ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಮಾ. 20ರಂದು ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಶುಭಾರಂಭ

Posted by Vidyamaana on 2023-03-19 16:41:04 |

Share: | | | | |


ಮಾ. 20ರಂದು ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಶುಭಾರಂಭ

ಪುತ್ತೂರು: ಪುರುಷರ ಫ್ಯಾಷನ್ ಜಗತ್ತಿನಲ್ಲಿ ಸಿಗ್ನೇಚರ್ ಮೂಡಿಸಲು ಪುತ್ತೂರಿಗೆ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಆಗಮಿಸುತ್ತಿದೆ.

ಮಾ. 20ರಂದು ಸಂಜೆ 4 ಗಂಟೆಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗದ ಸೂಪರ್ ಟವರಿನಲ್ಲಿ ಶುಭಾರಂಭಗೊಳ್ಳಸಲಿದೆ.

ಫ್ಯಾಷನ್ ಜಗತ್ತಿನಲ್ಲಿ ಇಂದು ಪುರುಷರಿಗೆ ಅಗತ್ಯವಾದ ಕಲಾತ್ಮಕ ವಸ್ತುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಇದರಲ್ಲಿ ಬಟ್ಟೆಗಳಿಗೆ ಅಗ್ರಸ್ಥಾನ. ಪುರುಷರಿಗೊಪ್ಪುವ ಕಲಾತ್ಮಕ ಬಟ್ಟೆಗಳ ಸಾಲಿನಲ್ಲಿ ಪುತ್ತೂರು ಸ್ವಲ್ಪ ಹಿಂದೆಯೇ ಉಳಿದಿತ್ತು. ಈ ಸ್ಥಾನವನ್ನು ಭರ್ತಿ ಮಾಡಲು ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಪುತ್ತೂರಿಗೆ ಕಾಲಿಡಲಿದೆ.

ಸಿಯಾರಾಮ್, ಅರವಿಂದ್, ರೇಮಂಡ್, ಲಿನೆನ್ ಕ್ಲಬ್ ಬ್ರಾಂಡೆಡ್ ಕಂಪೆನಿಗಳ ಉಡುಗೆಗಳು ಇಲ್ಲಿ ಲಭ್ಯವಾಗಲಿದೆ. ಪುರುಷರ ಪ್ಯಾಂಟ್, ಶರ್ಟ್ಸ್, ಕುರ್ತಾ, ಪೈಜಾಮ್, ಕೋಟ್ಸ್, ಶೇರ್ವಾನಿ, ಸೂಟ್ಸ್, ಕಂದೂರ, ಜೋಧ್ ಪುರಿ, ಡ್ರೆಸ್ ಕೋಡ್ ಮೊದಲಾದ ಹಲವು ವಿನ್ಯಾಸದ ಬಟ್ಟೆಗಳು ಗ್ರಾಹಕರಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಪಾಲುದಾರ ಫಾರೂಕ್ ಸಾಲ್ಮರ ತಿಳಿಸಿದ್ದರೆ.

ಶುಭಾರಂಭ ಪ್ರಯುಕ್ತ ವಿಶೇಷ ಆಫರ್:

ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಉದ್ಘಾಟನೆ ಹಿನ್ನೆಲೆಯಲ್ಲಿ ವಿಶೇಷ ಆಫರನ್ನು ಗ್ರಾಹಕರಿಗೆ ನೀಡುತ್ತಿದೆ. ಉದ್ಘಾಟನೆಯ ದಿನದಿಂದ ಒಂದು ವಾರಗಳ ಕಾಲ ಈ ಆಫರ್ ಚಾಲ್ತಿಯಲ್ಲಿರಲಿದೆ. ದೋಮೆಸ್ಟಿಕ್ ಬ್ರಾಂಡೆಡ್ ಕಂಪೆನಿಗಳ ಉಡುಪುಗಳು ಕೇವಲ 999 ರೂ.ಗೆ ಹಾಗೂ ಸಿಯಾರಾಮ್, ಅರವಿಂದ್ ರೇಮೊಂಡ್ ಬ್ರಾಂಡೆಡ್ ಕಂಪೆನಿಗಳ ಉಡುಪುಗಳ ಮೇಲೆ ಕೇವಲ 1700/ಲಭ್ಯವಾಗಲಿದೆ. ಅದೂ ಸ್ಟಿಚ್ಚಿಂಗ್ ಸಹಿತ.

ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

Posted by Vidyamaana on 2024-01-22 09:05:12 |

Share: | | | | |


ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

ಶಿವಮೊಗ್ಗ, (ಜನವರಿ 22): ಯುವತಿಯೋರ್ವಳಿಗೆ ಮದುವೆ (Marriage) ನಿಶ್ಚಯವಾಗಿತ್ತು. ಇನ್ನೇನು ಮದುವೆಗೆ ಎರಡು ವಾರ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದ್ರೆ, ಮದುವೆಯಾಗಬೇಕಿದ್ದ ಯುವತಿಯೇ ಸಾವಿನ ಮನೆ ಸೇರಿದ್ದಾಳೆ. ಹೌದು…ಮದುವೆಗೆ 13 ದಿನಗಳು ಇರುವಾಗ ಯುವತಿಯೊಬ್ಬಳು‌ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ. 13 ದಿನದಲ್ಲಿ ಹಸೆಮಣೆ ಏರಬೇಕಿದ್ದ ಚೈತ್ರಾ(26) ನೇಣಿಗೆ ಶರಣಾಗಿದ್ದಾಳೆ.ಚೈತ್ರಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು. ಆದ್ರೆ, ಇದೀಗ ಏಕಾಏಕಿ ಚೈತ್ರ ಆತ್ಮಹತ್ಯೆಗೆ ಶರಣಾಗಿದ್ದು,ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.


ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 24

Posted by Vidyamaana on 2023-09-24 04:48:01 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 24

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 24 ರಂದು



*ಬೆಳಿಗ್ಗೆ  9 ಗಂಟೆಗೆ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ*


 *ಬೆಳಿಗ್ಗೆ 11 ಗಂಟೆಗೆ ಕೋಡಿಂಬಾಡಿ ಮಹಿಷ‌ಮರ್ಧಿನಿ ದೇವಸ್ಥಾನದಲ್ಲಿ‌ ನವರಾತ್ರಿ ಆಮಂತ್ರಣ ಪತ್ರ ಬಿಡುಗಡೆ*



*12.30 ಕ್ಕೆ ಮುಂಡೂರು ನೂತನ ರಸ್ತೆ  ಉದ್ಘಾಟನೆ*


*ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಮಹಿಳಾ ಘಟಕ ರಚನೆ ಕೆಯ್ಯೂರಿನಲ್ಲಿ*



*3.00 ಕ್ಕೆ ಕೊಳ್ತಿಗೆಯಲ್ಲಿ‌ವಲಯ ಕಾಂಗ್ರೆಸ್ ಸಭೆ*


*ಸಂಜೆ 7 ಗಂಟೆಗೆ ಮೊಟ್ಟೆತ್ತಡ್ಕದಲ್ಲಿ‌ಮಸೀದಿ‌ಕಟ್ಟಡ ಉದ್ಘಾಟನ ಕಾರ್ಯಕ್ರಮ ದಲ್ಲಿ 


  ಭಾಗವಹಿಸಲಿದ್ದಾರೆ

ಕೇಪು:ಮತದಾರರ ಮನವೊಲಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿದ ಪುತ್ತಿಲ

Posted by Vidyamaana on 2023-04-25 01:54:53 |

Share: | | | | |


ಕೇಪು:ಮತದಾರರ ಮನವೊಲಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿದ ಪುತ್ತಿಲ

ಪುತ್ತೂರು:ಕೇಪು ಗ್ರಾಮದ ಕೊಲ್ಲಪದವು ಕೋಡಂದೂರು ಎಂಬಲ್ಲಿ ಸಾರ್ವಜನಿಕರು ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಲ್ಲಿಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ನಾಗರಿಕರೊಂದಿಗೆ  ಮಾತುಕತೆ ನಡೆಸಿ ಬ್ಯಾನರ್ ತೆರವುಗೊಳಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳನ್ನು ಮಾಡದ ಹಿನ್ನೆಲೆಯಲ್ಲಿ ಈ ಬಾರಿ ತಾವು ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಸಾರ್ವಜನಿಕರು ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು.ವಿಷಯ ತಿಳಿದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್ ಪುತ್ತಿಲ ಅವರು ಸ್ಥಳಕ್ಕೆ ತೆರಳಿ ಆ ಭಾಗದ ಜನರ ಮನವೊಲಿಸಿ ಬ್ಯಾನರ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 21ರ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶ ರದ್ದು ; ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಮುಂದೂಡಿಕೆ

Posted by Vidyamaana on 2024-01-16 04:29:25 |

Share: | | | | |


ಜನವರಿ 21ರ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶ ರದ್ದು ; ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಮುಂದೂಡಿಕೆ

ಮಂಗಳೂರು, ಜ.16: ಜನವರಿ 21ರಂದು ಕಾಂಗ್ರೆಸ್ ಮಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ದಿಢೀರ್ ಮುಂದೂಡಲಾಗಿದೆ. 


ಲೋಕಸಭೆ ಚುನಾವಣೆಗೆ ಸಿದ್ಧತೆ ಸಲುವಾಗಿ ಮಂಗಳೂರಿನಲ್ಲಿ ಈ ಬಾರಿಯ ಮೊದಲ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ‌ಕಾರ್ಯಕ್ರಮ ಆಯೋಜಿಸಿ ಎಲ್ಲ ಸಿದ್ಧತೆ ನಡೆಸುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಿಕೆ ಮಾಡಿದ್ದಾರೆ. ಸಮಾವೇಶ ನಡೆಯುವ ಮು‌ಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಿಕೆ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಚಿವರು ಸೇರಿದಂತೆ ಪ್ರಮುಖ ನಾಯಕರು ಬಂದಿದ್ದರು. ಮಂಗಳೂರಿನ ಡಿಸಿಸಿ ಕಚೇರಿಯಲ್ಲಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದರು

ಮಠಂದೂರು ಬಂದು ಪಿಕ್ಕಾಸು ಹಾಕಿ ಹೋಗಿದ್ದಾರೆ ಮಾಜಿ ಶಾಸಕರ ವಿರುದ್ದ ಹಾಲಿ ಶಾಸಕರಲ್ಲಿ ದೂರು

Posted by Vidyamaana on 2023-12-25 21:16:27 |

Share: | | | | |


ಮಠಂದೂರು ಬಂದು ಪಿಕ್ಕಾಸು ಹಾಕಿ ಹೋಗಿದ್ದಾರೆ  ಮಾಜಿ ಶಾಸಕರ ವಿರುದ್ದ ಹಾಲಿ ಶಾಸಕರಲ್ಲಿ ದೂರು

ಪುತ್ತೂರು: ನಮಮ್ಮ ಮನೆಗಳ ಮೇಲೆ ಧರೆ ಕುಸಿದಿದೆ, ಮಳೆ ಬರುವಾಗ ಮಳೆ ನೀರು ಮನೆಯೊಳಗೆ ಬರುತ್ತಿದೆ, ಮಳೆಗಾಲದಲ್ಲಿ ನಮ್ಮ ಮನೆಯೊಳಗೆ ಕುಳಿತುಕೊಳ್ಳಲು ನಮಗೆ ಭಯವಾಗುತ್ತಿದೆ, ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದರ ಬಗ್ಗೆ ನಾವು ಮಾಜಿ ಶಾಸಕರಾದ ಸಂಜೀವ ಮಠಂದೂರಿಗೆ ಮನವಿ ಮಾಡಿದ್ದೆವು ಅವರು ಬಂದು ಸ್ಥಳ ವಿಕ್ಷಣೆ ಮಾಡಿ ಇಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಪಿಕ್ಕಾಸು ಹಾಕಿ ಹೋಗಿದ್ದಾರೆ ಆ ಬಳಿಕ ಇತ್ತ ಕಡೆ ತಿರುಗಿ ನೋಡಿಲ್ಲ ಎಂದು ಮಾಜಿ ಶಾಸಕರ ವಿರುದ್ದ ಸಂಪ್ಯ ಕಾಲನಿ ನಿವಾಸಿಗಳು ಹಾಲಿ ಶಾಸಕ ಅಶೋಕ್ ರೈಯವರಲ್ಲಿ ದೂರು ನೀಡಿದ ಘಟನೆ ನಡೆದಿದೆ.


ಕಂಬಲ್ದಡ್ಡ ಅಂಗನವಾಗಿ ಕಟ್ಟಡ ಉದ್ಘಾಟನೆಗೆ ತೆರಳಿದ ಶಾಸಕರು ರಸ್ತೆಯಲ್ಲಿ ಬರುವಾಗ ಅಡ್ಡಗಟ್ಟಿದ ಕಾಲನಿ ನಿವಾಸಿಗಳು ನಮ್ಮ ಸಮಸ್ಯೆಯನ್ನು ಬಂದು ನೋಡಿ ಎಂದು ಮನವಿ ಮಾಡಿದರು.ಸ್ಥಳಕ್ಕೆ ತೆರಳಿದಾಗ ಅಲ್ಲಿನ ಅವಸ್ಥೆ ಕಂಡು ಮರುಗಿದ ಶಾಸಕರು ನೀವು ಈ ಹಿಂದೆ ಯಾರಲ್ಲಾದರೂ ಸಮಸ್ಯೆ ಬಗ್ಗೆ ಹೇಳಿಲ್ಲವೇ ಎಂದು ಕೇಳಿದಾಗ ಅಲ್ಲಿದ್ದ ನಿವಾಸಿಗಳು ನಡೆದ ಘಟನೆಯನ್ನು ವಿರಿಸಿದರು. ನಾವು ಕಾಂಗ್ರೆಸ್ಸಿಗೆ ವೋಟು ಹಾಕಿಲ್ಲ ಭರವಸೆಯನ್ನು ನಂಬಿ ನಾವು ಕೆಟ್ಟಿದ್ದೇವೆ ಎಂದು ಸ್ಥಳೀಯರು ಶಾಸಕರಲ್ಲಿ ಹೇಳಿದರು. ನೀವು ದಯಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಕೇಳಿಕೊಂಡರು. ಈ ಬಗ್ಗೆ ಮಾತನಾಡಿದ ಶಾಸಕರು ನಾನು ಅನುದಾನ ಬಿಡುಗಡೆಯಾದರೆ ಮಾತ್ರ ಪಿಕ್ಕಾಸು ಹಾಕುವುದು ಭರವಸೆ ಕೊಟ್ಟು ಪಿಕ್ಕಾಸು ಹಾಕಿ ಹೋಗುವುದಿಲ್ಲ, ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲು ಸುಮಾರು ೩ ಕೋಟಿ ಅನುದಾನ ಬೇಕು. ನಾನು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಮೊದಲ ಆಧ್ಯತೆ ಯಲ್ಲೇ ಪರಿಹರಿಸಲು ಯತ್ನ ಮಾಡುತ್ತೇನೆ, ಸ್ವಲ್ಪ ಕಾಲವಕಾಶ ಬೇಕು ಎಂದು ತಿಳಿಸಿದರು. ಸ್ಥಳೀಯರಾದ ಪದ್ಮ  ಸೇರಿದಂತೆ ಕಾಲನಿ ನಿವಾಸಿಗಳು ಉಪಸ್ತಿತರಿದ್ದರು.



Leave a Comment: