ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

Posted by Vidyamaana on 2024-03-15 20:41:36 |

Share: | | | | |


ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಇನ್ನು‌ ಬಿಜೆಪಿ ಸೇರ್ಪಡೆಗೊಂಡಿಲ್ಲ ಎನ್ನುವುದು ಇದೀಗ ದೃಢಗೊಂಡಿದೆ.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಗೌಪ್ಯ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, "ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ಮಾಧ್ಯಮ ಪ್ರಚಾರ" ಎಂದು ಹೇಳಿದರು.

ಈ ಮೂಲಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಇನ್ನು ಒಂದು ಒಮ್ಮತಕ್ಕೆ ಬರಲು ವಿಫಲವಾಗಿದೆ ಎನ್ನುವುದು ದೃಢಗೊಂಡಿದೆ. ಎರಡು ಬಣಗಳು ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಪುತ್ತಿಲ ವಿಚಾರವಾಗಿ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.


ಉಳಿದಂತೆ ಚುನಾವಣೆ ಬಗ್ಗೆಯೇ ಮಾತುಕತೆ ನಡೆಯಿತು.

ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಇಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನಾಚರಣೆ

Posted by Vidyamaana on 2023-07-15 04:27:46 |

Share: | | | | |


ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಇಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನಾಚರಣೆ

ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಂಭ್ರಮ ಶನಿವಾರ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನಾಚರಣೆಗೆ ಇಂದಿನಿಂದ ಚಾಲನೆ ಸಿಕ್ಕಿದೆ.ರಾಜ್ಯದ ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ.2023-24 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ ಹಂತದಲ್ಲಿ ಸದರಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದ್ದು, ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ.


ಸಂಭ್ರಮ ಶನಿವಾರ ದಿನದಂದು ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದ ಎಲ್ಲಾ ಅಧಿಕಾರಿಗಳು ಹಾಗೂ ಸಿಆರ್ ಪಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲಿಸುವುದು ಹಾಗೂ ಅಗತ್ಯ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಯಶಸ್ಸಿಗೆ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಏ 5: ಸ್ವತಂತ್ರ ತುಳುನಾಡ ಆಳ್ವಿಕೆ ಆರಂಭಿಸಿದ ದಿನ: ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆಗೈದ ಪದ್ಮರಾಜ್ ಆರ್

Posted by Vidyamaana on 2024-04-05 18:01:05 |

Share: | | | | |


ಏ 5: ಸ್ವತಂತ್ರ ತುಳುನಾಡ ಆಳ್ವಿಕೆ ಆರಂಭಿಸಿದ ದಿನ: ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆಗೈದ ಪದ್ಮರಾಜ್ ಆರ್

ಮಂಗಳೂರು: ಇಲ್ಲಿನ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಪುಷ್ಪಾರ್ಚನೆ ಮಾಡಿದರು.ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲೇ ತುಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಇದನ್ನು ಅಮರ ಸುಳ್ಯದ ದಂಗೆ ಎಂದು ಕರೆದರೆ, ಇನ್ನೂ ಕೆಲವರು ತುಳುನಾಡ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆದದ್ದಿದೆ. ಈ ಹೋರಾಟದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಚೈತ್ರಾ ಹಣ ಆಸ್ತಿ ಮುಟ್ಟುಗೋಲು: ಕೋಟ್ಯಂತರ ರೂ. ಸ್ವತ್ತು ಜಪ್ತಿ; ಮೂರು ಸ್ಥಳಗಳಲ್ಲಿ ಸಿಸಿಬಿ ಮಹಜರು

Posted by Vidyamaana on 2023-09-17 09:00:51 |

Share: | | | | |


ಚೈತ್ರಾ ಹಣ ಆಸ್ತಿ ಮುಟ್ಟುಗೋಲು: ಕೋಟ್ಯಂತರ ರೂ. ಸ್ವತ್ತು ಜಪ್ತಿ; ಮೂರು ಸ್ಥಳಗಳಲ್ಲಿ ಸಿಸಿಬಿ ಮಹಜರು

ಬೆಂಗಳೂರು : ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಚೈತ್ರಾ ಕುಂದಾಪುರಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ವೇಳೆ ಮತ್ತೊಬ್ಬ ಆರೋಪಿ ಉಡುಪಿ ಜಿಲ್ಲೆಯ ಪ್ರಸಾದ್ ಬೈಂದೂರುನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸರ್ಚ್ ವಾರೆಂಟ್ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸರು ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯ ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದ ಆಸ್ತಿ ಪತ್ರ, ಬಂಗಾರವನ್ನು ಪತ್ತೆ ಮಾಡಿದ್ದಾರೆ. 1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಚೈತ್ರಾ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಹಣ, ಚಿನ್ನ ಇಟ್ಟಿದ್ದಳು. ಅಲ್ಲದೆ ಶ್ರೀಕಾಂತ್ ಹೆಸರಲ್ಲಿ ಉಡುಪಿಯ ಹಿರಿಯಡ್ಕದಲ್ಲಿ ಎರಡು ಹಂತಸ್ತಿನ ಮನೆ ಕಟ್ಟಿಸುತ್ತಿದ್ದಳು. ಪ್ರಸಾದ್ ಬೈಂದೂರನ್ನು ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಸಿಸಿಬಿ ಪೊಲೀಸರು, ಆತನನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮತ್ತೊಂದೆಡೆ ಚೈತ್ರಾ ಕುಂದಾಪುರ ಮತ್ತು ಪ್ರಸಾದ್ ಬೈಂದೂರು ಹಣದ ಡೀಲ್ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಾಜಿ ಸಚಿವರೊಬ್ಬರ ಹೆಸರು ಪ್ರಸ್ತಾಪವಾಗಿದೆ.


ಮೂರು ಕಡೆ ಸ್ಥಳ ಮಹಜರು: ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಚೇರಿ, ಗೋವಿಂದರಾಜನಗರದಲ್ಲಿರುವ ಸ್ವಾಮೀಜಿ ನಿವಾಸ, ಕೆ.ಕೆ.ಗೆಸ್ಟ್ ಹೌಸ್​ನ ಎರಡನೇ ಮಹಡಿಯಲ್ಲಿರುವ 207 ಸಂಖ್ಯೆ ರೂಮ್ ಅನ್ನು ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಟಿಕೆಟ್ ಕೊಡಿಸುವ ಸಂಬಂಧ ಮೀಟಿಂಗ್ ನಡೆದಿದ್ದು, ಅಲ್ಲದೇ ಆರೋಪಿ ಗಗನ್ ಅಲ್ಲಿಂದಲೇ ಹಣ ತೆಗೆದುಕೊಂಡು ಹೋಗಿದ್ದ. ಹೀಗಾಗಿ ಅಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಗೋವಿಂದರಾಜನಗರ ನಿವಾಸದಲ್ಲಿ ಸ್ವಾಮೀಜಿ ಒಂದೂವರೆ ಕೋಟಿ ರೂ. ಪಡೆದಿದ್ದರು ಎನ್ನಲಾಗಿದೆ. ಜತೆಗೆ ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ಹಲವು ಬಾರಿ ಮೀಟಿಂಗ್ ನಡೆದಿತ್ತು. ಇನ್ನು ಮತ್ತೊಬ್ಬ ಆರೋಪಿ ಚೆನ್ನಾನಾಯ್್ಕ ಚುನಾವಣಾ ಸಮಿತಿ ಸದಸ್ಯ ಎಂದು ಭೇಟಿಯಾಗಿದ್ದು, ಇಲ್ಲಿಯೇ. ಹೀಗಾಗಿ ಮೂರು ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಸ್ವಾಮೀಜಿ ನಿವಾಸ ಮತ್ತು ಮಠ ಸೇರಿ ಹಲವು ಕಡೆ ಮಹಜರು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಮಠ ಸೇರಿ ಹಲವು ಕಡೆ ಮಹಜರು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಉಡುಪಿಯಲ್ಲಿ ಎರಡು ಅಂತಸ್ತಿನ ಮನೆ: ಚೈತ್ರಾ ಕುಂದಾಪುರ ಹಿರಿಯಡ್ಕದಲ್ಲಿ 20 ಸೆಂಟ್ಸ್ ಜಾಗ ಖರೀದಿಸಿ ಮನೆ ಕಟ್ಟಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಗೆಳೆಯ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಸೆಂಟ್ಸ್​ಗೆ 50 ಸಾವಿರ ರೂ. ನೀಡಿ ಜಾಗ ಖರೀದಿಸಲಾಗಿದ್ದು, ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದನೇ ಅಂತಸ್ತಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.


ಆಸ್ಪತ್ರೆಯಿಂದ ಡಿಸ್ಚಾರ್ಜ್: ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆರೋಗ್ಯ ಸುಸ್ಥಿತಿಯಲ್ಲಿದೆ. ಎಂಆರ್​ಐ ಮತ್ತು ಇಸಿಜಿ ವರದಿ ನಾರ್ಮಲ್ ಆಗಿದ್ದು, ಆಸ್ಪತ್ರೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಬಿಎಂಆರ್​ಸಿಎಲ್​ನ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ. ಸಿಸಿಬಿ ಪೊಲಿಸರ ವಶದಲ್ಲಿದ್ದ ಚೈತ್ರಾ ಕುಂದಾಪುರ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆದಾಖಲಿಸಲಾಗಿತ್ತು.

ಉದ್ಯಮಿ ವಿರುದ್ಧವೇ ದೂರು: ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಂಚನೆಗೆ ಒಳಗಾದ ಉದ್ಯಮಿ ಗೋವಿಂದಬಾಬು ಪೂಜಾರಿ ವಿರುದ್ಧವೇ ಸ್ವಾಮೀಜಿ ದೂರು ನೀಡಿದ್ದಾರೆ. ಗೋವಿಂದಬಾಬು, ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಕಾಂಗ್ರೆಸ್ ಸೇವಾ ದಳದ ಜಂಟಿ ಸಂಚಾಲಕ ಹರ್ಷ ಮೆಂಡನ್, ಉಡುಪಿ ಜಿಲ್ಲೆ ಬೈಂದೂರಿನ ದಿನೇಶ್ ನಾಯ್್ಕೊಳೆ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಆ.11ರಂದು ದೂರು ನೀಡಿದ್ದರು. ಸ್ವಾಮೀಜಿ ದೂರಿನ ಬಗ್ಗೆ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ. ಈ ಮಧ್ಯೆ ಸ್ವಾಮೀಜಿ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಸ್ವಾಮೀಜಿ ಸುಳಿವು ಪತ್ತೆಯಾಗುವ ಸಾಧ್ಯತೆಯಿದೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ:

ಪ್ರಕರಣದ ಎ3 ಆರೋಪಿ ಸ್ವಾಮೀಜಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಲಾಗಿದೆ. ಸ್ವಾಮೀಜಿ ಪರ ವಕೀಲ ಅರುಣ್ ಶ್ಯಾಮ್ ವಂಚನೆ ಪ್ರಕರಣದಲ್ಲಿ ಸ್ವಾಮೀಜಿ ವಿರುದ್ಧ ಯಾವುದೇ ಆರೋಪವಿಲ್ಲ. ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಸ್ವಾಮೀಜಿಗೆ ಜಾಮೀನು ನೀಡದಂತೆ ಗೋವಿಂದಬಾಬು ಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.


ವಿಶೇಷ ತಂಡದಿಂದ ತನಿಖೆ: ಚೈತ್ರಾ ಕುಂದಾಪುರ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಸಿಸಿಬಿ ವಿಶೇಷ ತಂಡ ತನಿಖೆ ಕೈಗೊಂಡಿದೆ. ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಸಂದರ್ಭದಲ್ಲಿ ಇಂದಿರಾ ಕ್ಯಾಂಟಿನ್ ಬಾಕಿ ಬಿಲ್ ಬಗ್ಗೆ ಚೈತ್ರಾ ಆರೋಪ ಮಾಡಿದ್ದರು. ಬಾಕಿ ಬಿಲ್ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಶೇಷ ತಂಡ ರಚಿಸಿದ್ದು, ಮಾಹಿತಿ ಕಲೆ ಹಾಕಲು ಮುಂದಾದ ತಂಡ ಪಾಲಿಕೆಯ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದೆ. ಜತೆಗೆ ಇಂದಿರಾ ಕ್ಯಾಂಟಿನ್ ಬಿಲ್ ಬಿಡುಗಡೆ ಮಾಡುವ ಅಧಿಕಾರಿಗಳ ಕಾಲ್ ಡೀಟೈಲ್ಸ್ ಕೂಡ ಕಲೆ ಹಾಕಿದ್ದಾರೆ. ಗೋವಿಂದಬಾಬು ಪೂಜಾರಿಗೆ ಸೇರಿದ ಕ್ಯಾಂಟಿನ್ ವ್ಯವಹಾರಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಗೋವಿಂದಬಾಬು ಎಷ್ಟು ವರ್ಷಗಳಿಂದ ಕ್ಯಾಂಟಿನ್​ಗಳಿಗೆ ಊಟ ಸರಬರಾಜು ಮಾಡುತ್ತಿದ್ದಾರೆ. ಇದುವರೆಗೂ ಇವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಕಳೆದ ಎರಡು ವರ್ಷಗಳಿಂದ ಎಷ್ಟು ಹಣ ಬಾಕಿ ನೀಡಬೇಕಿತ್ತು.ಮೂರು ತಿಂಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ? ಎಂಬುದು ಸೇರಿ ಕ್ಯಾಂಟಿನ್​ಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದಾರೆ.

ಜನವರಿ 22ರಂದು ದೀಪಾವಳಿ ಆಚರಿಸಿ : ದೇಶದ 140 ಕೋಟಿ ಭಾರತೀಯರಿಗೆ ಪ್ರಧಾನಿ ಮೋದಿ ಮನವಿ

Posted by Vidyamaana on 2023-12-30 16:09:52 |

Share: | | | | |


ಜನವರಿ 22ರಂದು ದೀಪಾವಳಿ ಆಚರಿಸಿ : ದೇಶದ 140 ಕೋಟಿ ಭಾರತೀಯರಿಗೆ ಪ್ರಧಾನಿ ಮೋದಿ ಮನವಿ

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉದ್ಘಾಟನೆಗೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ಆಗಮಿಸಿದ್ದು, ನೂತನವಾಗಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದರು.ನಂತ್ರ ಅಯೋಧ್ಯೆಯಲ್ಲಿ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, 2024ರ ಜನವರಿ 22 ರಂದು ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕ್ಷಣಕ್ಕಾಗಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದೆ ಎಂದು ಹೇಳಿದರು. ಇನ್ನು ಜನವರಿ 22ರಂದು 140 ಕೋಟಿ ಭಾರತೀಯರು ದೀಪಗಳ ಹಬ್ಬವಾಗಿ ಆಚರಿಸಬೇಕು ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ನಗರದ ಮೂಲಕ ಮೆಗಾ ರೋಡ್ ಶೋ ನಡೆಸಿದ ನಂತರ ನವೀಕರಿಸಿದ ರೈಲ್ವೆ ನಿಲ್ದಾಣವನ್ನ ಉದ್ಘಾಟಿಸಿದ್ದರು.ಇಂದು ಇಡೀ ಜಗತ್ತು ಜನವರಿ 22ರ ಐತಿಹಾಸಿಕ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದೆ, ಅಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯ ಜನರಲ್ಲಿ ಈ ಉತ್ಸಾಹವು ತುಂಬಾ ಸಹಜವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು "ನಾನು ಭಾರತದ ಪ್ರತಿಯೊಂದು ಮಣ್ಣಿನ ಕಣ ಮತ್ತು ಜನರ ಆರಾಧಕ. ನನಗೂ ನಿಮ್ಮಷ್ಟೇ ಕುತೂಹಲವಿದೆ" ಎಂದರು.


ಪ್ರಧಾನಿ ಮೋದಿ ಅವರು 15 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದರು. ಇದಕ್ಕಾಗಿ ಅಯೋಧ್ಯೆಯ ಜನತೆಯನ್ನು ಪ್ರಧಾನಿ ಅಭಿನಂದಿಸಿದ್ದಾರೆ. ನಾವು ನಮ್ಮ ಪರಂಪರೆಯನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದರು. ನಮ್ಮ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ. ಇದೇ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಗುಡಾರದಲ್ಲಿ ಕುಳಿತಿದ್ದ ಕಾಲವಿತ್ತು ಮತ್ತು ಇಂದು ರಾಮ ಲಲ್ಲಾ ಮಾತ್ರವಲ್ಲ, ದೇಶದ ನಾಲ್ಕು ಕೋಟಿ ಬಡವರಿಗೂ ಶಾಶ್ವತ ಮನೆ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

Posted by Vidyamaana on 2023-09-21 16:09:12 |

Share: | | | | |


ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಎಗರಿಸಿದ ಖತರ್ನಾಕ್ ಕಳ್ಳ

ಬಂಟ್ವಾಳ:ಪೊಲೀಸ್ ಸಿಬ್ಬಂದಿಯ ಮೊಬೈಲನ್ನೇ ಖತರ್ನಾಕ್ ಕಳ್ಳನೊಬ್ಬ ಎಗರಿಸಿದ ಘಟನೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.


ಮೆಲ್ಕಾರ್ ಟ್ರಾಫಿಕ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದಿಂದಾಗಿ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಶಿಫ್ಟ್ ಆಗಿದ್ದರು. ಅವರು ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಆಂಡ್ರಾಯ್ಡ್ ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಇನ್ನು ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.


ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋಗಿ ಮೊಬೈಲ್ ಸಮೇತ ಎಸ್ಕೆಪ್ ಆಗಿದ್ದ. ಇದೀಗ ಆತನೇ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕಳ್ಳತನ ಮಾಡಿದ್ದು ಈತನ ಓಡಾಟದ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ


ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು,ಈತನ ಚಹರೆ ಯನ್ನು ಗಮನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.



Leave a Comment: