ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಎಚ್.ಡಿ ರೇವಣ್ಣಗೆ ಕೊನೆಗೂ ಜಾಮೀನು ಮಂಜೂರು

Posted by Vidyamaana on 2024-05-14 04:36:31 |

Share: | | | | |


ಎಚ್.ಡಿ ರೇವಣ್ಣಗೆ ಕೊನೆಗೂ ಜಾಮೀನು ಮಂಜೂರು

ಬೆಂಗಳೂರು, ಮೇ 13: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಿಸಲು ಪ್ರಚೋದಿಸಿದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಜೆಡಿಎಸ್ ಶಾಸಕ ಎಚ್‌.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. 

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ಪ್ರಕರಣದ ಕುರಿತು ವಾದ ಆಲಿಸಿದ ನ್ಯಾಯಾಧೀಶರು, ರೇವಣ್ಣಗೆ 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದರು.

ಪಿ.ಎಚ್.ಡಿ. ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ : ಉಳ್ಳಾಲ ಠಾಣೆಗೆ ಪುತ್ತಿಲ ಭೇಟಿ ; ಠಾಣಾಧಿಕಾರಿಗಳ ಜೊತೆ ಮಾತುಕತೆ

Posted by Vidyamaana on 2024-02-28 07:52:06 |

Share: | | | | |


ಪಿ.ಎಚ್.ಡಿ. ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ : ಉಳ್ಳಾಲ ಠಾಣೆಗೆ ಪುತ್ತಿಲ ಭೇಟಿ ; ಠಾಣಾಧಿಕಾರಿಗಳ ಜೊತೆ ಮಾತುಕತೆ

ಮಂಗಳೂರು : ಪಿಎಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.ಗಾಂಜಾ ಪ್ರಕರಣದ ಆರೋಪಿ, ಡ್ರಗ್ಸ್ ಪೆಡ್ಲರ್ ಶಾರೂಕ್ ಶೇಕ್ ಎಂಬಾತ ಡ್ರಗ್ಸ್ ಹಾಗೂ ಇನ್ನಿತರ ಮೋಸದಾಟವಾಡಿ ಆಕೆಯನ್ನು ಅಪಹರಿಸಿರುವುದು ಸ್ಪಷ್ಟವಾಗಿದೆ ಎನ್ನಲಾಗುತ್ತಿದೆ.ಎಂಎಸ್ಸಿ ಪೂರೈಸಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಳು. ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಯನ್ನು ಫೆ.17ರಂದು ರೈಲಿನಲ್ಲಿ ಶಾರೂಕ್ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಇಲಾಖೆ ತೀವ್ರ ತನಿಖೆ ನಡೆಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಆಕೆಯನ್ನು ಕರೆತರಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದರು.


ಶಾರುಕ್ ಶೇಖ್ ಕತಾರಿನಲ್ಲಿದ್ದಾಗ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನಲಾಗಿದೆ. ಆನಂತರ ಊರಿಗೆ ಬಂದು ಡ್ರಗ್ಸ್ ಪೆಡ್ಲರ್ ಆಗಿ ಹಲವು ಯುವ ಜನತೆಯನ್ನು ಡ್ರಗ್ಸ್ ಜಾಲಕ್ಕೆ ಸಿಲುಕಿಸುತ್ತಿದ್ದ ಎನ್ನಲಾಗಿದೆ.ಯಾವುದೇ ಉದ್ಯೋಗ ಇಲ್ಲದ ಶಾರೂಖ್ ಗಾಂಜಾ ವ್ಯವಹಾರದ ಹಣದಲ್ಲೇ ಬದುಕುತಿದ್ದ ಎನ್ನಲಾಗಿದೆ.


ಠಾಣಾಧಿಕಾರಿ ಜೊತೆ ಮಾತನಾಡಿದ ಪುತ್ತಿಲ, ಡ್ರಗ್ ಪೆಡ್ಲರ್ ಶಾರೂಕ್ ನನ್ನು ಶೀಘ್ರ ಬಂಧಿಸಿ ಈತನ ಜಾಲದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.ಈಗಾಗಲೇ ಉಳ್ಳಾಲದಲ್ಲಿ ಡ್ರಗ್ಸ್ ಜಾಲದಲ್ಲಿ ಯುವತಿಯರನ್ನು ಸಿಲುಕಿಸಿ ಲವ್ ಜಿಹಾದ್ ಮೂಲಕ ಭಯೋತ್ಪಾದನೆಗೆ ಸಿಲುಕಿಸಿರುವುದು ಗೊತ್ತಿರುವಾಗ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದರು. ಉಳ್ಳಾಲದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಇಡೀ ಜಿಲ್ಲೆಗೆ ಅಪಾಯಕಾರಿ ಬೆಳವಣಿಗೆ, ಇದನ್ನು ಮಟ್ಟ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಾರಕವಾಗಲಿದೆ ಎಂದು ಅರುಣ್ ಪುತ್ತಿಲ ಠಾಣಾಧಿಕಾರಿಗಳಲ್ಲಿ ಹೇಳಿದರು.


ಶಿಕ್ಷಣ ಕಾಶಿಯಾಗಿರುವ ತುಳುನಾಡಿನಲ್ಲಿ ಕೆಲಸ ಇಲ್ಲದ ಕೆಲ ಯುವಕರು ಗಾಂಜಾ ಡ್ರಗ್ಸ್ ವ್ಯವಹಾರ ಮೂಲಕ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಕೆಲಸ ಇಲ್ಲದೆ ಶೋಕಿ ಮಾಡುವ ಕೆಲವರ ಬಗ್ಗೆ ಇಲಾಖೆ ಗಮನಿಸಬೇಕು ಹಾಗೂ ಪಿಜಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರುಪೊಲೀಸ್ ಇಲಾಖೆಯವರು ಇದಕ್ಕೆ ಸೂಕ್ತ ರೀತಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ಆಕೆ ಆಗಮಿಸಿದ ಕೂಡಲೇ ಸೂಕ್ತ ಹಾಸ್ಟೇಲ್ ವ್ಯವಸ್ಥೆಗೆ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಬೇಕೆಂದು ಪುತ್ತಿಲರ ಜೊತೆ ಠಾಣಾಧಿಕಾರಿ ಹೇಳಿದರು.


ಉಳ್ಳಾಲದ ಹಿಂದೂ ಮುಖಂಡ ಅರುಣ್ ಉಳ್ಳಾಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಉಡುಪಿ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್

Posted by Vidyamaana on 2023-12-30 22:43:45 |

Share: | | | | |


ಉಡುಪಿ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್

ಉಡುಪಿ, ಡಿ.30: ನಗರದ ಪ್ರಸಿದ್ದ ಬಟ್ಟೆ ಮಳಿಗೆ ಜಯಲಕ್ಷ್ಮಿ ಸಿಲ್ಕ್ಸ್ ನಲ್ಲಿ ಶನಿವಾರ ಮಧ್ಯಾಹ್ನ ಗನ್ ಮಿಸ್‌ ಫೈರಿಂಗ್‌ ಆಗಿದ್ದು ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.


ಬಟ್ಟೆ ಮಳಿಗೆಯಲ್ಲಿ ಗ್ರಾಹಕರು ಯಾರೋ ಗನ್ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದ್ದು ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್‌ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ಯಾರಿಗೆ ಸೇರಿದ್ದು, ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ಪ್ರಮಾಣ ವಚನ

Posted by Vidyamaana on 2023-05-17 08:04:08 |

Share: | | | | |


ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ಪ್ರಮಾಣ ವಚನ

ಪುತ್ತೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ನಾಳೆ ಮಧ್ಯಾಹ್ನ 3.30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಈ ಬಗ್ಗೆ ಇದೀಗ ಅಧಿಕೃತ ಪ್ರಕಟಣೆ ಹೊರ ಬಿದ್ದಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ಬೋಧಿಸಲಿದ್ದಾರೆ.

ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ

Posted by Vidyamaana on 2024-02-08 11:26:13 |

Share: | | | | |


ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ

ವಿಟ್ಲ : ಬ್ಯಾಂಕ್ ನೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 8ರಂದು ನಡೆದಿದೆ.

ಗ್ಯಾಸ್ ಕಟ್ಟರ್ ಮೂಲಕ ಬ್ಯಾಂಕ್ ಶಾಖಾ ಕಟ್ಟಡದ ಹಿಂಬದಿಯ ಕಿಟಕಿ ತುಂಡರಿಸಿ  ದರೋಡೆಕೋರರು

 ಒಳನುಗ್ಗಿದ್ದಾರೆನ್ನಲಾಗಿದೆ.ಗ್ಯಾಸ್ ಕಟ್ಟರ್ ಮೂಲಕ ಸೇಫ್ ಲಾಕರ್ ನಲ್ಲಿದ್ದ  ಅಪಾರ ಪ್ರಮಾಣದ ಸೊತ್ತು ದರೋಡೆಕೋರರ ಪಾಲುಗಿದೆ ಎಂದು ತಿಳಿದು ಬಂದಿದೆ


ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕ್ ನ ಸುತ್ತಲೂ ಕಾಡು-ಪೊದೆಗಳೆ ಆವರಿಸಿಕೊಂಡಿದೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ವಿಟ್ಲ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಆಗಮಿಸಿ ತನಿಖೆ ಕೈಗೊಂಡಿದ್ದಾರೆ


ಬಂಟ್ವಾಳದ ಗೋದಾಮಿನಲ್ಲಿದ್ದ ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ

Posted by Vidyamaana on 2023-08-18 13:45:57 |

Share: | | | | |


ಬಂಟ್ವಾಳದ ಗೋದಾಮಿನಲ್ಲಿದ್ದ ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ

ಬಂಟ್ವಾಳ: : ಬಂಟ್ವಾಳದ ಕಳ್ಳಿಗೆಯ ಕೆಎಸ್ಸಾರ್ಟಿಸಿ ಡಿಪೋ ಬಳಿಯಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ 

ಇಡಲಾಗಿದ್ದ ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗೋಣಿ ಚೀಲದಲ್ಲಿ ತುಂಬಿಡಲಾಗಿದ್ದ ಸುಮಾರು 1.32 ಕೋಟಿ ರೂಪಾಯಿ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ಕಾಣೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ರೇಷನ್ ವಿತರಣೆಯಲ್ಲಿ ವಿಳಂಬ ಆಗಿರುವುದರಿಂದ ಸಂಶಯಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು ಗೋದಾಮಿನಲ್ಲಿ ತಪಾಸಣೆ ನಡೆಸಿದಾಗ ಅಕ್ಕಿ ಗೋಣಿ ಕಡಿಮೆಯಿರುವುದು ಕಂಡುಬಂದಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪಡಿತರ ಇಲಾಖೆಯ ವ್ಯವಸ್ಥಾಪಕ ಶರತ್ ಕುಮಾರ್, ಬಂಟ್ವಾಳದ ಗೋದಾಮಿನ ಮ್ಯಾನೇಜರ್ ವಿಜಯ್ ಎಂಬವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಈಗಾಗಲೇ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಡಿ ತಲಾ ಹತ್ತು ಕೇಜಿಯಂತೆ ಅಕ್ಕಿ ಪೂರೈಸಲು ಅಕ್ಕಿ ದಾಸ್ತಾನಿಲ್ಲದೆ, ಅದರ ಬದಲು ತಲಾ 5 ಕೇಜಿಯಂತೆ ಹಣ ಕೊಡಲಾಗುತ್ತಿದೆ. ಆದರೆ, ಇಲ್ಲಿ ರಾಜ್ಯ ಸರಕಾರದಿಂದ ಪೂರೈಕೆಯಾಗಿರುವ ಪಡಿತರ ಅಕ್ಕಿಯೇ ಇಲ್ಲಿ ರೇಶನ್ ಅಂಗಡಿಗಳಿಗೆ ತಲುಪದೆ ಮಧ್ಯವರ್ತಿಗಳ ಪಾಲಾಗಿದೆಯೇ ಎನ್ನುವ ಸಂಶಯ ಉಂಟಾಗಿದೆ. ಗೋದಾಮು ವ್ಯವಸ್ಥಾಪಕನ ಕೈವಾಡ ಇದೆಯೇ, ಯಾರು ಇದರ ಹಿಂದೆ ಇದ್ದಾರೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

Recent News


Leave a Comment: