ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಬೆಳ್ತಂಗಡಿ :ಸಿ.ಎಂ.ಸಿದ್ದರಾಮಯ್ಯ ಬಗ್ಗೆ ಅಶ್ಲೀಲ ಆಡಿಯೋ ವೈರಲ್

Posted by Vidyamaana on 2023-11-20 11:47:17 |

Share: | | | | |


ಬೆಳ್ತಂಗಡಿ :ಸಿ.ಎಂ.ಸಿದ್ದರಾಮಯ್ಯ ಬಗ್ಗೆ ಅಶ್ಲೀಲ ಆಡಿಯೋ ವೈರಲ್

ಬೆಳ್ತಂಗಡಿ : ಸಿ.ಎಂ ಸಿದ್ದರಾಮಯ್ಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತಾನಾಡಿದ ಆಡಿಯೋ ವೈರಲ್ ಅಗಿದ್ದು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನ.19 ರಂದು ಸಂಜೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿಯಾಗಿರುವ ವೃತ್ತಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ಕೊಕ್ಕಡ ಬಿಜೆಪಿ ಕಾರ್ಯಕರ್ತನಾಗಿರುವ ರಜಿತ್ ಕೊಕ್ಕಡ @ ರಜಿತ್ ಭಂಡಾರಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಬಗ್ಗೆ ಅಶ್ಲೀಲವಾಗಿ ನಿಂದಿಸಿ ಮಾತಾನಾಡಿರುವ ಆಡಿಯೋ ಹರಿಯಬಿಟ್ಟಿದ್ದು ಇದರ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತ ಹಕಿಮ್ ಕೊಕ್ಕಡ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಧರ್ಮಸ್ಥಳ ಪೊಲೀಸರು ಆರೋಪಿ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ರಜಿತ್ ಕೊಕ್ಕಡ @ ರಜಿತ್ ಭಂಡಾರಿ ಮೇಲೆ ಐಪಿಸಿ 1860 (u/s 153A,504,505(2)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಮ್ ಕೊಕ್ಕಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿದೇವ್ ಅರಿಗ, ಯುವ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಸುಧೀರ್ ದೇವಾಡಿಗ, ರಬಿನ್,ಮೋಹಿತ್ ಜೊತೆಯಲ್ಲಿದ್ದರು.

ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

Posted by Vidyamaana on 2023-12-08 08:11:30 |

Share: | | | | |


ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ (ಜನತಾ ನ್ಯಾಯಾಲಯ) ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್‌ ಆಗಿದೆ. ವ್ಯಾಜ್ಯ ಮುಕ್ತ, ಸೌಹಾರ್ದಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅದಾಲತ್ ಮಾಡಲಾಗುತ್ತಿದೆ.


ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸಹಿತ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣ ಪೀಠಗಳಲ್ಲಿ ಲೋಕ್‌ ಅದಾಲತ್‌ ಕಲಾಪಗಳು ನಡೆಯಲಿವೆ.


ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಏರಿಕೆಯಾಗಬಹುದು.


ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಜೊತೆಗೆ ಇದ್ದರು.

ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮ

Posted by Vidyamaana on 2023-09-21 16:26:05 |

Share: | | | | |


ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮ

ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ , ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.


ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ ಕೊಡಿಸಿದ ತಂದೆ ತಾಯಿಯೇ ನಮಗೆ ನಿಜವಾದ ದೇವರು. ಮನೆಯೊಳಗೆ ಜೀವಂತವಾಗಿರುವ ದೇವರ ಆಶೀರ್ವಾದ ಪಡೆಯದೆ ನಾವು ಎಷ್ಟು ಸಮಾಜ ಸೇವೆ ಮಾಡಿದರೂ ಏನೂ ಫಲವಿಲ್ಲ. ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾದ ನಾವು ಬಳಿಕ ತಂದೆ ತಾಯಿಯನ್ನು ಮರೆತು ಬಿಡುತ್ತೇವೆ, ಅವರು ನಮಗೆ ಮಾಡಿದ ತ್ಯಾಗವನ್ನು ಗ್ರಹಿಸುವ ಶಕ್ತಿಯೂ ನಮಗೆ ಇರುವುದಿಲ್ಲ. ಮುದಿ ಪ್ರಾಯದಲ್ಲಿ ಅವರನ್ನು ನಾವು ಆಶ್ರಮಕ್ಕೆ ಸೇರಿಸಿ ಸುಖ ಜೀವನ ನಡೆಸುತ್ತಿದ್ದೇವೆ ಇದು ಖಂಡಿತವಾಗಿಯೂ ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ತಂದೆ ತಾಯಿಯನ್ನು ದೂರ ಮಾಡುವ ಸಂಸ್ಕಾರ ನಮ್ಮದಲ್ಲ, ಅದು ಭಾರತೀಯ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.


ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಧಾಕರ ರಾವ್ ಆರ್ಯಾಪು, ಕಬಕ ಸರಕಾರಿ ಶಾಲೆಯ ಮುಖ್ಯ ಗುರು ಬಾಬು,  ಕುಂಬ್ರ ದುರ್ಗಾ ಪ್ರಸಾದ್ ರೈ, ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಂ ಎಸ್ ಕೇಶವ ಶಾಂತಿವನ, ರಾಮಯ್ಯ ಗೌಡ ಬೊಳ್ಳಾಡಿ, ರಾಜೇಶ್ ರೈ ಪರ್ಪುಂಜ , ಮಾಧವ ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.

ಅಡಿಕೆ ಕಳ್ಳತನ ಲಕ್ಷಾಂತರ ರೂ. ಮೌಲ್ಯದ ಆಡು ಕೋಳಿ ಶೆಡ್ ನಾಶ ಪ್ರಕರಣ

Posted by Vidyamaana on 2023-08-05 15:29:18 |

Share: | | | | |


ಅಡಿಕೆ ಕಳ್ಳತನ ಲಕ್ಷಾಂತರ ರೂ. ಮೌಲ್ಯದ ಆಡು ಕೋಳಿ ಶೆಡ್ ನಾಶ ಪ್ರಕರಣ

ಪುತ್ತೂರು: 81 ವರ್ಷ ಪ್ರಾಯದ ಹಿರಿಯ ನಾಗರಿಕರ ಜಮೀನನ್ನು ಲೀಸಿಗೆ ಕೊಡಲು ಒತ್ತಾಯಿಸಿ, ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಬೆಳ್ಳಾರೆ ಪೊಲೀಸ್ ಠಾಣೆಗೆ ಆದೇಶಿಸಿದೆ.

ಕುರಿಯ ಗ್ರಾಮದ ದೇರ್ಕಜೆ ವೆಂಕಟ್ರಮಣ ಭಟ್, ಸವಣೂರು ಗ್ರಾಮದ ಪಣೆಮಜಲು ನಿವಾಸಿ ಜಾಫರ್, ಬಪ್ಪಳಿಗೆ ನಿವಾಸಿ ಸುಭಾಶ್ ರೈ ಆರೋಪಿಗಳು. ಇವರು ಹಿರಿಯ ನಾಗರಿಕೆ, ಕಡಬ ತಾಲೂಕಿನ ಸವಣೂರು ಗ್ರಾಮದ ಸೋಂಪಾಡಿ ನಿವಾಸಿ ನಾಗರತ್ನಮ್ಮ (81 ವರ್ಷ) ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಲ್ಲಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಮಾತ್ರವಲ್ಲ ಕೋಳಿ ಹಾಗೂ ಆಡು ಸಾಕಿಕೊಂಡಿದ್ದ ದೊಡ್ಡ ಶೆಡ್ಡನ್ನು ಜೆಸಿಬಿಯಲ್ಲಿ ಕೆಡವಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ದೂರು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ನಾಗರತ್ನಮ್ಮ ಅವರು ನ್ಯಾಯಾಲಯದ ಕದ ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ?

ನಾಗರತ್ನಮ್ಮ ಅವರು ಪುಣ್ಚಪ್ಪಾಡಿಯಲ್ಲಿ ಜಮೀನು ಹೊಂದಿದ್ದು, ಅದನ್ನು ಲೀಸಿಗೆ ಕೊಡುವಂತೆ ಆರೋಪಿಗಳು ಒತ್ತಾಯಿಸಿದ್ದರು. ಕೊಡದೇ ಇದ್ದಾಗ ಮೇ 30ರಂದು ನಾಗರತ್ನಮ್ಮ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು, ಹಿರಿಯ ನಾಗರಿಕೆ ನಾಗರತ್ನಮ್ಮ ಅವರಿಗೆ ಬೆದರಿಕೆ ಹಾಕಿದ್ದರು. ಜಮೀನು ಕೊಡದೇ ಇದ್ದರೆ ನಾಗರತ್ನಮ್ಮ ಅವರ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಇದನ್ನು ನಾಗರತ್ನಮ್ಮ ಅವರ ಅಳಿಯ ಆಕ್ಷೇಪಿಸಿದಾಗ, ಅವರಿಗೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಇದೇ ಸಂದರ್ಭ ಗೋಣಿಯಲ್ಲಿ ಕಟ್ಟಿಟ್ಟಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಹೊತ್ತೊಯ್ದಿದ್ದು ಮಾತ್ರವಲ್ಲ, ಆಡು ಹಾಗೂ ಕೋಳಿ ಸಾಕಿಕೊಂಡಿದ್ದ ಬೃಹತ್ ಶೆಡ್ಡನ್ನು ಜೆಸಿಬಿಯಿಂದ ಮುರಿದು ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ಹೇಳಲಾಗಿದೆ.

ಸುಳ್ಯ: ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Posted by Vidyamaana on 2023-08-08 11:59:58 |

Share: | | | | |


ಸುಳ್ಯ: ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಸುಳ್ಯ: ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾದ ಮೂಲಕ ಪ್ರತಿಭಟನೆ ನಡೆಯಿತು.ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ಕಾಲ್ನಡಿಗೆ ಸಾಗಿ ಸುಳ್ಯದಲ್ಲಿ ಬೃಹತ್ ಸಭೆ ನಡೆಯಿತು.



ಸೌಜನ್ಯ ತಾಯಿ ಕುಸುಮಾವತಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು.



ಬೃಹತ್ ಜಾಥಾದಲ್ಲಿ ಪಕ್ಷ, ಜಾತಿ, ಧರ್ಮ ಮರೆತು ಹೋರಾಟ ನಡೆಸಲಾಗುತ್ತಿದೆ. ಸುಳ್ಯದ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ.


ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರ ನಡೆದಿದ್ದ ಬೃಹತ್ ಸಮಾವೇಶ ನಡೆಸಲಾಗಿತ್ತು. ಸಮಾವೇಶದಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿತ್ತು. ಈ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

Posted by Vidyamaana on 2023-06-16 23:14:10 |

Share: | | | | |


ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಮತ್ತು ನಗರ ಫೀಡರ್‌ನಲ್ಲಿ ಜೂ.17ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 2ರ ವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆ.ವಿ ಮತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ನಗರ, ಕಬಕ, ಕೊಡಿಪ್ಪಾಡಿ, ಬನ್ನೂರು, ಬಲ್ನಾಡು, ನವನಗರ, ವಿವೇಕಾನಂದ ಕಾಲೇಜು ಪರಿಸರ, ಪಡ್ಡಾಯೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ, ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Recent News


Leave a Comment: