ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

Posted by Vidyamaana on 2023-09-14 17:50:42 |

Share: | | | | |


ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಡಿ ಮಹೇಶ್ ರೈ,ನಿವೃತ್ತ ಕನ್ನಡ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜು ಪುತ್ತೂರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯಾವಾಗ ತಾನೇ ಕಲಿಸಿದ ವಿದ್ಯಾರ್ಥಿ ಶಿಕ್ಷಕನನ್ನು ಮೀರಿ ಬೆಳೆದು ಉನ್ನತಸ್ಥಾನಕ್ಕೇರುತ್ತಾನೋ, ಅಂದು ಶಿಕ್ಷಕನ ಜೀವನ ಸಾರ್ಥಕ ಎಂದರು.


ಅಕ್ಷಯ ಗುರು ಪುರಸ್ಕಾರವನ್ನು ದಯಾನಂದ ರೈ ಕರ‍್ಮಂಡ, ರಾಜ್ಯ ಪ್ರಶಸ್ತಿ ವಿಜೇತರು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಕೋಟಿಯಪ್ಪ ಪೂಜಾರಿ ಸೇರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ನಾರಾಯಣ ಕೆ ನಿವೃತ್ತ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಳಿಗೆ, ರವೀಶ್ ಪಡುಮಲೆ ಸಹಪ್ರಾಧ್ಯಾಪಕರು, ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜು ಉಜಿರೆ, ಶುಭಲತಾ ಹಾರಾಡಿ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು,ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ, ಸಂಧ್ಯಾ ರವೀಶ್ಚಂದ್ರ, ನಿವೃತ್ತ ಅಂಗನವಾಡಿ ಕರ‍್ಯರ‍್ತೆ ಸಂಪ್ಯ, ಉದಯಕುಮಾರ್ ರೈ ಎಸ್, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಸಹ ಶಿಕ್ಷಕರು ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾಕ್ಟರ್ ರವೀಶ್ ಪಡುಮಲೆಯವರು ತಮ್ಮ ಸನ್ಮಾನವನ್ನು ಗುರುಗಳಾದ ರಘುನಾಥ ರೈ ಅವರಿಗೆ ಅರ್ಪಿಸಿದರು.

ಶುಭಲತಾ ಹಾರಾಡಿಯವರು ಶಾಶ್ವತವಾದ ಆನಂದ ನಮ್ಮೊಳಗೆ ಇದೆ ಅದನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದರು.

ಕೋಟಿಯಪ್ಪ ಪೂಜಾರಿ ಸೇರ ಅವರು ತಮ್ಮ ಒಕ್ಕಣೆಯ ಮೂಲಕ ಕಾಲೇಜಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಅತಿಥಿಗಳಾಗಿ ಆಗಮಿಸಿದ ವಿದ್ಯಾಮಾತಾ ಅಕಾಡೆಮಿ ನಿರ್ದೆಶಕ ಭಾಗ್ಯೇಶ್ ರೈ  ಮಾತನಾಡಿ ನಿಮ್ಮ ಬದುಕನ್ನ ಪ್ರೀತಿಸಿ, ಇನ್ನೊಬ್ಬರ ಬದುಕನ್ನ ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿದರು.


ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದ, ಜಯಂತ ನಡುಬೈಲು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವಿಸುವುದು ನಮ್ಮ ಭಾಗ್ಯ ಎಂದರು.


ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಹಾಗೂ ಕಾರ್ಯದರ್ಶಿ ಶೈಲಾಶ್ರೀ ಉಪಸ್ಥಿತರಿದ್ದರು. ಅಕ್ಷಯ ಗುರುಪುರಸ್ಕಾರದ ಸನ್ಮಾನ ಪತ್ರವನ್ನು ಕುಮಾರಿ ಭವ್ಯಶ್ರೀ ಬಿ, ಓದಿದರು. ರಶ್ಮಿ ಕೆ,ಮತ್ತು ಕಿಶನ್ ರಾವ್, ಪ್ರಕೃತಿ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು.


ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿಎ ವಂದಿಸಿದರು. ಪ್ರಾಂಶುಪಾ ಸಂಪತ್ ಪಕ್ಕಳ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಆಶಿಕಾ ಕಾರ್ಯಕ್ರಮ ನಿರೂಪಿಸಿದರು

ಪುತ್ತೂರು: ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ ಅಪಾರ ಹಾನಿ

Posted by Vidyamaana on 2024-03-02 04:26:28 |

Share: | | | | |


ಪುತ್ತೂರು: ಪ್ರಭು ಚರುಂಬುರಿ ಅಂಗಡಿಯಲ್ಲಿ ಅಗ್ನಿ ಅವಘಡ ಅಪಾರ ಹಾನಿ

ಪುತ್ತೂರು : ಇಲ್ಲಿನ ಕೊಂಬೆಟ್ಟಿನಲ್ಲಿರುವ ಜಿ ಎಲ್ ಟ್ರೇಡ್ ಸೆಂಟರ್ ನ ಪ್ರಭು ಚರುಂಬುರಿ ಮಳಿಗೆಯಲ್ಲಿ‌ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣಾಪಾಯ ಸಂಭವಿಸಿಲ್ಲ. ಅದರೆ ಘಟನೆಯಿಂದ ತೀವ್ರ ನಷ್ಟವಾಗಿದೆ.

ಬಂಟ್ವಾಳ ಕೆರೆ ನೀರಿನಲ್ಲಿ ಮುಳುಗಿ ಶಾಲಾ ವಿದ್ಯಾರ್ಥಿ ಅಝೀಂ ಮೃತ್ಯು

Posted by Vidyamaana on 2023-04-08 23:13:50 |

Share: | | | | |


ಬಂಟ್ವಾಳ ಕೆರೆ ನೀರಿನಲ್ಲಿ ಮುಳುಗಿ ಶಾಲಾ ವಿದ್ಯಾರ್ಥಿ ಅಝೀಂ ಮೃತ್ಯು

ಬಂಟ್ವಾಳ :ಬಿ ಸಿ ರೋಡು ಸಮೀಪದ ಮಿತ್ತಬೈಲು ನಿವಾಸಿ ಶಾಲಾ ಬಾಲಕನೋರ್ವ ಶನಿವಾರ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಏ :8 ರಂದು ವರದಿಯಾಗಿದ್ದು, ಮೃತದೇಹ ಶನಿವಾರ ತಡ ರಾತ್ರಿ ವೇಳೆಗೆ ಪತ್ತೆಯಾಗಿದೆ.

ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ ಸಿ ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಎಂಬಾತನೇ ಮೃತ ಬಾಲಕ. ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದುದನ್ನು ಆ ಪರಿಸರದ ಮಂದಿ ಗಮನಿಸಿದ್ದರು, ಆದರೆ ಮಧ್ಯಾಹ್ನದ ಬಳಿಕ ಬಾಲಕ ಹಠಾತ್ ಕಾಣೆಯಾಗಿದ್ದ. ಬಾಲಕನನ್ನು ಸಂಪರ್ಕಿಸಲು ಮನೆಮಂದಿ ಸಾಕಷ್ಟು ಪ್ರಯತ್ನಿಸಿದ್ದರೂ ಸಫಲರಾಗಿರಲಿಲ್ಲ ಎನ್ನಲಾಗಿದೆ. ಬಾಲಕನ ಕೈಯಲ್ಲಿದ್ದ ಮೊಬೈಲ್ ರಿಂಗಿಣಿಸುತ್ತಿದ್ದರೂ ಕರೆ ಸ್ವೀಕಾರ ಆಗದ ಹಿನ್ನಲೆಯಲ್ಲಿ ಆತಂಕಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಬಾಲಕನ ಕೈಯಲ್ಲಿದ್ದ ಮೊಬೈಲ್ ಟ್ರೇಸ್ ಮಾಡಿದಾಗ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಮೇಲ್ಭಾಗದಲ್ಲಿ ಬಾಲಕ ಧರಿಸಿದ್ದ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ತಡರಾತ್ರಿ ವೇಳೆ ಪತ್ತೆಯಾಗಿದೆ.ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಪಿಎಸ್ಐ ನೇಮಕಾತಿ ಹಗರಣ: ಮರು ಪರೀಕ್ಷೆ ಗೆ ಹೈಕೋರ್ಟ್ ಆದೇಶ

Posted by Vidyamaana on 2023-11-10 13:54:17 |

Share: | | | | |


ಪಿಎಸ್ಐ ನೇಮಕಾತಿ ಹಗರಣ: ಮರು ಪರೀಕ್ಷೆ ಗೆ ಹೈಕೋರ್ಟ್ ಆದೇಶ

ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ನೇಮಕಾತಿ ಅಕ್ರಮ ಹಿನ್ನಲೆಯಲ್ಲಿ, ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ, ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ 269 ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಹೈಕೋರ್ಟ್ ಪಿಎಸ್‌ಐ ನೇಮಕಾತಿಯ ಮರು ಪರೀಕ್ಷೆಗೆ ಆದೇಶ ಮಾಡಿದೆ. ಈ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಂತ ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. 


ರಾಜ್ಯ ಸರ್ಕಾರವು ಪಿಎಸ್‌ಐ ನೇಮಕಾ ಅಕ್ರಮದ ನಂತ್ರ ಪರೀಕ್ಷೆ, ಆಯ್ಕೆ ಪಟ್ಟಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಅಭ್ಯರ್ಥಿ ಎನ್ ವಿ ಚಂದನ್ ಸೇರಿದಂತೆ ಆಯ್ಕೆ ಪಟ್ಟಿಯಲ್ಲಿದ್ದ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಸ್ ಸಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.


ಮರು ಪರೀಕ್ಷೆ ವಿರೋಧಿಸಿ 296 ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ನ್ಯಾಯಪೀಠವು, ಮರು ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಆ ಬಳಿಕ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ತನ್ನ ಕಾಯ್ದಿರಿಸಿದ್ದಂತ ತೀರ್ಪನ್ನು ಇಂದು ಪ್ರಕಟಿಸಿದ್ದು, 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತ ಆದೇಶ ಹೊರಡಿಸಿದೆ. ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.


ಅಂದಹಾಗೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಂತ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮ ಎಸಗಿದವರನ್ನು ಪ್ರತ್ಯೇಕಿಸಿ, ಅಕ್ರಮದಲ್ಲಿ ಭಾಗಿಯಾಗಿರದೇ ಇರುವವರನ್ನು ನೇಮಕಾತಿ ಅಂತಿಮಗೊಳಿಸುವಂತೆ ಕೋರಿದ್ದರು. ಈ ಅರ್ಜಿಗೆ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಮಹತ್ವದ ತೀರ್ಪನ್ನು ಹೊರಡಿಸಿದೆ.

ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

Posted by Vidyamaana on 2024-05-19 10:07:18 |

Share: | | | | |


ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

ಪುತ್ತೂರು : ಪವಿತ್ರ ಇಸ್ಲಾಮಿನ ಧಾರ್ಮಿಕ ಶಿಕ್ಷಣ ನೀಡುವ ಪರಂಪರಾಗತ ವಿದ್ಯಾಭ್ಯಾಸ ಪದ್ಧತಿಯಾದ ಪಳ್ಳಿ ದರ್ಸ್  ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧೀನದ ಬಪ್ಪಳಿಗೆ ಮಸ್ಜಿದುನ್ನೂರು ಮೊಹಲ್ಲಾ ಸಮಿತಿ ಆಶ್ರಯದಲ್ಲಿ ಮೇ 19 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಉದ್ಘಾಟನೆಗೊಳ್ಳಲಿದೆ.ಬಹು| ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರು ದರ್ಸ್ ಸಂಪ್ರದಾಯದ ಪಾರಂಪರ್ಯ ಗ್ರಂಥಗಳ ಕರ್ಮ ಶಾಸ್ತ್ರದ ಅಧ್ಯಾಯದ ಭಾಗಗಳನ್ನು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಮೂಲಕ ದರ್ಸ್ ಗೆ ಚಾಲನೆ ನೀಡಲಿದ್ದಾರೆ. 

ದ.ಕ. ಜಿಲ್ಲೆಯ ಪ್ರಖಾಂಡ ವಿದ್ವಾಂಸರುಗಳಲ್ಲೋರ್ವರೂ ಹಿರಿಯ ಮುದರ್ರಿಸರೂ ಬಹು ಇಸ್ಮಾಯಿಲ್ ಫೈಝಿ ಮುದರ್ರಿಸ್ ಸೂರಿಂಜೆಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ತೋಡಾರು ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಬಹು ರಫೀಕ್ ಹುದವಿ ಕೋಲಾರ ಸೇರಿದಂತೆ ಹಲವು ಉಲಮಾ ಗಣ್ಯರು ಆಗಮಿಸಲಿದ್ದಾರೆ.

ಉಪ್ಪಿನಂಗಡಿ: ಮಹಿಳೆ ಮೃತ್ಯು; ಕೊಲೆ ಶಂಕೆ

Posted by Vidyamaana on 2024-06-17 14:08:49 |

Share: | | | | |


ಉಪ್ಪಿನಂಗಡಿ: ಮಹಿಳೆ ಮೃತ್ಯು; ಕೊಲೆ ಶಂಕೆ

ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಇಲ್ಲಿನ ನಿವಾಸಿ ಹೇಮಾವತಿ (37 ) ಮೃತ ಮಹಿಳೆ.

ಹೇಮಾವತಿ ಅವರು ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ನಿನ್ನೆ ರಾತ್ರಿ ಕೃತ್ಯ ನಡೆದಿದೆ.



Leave a Comment: