ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಉಡುಪಿ ವಿಶಾಲ ಗಾಣಿಗ ಕೊಲೆ ಕೇಸ್

Posted by Vidyamaana on 2024-02-03 17:52:10 |

Share: | | | | |


ಉಡುಪಿ ವಿಶಾಲ ಗಾಣಿಗ ಕೊಲೆ ಕೇಸ್

ಉಡುಪಿ, ಫೆ 03: ಸುಮಾರು ಮೂರು ವರ್ಷಗಳ ಹಿಂದೆ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೊಪಿಯನ್ನು ಕೊನೆಗೂ ಬಂಧಿಸಲಾಗಿದೆ.


ತಲೆ ಮರೆಸಿಕೊಂಡಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ಎಂಬ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಲಕ್ನೋದಲ್ಲಿ ಬಂಧಿಸಿದ್ದಾರೆ.

2021ನೇ ಜುಲೈ ತಿಂಗಳಿನಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆಕೆಯ ಗಂಡ ರಾಮಕೃಷ್ಣ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು.




ವಿಶಾಲ ಕೊಲೆ ಪ್ರಕರಣದಲ್ಲಿ ಆಕೆಯ ಗಂಡ ರಾಮಕೃಷ್ಣ ಪ್ರಮುಖ ಆರೋಪಿಯಾಗಿದ್ದಾನೆ. ರಾಮಕೃಷ್ಣನಿಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್‌ನಿಗೂ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ ಇನ್ನೋರ್ವ ಆರೋಪಿ ಧರ್ಮೇಂದ್ರ ಕುಮಾರ್ 


ಈತನಿಗೆ ಬಲೆ ಬೀಸಿದ್ದ ಬ್ರಹ್ಮಾವರ ಠಾಣಾ ಪೊಲೀಸರು ಪಿಎಸ್ಐ ಮಧು ಬಿ. ಇ ಹಾಗೂ ಠಾಣಾ ಸಿಬ್ಬಂದಿಗಳಾದ ಶಾಂತರಾಜ್ ಎಎಸ್‌ಐ, ಸುರೇಶ ಬಾಬುರವರ ತಂಡವು ದಿನಾಂಕ ಫೆ.02 ರಂದು ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ದಿನಾಂಕ ಫೆ.03 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಲೇಖಕಿ ಕೈಹಿಡಿದ ಪತ್ರಕರ್ತ ಗಣೇಶ್ ಕಲ್ಲರ್ಪೆ

Posted by Vidyamaana on 2023-11-01 16:44:34 |

Share: | | | | |


ಲೇಖಕಿ ಕೈಹಿಡಿದ ಪತ್ರಕರ್ತ ಗಣೇಶ್ ಕಲ್ಲರ್ಪೆ

ಪುತ್ತೂರು: ಪತ್ರಕರ್ತ  ಗಣೇಶ್ ಎನ್. ಕಲ್ಲರ್ಪೆಅವರು ಬುಧವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.


ಸಕಲೇಶಪುರದ ಲೇಖಖಿ (ಸುಶ್ಮಿತಾ) ಅವರೊಂದಿಗೆ ಸಕಲೇಶಪುರದ ಶ್ರೀ ಉಮಾಶಂಕರ ಸಮುದಾಯ ಭವನದಲ್ಲಿ ನ 01 ಬುಧವಾರ ದಂದು ನೆರವೇರಿತು.ಗಣೇಶ್ ರವರ

 ವೈವಾಹಿಕ ಜೀವನಕ್ಕೆ ವಿದ್ಯಮಾನ ಬಳಗ ಶುಭವನ್ನು ಹಾರೈಸುತ್ತಿದೆ.


ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಕಲ್ಲರ್ಪೆಯಲ್ಲಿ ಕಾರು, ಆ್ಯಕ್ಟೀವ್ ಅಪಘಾತ: ಸವಾರ ಇಸ್ಮಾಯಿಲ್ ನೈತ್ತಾಡಿ ಮೃತ್ಯು

Posted by Vidyamaana on 2023-06-20 04:29:42 |

Share: | | | | |


ಕಲ್ಲರ್ಪೆಯಲ್ಲಿ ಕಾರು, ಆ್ಯಕ್ಟೀವ್ ಅಪಘಾತ: ಸವಾರ ಇಸ್ಮಾಯಿಲ್ ನೈತ್ತಾಡಿ ಮೃತ್ಯು

ಪುತ್ತೂರು: ಕಾರು ಹಾಗೂ ಆ್ಯಕ್ಟೀವಾ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಕಲ್ಲರ್ಪೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ನೈತ್ತಾಡಿ ಮೂಲದ ನಿವಾಸಿಯಾಗಿರುವ ಇಸ್ಮಾಯಿಲ್ . ಅಡಿಕೆ ವ್ಯಾಪಾರಸ್ಥರಾಗಿರುವ ಇವರು, ಅಜ್ಜಿಕಟ್ಟೆ ಜಮಾತ್ ಕಮಿಟಿ ಸದಸ್ಯರಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಸವಾರ ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ ಓರ್ವ ಪುತ್ರ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ

Posted by Vidyamaana on 2023-11-27 15:51:25 |

Share: | | | | |


ಬೆಂಗಳೂರು: ಶಿವಾಜಿನಗರದಲ್ಲಿ ಕುಸಿದುಬಿದ್ದ ನರ್ಸರಿ ಶಾಲೆ ಕಟ್ಟಡ, ತಪ್ಪಿದ ಭಾರೀ ಅನಾಹುತ


ಬೆಂಗಳೂರು, (ನವೆಂಬರ್ 27): ಬೆಂಗಳೂರಿನ ಶಿವಾಜಿನಗರದಲ್ಲಿ(Shivajinagar) ನರ್ಸರಿ ಶಾಲೆ ಕಟ್ಟಡವೊಂದು (School building collapsed) ಕುಸಿದುಬಿದ್ದಿದೆ. ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಇಂದು (ನವೆಂಬರ್ 27) ಬೆಳಗಿನ ಜಾವ ನಸುಕಿನ ಜಾವ ಬಿದ್ದಿದೆ. ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.


ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಈ ನರ್ಸರಿ ಶಾಲೆಯಲ್ಲಿ ಸುಮಾರು 70ರಿಂದ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಷ್ಟಕ್ಕೂ ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.


ಇದು ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್. ಈ ಸ್ಕೂಲ್ ನಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯ ನಡೆದಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.

BREAKING : ಫಲಿಸಿತು ಕರುನಾಡ ಪ್ರಾರ್ಥನೆ : ಸಾವು ಗೆದ್ದ ಬಂದ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ

Posted by Vidyamaana on 2024-04-04 13:55:45 |

Share: | | | | |


BREAKING : ಫಲಿಸಿತು ಕರುನಾಡ ಪ್ರಾರ್ಥನೆ : ಸಾವು ಗೆದ್ದ ಬಂದ ಸಾತ್ವಿಕ್  ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ

ವಿಜಯಪುರ : ಕೊನೆಗೂ ಫಲಿಸಿತು ಕರುನಾಡಿನ ಪ್ರಾರ್ಥನೆ, ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದ್ದು, ಹೈದರಾಬಾದಿನ ಎಂದ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ.

ವಿಟ್ಲ ಯುವಕನ ಮೇಲೆ ಹಲ್ಲೆ ಪ್ರಕರಣ: ದೂರು-ಪ್ರತಿದೂರು ದಾಖಲು

Posted by Vidyamaana on 2024-04-03 12:03:39 |

Share: | | | | |


ವಿಟ್ಲ  ಯುವಕನ ಮೇಲೆ ಹಲ್ಲೆ ಪ್ರಕರಣ: ದೂರು-ಪ್ರತಿದೂರು ದಾಖಲು

ವಿಟ್ಲ: ಅಡ್ಯನಡ್ಕ ಸಮೀಪದ ನಡೆದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಅಡ್ಯನಡ್ಕ ನಿವಾಸಿ ಮಹಮ್ಮದ್ ಅಲಿ ಎ (36)ಎಂಬವರ ದೂರಿನಂತೆ ಮಧ್ಯಾಹ್ನ, ಗಣೇಶ್ ಎಂಬಾತನು ಮನೆಯ ಬಳಿಗೆ ಬಂದು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು, ಅವ್ಯಾಚವಾಗಿ ಬೈದು, ತಾನು ತಂದಿದ್ದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಸ್ಥಳೀಯರು ಬರುವುದನ್ನು ಕಂಡು ಆರೋಪಿಯು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


Recent News


Leave a Comment: