ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮಂಗಳೂರಿನಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ

Posted by Vidyamaana on 2023-04-27 14:40:44 |

Share: | | | | |


ಮಂಗಳೂರಿನಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ

ಮಂಗಳೂರು: ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮುಂದುವರಿದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಐದನೇ ಗ್ಯಾರಂಟಿಯನ್ನು ಎ.27ರಂದು ಘೋಷಣೆ ಮಾಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.ಮಂಗಳೂರು ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

Posted by Vidyamaana on 2023-05-08 05:21:21 |

Share: | | | | |


ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ; ಚಿತ್ರದುರ್ಗದಲ್ಲಿ ಪ್ರಥಮ, ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನಈ ಬಾರಿ ಬಾಲಕಿಯರೇ ಮೇಲುಗೈ

ಬೆಂಗಳೂರು; ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ 83.89 ಶೇಕಡಾ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳ 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಚಿತ್ರದುರ್ಗ ಫಲಿಂತಾಶದಲ್ಲಿ ಪ್ರಥಮ ಸ್ಥಾನ ಪಡೆದ್ರೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

ಚಿತ್ರದುರ್ಗ ಜಿಲ್ಲೆ 96.80 ಶೇಕಡಾ ಫಲಿತಾಂಶ ಪಡೆದರೆ, ಮಂಡ್ಯ ಜಿಲ್ಲೆ 96.74 ಶೇಕಡಾ ಫಲಿತಾಂಶ ಪಡೆದಿದೆ.

ಗೆಳತಿಯಿಂದ ಅತ್ಯಾಚಾರ ಆರೋಪ, ಮನನೊಂದು ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

Posted by Vidyamaana on 2023-09-14 17:47:07 |

Share: | | | | |


ಗೆಳತಿಯಿಂದ ಅತ್ಯಾಚಾರ ಆರೋಪ, ಮನನೊಂದು ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ನಾಗ್ಪುರ : ಗೆಳತಿ ಅತ್ಯಾಚಾರ ಆರೋಪ ಮಾಡಿದಳೆಂದು ಪ್ರಿಯಕರನೊಬ್ಬ ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮನೀಶ್ ಎನ್ನುವ 38 ವರ್ಷದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿತ್ತು, ಆದರೂ 19 ವರ್ಷದ ಕಾಜಲ್ ಎಂಬುವವಳನ್ನು ಪ್ರೀತಿ ಮಾಡುತ್ತಿದ್ದ. ಸ್ವಲ್ಪ ದಿನ ಕಳೆದ ನಂತರ ಆಕೆ ಆತನ ಮೇಲೆ ಅತ್ಯಾಚಾರ ಆರೋಪ ಮಾಡಿ ತನ್ನ ಕುಟುಂಬದವರ ಜತೆ ಸೇರಿ ಬ್ಲ್ಯಾಕ್ ಮೇಲೆ ಮಾಡಲು ಆರಂಭಿಸಿದ್ದಳು.ಮನೀಶ್ ಮನನೊಂದು ಸೆಪ್ಟೆಂಬರ್ 10 ರಂದು ಫೇಸ್​ಬುಕ್ ಲೈವ್ ನಲ್ಲಿ ತನ್ನ ಗೆಳತಿ ಹಾಗೂ ಆಕೆಯ ಕುಟುಂಬದವರು ತನ್ನ ಮೇಲೆ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ, ಮತ್ತವರ ಕುಟುಂಬದವರು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಹಣವನ್ನು ನೀಡಲು ವಿಫಲವಾದರೆ ಆತನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆತ ಹೇಳಿದ್ದಾನೆ.


ಸೆಪ್ಟೆಂಬರ್ 6 ರಂದು, ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ ಮತ್ತು ಆಕೆಯ ಕುಟುಂಬ ಸದಸ್ಯರು ಮನೀಷ್ ಜೊತೆ ಓಡಿಹೋದರು ಎಂದು ಆರೋಪಿಸಿದ್ದಾರೆ.ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ 38 ವರ್ಷದ ವ್ಯಕ್ತಿ ಕಿರುಕುಳ ತಾಳಲಾರದೆ ನಾಗಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಆ ವ್ಯಕ್ತಿ ತಾನು ಯುವತಿ ಜತೆಗೆ ದೈಹಿಕ ಸಂಪರ್ಕ ಹೊಂದಿಲ್ಲ ಎಂದು ಲೈವ್​ನಲ್ಲಿ ಹೇಳಿದ್ದಾನೆ. ಫೇಸ್‌ಬುಕ್ ಲೈವ್ ವಿಡಿಯೋ ಹೊರಬಿದ್ದ ನಂತರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.ವ್ಯಕ್ತಿಯ ಶವವನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿದ್ದು, ನಾಗಪುರದ ಕಲಮನ ಪೊಲೀಸರು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ ಆ 13

Posted by Vidyamaana on 2023-08-13 00:43:48 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 13

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 13 ರಂದು

ಬೆಳ್ಳಗ್ಗೆ  10:00 ಆಟಿಡೊಂಜಿ ದಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘ,ಮಣ್ಣ ಗುಡ್ಡ ಮಂಗಳೂರು 

ಬೆಳ್ಳಗ್ಗೆ  11

ಆಟಿದ ಕೂಟ ಬಂಟರ ಭವನ  ಸುರತ್ಕಲ್ 

ಮದ್ಯಾಹ್ನ  1:00 ಆಟಿದ ಕೂಟ  ಬಂಟರ ಭವನ  ಪುತ್ತೂರು 

ಮದ್ಯಾಹ್ನ  2:00 ವಿಟ್ಲ ವಲಯ ಬಂಟರ ಸಂಘದ ಆಟಿದ ಕೂಟ ಪುಣಚ ಬೈಲು ಗುತ್ತು 


ಮದ್ಯಾಹ್ನ 2:30 ಕೆಸರು ಗದ್ದೆ ವಿಟ್ಲ 


ಮದ್ಯಾಹ್ನ  3:30 ಕೆಸರು ಗದ್ದೆ  ಬಿಳಿಯೂರು 


ಮದ್ಯಾಹ್ನ  4:00 ಕೆಸರು ಗದ್ದೆ  ಪುಳಿತ್ತಡಿ ಉಪ್ಪಿನಂಗಡಿ 


ಸಂಜೆ 5:30 ಕೆಸರು ಗದ್ದೆ ಕೈಕಾರ

ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

Posted by Vidyamaana on 2023-05-15 15:49:26 |

Share: | | | | |


ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾಲಿ ಸಿಎಂ ಆಗೋದು ಬಹುತೇಕ ಖಚಿತ ಎನ್ನಲಾಗಿದೆ.

ದೆಹಲಿಯಲ್ಲಿ ತಮ್ಮ ಆಪ್ತ ಶಾಸಕರ ಜೊತೆ ಸಿದ್ದು ಸಭೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ನೂತನ ಸಿಎಂ ಆಗೋದು ಖಚಿತ ಎನ್ನಲಾಗಿದೆ.

ಇನ್ನು ಸಿದ್ದರಾಮಯ್ಯ ನೂತನ ಸಿಎಂ ಎಂಬುವುದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕೆಲವೇ ಹೊತ್ತಲ್ಲೇ ಉತ್ತರ ಸಿಗಲಿದೆ.

ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

Posted by Vidyamaana on 2024-01-10 14:39:27 |

Share: | | | | |


ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

ನೋಯ್ಡಾ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರತಿದಿನ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಇದೀಗ ನೋಯ್ಡಾದಿಂದ ಅಂತಹುದೇ ಪ್ರಕರಣವೊಂದು ಬಂದಿದ್ದು, ಕ್ರಿಕೆಟ್ ಮ್ಯಾಚ್ ಆಡುತ್ತಿದ್ದ ವ್ಯಕ್ತಿಯೊಬ್ಬ ರನ್ ತೆಗೆದುಕೊಳ್ಳುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಲು ಕ್ಲಿಕ್ ಮಾಡಿ

ಈ ವೇಳೆ ಅಲ್ಲಿದ್ದ ಇತರ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ.ಈ ಘಟನೆಯು ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್ -135 ರಲ್ಲಿ ನಡೆದಿದ್ದು, ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಉತ್ತರಾಖಂಡ ಮೂಲದ 36 ವರ್ಷದ ವಿಕಾಸ್ ನೇಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆಟದ ವೇಳೆ ವಿಕಾಸ್ ರನ್ ತೆಗೆದುಕೊಳ್ಳಲು ಓದಿದ್ದಾರೆ ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್ ನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ವಿಕಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು. ವಿಕಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಕಾಸ್ ರನ್ ತೆಗೆದುಕೊಳ್ಳಲು ಓಡಿ ನಂತರ ಪಿಚ್ ಮೇಲೆ ಬೀಳುವುದು ಕಂಡುಬಂದಿದೆ.



Leave a Comment: