ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

ಸುದ್ದಿಗಳು News

Posted by vidyamaana on 2024-06-30 16:40:20 |

Share: | | | | |


ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

ಪುತ್ತೂರು: ಮಧುರಾ ಬೀಡಿ ಉದ್ಯಮಿ, ಮರಿಲ್ ನಿವಾಸಿ ಡಿ.ಎ ಅಬ್ದುಲ್ ಖಾದರ್ (81 ವ) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮಧುರಾ ಗ್ರೂಪ್ ನ ಸ್ಥಾಪಕರಾಗಿರುವ ಡಿ ಎ ಅಬ್ದುಲ್ ಖಾದರ್ ಮಧುರಾ

ಎಜ್ಯುಕೇಶನಲ್ ಟ್ರಸ್ಟ್ ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೂರ್ನಡ್ಕ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ,ಪುತ್ರಿಯರು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ

 Share: | | | | |


ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದಾಖಲು

Posted by Vidyamaana on 2023-10-17 07:28:41 |

Share: | | | | |


ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದಾಖಲು

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಕಾರಣ ಬಸವರಾಜ ಬೊಮ್ಮಾಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟ ಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರು ಆದ ಬಸವರಾಜ ಬೊಮ್ಮಾಯಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.ವೈದ್ಯರ ಸಲಹೆ ಮೇರೆಗೆ ಮೊಣಕಾಲು ನೋವಿನ ಶಸ್ತ್ರಚಿಕಿತ್ಸೆಗಾಗಿ ಬಸವರಾಜ ಬೊಮ್ಮಾಯಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

ಹೋರಿ ನಡೆಯುವಾಗ ಬೀ... ಅಲುಗಾಡುತ್ತೆ ಅದ್ರೆ ಕೆಳಗೆ ಬೀಳಲ್ಲ

Posted by Vidyamaana on 2023-11-05 21:30:11 |

Share: | | | | |


ಹೋರಿ ನಡೆಯುವಾಗ ಬೀ... ಅಲುಗಾಡುತ್ತೆ ಅದ್ರೆ ಕೆಳಗೆ ಬೀಳಲ್ಲ

ಬಾಗಲಕೋಟೆ (ನ.5): ಕಾಂಗ್ರೆಸ್ ಸರ್ಕಾರ ತಾನಾಗೇ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆ ಸನ್ನಿವೇಶವನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿ ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿರುಗೇಟು ನೀಡಿದರು.


ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ, ತಾನಾಗೇ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ ಎನ್ನುತ್ತಿರುವ ಬಿಜೆಪಿ ನಾಯಕರು.


ಆ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೀ*ದ ಹೋರಿ ನಡೆಯುವಾಗ ಅದರ ಬೀ* ಅಲುಗಾಡುತ್ತಿರುತ್ತೆ. ಹೋರಿ ಬೀ* ಅಲುಗಾಡುತ್ತೆ ಅಂದ್ರೆ ಅದು ಕೆಳಗೆ ಬೀಳಲ್ಲ. ಅದು ಹತ್ತು ಕಿ.ಮೀ ಹೋದರು ಹಾಗೆಯೇ ಅಲುಗಾಡುತ್ತಿರುತ್ತದೆ. ಅಲುಗಾಡುವ ಹೋರಿ ಬೀ* ತಿನ್ನಬೇಕು ಅಂತಾ 10 ನಾಯಿ ಬೆನ್ನು ಹತ್ತುತ್ತವೆ. ಅಲುಗಾಡುತ್ತೆ ಅಂದ್ರೆ ಬಿದ್ದೆ ಬೀಳುತ್ತೆ ನಾವು ತಿನಲೇಬೇಕು ಅಂತಾ ನಾಯಿಗಳು ಅನ್ಕೊಂತಾವೆ. ಬೀ* ಕೆಳಗೆ ಬೀಳಲ್ಲ, ಇವರು ಬೆನ್ನು ಹತ್ತುವುದನ್ನು ಬಿಡಲ್ಲ. ಬಿಜೆಪಿಗರ ಸದ್ಯದ ಪರಿಸ್ಥಿತಿ ಹಿಂಗಾಗಿದೆ ಎಂದು ವ್ಯಂಗ್ಯ ಮಾಡುವ ಮೂಲಕ ಟಾಂಗ್ ಕೊಟ್ಟ ನಂಜಯ್ಯನಮಠ.


ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ


ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಈಗಾಗಲೇ ಸಿಎಂ ಸ್ಥಾನ ವಿಚಾರವಾಗಿ ಮೂರು ಬಣಗಳಾಗಿ ಆಂತರಿಕ ಕಚ್ಚಾಟ ಶುರುವಾಗಿದೆ. ಕೆಲವು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಬಿದ್ದೊಗುತ್ತೆ. ಈ ಸರ್ಕಾರ ಬಿಳಿಸಲು ಯಾವುದೇ ಬಿಜೆಪಿ ಆಪರೇಷನ್ ಬೇಕಿಲ್ಲ. ತಾನಾಗೆ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರ ಹೇಳಿಕೆಯನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿದ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ.

ಬೆಳ್ತಂಗಡಿ : ನೆರಿಯ ಮೂವರು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಅಮಾನತು

Posted by Vidyamaana on 2023-10-04 07:53:37 |

Share: | | | | |


ಬೆಳ್ತಂಗಡಿ : ನೆರಿಯ ಮೂವರು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಅಮಾನತು


ಬೆಳ್ತಂಗಡಿ : ಬಿಜೆಪಿ ಪಕ್ಷದ ಆದೇಶ ಉಲ್ಲಂಘಟನೆ - ಮೂವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದ ಬಿಜೆಪಿ

ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್ ನ ದ್ವಿತೀಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯರುಗಳಾಗಿದ್ದು, ಪಕ್ಷದ ಜವಾಬ್ದಾರಿಯನ್ನು ಹೊಂದಿರುವ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಸಂತಿ ಕಡ್ಡಿಬಾಗಿಲು ಮನೆ( ನೆರಿಯ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ) , ನೆರಿಯ ಗ್ರಾಮದ ಬೂತ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕುಶಾಲ ಕಡ್ಡಿಬಾಗಿಲು ಮನೆ( ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯೆ), ನೆರಿಯ ಗ್ರಾಮ ಬೂತ್ ಸಮಿತಿ ಅಧ್ಯಕ್ಷರಾದ ಸಚಿನ್ ಅಣಿಯೂರು ಕುಲೆನಾಡಿ ಮನೆ(ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ)  ಇವರನ್ನು ತಕ್ಷಣದಿಂದ ಅನ್ವಯವಾಗುವಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹುದ್ದೆ ಹಾಗೂ ಜವಾಬ್ದಾರಿಗಳಿಂದ ಮುಕ್ತಗೊಳಿಸಿರುವುದಾಗಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ

Posted by Vidyamaana on 2023-10-15 21:48:29 |

Share: | | | | |


ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ

ಮಂಗಳೂರು: ಮಂಗಳೂರು ನಗರದ ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೇಳ್ಯಾರು ಪರಿಸರದಲ್ಲಿ ಹಾಗೂ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಫಳ್ನೀರು ಎಂಬಲ್ಲಿ ಮೊಬೈಲ್ ಫೋನ್ ನಲ್ಲಿ ಬೆಟ್ಟಿಂಗ್ ಅ್ಯಪ್ ಉಪಯೋಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಸೋಲು ಗೆಲುವಿನ ಬಗ್ಗೆ ಕ್ರಿಕೆಟ್ ಬೆಟ್ಟಿಂಗ್  ಜೂಜಾಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.


ಹಳೆಯಂಗಡಿ ಬಳಿಯ ಚೇಳ್ಯಾರು ನಿವಾಸಿ ದೀಪಕ್(33), ಮರಕಡ  ಪಂಜಗುತ್ತು ಮನೆ ನಿವಾಸಿ ಸಂದೀಪ್ ಶೆಟ್ಟಿ(38) ಬಂಧಿತರು. ಇವರ ವಶದಿಂದ ಬೆಟ್ಟಿಂಗ್ ದಂಧೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು ರೂ. 31,000/- ನಗದು ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 1,11,000/- ಆಗಬಹುದು. ಈ ಬಗ್ಗೆ ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

Posted by Vidyamaana on 2023-12-20 08:02:16 |

Share: | | | | |


ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ವಾಯ್ಸ ರಿಮೇಕ್‌ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಶರತ್‌ ಗೌಡ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ನೀಡಿದ ದೂರಿನನ್ವಯ ನರಸಿಂಹರಾಜಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಎಸ್‌ವೈ ಹೇಳಿದ್ದನ್ನು ಸಿದ್ದರಾಮಯ್ಯ ಹೇಳಿದ್ದಾರೆಂದು ವಾಯ್ಸ ರಿಮೇಕ್‌ ಮಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಣವನ್ನು ಎಲ್ಲಿಂದ ತರಲಿ, ಚುನಾವಣೆಗೋಸ್ಕರ ಹೇಳಿರ್ತಿವಿ. ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ ಎಂದು ಆಡಿಯೋದಲ್ಲಿದೆ.

ಬೈಕ್ ಗಳ ನಡುವೆ ಭೀಕರ ಅಪಘಾತ: ಬ್ಯಾಂಕ್ ಉದ್ಯೋಗಿ ಅಮೃತ ಮೃತ್ಯು

Posted by Vidyamaana on 2023-08-19 07:11:04 |

Share: | | | | |


ಬೈಕ್ ಗಳ ನಡುವೆ ಭೀಕರ ಅಪಘಾತ: ಬ್ಯಾಂಕ್ ಉದ್ಯೋಗಿ ಅಮೃತ ಮೃತ್ಯು

ಕೊಡಗು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬ್ಯಾಂಕ್ ಉದ್ಯೋಗಿ ಒಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ತಡರಾತ್ರಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮ ಅಪಘಾತ ಸಂಭವಿಸಿದ್ದು, ಅಮೃತ (24) ಹೆಸರಿನ ಬ್ಯಾಂಕ್ ಉದ್ಯೋಗಿ ಮೃತಪಟ್ಟಿದ್ದಾರೆ.

ಮೂಲತಃ ಕೇರಳದ ತ್ರಿಶೂರ್ ಮೂಲದ ಅಮೃತ, ಅಮ್ಮತಿ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಅಮೃತಾಳನ್ನು ಮೈಸೂರು ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಮೃತ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



Leave a Comment: