ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬಿಜೆಪಿ ಮುಖಂಡ ಅರೆಸ್ಟ್ - ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

Posted by Vidyamaana on 2024-05-19 17:35:19 |

Share: | | | | |


ಬಿಜೆಪಿ ಮುಖಂಡ ಅರೆಸ್ಟ್ - ರಾತ್ರೋರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದರು.ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳ್ತಂಗಡಿಯ ಮೆಲಂತಬೆಟ್ಟು ಎಂಬಲ್ಲಿ ಕಲ್ಲಿನ ಕೋರೆ ನಡೆಯುತ್ತಿದ್ದಲ್ಲಿಗೆ ಶನಿವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪುತ್ತೂರು : ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ ತೆಂಗಿನ ಮರದಿಂದ ಬಿದ್ದು ಮೃತ್ಯು.

Posted by Vidyamaana on 2023-08-09 08:17:04 |

Share: | | | | |


ಪುತ್ತೂರು : ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ ತೆಂಗಿನ ಮರದಿಂದ ಬಿದ್ದು ಮೃತ್ಯು.

ಪುತ್ತೂರು : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ (30) ರವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಪ್ರಮೋದ್ ಬೊಳ್ಳಾಜೆ ರವರ ಪತ್ನಿಯಾಗಿದ್ದ ಸುಚಿತ್ರ ರವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.


ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.

ಇಂದು ಪುಣ್ಚಪ್ಪಾಡಿ ಸಮೀಪ ತೆಂಗಿನ ಮರ ಹತ್ತಿದ್ದ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..

ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್ ಬದಲಿ ಮಾರ್ಗ ಮೂಲಕ ತೆರಳಲು ಸೂಚನೆ

Posted by Vidyamaana on 2024-03-13 12:04:14 |

Share: | | | | |


ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಗ್ಯಾಸ್ ಸೋರಿಕೆ ವಾಹನಗಳ ಸಂಚಾರ ಬಂದ್  ಬದಲಿ ಮಾರ್ಗ  ಮೂಲಕ ತೆರಳಲು ಸೂಚನೆ

ಸಕಲೇಶಪುರ: ಶಿರಾಡಿಘಾಟ್ ರಸ್ತೆ ಎನ್‌ಎಚ್‌-75 ರಲ್ಲಿ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಟ್ಯಾಂಕ‌ರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ..

ಮಾರ್ಗಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ನೂರಾರು ವಾಹನಗಳು ನಿಂತಲ್ಲೆ ನಿಂತಿವೆ.

ಬೆಂಗಳೂರು-ಹಾಸನ-ಮಂಗಳೂರು:

ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಹೋಗಿದ್ದು ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.ಪಲ್ಟಿಯಾದ ಗ್ಯಾಸ್ ಟ್ಯಾಂಕರ್‌ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ.ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ.

ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

Posted by Vidyamaana on 2024-06-19 05:50:12 |

Share: | | | | |


ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ಬೆಂಗಳೂರು : ಆನ್ ಲೈನ್ ಆಪ್ ನಲ್ಲಿ ಹಣ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ನಗರದ ಮಹಾರಾಣಿ ವಿವಿಯ ಹಾಸ್ಟೆಲ್‍ ನಲ್ಲಿ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಆನ್ ಲೈನ್ ಆಪ್ ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾಗಿದ್ದಳು.

ಸಕಲೇಶಪುರ ಮೂಲದ ಧರ್ಮಯ್ಯ ಕಡಬದಲ್ಲಿ ನದಿಗೆ ಜಿಗಿದು ಆತ್ಮಹತ್ಯೆ

Posted by Vidyamaana on 2023-06-25 03:20:26 |

Share: | | | | |


ಸಕಲೇಶಪುರ ಮೂಲದ ಧರ್ಮಯ್ಯ ಕಡಬದಲ್ಲಿ ನದಿಗೆ ಜಿಗಿದು ಆತ್ಮಹತ್ಯೆ

ಉಪ್ಪಿನಂಗಡಿ: ಸಕಲೇಶಪುರ ಮೂಲದ ವ್ಯಕ್ತಿಯೊಬ್ಬರು ಕಡಬದ ಕೋಡಿಂಬಾಳ ಸಮೀಪ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ. 


ಸಕಲೇಶಪುರ ಬಾಳಗದ್ದೆ ನಿವಾಸಿ ಧರ್ಮಯ್ಯ (40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿರುತ್ತಾರೆ. ಧರ್ಮಯ್ಯ ಮೂರು ದಿನಗಳ ಹಿಂದೆ ಕಡಬದ ಕೋಡಿಂಬಾಳ ಬಳಿ ರಬ್ಬರ್ ಕಟ್ಟಿಂಗ್ ಕೆಲಸಕ್ಕೆಂದು ಬಂದಿದ್ದರು. ಶುಕ್ರವಾರ  ಕೆಲಸಕ್ಕೆ ಬಾರದೇ ಇವರು ನಾಪತ್ತೆಯಾಗಿದ್ದರು. ಶನಿವಾರ ಬೆಳಗ್ಗೆ ಅವರ ಅವರ ಶೂ ಕುಮಾರಧಾರಾ ನದಿಯ ಕೋರಿಯಾರ್ ಬಳಿ ನದಿ ಬದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಮತ್ತು ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ಅನುಮಾನಗೊಂಡ ಕಡಬ ಪೊಲೀಸರು ಹಾಗೂ ಸ್ಥಳೀಯ ಶೌರ್ಯ ತಂಡ, ಆಪತ್ಬಾಂದವ ತಂಡದ ಸದಸ್ಯರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.  

 ಕಡಬ ಪೊಲೀಸರು ಹಾಗೂ ಸ್ಥಳೀಯ ಶೌರ್ಯ ತಂಡದ ಸದಸ್ಯರು ನದಿಗಿಳಿದು ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.


ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ,ಎಎಸ್ಐ ಸುರೇಶ್,ಎಎಸ್ಐ ಶಿವರಾಮ್, ಸಿಬ್ಬಂದಿ ಭವಿತ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಹಾಗೂ ಸ್ಥಳೀಯ ಶೌರ್ಯ ತಂಡದ ಸದಸ್ಯರಾದ ಮುರಳಿ, ಸೋಮಪ್ಪ, ಆನಂದ, ಅಪರ್ಣಾ, ಆಪತ್ಬಾಂದವ ತಂಡದ ಸದಸ್ಯರಾದ ರಫೀಕ್, ನಾಸಿರ್‌, ಹಮೀದ್, ಅಬ್ಬಾಸ್‌, ಮನೋಜ್, ಅನಿಲ್ ಸೇರಿದಂತೆ ಸ್ಥಳಿಯರು ಮೃತದೇಹ ಪತ್ತೆಹಚ್ಚಲು ಸಹಕರಿಸಿದರು.ಮೃತರ ಪತ್ನಿ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದೂ, ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

200 ಅಲ್ಲ 300 ಯೂನಿಟ್ ಕರೆಂಟ್ ಫ್ರೀ – ಇದು ಪಿಎಂ ಸೂರ್ಯ ಘರ್ ಯೋಜನೆ

Posted by Vidyamaana on 2024-02-17 12:52:07 |

Share: | | | | |


200 ಅಲ್ಲ 300 ಯೂನಿಟ್ ಕರೆಂಟ್ ಫ್ರೀ – ಇದು ಪಿಎಂ ಸೂರ್ಯ ಘರ್ ಯೋಜನೆ

ನವದೆಹಲಿ:- "PM Surya Ghar Yojana" ಈ ಯೋಜನೆಯಡಿ ಸರ್ಕಾರ ಜನರಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲು ಯೋಜನೆ ರೂಪಿಸುತ್ತಿದೆ, ಇದಕ್ಕಾಗಿ ನಿಜವಾದ ಸಬ್ಸಿಡಿಯನ್ನು ನೀಡಲಾಗುವುದು ಅದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ.


75,000 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಈ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ.


ಕಳೆದ ತಿಂಗಳು (ಜನವರಿ) ಪ್ರಧಾನಿ ಮೋದಿ ಅವರು ಪಿಎಂ ಸೂರ್ಯೋದಯ ಯೋಜನೆಯನ್ನು ಅನಾವರಣಗೊಳಿಸಿದರು. ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸುವ ದೊಡ್ಡ ಯೋಜನೆ ಅದು. ಅದರ ಭಾಗವಾಗಿ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ ಚಾಲನೆಗೆ ತರಲಾಗಿದೆ. ಒಂದು ಮನೆಗೆ ಪ್ರತೀ ತಿಂಗಳು 300 ಯೂನಿಟ್​ಗಳಷ್ಟು ಉಚಿತ ವಿದ್ಯುತ್ ಒದಗಿಸುವ ಒಂದು ಯೋಜನೆ ಇದು. ಈ ರೀತಿ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಈ ಯೋಜನೆ ತಲುಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.


ಆರಂಭದಲ್ಲಿ ಒಂದು ವಿಷಯ ಸ್ಪಷ್ಟಪಡಿಸಬೇಕಿದೆ. 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರೂ ಇದು ಉಚಿತವಲ್ಲ. ಮನೆ ಛಾವಣಿ ಮೇಲೆ ಸೌರ ಯೂನಿಟ್​ಗಳನ್ನು ಸ್ಥಾಪಿಸಲು ಹಣ ವ್ಯಯಿಸಬೇಕು. ಆದರೆ, ಇದಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತದೆ. ಬಜೆಟ್​ನಲ್ಲಿ ಈ ಯೋಜನೆಗೆ 75,000 ಕೋಟಿ ರೂ ಹಣವನ್ನು ಸರ್ಕಾರ ತೆಗೆದಿರಿಸಿದೆ. ಬ್ಯಾಂಕ್​ನಿಂದಲೂ ಕಡಿಮೆ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಸಿಗುತ್ತದೆ. ಹೀಗಾಗಿ, ಈ ಯೋಜನೆ ಪಡೆಯುವವರಿಗೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇವರು ಮಾಡುವ ವೆಚ್ಚ ಒಂದರಿಂದ ಎರಡು ವರ್ಷದಲ್ಲಿ ಸರಿದೂಗುತ್ತದೆ.


ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮ


ಪಿಎಂ ಸೂರ್ಯ ಘರ್ ಯೋಜನೆಗೆಂದು ಪೋರ್ಟಲ್ ಸಿದ್ಧಪಡಿಸಲಾಗಿದೆ. ಅಲ್ಲಿ ನೊಂದಾಯಿಸಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ: pmsuryaghar.gov.in


ಇಲ್ಲಿ ನಿಮ್ಮ ರಾಜ್ಯ, ಡಿಸ್ಕಾಂ ಕಂಪನಿ ಆಯ್ಕೆ ಮಾಡಿ


ಎಲೆಟ್ರಿಕ್ ಬಿಲ್​ನ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ನಮೂದಿಸಿ ನೊಂದಾಯಿಸಿಕೊಳ್ಳಿ.


ಈಗ ಕನ್ಸೂಮರ್ ನಂಬರ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿರಿ.


ಲಾಗಿನ್ ಆದ ಬಳಿಕ ರೂಫ್​ಟಾಪ್ ಸೋಲಾರ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.


ಇದಕ್ಕೆ ಅನುಮೋದನೆ ಸಿಗುವವರೆಗೂ ಕಾಯಬೇಕು. ಅನುಮೋದನೆ ದೊರೆತ ಬಳಿಕ ನೊಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಘಟಕವನ್ನು ಸ್ಥಾಪಿಸುತ್ತಾರೆ.


ಇದಾದ ಬಳಿಕ ನೆಟ್ ಮೀಟರ್​ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್​ಟಾಲ್ ಆಗಿ ಡಿಸ್ಕಾಂ ಅಧಿಕಾರಿಗಳಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಸಿಗುತ್ತದೆ.


ಬಳಿಕ ಪಿಎಂ ಸೂರ್ಯಘರ್ ಪೋರ್ಟಲ್​ಗೆ ಹೋಗಿ ಮತ್ತೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಕ್ಯಾನ್ಸಲ್ ಮಾಡಿದ ಚೆಕ್​ನ ಸ್ಕ್ಯಾನ್ಡ್ ಕಾಪಿಯನ್ನು ಅಪ್​ಲೋಡ್ ಮಾಡಿ. ಇದು ಕೊನೆಯ ಪ್ರಕ್ರಿಯೆ. ಇದು ಮುಗಿದ ಬಳಿಕ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದು ಸೇರುತ್ತದೆ.



Leave a Comment: