ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಅಶೋಕ್ ರೈ ಗೆಲುವಿಗೆ ಸುಮಾ ರೈ ಶ್ರಮ

Posted by Vidyamaana on 2023-05-01 17:25:03 |

Share: | | | | |


ಅಶೋಕ್ ರೈ ಗೆಲುವಿಗೆ ಸುಮಾ ರೈ ಶ್ರಮ

ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಪುತ್ತೂರಿನಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಕ್ಷ ಅದಕ್ಕೆ ಸರಿಯಾಗಿ ತಮ್ಮೊಳಗಿರುವ ಬಣರಾಜಕೀಯವನ್ನು ಮರೆತು ಒಗ್ಗಟ್ಟಿನಿಂದ ಪ್ರಚಾರ ನಡೆಸ್ತಿದ್ದಾರೆ.

ಪತ್ರಕರ್ತೆ ಪ್ರಶ್ನೆಗೆ ಸ್ಫೋಟಗೊಂಡ ಅಣ್ಣಾಮಲೈರನ್ನು ದೆಹಲಿಗೆ ಬಾ ಎಂದ ಬಿಜೆಪಿ ಹೈಕಮಾಂಡ್‌- ಕುತೂಹಲ ಕೆರಳಿಸಿದ ಬೆಳವಣಿಗೆ

Posted by Vidyamaana on 2023-10-02 20:33:58 |

Share: | | | | |


ಪತ್ರಕರ್ತೆ ಪ್ರಶ್ನೆಗೆ ಸ್ಫೋಟಗೊಂಡ ಅಣ್ಣಾಮಲೈರನ್ನು ದೆಹಲಿಗೆ ಬಾ ಎಂದ ಬಿಜೆಪಿ ಹೈಕಮಾಂಡ್‌- ಕುತೂಹಲ ಕೆರಳಿಸಿದ ಬೆಳವಣಿಗೆ

ಕೊಯಮತ್ತೂರು, ಅಕ್ಟೋಬರ್ 2: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಭಾನುವಾರ ಕೊಯಮತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡು ಕಿರಿಕ್‌ ಮಾಡಿದ್ದಾರೆ.ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.


ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಯನ್ನು ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿ ಕೇಳಿದ್ದಾರೆ.


ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮಹಿಳಾ ಪತ್ರಕರ್ತೆಗೆ ಕ್ಯಾಮೆರಾ ಮುಂದೆ ಬರಲು ಹೇಳಿದ್ದಾರೆ.


ಯಾರು ಇಂತಹ ಬುದ್ಧಿವಂತ ಪ್ರಶ್ನೆ ಕೇಳುತ್ತಿದ್ದಾರೆಂದು ತಮಿಳುನಾಡಿನ ಜನರು ನೋಡಲಿ ಎಂದು ಬೆದರಿಕೆಯ ಧ್ವನಿಯಲ್ಲಿ ಅಣ್ಣಾಮಲೈ ಮಾತನಾಡಿದ್ದಾರೆ.


ಇಲ್ಲಿ ಬಾ ಅಕ್ಕ, ಇಲ್ಲಿಗೆ ಬಂದು ಮಾತಾಡು. ಇಂತಹ ಅದ್ಭುತ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆಂದು ತಮಿಳುನಾಡಿನ ಜನತೆ ನೋಡಲಿ ಎಂದು ಹೇಳಿದ್ದಾರೆ.ಪ್ರಶ್ನೆ ಕೇಳುವುದಕ್ಕೆ ಒಂದು ರೂಢಿ ಇದೆ. ಒಬ್ಬ ವ್ಯಕ್ತಿಯು ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಹೊಂದಿರುವಾಗ, ಅವರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಇದಕ್ಕೆ ಮಿತಿ ಇದೆ. ಯಾರೇ ಆಗಲಿ ಆ ರೂಢಿಯನ್ನು ದಾಟಬಾರದು. ಅಂತಹ ಜನರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ.


ಬಿಜೆಪಿ ಜೊತೆಗಿನ ದೀರ್ಘ ಕಾಲದ ಸಂಬಂಧವನ್ನು ಎಐಎಡಿಎಂಕೆ ಕಡಿದುಕೊಂಡಿದೆ. ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳದ ಬಿಜೆಪಿಗೆ ಇದು ಆಘಾತಕಾರಿಯೆಂದೇ ಹೇಳಬಹುದು.


ಅಣ್ಣಾಮಲೈ ವಿರುದ್ಧ ಎಐಎಡಿಎಂಕೆ ಆರೋಪ


ಬಿಜೆಪಿ ಜೊತೆಗಿನ ಸಂಬಂಧ ಮುರಿದುಕೊಳ್ಳಲು ಅಣ್ಣಾಮಲೈ ಕಾರಣವೆಂದು ಎಐಎಡಿಎಂ ನಾಯಕರು ಆರೋಪಿಸಿದ್ದಾರೆ. ಅಣ್ಣಾಮಲೈ ಅವರು ತಮ್ಮ ಪಕ್ಷದ ಮಹಾನಾಯಕರನ್ನು ನಿಂದಿಸುತ್ತಿದ್ದಾರೆ. ಇದನ್ನು ನಾವು


ಎಂದಿಗೂ ಸಹಿಸಿಕೊಳ್ಳುವುದಿಲ್ಲವೆಂದು ಎಐಎಡಿಎಂಕೆ ನಾಯಕರು ಹೇಳಿದ್ದಾರೆ.


ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಎಐಎಡಿಎಂಕೆ ಒತ್ತಾಯಿಸಿದೆ. ಈ ಕುರಿತ ಪ್ರಶ್ನೆಯನ್ನು ಪತ್ರಕರ್ತೆ ಕೇಳಿದ್ದಕ್ಕೆ ಅಣ್ಣಾಮಲೈ ಕೆರಳಿದ್ದಾರೆ.


ಅಣ್ಣಾಮಲೈಗೆ ಹೈಕಮಾಂಡ್‌ ಬುಲಾವ್‌


ಈ ಬೆಳವಣಿಗೆಗಳ ನಡುವೆಯೇ ಅಣ್ಣಾಮಲೈ ಅವರನ್ನು ದೆಹಲಿ ಬರುವಂತೆ ಬಿಜೆಪಿ ಹೈಕಮಾಂಡ್‌ ಸೂಚಿಸಿದೆ. ಇದು ಭಾರೀ ಮಹತ್ವ ಪಡೆದುಕೊಂಡಿದೆ. ಅಣ್ಣಾಮಲೈ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರವನ್ನು ಎಐಎಡಿಎಂಕೆ ಕಳೆದ ವಾರ ಘೋಷಿಸಿದೆ. 2024 ರ ಲೋಕಸಭೆ ಚುನಾವಣೆಗೆ ತನ್ನದೇ ಆದ ಮೈತ್ರಿಯನ್ನು ರಚಿಸುವುದಾಗಿಯೂ ಅದು ತಿಳಿಸಿದೆ. ಈ ಮೈತ್ರಿ ಮುರಿದುಬಿದ್ದಿದ್ದಕ್ಕೆ ಕಾರಣ ಅಣ್ಣಾಮಲೈ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ಅಣ್ಣಾಮಲೈ ಅವರನ್ನು ಪ್ರಶ್ನಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.


ಅಣ್ಣಾಮಲೈ ಅವರು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾಗವಹಿಸುವ ಸಾಧ್ಯತೆ ಇದೆ. ಅವರಿಬ್ಬರೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಣ್ಣಾಮಲೈ ಜೊತೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಅಣ್ಣಾಮಲೈ ಅವರು ದೆಹಲಿ ಭೇಟಿ ಮುಗಿದ ಬಳಿಕ ಮುಂದಿನ ವಾರ ಹೊಸ ಮೈತ್ರಿಕೂಟ ರಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ಬಿಜೆಪಿ ಹೇಳಿದೆ. ಎಐಎಡಿಎಂಕೆ ಹೊರತುಪಡಿಸಿದ ಮೈತ್ರಿಕೂಟ ಇದಾಗಲಿದೆ ಎಂದು ಬಿಜೆಪಿ ತಿಳಿಸಿದೆ.


ತಮಿಳುನಾಡಿನಲ್ಲಿ ಭವಿಷ್ಯದ ಕಾರ್ಯತಂತ್ರಗಳು ಹಾಗೂ ಸಂಭಾವ್ಯ ಮೈತ್ರಿಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ ಅಣ್ಣಾಮಲೈ ಬಳಿ ಚರ್ಚಿಸಲಿದೆ ಎಂದು ತಮಿಳುನಾಡು ಬಿಜೆಪಿ ನಾಯಕರು ನಿರೀಕ್ಷಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

Posted by Vidyamaana on 2023-06-24 07:00:37 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ. 

ಶನಿವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.


ಬಿಜೆಪಿ ರಾಜ್ಯಾಧ್ಯಕ್ಷರಾಗಿ ನನ್ನ ಎರಡು ವರ್ಷದ ಅವಧಿ ಮುಗಿದಿದೆ. ಅದರ ಬೆನ್ನಲ್ಲಿಯೇ ನಾನು ರಾಜೀನಾಮೆಯನ್ನೂ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಪುತ್ತಿಲ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ | ದರ್ಬೆಯಲ್ಲಿ ಸಾವಿರಾರು ಸಂಖ್ಯೆಯ ಜಮಾಯಿಸಿದ ಕಾರ್ಯಕರ್ತರು

Posted by Vidyamaana on 2023-04-17 05:59:48 |

Share: | | | | |


ಪುತ್ತಿಲ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ | ದರ್ಬೆಯಲ್ಲಿ ಸಾವಿರಾರು ಸಂಖ್ಯೆಯ ಜಮಾಯಿಸಿದ ಕಾರ್ಯಕರ್ತರು

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರು ಇಂದು ನಾಮಪತ್ರ ಸಲ್ಲಿಸಲಿದ್ದು, ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದ ವರೆಗೆ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ದರ್ಬೆ ಜಂಕ್ಷನ್ ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪುತ್ತಿಲ ಪರ ಪ್ರಚಾರ ನಡೆಸಲು ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ಪುತ್ತೂರು ಜಾತ್ರೆ : ಯುವಶಕ್ತಿ ಸೇವಾಪಥ ನೇತೃತ್ವದಲ್ಲಿ ಏ. 9ರಂದು ಶ್ರಮದಾನ

Posted by Vidyamaana on 2023-04-07 12:50:46 |

Share: | | | | |


ಪುತ್ತೂರು ಜಾತ್ರೆ : ಯುವಶಕ್ತಿ ಸೇವಾಪಥ  ನೇತೃತ್ವದಲ್ಲಿ ಏ. 9ರಂದು ಶ್ರಮದಾನ

ಪುತ್ತೂರು: ಯುವಶಕ್ತಿ ಸೇವಾಪಥ  ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 9ರಂದು ಶ್ರಮದಾನ ಸೇವೆ ನಡೆಯಲಿದೆ.

ಯುವಶಕ್ತಿ ಸೇವಾಪಥ ದ.ಕ. ಇದರ ನೇತೃತ್ವದಲ್ಲಿ ಮಿತ್ರಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಶ್ರಮದಾನ ಸೇವೆ ಆಯೋಜಿಸಲಾಗಿದೆ.

ಹತ್ತೂರು ಸಂಭ್ರಮಿಸುವ ಪುತ್ತೂರ ಒಡೆಯನ ಜಾತ್ರೋತ್ಸವದ ಶುಭಸಮಯದಿ ಶ್ರಮಸೇವೆಗೈಯೋಣ ಬನ್ನಿ ಎಂಬ ಧ್ಯೇಯವಾಕ್ಯದೊಂದಿಗೆ ಶ್ರಮದಾನ ನಡೆಯಲಿದೆ. ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ಖ್ಯಾತಿ ಗಳಿಸಿರುವ ಯುವಶಕ್ತಿ  ಸೇವಾಪಥ  ತಂಡ ಏಪ್ರಿಲ್ 9ರಂದು ಜಾತ್ರೋತ್ಸವ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಮುಂದಾಗಿದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಗೆ ತಿಳಿಸಿದ್ದಾರೆ .

ಸಮುದ್ರ ಪಾಲಾಗಿದ್ದ ಬೆಂಗಳೂರಿನ ಬ್ಯಾಂಕ್‌ ಉದ್ಯೋಗಿ ನಿತಿನ್ ಮೃತದೇಹ ಪತ್ತೆ

Posted by Vidyamaana on 2024-01-30 19:37:13 |

Share: | | | | |


ಸಮುದ್ರ ಪಾಲಾಗಿದ್ದ ಬೆಂಗಳೂರಿನ ಬ್ಯಾಂಕ್‌ ಉದ್ಯೋಗಿ ನಿತಿನ್ ಮೃತದೇಹ ಪತ್ತೆ

ಉಡುಪಿ, ಜ.30: ಎರಡು ದಿನಗಳ ಹಿಂದೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಸಮುದ್ರ ಪಾಲಾಗಿದ್ದ ದೆಹಲಿ ಮೂಲದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತಿನ್(35) ಎಂಬವರ ಮೃತದೇಹ ಸಮುದ್ರ ಮಧ್ಯೆ ಪತ್ತೆಯಾಗಿದೆ.


ಜ.26 ರಂದು ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತಿನ್, ಜ.27ರಂದು ಅಪರಾಹ್ನ 3.30ರ ಸುಮಾರಿಗೆ ಡೆಲ್ವಾ ಬೀಚ್ ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ನಿತಿನ್ ನಾಪತ್ತೆಯಾಗಿದ್ದರು. ಇವರ ಮೃತದೇಹಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು.


ಮೀನುಗಾರರ ಮೂಲಕ ದೊರೆತ ಮಾಹಿತಿಯಂತೆ ತೀರದಿಂದ 12 ಮಾರು ದೂರದ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ತೆರಳಿ ಮೃತದೇಹವನ್ನು ತೀರಕ್ಕೆ ತಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: