ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಏರ್ ಇಂಡಿಯಾ ಗಗನಸಖಿ ಕೊಲೆ ಪ್ರಕರಣದ ಆರೋಪಿ ವಿಕ್ರಂ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ

Posted by Vidyamaana on 2023-09-08 21:50:08 |

Share: | | | | |


ಏರ್ ಇಂಡಿಯಾ ಗಗನಸಖಿ ಕೊಲೆ ಪ್ರಕರಣದ ಆರೋಪಿ ವಿಕ್ರಂ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ

ಮುಂಬೈ: ಗಗನಸಖಿ ಒಬ್ಬರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಅಂಧೇರಿಯ ಪೊಲೀಸ್ ಠಾಣೆಯಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಬೈನ ಮರೋಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ 23 ವರ್ಷದ ಗಗನಸಖಿಯನ್ನು ಕೊಂದ ಆರೋಪದಲ್ಲಿ ವಿಕ್ರಂ ಅತ್ವಾಲ್ ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಗಗನಸಖಿ ರೂಪಲ್ ಒಗ್ರೆ ಅಂಧೇರಿಯ ಅಪಾರ್ಟ್ಮೆಂಟ್ ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಛತ್ತೀಸ್ ಗಢ ಮೂಲದ ಅವರು ವಿಮಾನಯಾನ ಸಂಸ್ಥೆಯಲ್ಲಿ ತರಬೇತಿಗಾಗಿ ಏಪ್ರಿಲ್ ನಲ್ಲಿ ಮುಂಬೈಗೆ ಬಂದಿದ್ದರು.

ಕೊಲೆ ಆರೋಪದ ಮೇಲೆ ರೂಪಾಲ್ ಉಳಿದುಕೊಂಡಿದ್ದ ಅಪಾರ್ಟ್ಮೆಂಟ್ ನ ಸ್ವಚ್ಚತಾ ಕೆಲಸಗಾರ 40 ವರ್ಷದ ವಿಕ್ರಮ್ ಅತ್ವಾಲ್ ಎಂಬುವವನ್ನು ಪೊಲೀಸರು ಬಂಧಿಸಿದ್ದರು. ಆದರೆ ಶುಕ್ರವಾರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ: ಮನೆಯಲ್ಲಿ ಪತಿ ಪತ್ನಿ ಮಗ ಸಜೀವ ದಹನ; ಆತ್ಮಹತ್ಯೆ ಶಂಕೆ

Posted by Vidyamaana on 2023-10-08 15:25:14 |

Share: | | | | |


ಶಿವಮೊಗ್ಗ: ಮನೆಯಲ್ಲಿ ಪತಿ ಪತ್ನಿ ಮಗ ಸಜೀವ ದಹನ; ಆತ್ಮಹತ್ಯೆ ಶಂಕೆ

ಶಿವಮೊಗ್ಗ: ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತೀರ್ಥಹಳ್ಳಿಯ ಅರಳಸುರಳಿ ಗ್ರಾಮದ ಬಳಿ ನಡೆದಿದೆ.ಹೊಸನಗರ ರಸ್ತೆಯ ಗಣಪತಿ ಕಟ್ಟೆ ರೈಸ್‌ಮಿಲ್​ ಹತ್ತಿರದ ಮನೆಯೊಂದರಲ್ಲಿ ದುರಂತ ನಡೆದಿದೆ .


ರಾಘವೇಂದ್ರ (63), ಪತ್ನಿ ನಾಗರತ್ನ (55) ಹಾಗೂ ಪುತ್ರ ಶ್ರೀರಾಮ್ (34) ಮೃತರು. ಇನ್ನೊಬ್ಬ ಪುತ್ರ ಭರತ್ (30) ಗಂಭೀರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಗಿದೆ. ಮನೆ ಭಾಗಶಃ ಸುಟ್ಟು ಹೋಗಿದೆ. ತೀರ್ಥಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ


ಆತ್ಮಹತ್ಯೆ ಶಂಕೆ: ರಾಘವೇಂದ್ರಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಮನೆಯ ಹಾಲ್​ನಲ್ಲಿಯೇ ಕಟ್ಟಿಗೆ ಜೋಡಿಸಿಟ್ಟು ಬೆಂಕಿ ಹಚ್ಚಿಕೊಂಡಿರುವ ಕುರುಹುಗಳು ಪತ್ತೆಯಾಗಿವೆ. ಗ್ರಾಮಸ್ಥರು ಹೊಗೆ ಗಮನಿಸಿ ಮನೆಯಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಓರ್ವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀರ್ಥಹಳ್ಳಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.


ಆರಗ ಜ್ಞಾನೇಂದ್ರ ಪ್ರತಿಕ್ರಿಯೆ: "ಘಟನೆ ತೀವ್ರ ನೋವುಂಟು ಮಾಡಿದೆ" ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅರಳಸುರಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ಕೆಕೋಡು ರಾಘವೇಂದ್ರ ಅವರ ಕುಟುಂಬ ನನಗೆ ತುಂಬ ಹತ್ತಿರವಾದ ಕುಟುಂಬ. ಮೂವರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಪುತ್ರ ಭರತ್ ಗಾಯಗೊಂಡಿದ್ದಾನೆ. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ" ಎಂದರು.


"ಇವರ ಕುಟುಂಬದ ಬ.ರಾ.ಕೃಷ್ಣಮೂರ್ತಿ ಎಂಬವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ದೆಹಲಿಯಲ್ಲಿದ್ದರು. ಈಗ ಬೆಂಗಳೂರಿಗೆ ಬಂದಿದ್ದಾರೆ. ನನಗೆ ಕಳೆದ 40 ವರ್ಷಗಳಿಂದ ಪರಿಚಯ. ಆರ್ಥಿಕವಾಗಿಅನುಕೂಲಸ್ಥರು. ಇವರಿಗೆ 10 ಎಕರೆ ಅಡಿಕೆ ತೋಟವಿದೆ. ಸಹೋದರರ ಪೈಕಿ ಒಬ್ಬ ವೈದ್ಯ, ಒಬ್ಬರು ಟೆಲಿಪೋನ್ ಇಲಾಖೆಯಲ್ಲಿದ್ದಾರೆ. ರಾಘವೇಂದ್ರರ ಮಗ ಭರತ್ ಅಡಿಕೆ ವ್ಯಾಪಾರ ಮಾಡಿಕೊಂಡು ಇದ್ದಾರೆ. ಸ್ಥಳಕ್ಕೆ ಎಸ್ಪಿ ಭೇಟಿ ನೀಡಲಿದ್ದು, ಎಫ್‌ಎಸ್‌ಎಲ್ ತಂಡ ಆಗಮಿಸಲಿದೆ. ತನಿಖೆಯ ನಂತರ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ" ಎಂದು ಹೇಳಿದರು.

ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

Posted by Vidyamaana on 2023-09-22 08:43:11 |

Share: | | | | |


ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

ಪುತ್ತೂರು :"ಡೈಮಂಡ್ ಫೆಸ್ಟ್” ಸೆ.18ರಂದು ಆರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ ವಜ್ರಾಭರಣಗಳನ್ನು ಬಿಡುಗಡೆಗೊಳಿಸಿ ಫೆಸ್ಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮುಳಿಯ ಜ್ಯುವೆಲ್ಸ್ ನಲ್ಲಿ ವಜ್ರಾಭರಣಗಳ ವಿಶೇಷ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಅಚ್ಚುಮೆಚ್ಚಿನ ವಜ್ರದ ಆಭರಣಗಳನ್ನು ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ರಿಯಾಯಿತಿ ದರದಲ್ಲಿ ವಜ್ರಗಳ ಆಭರಣ ಖರೀದಿಸಬಹುದು. ವೇದಾಂತ್ ಮತ್ತು ಕಿಸ್ನ ಎಂಬ ಎರಡು ವಿಧದ ಆಭರಣಗಳು ಫೆಸ್ಟ್‌ನಲ್ಲಿದೆ. ಗ್ರಾಹಕರು ಈ ಫೆಸ್ಟ್‌ನೊಂದಿಗೆ ಪಾಲ್ಗೊಳ್ಳಿ ಎಂದರು.ಮುಳಿಯ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮಾತನಾಡಿ ವಜ್ರಾದಪಿ ಕಠೋರಾನಿ ಎಂಬ ಮಾತಿನಂತೆ ವಜ್ರ ಕಾಠಿಣ್ಯತೆಯನ್ನು ಹೊಂದಿದ ವಸ್ತು. ವಜ್ರಾಭರಣ ಧರಿಸಿದ ಮಹಿಳೆ ವಜ್ರದ ಮೌಲ್ಯವನ್ನು ತನ್ನಲ್ಲಿ ಪ್ರತಿಬಿಂಬಿಸುತ್ತಾಳೆ. ಮಿಷನ್ ತಂತ್ರಜ್ಞಾನದಲ್ಲಿಯೂ ವಜ್ರವನ್ನು ಬಳಸಲಾಗುತ್ತದೆ. ಆಭರಣ ಚಿನ್ನ, ವಜ್ರಗಳ ಆಭರಣ ಖರೀದಿಗೆ ಪ್ರತೀ ಸಮಯವೂ ಸಕಾಲವಾಗಿದೆ. ವಜ್ರವನ್ನು ಯಾರೂ ಕೂಡ ಖರೀದಿಸಬಹುದು ಎಂದು ಹೇಳಿದರು.ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕ ಮಾತನಾಡಿ ಕಳೆದ ಕೆಲವು ವರುಷಗಳಿಂದ ಮುಳಿಯ ಡೈಮಂಡ್ ಫೆಸ್ಟ್ ಆಯೋಜಿಸಲಾಗುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ಹಾಗೆ ಫೆಸ್ಟ್ ಮಾಡಲಾಗಿದೆ. ಇದು ಕೈಗೆಟುಕುವ ವೈಭವವಾಗಿದೆ. ಇಲ್ಲಿ ಎಲ್ಲರಿಗೂ ವಜ್ರವನ್ನು ಖರೀದಿಸುವ ಅವಕಾಶಗಳಿವೆ. ಮಿತದರದಲ್ಲಿ ವಜ್ರಾಭರಣ ಪಡೆಯಬಹುದು. ವಜ್ರದ ಆಭರಣಕ್ಕೆ ಕೂಡ ಮಾರುಕಟ್ಟೆ ದರದ ಪ್ರಕಾರ ವಿನಿಮಯ ಆಫರ್ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದರು.

ಪ್ರಥಮ ಖರೀದಿ:

ಡೈಮಂಡ್ ಫೆಸ್ಟ್‌ನಲ್ಲಿ ಆರಂಭದ ದಿನವೇ ಗ್ರಾಹಕರಾದ ಗಣೇಶ್ ಮತ್ತು ಸವಿತಾ ಕೇದಗಡಿ ದಂಪತಿ ವಜ್ರಾಭರಣ ಖರೀದಿ ಮಾಡಿದರು. ಈ ಮೂಲಕ ಈ ಫೆಸ್ಟ್‌ನ ಪ್ರಥಮ ಖರೀದಿದಾರರಾದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಉಪಸ್ಥಿತರಿದ್ದರು. ಸಿಬಂದಿ ಸಂದೇಶ್ ಪ್ರಾರ್ಥಿಸಿದರು. ಶೋರೂಮ್ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಪ್ರವಿಣ ಕಾರ್ಯಕ್ರಮ ನಿರೂಪಿಸಿದರು. ಸ್ಟೋರ್ ಮ್ಯಾನೇಜರ್ ಯತೀಶ್ ವಂದಿಸಿದರು.

ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ : ಪಾನ್ ವಾಲ ಪೊಲೀಸ್ ವಶಕ್ಕೆ

Posted by Vidyamaana on 2024-04-02 14:45:03 |

Share: | | | | |


ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ : ಪಾನ್ ವಾಲ ಪೊಲೀಸ್ ವಶಕ್ಕೆ

ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ವ್ಯಕ್ತಿ.

ಏ.1 ರಂದು ಮಧ್ಯಾಹ್ನ ವೇಳೆ ಪುತ್ತೂರು ತಾಲೂಕು ಲಿನೆಟ್‌ ಜಂಕ್ಷನ್‌‌ನ ಬಾರ್‌ &

ಅಶೋಕ್ ರೈ ಗೆಲುವಿಗೆ ಸುಮಾ ರೈ ಶ್ರಮ

Posted by Vidyamaana on 2023-05-01 17:25:03 |

Share: | | | | |


ಅಶೋಕ್ ರೈ ಗೆಲುವಿಗೆ ಸುಮಾ ರೈ ಶ್ರಮ

ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಪುತ್ತೂರಿನಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಕ್ಷ ಅದಕ್ಕೆ ಸರಿಯಾಗಿ ತಮ್ಮೊಳಗಿರುವ ಬಣರಾಜಕೀಯವನ್ನು ಮರೆತು ಒಗ್ಗಟ್ಟಿನಿಂದ ಪ್ರಚಾರ ನಡೆಸ್ತಿದ್ದಾರೆ.

ಸುಳ್ಯ: ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Posted by Vidyamaana on 2023-10-03 15:54:20 |

Share: | | | | |


ಸುಳ್ಯ: ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸುಳ್ಯ: ಸಂಸಾರವನ್ನು ಬಿಟ್ಟು ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರು ತನ್ನ ಮನೆಯೊಳಗೆ ಮಲಗಿದ್ದಲ್ಲೇ ಕೊನೆಸಿರೆಳೆದು‌‌, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಕಂದಡ್ಕ‌ ಬಳಿಯ ಮುಂಡೋಕಜೆಯಿಂದ ವರದಿಯಾಗಿದೆ.

ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಅಮರ ಮುಡ್ನೂರು ಗ್ರಾಮದ ಮುಂಡಕಜೆ ನಾರಾಯಣ ನಾಯ್ಕ ಎಂಬವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.


ನಾರಾಯಣ ನಾಯ್ಕರವರು ವಿವಾಹಿತರಾಗಿದ್ದರೂ ಇವರು ಕುಡಿತದ ಚಟ ಹೊಂದಿದ್ದರಿಂದ ಪತ್ನಿ ಇವರಿಂದ ದೂರ ಉಳಿದಿದ್ದರು. ಮಕ್ಕಳನ್ನು ಮದುವೆ ಮಾಡಿ ಕೊಡಲಾಗಿತ್ತು. ಹೀಗಾಗಿ ನಾರಾಯಣ ನಾಯ್ಕರವರು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡು ಒಬ್ಬರೇ ಜೀವಿಸುತ್ತಿದ್ದರು. ಮಾತ್ರವಲ್ಲದೇ ನೆರೆಮನೆಮಂದಿಯಲ್ಲಿಯೂ ಮಾತುಕತೆ ಇರಲಿಲ್ಲ. ಎರಡು ದಿನದಿಂದ ಪರಿಸರವೆಲ್ಲಾ ದುರ್ವಾವಾಸನೆ ಬರತೊಡಗಿತೆಂದೂ, ಅನುಮಾನಗೊಂಡ ನೆರೆಮನೆಯಯವರೊಬ್ಬರು ವಾಸನೆ ಬರುವ ಮೂಲ‌ ಹುಡುಕತೊಡಗಿದರೆಂದೂ, ಅನುಮಾನದಲ್ಲಿ ನಾರಾಯಣ ನಾಯ್ಕರವರ ಮನೆಯ ಕಡೆ ಹೋಗಿ ನೋಡಿದಾಗ ಅವರು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿರುವುದು ಕಂಡು ಬಂದಿದೆ ಎನ್ನಲಾಗಿದೆ.‌


ಇನ್ನು ಈ ವಿಷಯ ಸ್ಥಳೀಯರಿಗೆ ಗೊತ್ತಾಗಿ ಅವರು ಶೌರ್ಯ ವಿಪತ್ತು ಘಟಕದವರಿಗೆ ಮತ್ತು ಪೋಲೀಸರಿಗೆ ವಿಷಯ ತಿಳಿಸಿ, ಅವರು ಬಂದು ಮಹಜರು ನಡೆಸಿ ಬಳಿಕ ದೊಡ್ಡತೋಟ ಘಟಕದ ಶೌರ್ಯ ವಿಪತ್ತು ಘಟಕದವರು ಜೆಸಿಬಿಯ ಮೂಲಕ ಗುಂಡಿ ತೋಡಿ ನಾರಾಯಣ ನಾಯ್ಕರವರ ಅಳಿಯ ಮತ್ತು ಸಹೋದರ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ದಫನ ಕಾರ್ಯ ನಡೆಸಿದರು.


ಶೌರ್ಯ ವಿಪತ್ತು ಘಟಕದ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.



Leave a Comment: