ತೆ-ಸೊಸೆ ಅರೆಸ್ಟ್! ಕಾರಣ ಹೀಗಿದೆ?

ತಮಿಳುನಾಡು: ಧರ್ಮಪುರಿ ಜಿಲ್ಲೆಯ ಹರೂರ್ ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ನೀಡುತ್ತಿದ್ದ ಗೌಂಡರ್ ಸಮುದಾಯದ ಮಹಿಳೆ ಮತ್ತು ಆಕೆಯ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಬೈನಲ್ಲೂರು ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.ತಾರತಮ್ಯ ಎಸಗಿದ ಆರೋಪದಲ್ಲಿ ಇಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮಾರಪ್ಪನಾಯ್ಕನಪಟ್ಟಿ ನಿವಾಸಿಗಳಾದ ಚಿನ್ನತಾಯಿ (60) ಮತ್ತು ಆಕೆಯ ಸೊಸೆ ಬಿ ಧರಣಿ (32) ಬಂಧಿತರು.


ಪೊಲಂಪಾಳ್ಯಂ ಮೂಲದ 50 ವರ್ಷದ ದಲಿತ ಮಹಿಳೆ ಜಿ ಸೆಲ್ಲಿ ನೀಡಿದ ದೂರಿನ ಅನ್ವಯ ಅತ್ತೆ ಸೊಸೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಲ್ಲಿ ಅವರು ಅವರು ಪೊಲಂಪಾಳ್ಯಂ ನಿವಾಸಿಗಳಾದ ಆರ್ ಶ್ರೀಪ್ರಿಯಾ (38), ವಿ ವೀರಮ್ಮಾಳ್ (55) ಮತ್ತು ಕೆ ಮಾರಿಯಮ್ಮಾಳ್ (60) ಜತೆ ಚಿನ್ನತಾಯಿ ಕುಟುಂಬದ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.


ಈ ದೃಶ್ಯವನ್ನು ಚಿತ್ರೀಕರಿಸಿದ ವಿಡಿಯೋದಲ್ಲಿ ಕೆಲವು ಕೃಷಿ ಕಾರ್ಮಿಕರಿಗೆ ಮಹಿಳೆಯೊಬ್ಬರು ತೆಂಗಿನ ಚಿಪ್ಪಿನಲ್ಲಿ ಚಹಾವನ್ನು ನೀಡುತ್ತಿರುವುದನ್ನು ತೋರಿಸಿದ ನಂತರ ಪೋಲೀಸರ ಕ್ರಮ ಕೈಗೊಂಡಿದ್ದಾರೆ. ಗುರುವಾರದಂದುಅವರಿಬ್ಬರೂ ನಮಗೆ ತೆಂಗಿನ ಗೆರಟೆಯಲ್ಲಿ ಟೀ ನೀಡಿದ್ದರು. ಈ ಹಿಂದೆ ಕೂಡ ಇದೇ ರೀತಿ ನಮಗೆ ಚಹಾ ಕೊಟ್ಟಿದ್ದರು ಎಂದು ಸೆಲ್ಲಿ ಆರೋಪಿಸಿದ್ದಾರೆ.


ಮೂಲಗಳ ಪ್ರಕಾರ, ದಾರಿಯಲ್ಲಿ ಹೋಗುತ್ತಿದ್ದ ಅನಾಮಿಕ ವ್ಯಕ್ತಿಗಳು ಈ ಘಟನೆಯ ವಿಡಯೋವನ್ನು ಚಿತ್ರೀಕರಿಸಿದ್ದಾರೆ. ನಂತರ ಅವರು ಮಹಿಳೆಯರ ಸಾಕ್ಷ್ಯವನ್ನು ದಾಖಲಿಸಿದ್ದಾರೆ. ದಲಿತರಲ್ಲದವರಿಗೆ ಗ್ಲಾಸ್‌ನಲ್ಲಿ ಚಹಾ ಮತ್ತು ದಲಿತರಿಗೆ ತೆಂಗಿನ ಚಿಪ್ಪಿನಲ್ಲಿ (ಅಥವಾ ಪ್ರತ್ಯೇಕ ಪಾತ್ರೆಯಲ್ಲಿ) ಚಹಾವನ್ನು ಬಡಿಸುವ ಅಭ್ಯಾಸವು ಈಗಲೂ ಇದೆ ಎಂದು ತಿಳಿದು ಆಘಾತವಾಯಿತು ಎಂದು ಮಹಿಳೆಯೊಬ್ಬರು ಹೇಳಿದರು.


ಊರಿನಲ್ಲಿ ಜಾತಿ ತಾರತಮ್ಯ ಅಧಿಕ: ಮಾರಪ್ಪನಾಯ್ಕನಪಟ್ಟಿ ಗ್ರಾಮದಲ್ಲಿ ಬಹುತೇಕ ದಲಿತೇತರರು ತಾರತಮ್ಯ ಎಸಗುತ್ತಿದ್ದಾರೆ. ದೇವಸ್ಥಾನ ಹಾಗೂ ಕೆಲಸ ಮಾಡುವ ಜಾಗ ಎರಡೂ ಕಡೆ ನಮ್ಮನ್ನುದೂರವಿಡಲಾಗುತ್ತಿದೆ ಎಂದು ಶ್ರೀಪ್ರಿಯಾ ದೂರಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿರುವ ಗೌಂಡರ್ ಸಮುದಾಯದ ಎಂ ಶಿವ (38), ಇದು ಪ್ರಚಾರದ ತಂತ್ರ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಶುಕ್ರವಾರ ದೂರು ದಾಖಲಾದ ಕೂಡಲೇ ಅಂದೇ ವಿಚಾರಣೆ ನಡೆಸಿದ್ದೆವು ಎಂದು ಕಂಬೈನಲ್ಲೂರು ಪೊಲೀಸ್ ಇನ್‌ಸ್ಪೆಕ್ಟರ್ ಪಿ ಕಾಳಿಯಪ್ಪನ್ ತಿಳಿಸಿದ್ದಾರೆ

ಕೇರಳ ರಾಜ್ಯ ಲಾಟರಿ ಮಾರಾಟ: ಇಬ್ಬರ ಬಂಧನ

Posted by Vidyamaana on 2024-09-02 07:48:04 |

Share: | | | | |


ಕೇರಳ ರಾಜ್ಯ ಲಾಟರಿ ಮಾರಾಟ: ಇಬ್ಬರ ಬಂಧನ

ಚನ್ನಪಟ್ಟಣ: ಕೇರಳ ರಾಜ್ಯ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಶನಿವಾರ ಬಂಧಿಸಿ ಸಾವಿರಾರು ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ವಶಪಡಿಸಿಕೊಂಡಿದ್ದಾರೆ.

ನಗರದ ಎಂ.ಜಿ.ರಸ್ತೆ ನಿವಾಸಿ ನಾಗೇಶ್(50) ಹಾಗೂ ಬಿ.ಎಂ.ಸ್ಟ್ರೀಟ್ ನಿವಾಸಿ ಸೈಯದ್ ಮುನಾವರ್(35) ಬಂಧಿತ ಆರೋಪಿಗಳು.

ಪುತ್ತಿಲ ಪರಿವಾರದಿಂದ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ – ಬೃಹತ್ ಸಂತ ಸಮ್ಮೇಳನ : ಪೂರ್ವಭಾವಿ ಸಭೆ

Posted by Vidyamaana on 2023-11-20 20:02:34 |

Share: | | | | |


ಪುತ್ತಿಲ ಪರಿವಾರದಿಂದ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ – ಬೃಹತ್ ಸಂತ ಸಮ್ಮೇಳನ : ಪೂರ್ವಭಾವಿ ಸಭೆ

ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಡಿ.24 ಮತ್ತು 25 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಲೋಕಕಲ್ಯಾಣರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಬೃಹತ್ ಸಂತ ಸಮ್ಮೇಳನ ನಡೆಯುವ ಬಗ್ಗೆ ಪೂರ್ವಭಾವಿ ಸಭೆ ಮುಕ್ರಂಪಾಡಿಯ ಸುಭದ್ರ ಕಲ್ಯಾಣಮಂಟಪದಲ್ಲಿ ನಡೆಯಿತು.



ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಡಿ.24 ರ ಸಂಜೆ ಬೊಳುವಾರಿನಿಂದ ತಿರುಪತಿಯಿಂದ ಆಗಮಿಸುವ ದೇವರ ವೈಭವದ ಮೆರವಣಿಗೆ, ನಂತರ ರಾತ್ರಿ ಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮರುದಿನ ಬೆಳಿಗ್ಗೆ ವಿಶೇಷ ಉದಯಾಸ್ತಮಾನ ಪೂಜೆ , ನಂತರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನೋತ್ಸವ ಸಂಜೆ ಬೃಹತ್ ಸಂತ ಸಮ್ಮೇಳನ ನಡೆಯಲಿದೆ.



ಸಭೆಯ ನಂತರ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.


ಎರಡು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರಲಿದ್ದು, ಎರಡು ದಿನವೂ ಅನ್ನದಾನ ಇರಲಿದೆ ಎಂದರು.



ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚನೆ ನಡೆಯಿತು.


ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಶ್ರೀನಿವಾಸ ಕಲ್ಯಾಣೋತ್ಸವದ ಅಧ್ಯಕ್ಷರಾದ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್, ಗಣೇಶ್ ಭಟ್ ಮಕರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು : ಬಿಲ್ ಪಾವತಿಗೆ ನಿವೃತ್ತ ಅರಣ್ಯಾಧಿಕಾರಿಯಿಂದ ಒಂದು ಲಕ್ಷ ಲಂಚಕ್ಕೆ ಬೇಡಿಕೆ

Posted by Vidyamaana on 2023-10-21 20:05:45 |

Share: | | | | |


ಮಂಗಳೂರು : ಬಿಲ್ ಪಾವತಿಗೆ  ನಿವೃತ್ತ ಅರಣ್ಯಾಧಿಕಾರಿಯಿಂದ ಒಂದು ಲಕ್ಷ ಲಂಚಕ್ಕೆ ಬೇಡಿಕೆ

ಮಂಗಳೂರು, ಅ.21: ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ವಿಭಾಗದ ಉಪ ನಿರ್ದೇಶಕಿಯಾಗಿರುವ ಮಹಿಳಾ ಅಧಿಕಾರಿ ಲಾಕ್ ಆಗಿದ್ದಾರೆ. ದಕ್ಷಿಣ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಧಿಕಾರಿ.


2023ರ ಆಗಸ್ಟ್ 31ರಂದು ವಲಯ ಅರಣ್ಯ ಅಧಿಕಾರಿಯಾಗಿ ನಿವೃತ್ತರಾಗಿದ್ದ ಪರಮೇಶ್ ಎನ್.ಪಿ ಎಂಬವರು ಈ ಪ್ರಕರಣದಲ್ಲಿ ದೂರುದಾರರು. ಇವರು ನಿವೃತ್ತಿ ಆಗೋದಕ್ಕೂ ಮುನ್ನ ಕೃಷಿ ಇಲಾಖೆ, ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಿದ್ದರು. ಇವರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 2022-23 ಮತ್ತು 24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಂಟ್ವಾಳ ತಾಲೂಕಿನ ಸಜಿಪ ನಡು, ಸಜಿಪ ಮುನ್ನೂರು, ಸಜಿಪ ಮೂಡ, ಕುರ್ನಾಡು, ನರಿಂಗಾನ, ಬಾಳೆಪುಣಿ, ಮಂಜನಾಡಿ ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ 50 ಲಕ್ಷ ಮೌಲ್ಯದ ಸಸಿಗಳನ್ನು ವಿತರಣೆ ಮಾಡಿದ್ದರು.


ಇದಕ್ಕಾಗಿ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿ ಮಾಲಕರಾದ ಧೋರಿ ಮತ್ತು ಶಬರೀಶ್ ನರ್ಸರಿಯ ಭೈರೇ ಗೌಡ ಎಂಬವರಿಂದ ಖರೀದಿಸಿದ್ದು, ಅವರಿಗೆ 18 ಲಕ್ಷ ಮೊತ್ತ ನೀಡಬೇಕಾಗಿತ್ತು. ಇದಲ್ಲದೆ, ಅರಣ್ಯ ಗುತ್ತಿಗೆದಾರರಿಂದ ನಾಟಿ ಮಾಡಿಸಿದ್ದ ಸಸಿಗಳ ಮೊತ್ತ 32 ಲಕ್ಷ ಬಿಲ್ ಬಾಕಿಯಿತ್ತು. ಮುಂಗಡ ಸಸಿಗಳನ್ನು ಪಡೆದು ನಾಟಿ ಮಾಡಿದ್ದು, ಸರಕಾರದಿಂದ ಹಣ ಬಾರದೆ ಹಣ ಪಾವತಿಯಾಗದೆ ಬಾಕಿ ಉಳಿದಿತ್ತು. ಈ ಹಣವನ್ನು ನೀಡುವರೇ ನರ್ಸರಿ ಮಾಲಕರು ಕೇಳುತ್ತಿದ್ದುದರಿಂದ ನಿವೃತ್ತ ಅಧಿಕಾರಿ ಪರಮೇಶ್ ಬಿಲ್ ಪಾಸ್ ಮಾಡುವಂತೆ ಮಂಗಳೂರು ವಿಭಾಗದ ಕೃಷಿ ನಿರ್ದೇಶಕಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದರು. ಬಿಲ್ ಪಾಸ್ ಮಾಡಿಸಲು ಒಟ್ಟು ಮೊತ್ತದ 15 ಶೇಕಡಾ ಲಂಚ ನೀಡಬೇಕೆಂದು ಭಾರತಮ್ಮ ಬೇಡಿಕೆ ಇರಿಸಿದ್ದರು.


ಈ ಬಗ್ಗೆ ಅ.20ರಂದು ಪರಮೇಶ್, ಕೃಷಿ ನಿರ್ದೇಶಕಿ ಭಾರತಮ್ಮ ಅವರ ಕಚೇರಿಗೆ ತೆರಳಿದಾಗ ಒಂದು ಲಕ್ಷ ರೂ. ಲಂಚ ಮೊದಲು ನೀಡುವಂತೆ ಕೇಳಿಕೊಂಡಿದ್ದರು. ಅಧಿಕಾರಿಯ ಭ್ರಷ್ಟಾಚಾರದ ಬಗ್ಗೆ ಪರಮೇಶ್, ಲೋಕಾಯುಕ್ತ ಗಮನಕ್ಕೆ ತಂದಿದ್ದು ಅವರ ಸೂಚನೆಯಂತೆ ಶನಿವಾರ ಒಂದು ಲಕ್ಷ ರೂ. ಲಂಚ ನೀಡುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಮಹಿಳಾ ಅಧಿಕಾರಿ ಭಾರತಮ್ಮ ಅವರನ್ನು ಲೋಕಾಯುಕ್ತ ಬಂಧಿಸಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿ.ಎ. ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜು, ಕಲಾವತಿ, ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

Posted by Vidyamaana on 2023-06-15 15:37:11 |

Share: | | | | |


ಜೂ. 18: ಪುತ್ತೂರು ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 18ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಬಂಟರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.


ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೂತನ ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಲಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬಂಟರ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಯನ್ ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಬೂಡಿಯಾರ್ ರಾಧಾಕೃಷ್ಣ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮಕ್ಕೆ ಮೊದಲು ಹರೀಣಾಕ್ಷಿ ಜೆ ಶೆಟ್ಟಿ ನೇತೃತ್ವದಲ್ಲಿ  ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೃತ್ಯ ವೈಭವ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಅವರು ಶಾಸಕರ ಅಭಿನಂದನಾ ಸಮಾರಂಭವು ಕಾರ್ಯಕ್ರಮವು ರಾಜಕೀಯ ರಹಿತವಾಗಿ ಎಲ್ಲರನ್ನೂ ಸೇರಿಸಿಕೊಂಡು  ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ಆಶೋಕ್ ರೈ ಸೇರಿದಂತೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಂಟ ಸಮುದಾಯದ 6 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಟ ಸಮುದಾಯವು ನಾಯಕತ್ವದಲ್ಲಿ ಮುಂದೆ ಇದ್ದಾರೆ. ಈ ನಿಟ್ಡಿನಲ್ಲಿ ಮುಂದೆ ಮಾತೃ ಸಂಘದ ವತಿಯಿಂದ ಬಂಟ ಸಮುದಾಯದ ಎಲ್ಲಾ 6 ಶಾಸಕರನ್ನು ದೊಡ್ಡ ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

Recent News


Leave a Comment: