ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


BREAKING : ಗುಂಡು ಹಾರಿಸಿಕೊಂಡು ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಕಪಾಡೆ ಆತ್ಮಹತ್ಯೆ

Posted by Vidyamaana on 2024-05-15 21:00:12 |

Share: | | | | |


BREAKING : ಗುಂಡು ಹಾರಿಸಿಕೊಂಡು ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಕಪಾಡೆ ಆತ್ಮಹತ್ಯೆ

ಜಾಮ್ನರ್ : ರಜೆ ಕಳೆಯಲು ಮನೆಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಜಾಮ್ನರ್ ನಲ್ಲಿ ಈ ಘಟನೆ ನಡೆದಿದೆ.ಜಾಮ್ನರ್ ಗಣಪತಿ ನಗರ ನಿವಾಸಿ ಪ್ರಕಾಶ್ ಗೋವಿಂದ ಕಪ್ಡೆ (37).

ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

Posted by Vidyamaana on 2023-12-28 14:29:54 |

Share: | | | | |


ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

ಕಾಣಿಯೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಣಿಯೂರಿನ ಬೆದ್ರಾಜೆ ನಿವಾಸಿ ವಸಂತ (42) ಎಂಬವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಚಾರ ಸಭೆ ಬಳಿಕ ಭಾವುಕರಾದ ಅಶೋಕ್ ರೈ

Posted by Vidyamaana on 2023-05-02 11:29:28 |

Share: | | | | |


ಪ್ರಚಾರ ಸಭೆ ಬಳಿಕ ಭಾವುಕರಾದ ಅಶೋಕ್ ರೈ

ಪುತ್ತೂರು: ಈರ್ ಎಂಕ್ಲೆಗ್ ಸಹಾಯ ಮಲ್ತರ್ ಎಂಕ್ಲೆನ ವೋಟು ಇರೆಗೇ.... ( ನೀವು ನಮಗೆ ಸಹಾಯ ಮಾಡಿದ್ದೀರಿ ನಮ್ಮ ವೋಟು ನಿಮಗೆ) ಇದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಸಾರ್ವಜನಿಕ ಚುನಾವಣಾ ಪ್ರಚಾರ ಸಭೆ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆಯೇ ಹಲವಾರು ಮಹಿಳೆಯರು ಬಂದು ಅಭ್ಯರ್ಥಿ ಅಶೋಕ್ ರೈಯವರನ್ನು ಮಾತನಾಡಿಸಿ ಆಶೀರ್ವಾದ ಮಾಡುತ್ತಿದ ಸಂದರ್ಭ.

ತುರ್ತು ಕಾಮಗಾರಿ ನಿಮಿತ್ತ ಇಂದು ವಿದ್ಯುತ್ ನಿಲುಗಡೆ.

Posted by Vidyamaana on 2023-06-12 22:48:04 |

Share: | | | | |


ತುರ್ತು ಕಾಮಗಾರಿ ನಿಮಿತ್ತ ಇಂದು ವಿದ್ಯುತ್ ನಿಲುಗಡೆ.

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಟೌನ್ ಓಲ್ಡ್ ಮತ್ತು ದರ್ಬೆ ಫೀಡರ್‌ನಲ್ಲಿ ಜೂ.13ರಂದು ಪೂರ್ವಾಹ್ನ 10ರಿಂದ ಅಪರಾಹ್ನ 1ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ನಗರಸಭಾ ವ್ಯಾಪ್ತಿ (ಪುತ್ತೂರು ಪೇಟೆ)ಯ ವಿದ್ಯುತ್ ಬಳಕೆದಾರರು ಸಹಕರಿಸಬೇಕು.

33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.13ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5ರವರೆಗೆ 33 ಕೆ.ವಿ ಮಾಡಾವು-ಬೆಳ್ಳಾರೆ -ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆ.ವಿ ಮಾಡಾವು-ಬೆಳ್ಳಾರೆ ವಿದ್ಯುತ್‌ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರೂ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಗ್ ಟಿಕೆಟಿನಲ್ಲಿ ಭಾರತೀಯರಿಗೆ ಬಂಪರ್ | ಬೆಂಗಳೂರು ನಿವಾಸಿಗೆ 44 ಕೋಟಿ ರೂ. ಬಹುಮಾನ ಭಾರತೀಯರಿಗೊಲಿದ 9 ಉಡುಗೊರೆ

Posted by Vidyamaana on 2023-04-04 08:43:10 |

Share: | | | | |


ಬಿಗ್ ಟಿಕೆಟಿನಲ್ಲಿ ಭಾರತೀಯರಿಗೆ ಬಂಪರ್ | ಬೆಂಗಳೂರು ನಿವಾಸಿಗೆ 44 ಕೋಟಿ ರೂ. ಬಹುಮಾನ  ಭಾರತೀಯರಿಗೊಲಿದ 9 ಉಡುಗೊರೆ

ಅಬುಧಾಬಿ: ಏ 3ರಂದು ರಾತ್ರಿ ನಡೆದ ಅಬುಧಾಬಿ ಬಿಗ್ ಟಿಕೆಟ್ 250ನೇ ಸರಣಿ ಡ್ರಾದಲ್ಲಿ ಭಾರತೀಯನೊಬ್ಬನಿಗೆ 2 ಕೋಟಿ ದಿರ್ಹಂ (INR 44 ಕೋಟಿಗೂ ಹೆಚ್ಚು) ಬಹುಮಾನ ಲಭಿಸಿದೆ. 

ಬೆಂಗಳೂರು ನಿವಾಸಿ ಅರುಣ್ ಕುಮಾರ್ ವಡಕ್ಕೆ ಕೋರೋತ್ ಅವರು ಟಿಕೆಟ್ ಸಂಖ್ಯೆ 261031ನೊಂದಿಗೆ ಪ್ರಥಮ ಬಹುಮಾನ ಪಡೆದರು. ಅವರು ಮಾರ್ಚ್ 22ರಂದು ಆನ್ಲೈನ್ನಲ್ಲಿ ಬಹುಮಾನದ ಟಿಕೆಟ್ ಖರೀದಿಸಿದ್ದಾರೆ.

ಲಾಟರಿ ನಡೆಯುವ ಸ್ಥಳದಿಂದ ಬಿಗ್ ಟಿಕೆಟ್ ಅಧಿಕಾರಿಗಳು ಅರುಣ್ ಕುಮಾರ್ ಕೋಟ್ಯಾಧಿಪತಿಯಾದ ಬಗ್ಗೆ ತಿಳಿಸಲು ಕರೆ ಮಾಡಿದ್ದರು. ಆದರೆ ಅರುಣ್ ಕುಮಾರ್ ಯಾರೋ ಮೋಸ ಮಾಡುತ್ತಿದ್ದಾರೆಂದು ಭಾವಿಸಿ ಫೋನ್ ಕಟ್ ಮಾಡಿದರು. ಬಳಿಕ ಮತ್ತೊಮ್ಮೆ ಕರೆ ಮಾಡಿ ಮಾಹಿತಿ ನೀಡಲಾಯಿತು.

ಡೀಮ್ ಕಾರ್ ಸರಣಿ ಸೇರಿದಂತೆ 11 ದೊಡ್ಡ ಟಿಕೆಟ್ ಡ್ರಾಗಳಲ್ಲಿ ಒಂಬತ್ತನ್ನು ಭಾರತೀಯರು ಗೆದ್ದಿದ್ದಾರೆ. ಬೈಟು, ಗೆಟ್ ಒನ್ ಆಫರ್ ಮೂಲಕ ಉಚಿತವಾಗಿ ಪಡೆದ ಟಿಕೆಟ್ ಮೂಲಕ 3 ಮಂದಿ ಅದೃಷ್ಟ ಖುಲಾಯಿಸಿದ್ದು ವಿಶೇಷ.

ಬಕ್ರೇನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಸುರೇಶ್ ಮಥನ್ ಎರಡನೇ ಬಹುಮಾನ 1 ಲಕ್ಷ ದಿರ್ಹಂ ಗೆದ್ದಿದ್ದಾರೆ. ಅವರು 018462 ಟಿಕೆಟ್ನೊಂದಿಗೆ ಅದೃಷ್ಟವನ್ನು ಪಡೆದರು. ಡ್ರಾದಲ್ಲಿ ಭಾರತೀಯ ಪ್ರಜೆ ಮೊಹಮ್ಮದ್ ಶಫೀಕ್ 333142 ಸಂಖ್ಯೆಯೊಂದಿಗೆ 90,000 ದಿರ್ಹಂ ಮತ್ತು 259107 ಸಂಖ್ಯೆಯೊಂದಿಗೆ ಇನ್ನೋರ್ವ ಭಾರತೀಯ ರಿಯಾಜ್ ತಿರುವತ್ತುತ್ತೋಡಿ ನಾಲ್ಕನೇ ಬಹುಮಾನ 80,000 ದಿರ್ಹಂ ಗಳಿಸಿದರು.

ಕೊರಗಜ್ಜನ ಆದಿಕ್ಷೇತ್ರದಲ್ಲಿ ಗೆಲುವಿಗಾಗಿ ಪ್ರಾರ್ಥನೆ - ಕಾರ್ಯಕರ್ತರೇ ನಮಗೆ ಸ್ಟಾರ್ ಪ್ರಚಾರಕರು

Posted by Vidyamaana on 2024-04-06 17:30:22 |

Share: | | | | |


ಕೊರಗಜ್ಜನ ಆದಿಕ್ಷೇತ್ರದಲ್ಲಿ ಗೆಲುವಿಗಾಗಿ ಪ್ರಾರ್ಥನೆ - ಕಾರ್ಯಕರ್ತರೇ ನಮಗೆ ಸ್ಟಾರ್ ಪ್ರಚಾರಕರು

ಉಳ್ಳಾಲ, ಎ.6: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಅವರು ಉಳ್ಳಾಲದಲ್ಲಿ ಮತಯಾಚನೆ ನಡೆಸಿದರು. ಈ ವೇಳೆ ಹಿರಿಯರು, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿಯವರು ಪದ್ಮರಾಜ್ ಅವರನ್ನ ಆಶೀರ್ವದಿಸಿ ಸಲಹೆ ನೀಡಿದರು.


ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಅವರು ಪ್ರತಿನಿಧಿಸುವ ಮಂಗಳೂರು (ಉಳ್ಳಾಲ) ಕ್ಷೇತ್ರದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಗೆ ಇಂದು ಬೆಳಗ್ಗೆ ಪದ್ಮರಾಜ್ ಭೇಟಿ ನೀಡಿ ವರ್ತಕರು, ಗ್ರಾಹಕರಲ್ಲಿ ಮತಯಾಚನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾರುಕಟ್ಟೆಯ ವರ್ತಕರು ನನಗೆ ನೀಡಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ಸಮಸ್ಯೆಯಿಂದ ವರ್ತಕರು ಯಾವ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಅರಿತಿದ್ದೇನೆ. ಮಂಗಳೂರು ನಗರ ದೇಶದ ಬಲಿಷ್ಠ ನಗರಗಳಲ್ಲಿ ಒಂದಾಗಬೇಕು ಎನ್ನುವುದು ನನ್ನ ಗುರಿ. ಮಂಗಳೂರಿನಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಮಾದರಿಯ ಮಾರುಕಟ್ಟೆ ನಿರ್ಮಾಣಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮಂಗಳೂರಿನಲ್ಲಿ ನಲ್ವತ್ತು ವರುಷಗಳ ಕಾಲ ಕಾಂಗ್ರೆಸ್ ಸಂಸದರಿದ್ದರು. ನಂತರ ಬಿಜೆಪಿಯವರು ಸುಳ್ಳು ಹೇಳಿ ಜಯ ಗಳಿಸಿದರೆ ಹೊರತು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಲ್ಲ. ಈಗಾಗಲೇ ನಾನು ಬಹುತೇಕ ಮತದಾರರನ್ನ ತಲುಪಿದ್ದೇನೆ. ಮುಂದಿನ ಹದಿನೈದು ದಿವಸಗಳಲ್ಲಿ ಎಲ್ಲ ಮತದಾರರನ್ನು ಮುಟ್ಟುವ ಪ್ರಯತ್ನ ನಡೆಸುತ್ತೇನೆ. ಮತದಾರ ಪ್ರಭುಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನಮಗೆ ಸ್ಟಾರ್‌‌ಗಳೇ ಹೊರತು ಮಂಗಳೂರಿಗೆ ಸ್ಟಾರ್ ಪ್ರಚಾರಕರ ಅಗತ್ಯ ಇಲ್ಲ ಎಂದರು.



Leave a Comment: