ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ತಮ್ಮ ಕಡುಬಡತನದಲ್ಲಿ ಕೈ ಹಿಡಿದವರನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಅಶೋಕ್ ರೈ

Posted by Vidyamaana on 2023-07-25 12:33:50 |

Share: | | | | |


ತಮ್ಮ ಕಡುಬಡತನದಲ್ಲಿ ಕೈ ಹಿಡಿದವರನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಅಶೋಕ್ ರೈ


ಪುತ್ತೂರು: `` ನಾವು ಚಿಕ್ಕವರಿರುವಾಗ ನಮ್ಮ ಮನೆಯಲ್ಲಿ ಬಡತನವಿತ್ತು. ಕೆಲವೊಮ್ಮೆ ಒಪ್ಪೊತ್ತಿನ ಊಟಕ್ಕೂ ಗತಿಇರಲಿಲ್ಲ. ಕೋಡಿಂಬಾಡಿಯಲ್ಲಿರುವ ಅನಂತ್ ನಾಯಕ್ ಮೈರಾ ಎಂಬವರ ಜಿನಸು ಅಂಗಡಿಯಿಂದ ನಾವು ಮನೆಗೆ ಸಾಮಾನು ತರುತ್ತಿದ್ದೆವು. ಕೆಲವೊಮ್ಮೆ ಹಣ ಕೊಡುವಾಗ ತಡವಾದರೂ ಸಾಮಾನು ಕೊಡುತ್ತಿದ್ದರು, ನಾವು ದುಡ್ಡು ಕೊಡುವಾಗ ತಡವಾದರೂ ಒಂದುದಿನವೂ ನಮ್ಮನ್ನು ಜೋರು ಮಾಡಿಲ್ಲ, ದುಡ್ಡು ಕೊಡದೆ ಸಾಮಾನು ಕೊಡುವುದಿಲ್ಲ ಎಂದು ಅನಂತ್ ನಾಯಕ್‌ರವರು ಒಮ್ಮೆಯೂ ಹೇಳಿಲ್ಲ. ಅಂಥಹ ವ್ಯಕ್ತಿ ಮೃತಪಟ್ಟಾಗ ನಾನು ಅವರ ಮೃತದೇಹವನ್ನು ನೋಡಲು ಸಾಧ್ಯವಾಗಲಿಲ್ಲ, ಅವರ ಉತ್ತರಕ್ರಿಯೆಗೂ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಶಾಸಕರಾದ ಅಶೋಕ್ ರೈಯವರು ಮೃತ ಅನಂತ್ ನಾಯಕ್‌ರವರ ಶ್ರದ್ದಾಂಜಲಿ ಸಭೆಯಲ್ಲಿ ಕಣ್ಣೀರು ಹಾಕಿದ ಘಟನೆ ನಡೆಯಿತು.

ನಮ್ಮ ತಂದೆಯವರು ಶಿಕ್ಷಕರಾಗಿದ್ದರೂ ಆ ಕಾಲದಲ್ಲಿ ಕನಿಷ್ಠ ಸಂಬಳ ಸಿಗುತ್ತಿತ್ತು. ನಮ್ಮಲ್ಲಿ ಏನೂ ಇರಲಿಲ್ಲ. ಕಡುಬಡತನದ ಕುಟುಂಬ ನಮ್ಮದಾಗಿತ್ತು. ಶಾಲೆಬಿಟ್ಟು ಮನೆಗೆ ಬರುವಾಗ ಮನೆಯಲ್ಲಿ ತಿನ್ನಲೂ ಏನೂ ಇರಲಿಲ್ಲ. ಸಂಜೆ ಅಂಗಡಿಗೆ ಹೋಗಿ ಅಲ್ಲಿಂದ ಅಕ್ಕಿ ಸಾಮಾನು ತಂದ ಬಳಿಕ ನಮ್ಮ ಮನೆಯಲ್ಲಿ ಊಟ ರೆಡಿಯಾಗುತ್ತಿತ್ತು. ಅಂದಿನ ಆ ಕಷ್ಟದ ದಿನಗಳಲ್ಲಿ ನಮಗೆ ಸಾಲವಾಗಿ ಸಾಮಾನು ಕೊಡುತ್ತಿದ್ದ ಅನಂತ ನಾಯಕ್‌ರವರ ಉಧಾರತೆಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ನೀವು ಶಾಸಕನಾಗುತ್ತಿಯ ಅಶೋಕ.. ಎಂದು ಆಶೀರ್ವಾದ ಮಾಡಿದ್ದರು. ಆದರೆ ಶಾಸಕನಾದ ಬಳಿಕ ನನಗೆ ಅವರನ್ನು ನೋಡಲು ಅವಕಾಶ ಸಿಕ್ಕಿಲ್ಲ ಮತ್ತು ನನಗೆ ಸಾಧ್ಯವಾಗದೇ ಇರುವುದು ಅತ್ಯಂತ ನೋವಿನ ವಿಚಾರವಾಗಿದೆ. ಅವರು ಈಗ ನಮ್ಮನ್ನು ಅಗಲಿರಬಹುದು ಆದರೆ ಅವರು ಮಾಡಿದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ. ಶಾಸಕರು ಮಾತನಾಡುತ್ತಿದ್ದ ವೇಳೆ ಅಳುತ್ತಲೇ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಸಭೆಯಲ್ಲಿದ್ದವರ ಕಣ್ಣುಗಳೂ ತೇವಗೊಂಡವು.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ

Posted by Vidyamaana on 2024-04-09 12:01:52 |

Share: | | | | |


ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 9ನೇ ತಿರುವಿನ ಸಮೀಪ ಒಂಟಿ ಸಲಗ ಎ. 8ರಂದು ಮಧ್ಯಾಹ್ನ 12 ರ ಸುಮಾರಿಗೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ವೀಡಿಯೋ ವೈರಲ್‌ ಆಗಿದೆ.


ಎರಡು ತಿಂಗಳ ಹಿಂದೆಯೂ ಕಾಡಾನೆ ನಾಲ್ಕಾರು ಬಾರಿ ಘಾಟಿ ಪರಿಸರದಲ್ಲಿ ಹಗಲಲ್ಲೇ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಆನೆ ಸ್ವಲ್ಪ ಹೊತ್ತು ರಸ್ತೆ ಬದಿಯಲ್ಲಿ ನಿಂತು ಬಳಿಕ ರಸ್ತೆಯಲ್ಲಿ ಸಾಗಿ ನೆರಿಯ ಕಾಡಿನ ಕಡೆಗೆ ತೆರಳಿದೆ.

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

Posted by Vidyamaana on 2024-03-07 12:39:49 |

Share: | | | | |


ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

ಬೆಳ್ತಂಗಡಿ :ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ಸುದ್ದಿ ಉದಯ ಪತ್ರಿಕೆಯ ಆಡಳಿತ ನಿರ್ದೇಶಕ ತುಕಾರಾಮ್ ಬಿ. ಐದು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆನಂದ ಶೆಟ್ಟಿ, ಗೋಪಾಲ್ ರಾವ್, ಮಮತಾ ಶೆಟ್ಟಿ, ವೀಣಾ ವಿನೋದ್ ಕುಮಾರ್, ಕೃಷ್ಣಪ್ಪ ಗುಡಿಗಾರ್, ಸಚಿನ್ ಕುಮಾರ್ ನೊಜೋಡಿ, ಸಂತೋಷ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ಪ್ರಸಾದ್ ಬಿ ಆಯ್ಕೆಯಾಗಿದ್ದಾರೆ.

ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ ಮೃತ್ಯು

Posted by Vidyamaana on 2024-02-04 19:35:22 |

Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ  ಮೃತ್ಯು

ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ. 



ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ. 


ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ದ.ಕ. ಜಿಲ್ಲೆಗೆ ಪ್ರಭಾರ ಎಸ್.ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

Posted by Vidyamaana on 2023-05-30 16:41:18 |

Share: | | | | |


ಮಂಗಳೂರು: ದ.ಕ. ಜಿಲ್ಲೆಗೆ ಪ್ರಭಾರ ಎಸ್.ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

ಮಂಗಳೂರು: ದಾವಣಗೆರೆ ಜಿಲ್ಲೆ ಎಸ್ ಪಿ ಆಗಿ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜಿ ಕಚೇರಿಯಲ್ಲಿದ್ದ ಸಿ ಬಿ ರಿಷ್ಯಂತ್ ಅವರನ್ನು ದ.ಕ. ಜಿಲ್ಲೆಗೆ ಪ್ರಭಾರ ಎಸ್.ಪಿ.ಯಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಎಸ್.ಪಿ. ವಿಕ್ರಮ್ ಅಮ್ಟೆ ಅವರು ರಜೆಯಲ್ಲಿರುವ ಕಾರಣ ರಿಷ್ಯಂತ್ ಅವರು ಪ್ರಭಾರವಾಗಿ ಕರ್ತವ್ಯ ಮಾಡಲು ನಾಳೆ ಹಾಜರಾಗಲು ಸರಕಾರ ಅದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿ ಬಿ ರಿಷ್ಯಂತ್ 2013 ಬ್ಯಾಚ್ ಕರ್ನಾಟಕ ಕೆಡರ್ ಐ ಪಿ ಎಸ್ ಅಧಿಕಾರಿಯಾಗಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಇವರು, ಪುತ್ತೂರು ಉಪ ವಿಭಾಗದಲ್ಲಿ  ಎ ಎಸ್ ಪಿ, ಬಾಗಲಕೋಟೆ ನಲ್ಲಿ ಎಸ್ ಪಿ ಯಾಗಿ, ದಾವಣಗೆರೆಯಲ್ಲಿ ಎಸ್.ಪಿ.ಯಾಗಿ ಕರ್ತವ್ಯ ಮಾಡಿದ್ದಾರೆ.

ಇವರು ಈ ಹಿಂದೆ ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳಾಗಿದ್ದರು. ಮೈಸೂರಿನಲ್ಲಿ ಖಡಕ್ ಪೋಲಿಸ್ ಅಧಿಕಾರಿ ಎಂದು ಹೆಸರು ಕೂಡ ಪಡೆದಿದ್ದಾರೆ. ಪ್ರಭಾವಿ ನಾಯಕ ಮುನಿರತ್ನ ಅವರ ಅಳಿಯನಾಗಿರುವ ಇವರನ್ನು ಚುನಾವಣಾ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಿಂದ ಯಾವುದೇ ಸ್ಥಳ ನೀಡದೆ ವರ್ಗಾವಣೆಗೊಳಿಸಿ ಬಳಿಕ ಬೆಂಗಳೂರು ಡಿ.ಜಿ.ಕಚೇರಿಯಲ್ಲಿ ಕರ್ತವ್ಯಕ್ಕೆ ಸೂಚಿಸಿದ್ದರು‌. ಇದೀಗ ಮಂಗಳೂರು ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ಸರಕಾರ ಅದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಪ್ಪಿನಂಗಡಿ :ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು

Posted by Vidyamaana on 2023-09-30 15:42:57 |

Share: | | | | |


ಉಪ್ಪಿನಂಗಡಿ :ಪ್ರವಾಸಕ್ಕೆ ತೆರಳಿದ  ಹಿರೇಬಂಡಾಡಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು

ಪುತ್ತೂರು : ಪ್ರವಾಸಕ್ಕೆ ತೆರಳಿದ ವೇಳೆ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.


ಪುತ್ತೂರು ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ (20) ಮೃತ ಯುವಕ.


ಅಝೀಂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು.


ನಿನ್ನೆ ರಾತ್ರಿ ತೆರಳಿದವರು ರೂಮ್ ಅಲ್ಲಿ ಸ್ಟೇ ಆಗಿದ್ದು, ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.


ಪೆರಿಯಾರು ಮೆಡಿಕಲ್ ಕಾಲೇಜಿನಲ್ಲಿ ಮೃತದೇಹವನ್ನಿರಿಸಲಾಗಿದೆ.



Leave a Comment: