ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಚಾರ್ಮಾಡಿ ಘಾಟ್ ಇಳಿಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್ – ಸಮಯ ಪ್ರಜ್ಞೆ ಮೆರೆದ ಚಾಲಕ ಸಂತೋಷ್ ಮಾಡಿದ್ದೇನು?

Posted by Vidyamaana on 2024-03-09 08:55:21 |

Share: | | | | |


ಚಾರ್ಮಾಡಿ ಘಾಟ್ ಇಳಿಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್ – ಸಮಯ ಪ್ರಜ್ಞೆ ಮೆರೆದ ಚಾಲಕ ಸಂತೋಷ್ ಮಾಡಿದ್ದೇನು?


ಮೂಡಿಗೆರೆ: ಸದಾ ಅಪಘಾತಗಳು ಸಂಭವಿಸುತ್ತಿರುವ ಚಾರ್ಮಾಡಿ ಘಾಟ್‌ನಲ್ಲಿ ಶುಕ್ರವಾರ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಚಾರ್ಮಾಡಿ ಘಾಟ್‌ನಲ್ಲಿ ಬ್ರೇಕ್‌ ಫೇಲ್ ಆಗಿತ್ತು.


ಕಡಿದಾದ ರಸ್ತೆ ಹಾಗೂ ತಿರುವುಗಳಿರುವ ಈ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್‌ ನಿಯಂತ್ರಿಸೋದು ಕಷ್ಟವಾಗಿತ್ತು. ಆದ್ರೆ, ಬ್ರೇಕ್‌ ಫೇಲ್ ಆಗಿರೋದು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಬಸ್ ನಿಲ್ಲಿಸಲು ಕೇವಲ ಯಾವುದಾದರು ತಡೆಗೋಡೆಗೆ ಗುದ್ದುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.


ಹೀಗಾಗಿ ಬಸ್ ಬ್ರೇಕ್‌ ಫೇಲ್ ಆಗಿರುವ ವಿಚಾರವನ್ನು ಪ್ರಯಾಣಿಕರ ಗಮನಕ್ಕೆ ತಂದು ಯಾರೂ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಎಲ್ಲರಿಗೂ ಗಟ್ಟಿಯಾಗಿ ಕುಳಿತುಕೊಳ್ಳುವಂತೆ ಸೂಚನೆ ನೀಡಿ ರಸ್ತೆಯಲ್ಲಿ ಸಿಗುವ ಯಾವುದಾದರೂ ಕಿರು ಸೇತುವೆಯ ತಡೆ ಗೋಡೆಗೆ ಡಿಕ್ಕಿ ಹೊಡೆಯುವುದಾಗಿ ಹೇಳಿದ್ದಾರೆ.


ಚಾರ್ಮಾಡಿ ಘಾಟ್‌ನ 6 ನೇ ತಿರುವು ಬಳಿ ಸ್ವಲ್ಪ ನೇರವಾಗಿರುವ ರಸ್ತೆಯಲ್ಲಿ ಇದ್ದ ಕಿರು ಸೇತುವೆಗೆ ಬಸ್ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಚಾರ್ಮಾಡಿ ಘಾಟ್‌ನಂತಹ ರಸ್ತೆಯಲ್ಲಿ ಬ್ರೇಕ್‌ ಫೇಲ್‌ ಆದ್ರೆ, ಕೈಕಾಲು ಬಿಡುವ ಚಾಲಕರ ನಡುವೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಂತೋಷ್‌ ಅವರ ಸಮಯ ಪ್ರಜ್ಞೆ ನಿಜಕ್ಕೂ ಮೆಚ್ಚತಕ್ಕದು.


ಪ್ರಯಾಣಿಕರೂ ಕೂಡಾ ಚಾಲಕ ಸಂತೋಷ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಸಮಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕ : ಮಿಲಿಟರಿ ಹಡಗುಗಳು ಯುದ್ಧ ವಿಮಾನಗಳ ರವಾನೆ

Posted by Vidyamaana on 2023-10-09 09:24:42 |

Share: | | | | |


ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕ : ಮಿಲಿಟರಿ ಹಡಗುಗಳು ಯುದ್ಧ ವಿಮಾನಗಳ ರವಾನೆ

ವಾಷಿಂಗ್ಟನ್ : ಹಮಾಸ್-ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇಸ್ರೇಲ್ ಗೆ ಬೆಂಬಲ ಘೋಷಣೆ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ಅನೇಕ ಮಿಲಿಟರಿ ಹಡಗುಗಳು ಮತ್ತು ವಿಮಾನಗಳನ್ನು ಇಸ್ರೇಲ್ಗೆ ಕಳುಹಿಸಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.ಹಮಾಸ್ ಹೋರಾಟಗಾರರು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿದ್ದು, ದೇಶವು ದಶಕಗಳಲ್ಲಿ ಅತ್ಯಂತ ರಕ್ತಸಿಕ್ತ ದಿನವನ್ನು ಶನಿವಾರ ಅನುಭವಿಸಿದೆ. ಗಾಝಾದಲ್ಲಿ ಇಸ್ರೇಲ್ ಭಾನುವಾರ ವೈಮಾನಿಕ ದಾಳಿ ನಡೆಸಿದ್ದು, ಎರಡೂ ಕಡೆ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


ಹೆಚ್ಚುತ್ತಿರುವ ಹಿಂಸಾಚಾರವು ಮಧ್ಯಪ್ರಾಚ್ಯದಲ್ಲಿ ಪ್ರಮುಖ ಹೊಸ ಯುದ್ಧವನ್ನು ಪ್ರಾರಂಭಿಸುವ ಬೆದರಿಕೆ ಹಾಕುತ್ತದೆ. ಮೃತಪಟ್ಟವರಲ್ಲಿ ಕನಿಷ್ಠ ಮೂವರು ಅಮೆರಿಕನ್ನರು ಸೇರಿದ್ದಾರೆ ಎಂದು ಯುಎಸ್ ಮೆಮೋವನ್ನು ಉಲ್ಲೇಖಿಸಿ ಸಿಎನ್‌ಎನ್ ಭಾನುವಾರ ವರದಿ ಮಾಡಿದೆ.


ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಅನ್ನು ಇಸ್ರೇಲ್ಗೆ ಹತ್ತಿರವಿರುವ ಪೂರ್ವ ಮೆಡಿಟರೇನಿಯನ್ಗೆ ಸ್ಥಳಾಂತರಿಸಲು ಆದೇಶಿಸಿದ್ದೇನೆ ಎಂದು ಆಸ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪಡೆ ವಾಹಕ, ಮಾರ್ಗದರ್ಶಿ ಕ್ಷಿಪಣಿ ಕ್ರೂಸರ್ ಮತ್ತು ನಾಲ್ಕುಮಾರ್ಗದರ್ಶಿ ಕ್ಷಿಪಣಿ ನಾಶಕ ನೌಕೆಗಳನ್ನು ಒಳಗೊಂಡಿದೆ.


ಈ ಪ್ರದೇಶದಲ್ಲಿ ಯುಎಸ್ ವಾಯುಪಡೆಯ ಎಫ್ -35, ಎಫ್ -15, ಎಫ್ -16 ಮತ್ತು ಎ -10 ಯುದ್ಧ ವಿಮಾನ ಸ್ಕ್ವಾಡ್ರನ್ ಗಳನ್ನು ಹೆಚ್ಚಿಸಲು ಯುನೈಟೆಡ್ ಸ್ಟೇಟ್ಸ್ ಕ್ರಮಗಳನ್ನು ಕೈಗೊಂಡಿದೆ ಎಂದು ಆಸ್ಟಿನ್ ಹೇಳಿದರು. ಅಮೆರಿಕವು ಇಸ್ರೇಲ್ ಗೆ ಶಸ್ತ್ರಾಸ್ತ್ರಗಳನ್ನು ಸಹ ಒದಗಿಸುತ್ತದೆ ಎಂದು ಅವರು ಹೇಳಿದರು.


ಇಸ್ರೇಲಿ ರಕ್ಷಣಾ ಪಡೆಗಳಿಗೆ ಹೆಚ್ಚುವರಿ ನೆರವು ಇಸ್ರೇಲ್ಗೆ ಹೋಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನದನ್ನು ಅನುಸರಿಸಲಾಗುವುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಭಾನುವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಿದರು ಎಂದು ಶ್ವೇತಭವನ ತಿಳಿಸಿದೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರೊಂದಿಗೆ ಕರೆ ಮಾಡಿದರು.ಯುಎಸ್ ಪ್ರತಿಕ್ರಿಯೆಗಳ ಬಗ್ಗೆ ನವೀಕರಿಸಲು ಮತ್ತು “ಇಸ್ರೇಲ್ ಜನರಿಗೆ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು ಹಮಾಸ್ನ ಭಯೋತ್ಪಾದಕ ದಾಳಿಯಿಂದ ಭದ್ರತೆ ಮತ್ತು ಸುರಕ್ಷತೆಯನ್ನು ಪುನಃಸ್ಥಾಪಿಸಲು ಇಸ್ರೇಲ್ ಕಾರ್ಯಾಚರಣೆಯ ಬಗ್ಗೆ ನವೀಕರಣಗಳನ್ನು ಪಡೆಯಲು” ಆಸ್ಟಿನ್ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಪೆಂಟಗನ್ ನಂತರದ ಹೇಳಿಕೆಯಲ್ಲಿ ತಿಳಿಸಿದೆ.


“ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿಗೆ ಅಮೆರಿಕದ ಅಚಲ ಬೆಂಬಲವನ್ನು ಕಾರ್ಯದರ್ಶಿ ಪುನರುಚ್ಚರಿಸಿದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಾದೇಶಿಕ ಪ್ರತಿರೋಧ ಪ್ರಯತ್ನಗಳನ್ನು ಹೆಚ್ಚಿಸಲು ಈ ಪ್ರದೇಶದಲ್ಲಿ ಯುಎಸ್ ಮಿಲಿಟರಿ ನಿಲುವನ್ನು ಬಲಪಡಿಸಲು ಯುಎಸ್ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಸ್ಟಿನ್ ಒತ್ತಿಹೇಳಿದ್ದಾರೆ ಎಂದು ಅದು ಹೇಳಿದೆ.

ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

Posted by Vidyamaana on 2024-03-01 14:05:03 |

Share: | | | | |


ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಸಾಮೆತ್ತಡ್ಕ ನಿವಾಸಿ ಬಾಲಕೃಷ್ಣ (48) ಮೃತರು ಬಾಲಕೃಷ್ಣ ಅವರು ಪೈಂಟರ್ ಕೆಲಸ ನಿರ್ವಹಿಸುತ್ತಿದ್ದು, ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಪೆರುವಾಜೆ:ಮರಕ್ಕೆ ಡಿಕ್ಕಿಯಾಗಿ ಸ್ಕೂಟರ್ ಪಲ್ಟಿ ಸಹಸವಾರ ಮಹಮ್ಮದ್ ರಾಝಿಕ್ ಸಾವು

Posted by Vidyamaana on 2024-04-13 11:45:27 |

Share: | | | | |


ಪೆರುವಾಜೆ:ಮರಕ್ಕೆ ಡಿಕ್ಕಿಯಾಗಿ ಸ್ಕೂಟರ್ ಪಲ್ಟಿ ಸಹಸವಾರ ಮಹಮ್ಮದ್ ರಾಝಿಕ್ ಸಾವು

ಬೆಳ್ಳಾರೆ :ಸ್ಕೂಟರೊಂದು ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದು ಸಹಸವಾರ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಪೆರುವಾಜೆ ಬೋರಡ್ಕ ಎಂಬಲ್ಲಿ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪೆರುವಾಜೆ ನಿವಾಸಿ ಜಬ್ಬಾರ್ ಕೆ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ಏ.11ರಂದು ರಾತ್ರಿ ನನ್ನ ಬಾಬು ಕೆ.ಎ.21 ಇಎ-2558ನೇ ಸ್ಕೂಟರಿನಲ್ಲಿ ಸಂಬಂಧಿಕರಾದ ಮಹಮ್ಮದ್ ಮುಸಾಬ್ ಸವಾರನಾಗಿ ಹಾಗೂ ಮಹಮ್ಮದ್ ರಾಜೀಕ್‌ರವರು ಸಹಸವಾರನಾಗಿ ಪ್ರಯಾಣಿಸುತ್ತಾ, ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಬೋರಡ್ಕ ಎಂಬಲ್ಲಿಗೆ ತಲುಪಿದಾಗ, ಮಹಮ್ಮದ್ ಮುಸಾಬ್ ಸ್ಕೂಟರನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಸದ್ರಿ ಸ್ಕೂಟರ್ ರಸ್ತೆಬದಿಯ ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು.ಸ್ಕೂಟರ್‌ನ ಹಿಂದಿನಿಂದ ಬರುತ್ತಿದ್ದ ನಾನು ಕಾರನ್ನು ನಿಲ್ಲಿಸಿ,

ಭಜರಂಗಿ ನಟಿ ವಿದ್ಯಾ ಹತ್ಯೆ ಪ್ರಕರಣ: ಆರೋಪಿ ಪತಿ ನಂದೀಶ್ ಬಂಧನ

Posted by Vidyamaana on 2024-05-24 05:33:00 |

Share: | | | | |


ಭಜರಂಗಿ ನಟಿ ವಿದ್ಯಾ ಹತ್ಯೆ ಪ್ರಕರಣ: ಆರೋಪಿ ಪತಿ ನಂದೀಶ್ ಬಂಧನ

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾಗಿದ್ದ (Murder Case) ಕಾಂಗ್ರೆಸ್ ಮುಖಂಡೆ ಹಾಗೂ ಶಿವರಾಜ್‌ಕುಮಾರ್ ನಟನೆಯ ಸೂಪರ್‌ ಹಿಟ್‌ ಚಿತ್ರ ಭಜರಂಗಿ ಯಲ್ಲಿ ನಟಿಸಿದ್ದ ವಿದ್ಯಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ, ಪತಿ ನಂದೀಶ್‌ನನ್ನು ಬನ್ನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿವರಾಜ್‌ಕುಮಾರ್ ನಟನೆಯ ಸೂಪರ್‌ ಹಿಟ್‌ ಚಿತ್ರ ಭಜರಂಗಿಯಲ್ಲಿ ನಟಿಸಿದ್ದ ವಿದ್ಯಾ ನಂದೀಶ್ ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದರು. ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿ ಕೊಲೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

BIG NEWS: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರೆಸ್ಟ್

Posted by Vidyamaana on 2024-06-23 18:54:49 |

Share: | | | | |


BIG NEWS: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಶಿವಮೊಗ್ಗ: ಯುವತಿಗೆ ಮುದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಕುಗ್ವೆ ಬಂಧಿತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಸಾಗರದ ನಿವಾಸದಲ್ಲಿ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ.

ಸಂತ್ರಸ್ತ ಯುವತಿ ಮೊದಲು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಕಾರಣಾಂತರಗಳಿಂದ ಆರೋಪಿ ಅರುಣ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಯುವತಿ ಶಿವಮೊಗ್ಗಕ್ಕೆ ಬಂದು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಭರತ್ ಕುಮಾರ್ ನೇತೃತ್ವದ ತಂಡ ಅರುಣ್ ಕುಗ್ವೆಯನ್ನು ಬಂಧಿಸಿದೆ.



Leave a Comment: