ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರದ ಬ್ಯಾನರ್ ಗೆ ಹಾನಿ

Posted by Vidyamaana on 2024-01-06 15:02:49 |

Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರದ ಬ್ಯಾನರ್ ಗೆ ಹಾನಿ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿದ್ದು, ಈ ಘಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಮತ್ತು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಮಧ್ಯದಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಹರಿದು ಹಾಕಿದ್ದಾರೆ.


ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ. ಅವರ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಈ ಕೃತ್ಯವೆಸಗಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಹಿಂದೂಗಳ ಭಾವನೆ ಜೊತೆ ಆಟವಾಡುವವರನ್ನು ತಕ್ಷಣ ಬಂಧಿಸಬೇಕು :ನಳಿನ್ ಕುಮಾರ್ ಕಟೀಲ್


ಪುತ್ತೂರಿನಲ್ಲಿ ಫೈರ್ ಬ್ರಾಂಡ್ ನಾಯಕ ಯತ್ನಾಳ್ ಗೆ ಸ್ವಾಗತ

Posted by Vidyamaana on 2023-05-19 05:55:31 |

Share: | | | | |


ಪುತ್ತೂರಿನಲ್ಲಿ ಫೈರ್ ಬ್ರಾಂಡ್ ನಾಯಕ ಯತ್ನಾಳ್ ಗೆ ಸ್ವಾಗತ

ಪುತ್ತೂರು: ಬಿಜೆಪಿ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪುತ್ತೂರಿನಲ್ಲಿ ಸ್ವಾಗತ ಕೋರಲಾಯಿತು.

ಪುತ್ತೂರಿಗೆ ಆಗಮಿಸಿದ ಯತ್ನಾಳ್ ಅವರು ನೇರವಾಗಿ ಬಿಜೆಪಿ ಕಚೇರಿಗೆ ತೆರಳಿದರು. ಬಳಿಕ ಪಂಚವಟಿಗೆ ಭೇಟಿ ನೀಡಿದರು.

ಮಾರ್ಚ್ 4: ಮೂಡೂರು – ಪಡೂರು ಬಂಟ್ವಾಳ ಕಂಬಳ

Posted by Vidyamaana on 2023-03-03 15:43:23 |

Share: | | | | |


ಮಾರ್ಚ್ 4: ಮೂಡೂರು – ಪಡೂರು ಬಂಟ್ವಾಳ ಕಂಬಳ

ರಮಾನಾಥ ರೈ ಸಾರಥ್ಯದಲ್ಲಿ 12ನೇ ವರ್ಷದ ಬಯಲು ಕಂಬಳ

 ಬಂಟ್ವಾಳ: ಇಲ್ಲಿನ ಮೂಡೂರು – ಪಡೂರು ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ 12ನೇ ವರ್ಷದ ಹೊನಲು ಬೆಳಕಿನ ಮೂಡೂರು – ಪಡೂರು ಜೋಡುಕರೆ ಬಯಲು ಕಂಬಳ ಮಾರ್ಚ್ 4ರಂದು ಬೆಳಿಗ್ಗೆ 8.45ಕ್ಕೆ ನಾವೂರು ಗ್ರಾಮದ ಕೋಡಿಬೈಲಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಸೋಲೂರು ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂ. ಫೆಡ್ರಿಕ್ ಮೊಂತೆರೊ, ಕಾವಳಕಟ್ಟೆ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಿಝ್ಜಿ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು.

ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಯು.ಟಿ. ಖಾದರ್, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮೊದಲಾದವರು ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

ತನ್ನನ್ನು ಮುಗಿಸಿಬಿಡುತ್ತಾರೆ ಹೇಳಿಕೆಯನ್ನೇ ನೀಡಿಲ್ಲವೆಂದ ಮಾಜಿ ಶಾಸಕ

Posted by Vidyamaana on 2023-08-11 12:56:45 |

Share: | | | | |


ತನ್ನನ್ನು ಮುಗಿಸಿಬಿಡುತ್ತಾರೆ ಹೇಳಿಕೆಯನ್ನೇ ನೀಡಿಲ್ಲವೆಂದ ಮಾಜಿ ಶಾಸಕ

ಬೆಳ್ತಂಗಡಿ: ಸೌಜನ್ಯ ಕೊಲೆ,ಅತ್ಯಾಚಾರ ಪ್ರಕರಣದಲ್ಲಿ ಸತ್ಯ ಹೇಳಿದರೆ ನನ್ನನ್ನು ಮುಗಿಸಿ ಬಿಡುತ್ತಾರೆ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದರು. ಆದರೆ ಇದೀಗ ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.


ಈ ಬಗ್ಗೆ ಪುತ್ತೂರಿನಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದೇ ನಾನು, ವಿಧಾನಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡಿರುವುದೇ ನಾನು, 6 ತಿಂಗಳು ಸಿಬಿಐ ಚೆನ್ನಾಗಿ ತನಿಖೆ ಮಾಡಿದೆ, ಆದರೆ 6 ತಿಂಗಳ ಬಳಿಕ ಸಿಬಿಐ ಕವಚಿ ಬಿದ್ದಿದ್ದು, ತಪ್ಪು ದಾರಿಯಲ್ಲಿ ಹೋಗಿದೆ. ನನ್ನ ಪ್ರಕಾರ ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಲು ಸಾಧ್ಯ ಸಂದರ್ಭ ಬಂದಾಗ ಸೌಜನ್ಯ ವಿಚಾರದಲ್ಲಿ ಹೇಳಬೇಕಾದ ವಿಚಾರವನ್ನು ಹೇಳುತ್ತೇನೆ.


ಆದರೆ ಸತ್ಯ ಹೇಳಿದರೆ ನನ್ನನ್ನು ಕೊಲ್ಲುತ್ತಾರೆ ಎಂದು ನಾನು ಹೇಳೆ ಇಲ್ಲ ಎಂದರು. ಜೀವಂತವಾಗಿ ಯಾರಿಗೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಜಿಲ್ಲೆಯಲ್ಲಿ ತಾಲೂಕಿನಲ್ಲಿ ಎಷ್ಟೇ ದೊಡ್ಡವರಿಗೂ ಒಬ್ಬನನ್ನು ಕೊಲ್ಲಲು ಸಾಧ್ಯವಿಲ್ಲ. ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ದೇವರು ನನ್ನನ್ನು ರಕ್ಷಣೆ ಮಾಡುತ್ತಾರೆ ಎಂದಿದ್ದೆ, ಆದರೆ ನನ್ನ ಮಾತನ್ನು ಮಾಧ್ಯಮಗಳ ತಿರುಚಿವೆ ಎಂದಿದ್ದಾರೆ.

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ; ಜನರಲ್ಲಿ ಹೆಚ್ಚಿದ ಆತಂಕ

Posted by Vidyamaana on 2024-02-04 08:56:26 |

Share: | | | | |


ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ; ಜನರಲ್ಲಿ ಹೆಚ್ಚಿದ ಆತಂಕ

ಚಿಕ್ಕಮಗಳೂರು, ಫೆ.04: ಪ್ರಸಕ್ತ ವರ್ಷ ಮಲೆನಾಡಿನಲ್ಲಿ ಮಂಗನ ಕಾಯಿಲೆ(Monkey Pox)ಗೆ ಮೊದಲ ಬಲಿಯಾಗಿದೆ. ವಯೋಸಹಜ ಅನಾರೋಗ್ಯದಿಂದ ಚಿಕ್ಕಮಗಳೂರು(Chikmagalur) ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಬಳಲುತ್ತಿದ್ದರು. ಇವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೊನೆಯುಸಿರೆಳೆದಿದ್ದಾರೆ. ರೆಡ್ ಝೋನ್​ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್​ಡಿ ಪತ್ತೆಯಾಗಿದೆ. ವೃದ್ಧನ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ.ಉತ್ತರ ಕನ್ನಡದಲ್ಲೂ ಹೆಚ್ಚಿದ ಮಂಗನ ಕಾಯಿಲೆ


ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ 10 ದಿನಗಳಲ್ಲಿ ಬರೊಬ್ಬರಿ 21 ಜನರಿಗೆ ಸೋಂಕು ತಗುಲಿದ್ದು, ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಇನ್ನು ಈ ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.ಹೆಚ್ಚಾದ ಮಂಗನ ಕಾಯಿಲೆಗೆ ಆರೋಗ್ಯ ಇಲಾಖೆ ಬಳಿ ಇಲ್ಲ ಲಸಿಕೆ


ಇನ್ನು ಜಿಲ್ಲೆಯಲ್ಲಿ‌ ಮಂಗನ ಕಾಯಿಲೆ ಪಸರಿಸುತ್ತಿದೆ. ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪತ್ತೆ ಆಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಬೇಕಿರುವ ಲಸಿಕೆ ಬಗ್ಗೆಯೂ ಇಲಾಖೆ ಯೋಚನೆ ಮಾಡದೆ ಸುಮ್ಮನಾಗಿತ್ತು. ಹೀಗಾಗಿ ಇದೀಗ ಮಂಗನ ಕಾಯಿಲೆ ರೋಗ ಪತ್ತೆಯಾಗಿದೆ. ಇದೀಗ ಜಿಲ್ಲಾಡಳಿತ ಕಾಯಿಲೆ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪರದಾಡುತ್ತಿದೆ. ಅದರಲ್ಲೂ ಚಳಿಗಾಲ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ.

ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

Posted by Vidyamaana on 2023-09-19 15:27:03 |

Share: | | | | |


ರೌಡಿಯ ಹತ್ಯೆಗೆ ಪ್ರೇಮದ ಬಲೆ: ನಂಬಿಸಿ ಕೊಂದ ಸುಂದರಿ ಮಾಡೆಲ್ ಅಂದರ್‌

ಚೆನ್ನೈ: ಯುವ ರೌಡಿಯೊರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಮಿಜೋರಾಂ ಮೂಲದ ಯುವತಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದು, ಈ ಕೊಲೆಯ ಹಿಂದೆ ರೋಚಕ ಕಹಾನಿ ಇದೆ. ಚೆನ್ನೈನ 24 ವರ್ಷದ ರೌಡಿ ಸತ್ಯ (Rowdy Satya) ಎಂಬಾತನನ್ನು ಸೆಪ್ಟೆಂಬರ್ 10 ರಂದು ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ಚೆನ್ನೈನ ಪುಝಲ್ ಕವಂಕರೈ 15ನೇ ಬೀದಿಯ ನಿವಾಸಿಯಾಗಿದ್ದ ರೌಡಿ ಸತ್ಯನನ್ನು ಚೆನ್ನೈನ ಎಗ್ಮೋರ್‌ನಲ್ಲಿ (Egmore) ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈತನ ಹತ್ಯೆಯ ಆರೋಪಿಗಳ ಪತ್ತೆಗೆ ಎಗ್ಮೋರ್ ಇನ್ಸ್ ಪೆಕ್ಟರ್ ತಿರುಮಲ್ ನೇತೃತ್ವದಲ್ಲಿ ವಿಶೇಷ ಪಡೆ ರಚಿಸಲಾಗಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆದ ಪೊಲೀಸರಿಗೆ ಈ ಪ್ರಕರಣಕ್ಕೂ ಮಿಜೋರಾಂ ಮೂಲದ ಮಾಡೆಲ್‌ (Mizoram model) ಒಬ್ಬಳಿಗೂ ಲಿಂಕ್ ಇರುವ ವಿಚಾರ ತಿಳಿದು ಬಂದಿತು. ಈ ವಿಚಾರ ಬೆನ್ನತಿದ್ದ ಪೊಲೀಸರು ಮಿಜೋರಾಂ ಮೂಲದ ಮಾಡೆಲ್ ಜ್ಯೂಲಿ ಹಾಗೂ ಆತನ ಬಾಯ್‌ಫ್ರೆಂಡ್ ಕಿಶೋರ್ ಎಂಬಾತನನ್ನು ಬಂಧಿಸಿದ್ದು, ಅಲ್ಲೊಂದು ಸಿನಿಮಾವನ್ನು ಮೀರಿಸುವ ರೋಚಕ ಕ್ರೈಂ ಪ್ರೇಮ ಕಹಾನಿ ಬೆಳಕಿಗೆ ಬಂದಿದೆ. ಅಲ್ಲದೇ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೊಲೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 2016ರಲ್ಲಿ ಶಿವರಾಜ್ ಎಂಬ ರೌಡಿಯನ್ನು ಚೆನ್ನೈನ (Chennai) ಬೇಸಿನ್‌ ಬ್ರಿಡ್ಜ್‌ನ (Chennai Basin Bridge) ಬಳಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವರಾಜ್‌ ಮಿತ್ರರು ತಮ್ಮ ಆಪ್ತನ ಕೊಲೆಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಶಿವರಾಜ್ (Sivaraj) ಕೊಲೆಯಲ್ಲಿ ಭಾಗಿಯಾಗಿದ್ದ ವಕೀಲ ಅಖಿಲನ್ ಹಾಗೂ ನಾಯಿ ರಮೇಶ್‌ನನ್ನು ಈಗಾಗಲೇ ಮುಗಿಸಿದ್ದ ಈ ತಂಡದ ರೌಡಿ ಸತ್ಯ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾಯುತ್ತಿತ್ತು. ಆತ ಬಿಡುಗಡೆಯಾಗುವುದು ತಿಳಿಯುತ್ತಿದ್ದಂತೆ ಈ ಶಿವರಾಜ್‌ ತಂಡ ಆತನನ್ನು ಮುಗಿಸಲು ಪ್ರೇಮದ ಜಾಲವನ್ನು ಹೆಣೆದಿತ್ತು. ರೌಡಿಗಳು ಹೆಣೆದ ಪ್ರೇಮದ ಜಾಲಕ್ಕೆ ಪ್ರೇಯಸಿಯಾದ ಜೂಲಿ


ರೌಡಿ ಸತ್ಯನ ಬಲೆಗೆ ಕೆಡವಲು ಪ್ರೇಮ ಜಾಲ ಹೆಣೆದ ವಿರೋಧಿ ಶಿವರಾಜ್ ಬಣ ಇದಕ್ಕೆ ಮೀಜೋರಾಂ ಮೂಲದ ಜೂಲಿಯನ್ನು ಬಳಸಿಕೊಂಡಿತ್ತು. ಶಿವರಾಜ್ ಬಣದ ಅಣತಿಯಂತೆ ಪ್ರೀತಿಯ ನಾಟಕವಾಡಿ ರೌಡಿ ಸತ್ಯನನ್ನು ಬಲೆಗೆ ಕೆಡವಿದ ಜ್ಯೂಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಫೋನ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿಯೂ ಆತನೊಂದಿಗೆ ಟಚ್‌ನಲ್ಲಿದ್ದ ಜ್ಯೂಲಿ ಆತನನ್ನು ಮನಸಾರೆ ಪ್ರೀತಿಸುವುದಾಗಿ ನಟಿಸುತ್ತಿದ್ದಳು. ಸುಂದರವಾದ ಹೆಣ್ಣೊಬ್ಬಳು ಬಂದು ಪ್ರೇಮಿಸುವೆ ಎಂದು ಹಿಂದೆ ಬಿದ್ದರೆ ಯಾವ ಗಂಡು ತಾನೇ ಬೇಡ ಎನ್ನುತ್ತಾನೆ. ಅದೇ ರೀತಿ ಇಲ್ಲಿ ಜ್ಯೂಲಿಯ ಪ್ರೇಮ ನಿವೇದನೆಗೆ ಕರಗಿದ್ದ ಸತ್ಯ, ಆಕೆ ತನ್ನನ್ನು ಪ್ರೀತಿಸುತ್ತಾಳೆ ಎಂದು ಬಲವಾಗಿ ನಂಬಿದ್ದ. ಇದೇ ಆತ ಮಾಡಿದ ತಪ್ಪು..ಕಳೆದ ಸೆಪ್ಟೆಂಬರ್ 8 ರಂದು ಸತ್ಯನಿಂದ ಕೊಲೆಯಾಗಿದ್ದ ಶಿವರಾಜ್‌ ಹತ್ಯೆಯಾದ ದಿನವಾಗಿದ್ದು, ಅಂದೇ ಶಿವರಾಜ್ ಆಪ್ತರು ಸತ್ಯನ ಹತ್ಯೆಗೆ ಜಾಲ ಹೆಣೆದಿದ್ದರು. ಅಂದು ಜ್ಯೂಲಿ ಸತ್ಯಗೆ ಕರೆ ಮಾಡಿ ಮಾತನಾಡಿದ್ದು, ಇಗ್ಮೋರೆಗೆ ಬರುವಂತೆ ಮನವಿ ಮಾಡಿದ್ದಳು. ಆದರೆ ಸೆಪ್ಟೆಂಬರ್‌ 8 ರಂದು ಬಾರದ ಆತ ಜ್ಯೂಲಿ ಮನವಿಯಂತೆ ಸೆಪ್ಟೆಂಬರ್ 10 ರ ರಾತ್ರಿ ಜ್ಯೂಲಿಯನ್ನು ನೋಡಲು ಇಗ್ಮೋರೆಗೆ ಆಗಮಿಸಿದ್ದ. ಅದು ಕೇವಲ ಫೋನ್‌ನಲ್ಲಿ ಮಾತ್ರ ಸಂಪರ್ಕದಲ್ಲಿದ್ದ ಜ್ಯೂಲಿ ಹಾಗೂ ರೌಡಿ ಸತ್ಯನ ಮೊದಲ ಭೇಟಿ ಅದಾಗಿತ್ತು. ಇದೇ ವೇಳೆ ಸತ್ಯಗೆ ಸ್ಕೆಚ್ ಹಾಕಿದ ಶಿವರಾಜ್ ಬಣ ಅವನ್ನು ಕಟ್ಟಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಸತ್ಯನನ್ನು ಪ್ರೀತಿಸುವ ಕಪಟ ನಾಟಕವಾಡಿ ಆತನ ಹತ್ಯೆಗೆ ಸಹಕರಿಸಿದ ಜ್ಯೂಲಿಯನ್ನು ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿಶೋರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 9 ಜನರ ಬಂಧನವಾಗಿದೆ.



Leave a Comment: