ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿ ರಚನೆ

Posted by Vidyamaana on 2023-09-21 17:40:20 |

Share: | | | | |


ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿ ರಚನೆ

ಪುತ್ತೂರು :- ಸರಕಾರಿ ಪ್ರಥಮ ದರ್ಜೆ ಕಾಲೇಜು ನೆಲ್ಲಿಕಟ್ಟೆಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು (2009-12 ಬ್ಯಾಚ್) ರಚಿಸಿದ ಚೋಕೊಲೇಟ್ ಬಾಯ್ಸ್ ಗ್ರೂಪಿನ ಅಧೀನದಲ್ಲಿ ಸಾಮಾಜಿಕ ಸೇವಾ ಉದ್ದೇಶದೊಂದಿಗೆ  ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಸಮಿತಿಯನ್ನು ರಚಿಸಲಾಯಿತು.


ಸಮಾಜದಲ್ಲಿನ ಅಸಾಹಯಕ ರೋಗಿಗಳಿಗೆ ಹಾಗೂ ಅರ್ಹ ಅಶಕ್ತ ಫಲಾನುಭವಿಗಳಿಗೆ ನೆರವಾಗುವ ಉತ್ತಮ ಉದ್ದೇಶವಿಟ್ಟುಕೊಂಡು ವಿದ್ಯಾರ್ಥಿ ಜೀವನದಲ್ಲೇ ಒಟ್ಟಿಗೆ ಇದ್ದಂತಹ ಸ್ನೇಹಿತರು ರಚಿಸಿದ ಈ ಸಂಘಟನೆಯ ಧ್ಯೇಯ ಸೇವೆ ಮಾತ್ರ ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಗಡಿಪ್ಪಿಲ ಹೇಳಿದರು.


2023-24 ರ ನೂತನ ಸಮಿತಿಯ ಅಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ ,ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪರ್ಪುಂಜ ,ಉಪಾಧ್ಯಕ್ಷರಾಗಿ ಅಝೀರ್ ಕಲ್ಲಡ್ಕ ,ಕೋಶಾಧಿಕಾರಿಯಾಗಿ ರಿಯಾಝ್ ಪುರುಷರಕಟ್ಟೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಫಿರೋಝ್ ಪಾಲ್ತಾಡ್ ಆಯ್ಕೆಗೊಂಡರು.


ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಉಸ್ಮಾನ್ ಪೇರಮುಗೇರು,ಆಸಿಫ್ ಅಬುಧಾಬಿ ,ಆರಿಸ್ ಸವಣೂರು ,ಶಹೀರ್ ದುಬೈ,ರಝಾಕ್ ಸಾಲ್ಮರ,ನವಾಝ್ ಕಡಬ ,ನೌಶಾದ್ ಕಟ್ಟತ್ತಾರ್ ,ಸಾದಿಕ್ ಅರಿಯಡ್ಕ ,ಇರ್ಷಾದ್ ಕಾವು ಮತ್ತು ಸಮದ್ ಸವಣೂರು ಆಯ್ಕೆಗೊಂಡರು.


ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯನ್ನು ಆಸಿಫ್ ಅಬುದಾಬಿ ಹಾಗೂ ರಝಾಕ್ ಸಾಲ್ಮರ ನಿರ್ವಹಿಸಿದರು.

ಕೊಕ್ಕಡ: ತಲೆಗೆ ಮರಬಿದ್ದು ಮಹಿಳೆ ಮೃತ್ಯು.

Posted by Vidyamaana on 2023-04-28 06:46:59 |

Share: | | | | |


ಕೊಕ್ಕಡ: ತಲೆಗೆ ಮರಬಿದ್ದು  ಮಹಿಳೆ ಮೃತ್ಯು.


ಕೊಕ್ಕಡ:ಮರ ಕಡಿಯುತ್ತಿದ್ದ ವೇಳೆ ಮಹಿಳೆಯೊರ್ವರ ತಲೆಗೆ ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಸಾವಿಗೀಡಾದ  ಘಟನೆ ಕೊಕ್ಕಡದಲ್ಲಿ ಇಂದು ಎ. 28 ರಂದು ನಡೆದಿದೆ.

ಕೊಕ್ಕಡ ಗ್ರಾಮದ ಹಲ್ಲೀಂಗೇರಿ ನಿವಾಸಿ ಗಾಯತ್ರಿ (55 ವ) ಎಂದು ಗುರುತಿಸಲಾಗಿದೆ.

ಹಲ್ಲೀಂಗೇರಿ ಕ್ವಾಟ್ರಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ಈ ದುರಂತ ನಡೆದಿದೆ.

ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

Posted by Vidyamaana on 2021-06-30 18:30:00 |

Share: | | | | |


ವಿಜಯ ಸಾಮ್ರಾಟ್ ತಂಡ ನಿರ್ಮಿಸಿದ ಮನೆ ಹಸ್ತಾಂತರ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ಬಡ ಕುಟುಂಬಕ್ಕೆ ವಿಜಯ ಸಾಮ್ರಾಟ್ ತಂಡ ನಿರ್ಮಾಣ ಮಾಡಿಕೊಟ್ಟ ಮನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.

ಗೋಪಾಲಶೆಟ್ಟಿ ಅವರ ಕುಟುಂಬ ಭದ್ರವಾದ ಮನೆ ಇರದೇ ಪರಿತಪಿಸುತ್ತಿದ್ದ ಸಂಕಷ್ಟ ಹಾಗೂ ಈ ದಂಪತಿ ಪುತ್ರಿಯ ವಿದ್ಯಾಭ್ಯಾಸದ ಸಮಸ್ಯೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿದ ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ, ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಂಡದ ಸದಸ್ಯರು ಕೈಲಾದಷ್ಟು ನೆರವು ನೀಡಿ, ಕುಟುಂಬಕ್ಕಾಗಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಡಿ. ೧೦ರಂದು ಈ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು ಹಾಗೂ ಅತಿಥಿಗಳು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ನೀಡಿ, ಶುಭಹಾರೈಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯುವ ಸಾಮ್ರಾಟ್ ತಂಡದ ಯುವಕರ ಕಾರ್ಯವನ್ನು ಶ್ಲಾಘಿಸಿದರು.

ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಏಕ, ಪಿಡಿಒ ಚಿತ್ರಾ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮುಖಂಡ ರಾಮದಾಸ್, ವಿಜಯ ಸಾಮ್ರಾಟ್ ತಂಡದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

Posted by Vidyamaana on 2024-03-08 12:49:54 |

Share: | | | | |


ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

ಬೆಂಗಳೂರು : ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್ ಸುದ್ದಿ ಮಿಸ್ ಏನಾಪ್ಪಾ ಅಂದ್ರೆ ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆಸಿ ಆ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು ಗೃಹಿಣಿಯ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸಿರುವುದರ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ. ಆಯಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಇದ್ದವರ ಜೊತೆಗೆ ಹೋಗಿ ಸಮಸ್ಯೆ ಪರಿಹರಿಸಲಿದ್ದಾರೆ.

ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲೋಪದೋಷಗಳು ನಿವಾರಣೆ ಆಗಲಿದೆ. ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲು ಸದ್ಯ ಸರ್ಕಾರವೇ ಮುಂದೆ ಬಂದಿದೆ. ಫಲಾನುಭವಿಗಳ ಸಮಸ್ಯೆ ಪರಿಹಾರವಾದ ಎಲ್ಲ ಕಂತುಗಳ ಹಣವನ್ನು ಸರ್ಕಾರ ಒಂದೇ ಬಾರಿಗೆ ಜಮಾ ಮಾಡಲಿದೆ ಎನ್ನಲಾಗುತ್ತಿದೆ.

ಈ ಮಟ್ಕಾ ಸೋಡ ಕುಡ್ದವರು ಪಡ್ಚಾ.. ಕೊನೆಗೂ ಸೀಝ್ ಆಯ್ತು ಮಟ್ಕಾ ಸೋಡಾ ಶಾಪ್

Posted by Vidyamaana on 2023-10-23 18:54:48 |

Share: | | | | |


ಈ ಮಟ್ಕಾ ಸೋಡ ಕುಡ್ದವರು ಪಡ್ಚಾ.. ಕೊನೆಗೂ ಸೀಝ್ ಆಯ್ತು ಮಟ್ಕಾ ಸೋಡಾ ಶಾಪ್

ಮಂಗಳೂರು : ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಜಾತ್ರೆಯಲ್ಲಿನ ದೃಶ್ಯವೊಂದು ವೈರಲ್‌ ಆಗಿದೆ. ಮಟ್ಕಾ ಸೋಡಾ ವ್ಯಾಪಾರಿಗಳು ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಘಟನೆಯೊಂದು ನಡೆದಿದೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ 

ಈ ಮಟ್ಕಾ ಸೋಡ ಕುಡ್ದವರು ಪಡ್ಚಾ.. ಕೊನೆಗೂ ಸೀಝ್ ಆಯ್ತು ‘ಮಟ್ಕಾ ಸೋಡಾ ಶಾಪ್’!

ವೈರಲ್‌ ಆಗಿರುವ ದೃಶ್ಯದಲ್ಲಿ ವ್ಯಕಿಯೊಬ್ಬ ತನ್ನ ಕೊಳಕು ಕೈಗಳಿಂದ ಕಲುಷಿತ ನೀರಿನಲ್ಲಿ ಮಡಕೆಗಳನ್ನು ತೊಳೆದು ಅದರಲ್ಲಿಯೇ ಸೋಡ ಹಾಕಿ ಗ್ರಾಹಕರಿಗೆ ನೀಡಿದ್ದಾರೆ.ಈ ಮೂಲಕ ಗ್ರಾಹಕರ ಆರೋಗ್ಯದ ಜೊತೆ ಮಟ್ಕಾ ಸೋಡಾ ವ್ಯಾಪಾರಿಗಳು ಆಟ ಆಡುತ್ತಿರುವ ದೃಶ್ಯವೊಂದನ್ನು ಗ್ರಾಹಕರು ಸೆರೆಹಿಡಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವಿಡಿಯೋ ವೈರಲ್ ಬೆನ್ನಲ್ಲೇ ಇಂದು ಪಾಲಿಕೆ ಆರೋಗ್ಯಾಧಿಕಾರಿಗಳ ದಾಳಿ ನಡೆಸಿ ಮಟ್ಕಾ ಸೋಡಾ ಶಾಪ್ ಅನ್ನು ಅಧಿಕಾರಿಗಳು ಸೀಝ್ ಮಾಡಿದ್ದಾರೆ.


ಅಲ್ಲದೆ ಮಟ್ಕಾ ಸೋಡಾ ಪಾಟ್ ಸಹಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಕುದ್ರೋಳಿ ಜಾತ್ರೆಯ ಉಳಿದ ಸ್ಟಾಲ್ ಗಳಲ್ಲೂ ಶುಚಿತ್ವದ ಪರಿಶೀಲನೆ ನಡೆಸಿದ್ದು, ಶುಚಿತ್ವ ಕಾಪಾಡದೇ ಇದ್ದಲ್ಲಿ ಸ್ಟಾಲ್ ಸೀಝ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಸ್ವಚ್ಛ ನರಹರಿಯತ್ತ ಸೇವಾಪಥದ ಚಿತ್ತ

Posted by Vidyamaana on 2023-06-26 12:23:12 |

Share: | | | | |


ಸ್ವಚ್ಛ ನರಹರಿಯತ್ತ ಸೇವಾಪಥದ ಚಿತ್ತ

ಬಂಟ್ವಾಳ: ಯುವಶಕ್ತಿ ಸೇವಾಪಥ ದ.ಕ. ಇದರ ನೇತೃತ್ವದಲ್ಲಿ ನರಹರಿ ಶ್ರೀ ಸದಾಶಿವ ಪರ್ವತ ದೇವಸ್ಥಾನದಲ್ಲಿ ಎರಡನೇ ವರ್ಷದ ಶ್ರಮದಾನ ಹಾಗೂ ಸ್ವಚ್ಚತಾ ಅಭಿಯಾನ ಭಾನುವಾರ ನಡೆಯಿತು.

ಸ್ವಚ್ಛ ನರಹರಿಯತ್ತ ಸೇವಾಪಥದ ಚಿತ್ತ ಎಂಬ ಶೀರ್ಷಿಕೆಯಡಿಯಲ್ಲಿ ರವಿವಾರ ಬೆಳಗ್ಗೆ 7ರಿಂದ ಮದ್ಯಾಹ್ನ 1ರವರೆಗೆ ಸ್ವಚ್ಚತಾ ಕಾರ್ಯಕ್ರಮ ಜರಗಿದ್ದು, ಸುಮಾರು 80ಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿದ್ದರು.

ಓಂ ಶ್ರೀ ಸಾಯಿಗಣೇಶ್ ಸೇವಾ ಟ್ರಸ್ಟ್ ಕಲ್ಲಡ್ಕ, ಯುವಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು, ಶ್ರೀ ಮಂತ್ರದೇವತಾ ಟ್ರಸ್ಟ್ ಅಮ್ಮೂರು, ಕೋಡಿ ಫ್ರೆಂಡ್ಸ್ ಸರ್ಕಲ್ ಕರಿಂಗಾಣ, ಕೆ.ಎಫ್.ಎಂ. ಮುಡಿಪು, ಹಿಂದೂ ಜನಸೇವಾ ಸಮಿತಿ ಬೊಂಡಾಲ ಕಲ್ಲಡ್ಕ, ಶಿವ ಛತ್ರಪತಿ ಫ್ರೆಂಡ್ಸ್ ಬಡೆಕೊಟ್ಟು, ಯುವಶಕ್ತಿ ಕಡೇಶಿವಾಲಯ ತಂಡಗಳು ಭಾಗವಹಿಸಿದ್ದವು.



Leave a Comment: