ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ ಪ್ರಕರಣ – ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ಅರುಣ್ ಪುತ್ತಿಲ ಭಾಗಿ - ಸ್ಥಳಕ್ಕೆ ಎಸ್ಪಿ ಭೇಟಿ

Posted by Vidyamaana on 2024-03-31 08:00:09 |

Share: | | | | |


ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ ಪ್ರಕರಣ – ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ಅರುಣ್ ಪುತ್ತಿಲ ಭಾಗಿ - ಸ್ಥಳಕ್ಕೆ ಎಸ್ಪಿ ಭೇಟಿ

ಕಡಬ, ಮಾ.31. ಅಕ್ರಮ ದನ ಸಾಗಾಟದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಎಸ್ಪಿ ಬರುವಂತೆ ಪಟ್ಟು ಹಿಡಿದ ಘಟನೆ ತಡರಾತ್ರಿ ಕಡಬದಲ್ಲಿ ನಡೆದಿದೆ.ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಶನಿವಾರ ರಾತ್ರಿ ವೇಳೆಗೆ ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ

ಕಡೆಯಿಂದ ಕಡಬ ಕಡೆಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ವಿಠಲ ರೈಯವರು ಸ್ಥಳದಲ್ಲೇ ಮೃತಪಟ್ಟಿದ್ದರು.ಆರೋಪಿಗಳು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿನ ದಿ| ರಶೀದ್ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದರು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ, ವಿದೇಶಕ್ಕೆ ಹೋದರಾ ಸಂಸದ

Posted by Vidyamaana on 2024-04-28 05:58:23 |

Share: | | | | |


ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ,  ವಿದೇಶಕ್ಕೆ ಹೋದರಾ ಸಂಸದ

ಬೆಂಗಳೂರು : ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (special investigation team) ರಚನೆಯಾಗಲಿದೆ. ರಾಜ್ಯ ಸರ್ಕಾರದಿಂದ (state government) ಇದೀಗ ಆದೇಶ ಹೊರಬಿದ್ದಿದೆ.ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಣುಕುಗಳು ಈಗಾಗಲೇ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ (SIT) ತನಿಖೆ ನಡೆಸುವಂತೆ ಮಹಿಳಾ ಆಯೋಗದ (Womens Commission) ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಟ್ವೀಟ್ ಮಾಡಿ, ಮಾಹಿತಿ ನೀಡಿದ್ದಾರೆ.

ಪುರುಷರಕಟ್ಟೆ: ಹೊತ್ತಿ ಉರಿದ ವಿಶ್ವಸ್ ಹಾರ್ಡ್ ವೇ‌ರ್ ಅಂಗಡಿ

Posted by Vidyamaana on 2024-09-01 07:29:08 |

Share: | | | | |


ಪುರುಷರಕಟ್ಟೆ: ಹೊತ್ತಿ ಉರಿದ ವಿಶ್ವಸ್ ಹಾರ್ಡ್ ವೇ‌ರ್ ಅಂಗಡಿ

ಪುತ್ತೂರು: ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

ಕೊಹ್ಲಿ ಆಕರ್ಷಕ ಶತಕ: ಟೀಮ್ ಇಂಡಿಯಾಕ್ಕೆ ಶರಣಾದ ಬಾಂಗ್ಲಾ

Posted by Vidyamaana on 2023-10-19 21:40:35 |

Share: | | | | |


ಕೊಹ್ಲಿ ಆಕರ್ಷಕ ಶತಕ: ಟೀಮ್ ಇಂಡಿಯಾಕ್ಕೆ ಶರಣಾದ ಬಾಂಗ್ಲಾ

ಪುಣೆ :ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ದ ವಿರುದ್ಧ ಭಾರತ 7 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅವರ ಅಮೋಘ ಶತಕ ಪಂದ್ಯದ ಆಕರ್ಷಣೆಯಾಗಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ಗೆಲ್ಲಲು 257 ರನ್ ಗಳ ಗುರಿ ಭಾರತಕ್ಕೆ ನೀಡಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟರು. 48 ರನ್ ಗಳಿಸಿದ್ದ ಶರ್ಮ ಹಸನ್ ಮಹಮೂದ್ ಎಸೆದ ಚೆಂಡನ್ನು ದೊಡ್ಡ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ ನಲ್ಲಿ ಹೃದೋಯ್ ಕ್ಯಾಚಿತ್ತು ನಿರ್ಗಮಿಸಿದರು. ಅರ್ಧ ಶತಕದಿಂದ ವಂಚಿತರಾದರು. ಗಿಲ್ 53 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 19 ರನ್ ಗಳಿಸಿ ಔಟಾದರು.


ಅಮೋಘ ಆಟವಾಡಿದ ಕೊಹ್ಲಿ ಭರ್ಜರಿ ಆಟವಾಡಿ ಅಜೇಯ ಶತಕ ಸಿಡಿಸಿದರು. 97 ಎಸೆತಗಳಲ್ಲಿ 103 ರನ್ ಗಳಿಸಿದರು. 6ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಕೊಹ್ಲಿ ಅವರಿಗೆ ಶತಕ ಸಂಭ್ರಮಿಸಲು ನೇರವಾದ ರಾಹುಲ್ ಔಟಾಗದೆ 34 ರನ್ ಗಳಿಸಿದರು.


ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ ಮೊದಲ ವಿಕೆಟ್ ಗೆ 93 ರನ್ ಗಳ ಜತೆಯಾಟವಾಡಿದರು. ತಂಜಿದ್ ಹಸನ್ 51 ರನ್ ಮತ್ತು ಲಿಟ್ಟನ್ ದಾಸ್ 66 ರನ್ ಗಳಿಸಿ ಔಟಾದರು. ನಜ್ಮುಲ್ ಹೊಸೈನ್ ಶಾಂಟೊ 8, ಮೆಹಿದಿ ಹಸನ್ ಮಿರಾಜ್ 3 ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ತೌಹಿದ್ ಹೃದಯ್ 16 ,ಮುಶ್ಫಿಕರ್ ರಹೀಮ್ 38, ನಸುಮ್ ಅಹ್ಮದ್ 14, ಮಹಮುದುಲ್ಲಾ 46 ರನ್ ಗಳಿಸಿ ಔಟಾದರುಭಾರತದ ಪರ ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಮತ್ತು ಕುಲದೀಪ್ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಯಾದರು

ಹತ್ತೂರಿನ ಒಡೆಯ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ - ಇಲ್ಲೇ ನ್ಯಾಯ ತೀರ್ಮಾನ ಆಗಲಿ” : ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ನಡೆ ಪ್ರಾರ್ಥನೆ ನೆರವೇರಿಸಿದ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ

Posted by Vidyamaana on 2023-02-02 04:15:00 |

Share: | | | | |


ಹತ್ತೂರಿನ ಒಡೆಯ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ - ಇಲ್ಲೇ ನ್ಯಾಯ ತೀರ್ಮಾನ ಆಗಲಿ” :  ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ನಡೆ ಪ್ರಾರ್ಥನೆ ನೆರವೇರಿಸಿದ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ

ನಮಗೆ ಮಹಾಲಿಂಗೇಶ್ವರನ ಸನ್ನಿದಾನವೇ ದೊಡ್ಡ ನ್ಯಾಯದೇಗುಲ – ಇಲ್ಲೇ ನ್ಯಾಯ ತೀರ್ಮಾನ ಆಗಲಿ’ ಎಂದು ಕಂಬಳಕ್ಕೆ ಅಪಚಾರ ಬಯಸುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.1ರಂದು ನಡೆ ಪ್ರಾರ್ಥನೆ ನೆರವೇರಿಸಿದ್ದಾರೆ.ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಜ.28-29ರಂದು ನಡೆದ 30ನೇ ವರ್ಷದ ಕೋಟಿ-ಚೆನಯ್ಯ ಕಂಬಳ ಕೂಟ ಯಶಸ್ವಿಯಾಗಿ ನಡೆದಿದ್ದು, ಅಲ್ಲಿಗೆ ಆಗಮಿಸಿದ್ದ ನಟಿಯ ಜೊತೆ ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆ ವರದಿಗಳು ವೈರಲ್ ಆಗಿದ್ದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿಯನ್ನು ಹಾಗೂ ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಅಪಚಾರ ಬಯಸುವ ಕಾಣದ ಕೈಗಳ ವಿರುದ್ಧ ದೇವರೇ ನೋಡಿಕೊಳ್ಳಲಿ ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿ ದೇವರ ನಡೆಯಲ್ಲಿ ನಿಂತು ಪ್ರಾರ್ಥಿಸಿದರು.ಆ ಸಂದರ್ಭ ಪ್ರಧಾನ ಅರ್ಚಕರು ವೇ| ವಸಂತ ಕೆದಿಲಾಯರು , ಬಲ್ನಾಡು ಉಳ್ಳಾಲ್ತಿ, ಕಾಣತ್ತೂರು ನಾಲ್ವರು ದೈವಂಗಳ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಪ್ರಸಾದ ಹಾಕಿ ನಾಗದೇವರಿಗೆ ನಾಗತಂಬಿಲ ಕೊಟ್ಟು ನಡೆಯುವ ಕಂಬಳಕ್ಕೆ ಅಪಚಾರ ಬಯಸಲು ಪ್ರಯತ್ನಿಸುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಕಂಬಳ ಸಮಿತಿಗೆ ಪ್ರಸಾದ ವಿತರಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಕಂಬಳ ಸಮಿತಿ ಈ ಘಟನೆಗೆ ಕಾರಣವಲ್ಲ ಎಂದು ನಟಿ ಸಾನ್ಯ ಅಯ್ಯರ್ ಹೇಳಿದ್ದಾಳೆ. ಅವಳು ಒಮ್ಮೆ ಕಾರ್ಯಕ್ರಮ ಮುಗಿಸಿ ಹೋಗಿ ನಂತರ ಬಂದದ್ದು ಆಯೋಜಕರಿಗೆ ಗೊತ್ತಿರಲಿಲ್ಲ. ಈಗಲೂ ಅವಳು ದೂರು ಕೊಟ್ಟರೆ ಅವಳ ಜೊತೆ ನಾವು ನಿಂತು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದರು.ಈ ಘಟನೆಗೆ ಧರ್ಮಗಳನ್ನು ಎಳೆದು ತರುವ ಪ್ರಯತ್ನ ನಡೆದಿದೆ. ಅನ್ಯಮತಿಯ ಯಾರೂ ಅಂತ ಬರೆದವರಿಗೆ ಗೊತ್ತಿರಬಹುದು, ಗೊತ್ತಿದ್ದರೆ ಗೊತ್ತಿರುವವರು ಪೊಲೀಸ್ ದೂರು ಕೊಡಲಿ ಎಂದರು.

ಈ ಪ್ರಕರಣವನ್ನು ನನ್ನ ವಿರುದ್ಧ ಹಾಗೂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ವಿರುದ್ಧ ಅಪಪ್ರಚಾರ ಮಾಡಲು ಕಂಬಳ ಸಮಿತಿಯನ್ನು ಎಳೆದು ಹಾಕಿದ್ದಾರೆ.

ಅನ್ಯಧರ್ಮಿಯನೋ ಅಧರ್ಮಿಯನೋ ಗೊತ್ತಿಲ್ಲ ನಮಗೆ ಮಹಾಲಿಂಗೇಶ್ವರ ಸನ್ನಿಧಾನವೇ ನ್ಯಾಯದೇಗುಲ ಇಲ್ಲಿ ನ್ಯಾಯ ತೀರ್ಮಾನ ಆಗ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಈ ವರ್ಷ ಕಂಬಳ ಕೂಟ ಅದ್ಭುತ ಯಶಸ್ವಿಯಾಗಿದೆ. ಈ ಕಂಬಳ ಗದ್ದೆಯಲ್ಲಿ ಏನೇ ತಪ್ಪು ನಡೆದರೂ ತೀರ್ಪೂ ಬೇಗ ಸಿಗ್ತದೆ. ಎಷ್ಟೋ ಕಂಬಳ ಕೋಣ ಮಾಲಕರು ಸಣ್ಣ ತಪ್ಪಾದರೂ ತಪ್ಪು ಕಾಣಿಕೆ ಹಾಕುವಷ್ಟು ಅವರಿಗೆ ಸಮಸ್ಯೆ ಕಾಡುತ್ತದೆ. ಅದುದರಿಂದ ಈ ಸಮಸ್ಯೆಯನ್ನು ತಂದವರನ್ನು ದೇವರು ನೋಡಿಕೊಳ್ತಾರೆ ಎಂದರು.ನಂತರ ವರ್ಷಂಪ್ರತಿಯಂತೆ ಕಂಬಳ ಸಮಿತಿಯ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಕಂಬಳ ಸಮಿತಿ ಕಾರ್ಯದರ್ಶಿ ದಿನೇಶ್ ಪಿ.ವಿ, ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು ಹಾಗೂ ಸದಸ್ಯರಾದ ಭಾಗ್ಯೇಶ್ ರೈ, ಪ್ರವೀಣ್ ಶೆಟ್ಟಿ ಅಳಕೆಮಜಲು, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ್ ಗೌಡ ಕೋಡಿಂಬಾಳ, ಉಮೇಶ್ ಕರ್ಕೆರ , ಗಂಗಾಧರ ಶೆಟ್ಟಿ ಪನಡ್ಕ , ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ವಿಕ್ರಮ್ ಶೆಟ್ಟಿ ಅಂತರ ಕೋಡಿಂಬಾಡಿ, ಯೋಗೀಶ್ ಸಾಮಾನಿ, ಸಂತೋಷ್ ಸವಣೂರು, ಮಂಜುನಾಥ ಗೌಡ ತೆಂಕಿಲ , ಸನ್ಮಿತ್ ರೈ, ಕೃಷ್ಣಪ್ರಸಾದ್ ಆಳ್ವ, ಸನತ್ ರೈ ಒಳತ್ತಡ್ಕ, ಶಶಿರಾಜ್, ಗಣೇಶ್ ರಾಜ್ , ಜಯಪ್ರಕಾಶ್ ಬದಿನಾರು, ಸುದರ್ಶನ್ ನಾಯ್ಕ್ ಕಂಪ, ಉಮಾಶಂಕರ್ ಪಾಂಗಲಾಯಿ, ಪ್ರವೀಣ್ ನಾಯ್ಕ್, ಶಶಿಕಿರಣ್ ರೈ ಸಹಿತ ಹಲವು ಸದಸ್ಯರು ಭಾಗವಹಿಸಿದ್ದರು.ನಟಿ ಸಾನ್ಯ ಅಯ್ಯರ್ ಜೊತೆ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಕಂಬಳ ಗದ್ದೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವರದಿಗಳು ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತು.

ಈ ವಿಚಾರವಾಗಿ ನಟಿಯೂ ಬೆಂಗಳೂರಿನಲ್ಲಿ ಸ್ಪಷ್ಟಿಕರಣ ಕೊಟ್ಟಿದ್ದು, ಆಯೋಜಕರು ನನ್ನನ್ನು ಗೌರವಯುತವಾಗಿ ಕಳಿಸಿಕೊಟ್ಟಿದ್ದಾರೆ ಎಂದಿದ್ದು, ದಕ್ಷಿಣ ಕನ್ನಡ ಎಸ್ಪಿ ಸೋನಾವಾಲಾ ಯಾವೂದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ

ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

Posted by Vidyamaana on 2023-05-02 04:48:59 |

Share: | | | | |


ಕಾಸರಗೋಡು ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಕಾಸರಗೋಡು;ಸಾವಿನ‌ ಬಗ್ಗೆ ಅನುಮಾನದ ಹಿನ್ನೆಲೆ‌ ಅನಿವಾಸಿ ಉದ್ಯಮಿಯೋರ್ವರ ಮೃತದೇಹವನ್ನು ಧಪನ ಮಾಡಿದ ಖಬರಸ್ತಾನದಿಂದ ತೆಗೆದು ವಾಪಾಸ್ಸು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


ಪೂಚಕ್ಕಾಡ್ ನಿವಾಸಿ ಉದ್ಯಮಿ ಅಬ್ದುಲ್ ಗಪೂರ್ ಸಾವಿನಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.


ಏ.13ರಂದು ಗಪೂರ್ ನಿಧನರಾಗಿದ್ದರು.ಅವರ ಅಂತ್ಯ ಸಂಸ್ಕಾರ ಏ.14ರಂದು ನಡೆದಿತ್ತು. ಅವರು ನಿಧನದ ದಿನ ಮನೆಯಲ್ಲಿ ಒಬ್ಬರೆ ಇದ್ದರು. ಇದೀಗ ಸಾವಿನಲ್ಲಿ ಅನುಮಾನ ಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಪೂಚಕ್ಕಾಡ್ ಹೈದ್ರೋಸ್ ಮಸೀದಿಯ ದಫನ‌ ಭೂಮಿಯಿಂದ ಹೊರ ತೆಗೆಯಲಾಗಿದೆ.


ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಪರೀಕ್ಷೆ ಕಾರ್ಯ ನಡೆದಿದೆ.


ಆರಂಭದಲ್ಲಿ ಗಪೂರು ಅವರದ್ದು ಸಹಜ ಸಾವು ಎಂದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಆ ಬಳಿಕ ಅವರ ಮನೆಯಲ್ಲಿ 600 ಪವನ್ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.‌‌ನಾಪತ್ತೆಯಾದ ಚಿನ್ನಾಭರಣದ ಮೌಲ್ಯ ಬರೊಬ್ಬರಿ 2.85 ಕೋಟಿ ಎಂದು ಹೇಳಲಾಗಿದೆ.


ಇದೀಗ ಮರಣೋತ್ತರ ಪರೀಕ್ಷೆ ನಡೆದಿದ್ದು ಅಂತಿಮ ವರದಿಯ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬರಲು ಎರಡು ವಾರಗಳ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ.ಫಾರೆನ್ಸಿಕ್ ಸರ್ಜನ್ ಡಾ.ಸರಿತಾ ನೇತೃತ್ವದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ

Recent News


Leave a Comment: