ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಗೃಹಲಕ್ಷ್ಮಿ ಅರ್ಜಿಗೆ ಹೆಚ್ಚು ಹಣ ಪಡೆದಕ್ಕೆ 3 ಗ್ರಾಮ್ ಒನ್ ಕೇಂದ್ರಗಳ ಐಡಿ ರದ್ದು

Posted by Vidyamaana on 2023-07-24 00:56:58 |

Share: | | | | |


ಗೃಹಲಕ್ಷ್ಮಿ ಅರ್ಜಿಗೆ ಹೆಚ್ಚು ಹಣ ಪಡೆದಕ್ಕೆ 3 ಗ್ರಾಮ್ ಒನ್ ಕೇಂದ್ರಗಳ ಐಡಿ ರದ್ದು

ಬಾಗಲಕೋಟೆ, : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಗೃಹಲಕ್ಷ್ಮಿಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ.


ಈ ಸಂಬಂಧ ಟ್ವಿಟ್ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ‌, "ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮವನ್ನು ಸರಕಾರ ಸಹಿಸುವುದಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ

ಬ್ರೇಕಿಂಗ್ ನ್ಯೂಸ್ ಕೊಡೋಕೆ ನಾನು ಉಡುಪಿಗೆ ಬಂದಿಲ್ಲ ಖುಷ್ಬು ಸುಂದರ್

Posted by Vidyamaana on 2023-07-27 14:52:14 |

Share: | | | | |


ಬ್ರೇಕಿಂಗ್ ನ್ಯೂಸ್ ಕೊಡೋಕೆ ನಾನು ಉಡುಪಿಗೆ ಬಂದಿಲ್ಲ ಖುಷ್ಬು ಸುಂದರ್

ಉಡುಪಿ: ನಾನು ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಬಂದಿಲ್ಲ. ಇದು ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸಂಬಂಧಪಟ್ಟ ವಿಚಾರ. ಏನು ಹೇಳೋದಕ್ಕೂ ಸ್ವಲ್ಪ ಟೈಮ್ ಬೇಕಾಗತ್ತೆ. ಟು ಮಿನಿಟ್ಸ್ ನೂಡಲ್ಸ್ ಥರ ಅಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್, ತನ್ನನ್ನು ಪದೇ ಪದೇ ಪ್ರಶ್ನೆ ಮಾಡಿದ ಟಿವಿ ಪತ್ರಕರ್ತರ ಬಗ್ಗೆ ಗರಂ ಆಗಿದ್ದಾರೆ.


ವಿಡಿಯೋ ಪ್ರಕರಣ ಸಂಬಂಧಿಸಿ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಚರ್ಚಿಸಿದ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ಈಗಷ್ಟೇ ನಾನು ತನಿಖೆಯನ್ನು ಆರಂಭಿಸಿದ್ದೇನೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆ ಆಯ್ತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. 


ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಬಂದಿಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರವಾಗಿದ್ದು ಸಾಕ್ಷ್ಯಗಳಿಗಾಗಿ ಕಾಯಬೇಕು. ಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ. ನಾವೆಲ್ಲ ಇಂತಹದ್ದೇ ಶಿಕ್ಷಣ ಕೇಂದ್ರದಲ್ಲಿದ್ದು ಬಂದವರು. ಟಾಯ್ಲೆಟಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ ಎಂದರು. 


ನೀವು ಮಹಿಳಾ ಆಯೋಗದಿಂದ ದೂರು ದಾಖಲು ಮಾಡಿಕೊಳ್ತೀರಾ ಎಂಬ ಪ್ರಶ್ನೆಗೆ, ನಾನು ಈಗಷ್ಟೇ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಮೊಬೈಲಿನಲ್ಲಿ ವಿಡಿಯೋ ರಿಕವರಿ ಆಗಬೇಕು. ಎಫ್ಎಸ್ಎಲ್ ರಿಪೋರ್ಟ್ ಬಂದ ಬಳಿಕವಷ್ಟೆ ಈ ಬಗ್ಗೆ ನಿರ್ಣಯ ಮಾಡಬೇಕಾಗತ್ತೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಆಗೋದಿಲ್ಲ. ಜನರು ಜಾಲತಾಣದಲ್ಲಿ ಬರುವ ಸುದ್ದಿಗಳನ್ನು ನಂಬಬೇಡಿ. ಅಂತಹ ಯಾವುದೇ ಅಸಲಿ ವಿಡಿಯೋ ಸಿಕ್ಕಿಲ್ಲ. ಜನರು ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಸಲಹೆ ಮಾಡಿದ್ದಾರೆ.

ನಗರಸಭೆ ಉಪಚುನಾವಣೆ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಎರಡು ಕಡೆಯೂ ಮತ್ತೊಮ್ಮೆ ಬ್ಯಾಟ್ ಚಿಹ್ನೆ

Posted by Vidyamaana on 2023-12-18 20:14:00 |

Share: | | | | |


ನಗರಸಭೆ ಉಪಚುನಾವಣೆ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಎರಡು ಕಡೆಯೂ ಮತ್ತೊಮ್ಮೆ ಬ್ಯಾಟ್ ಚಿಹ್ನೆ

ಪುತ್ತೂರು: ನಗರಸಭೆಯ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡೂ ಕಡೆಯೂ ಚುನಾವಣ ಆಯೋಗ ಬ್ಯಾಟ್ ಚಿಹ್ನೆಯನ್ನು ನೀಡಿದೆ. 



ರಕ್ತೇಶ್ವರಿ ಘಟಕ ಕಬಕ ವಾರ್ಡ್ -1 ರಲ್ಲಿ ಅನ್ನಪೂರ್ಣ ರಾವ್  ಮತ್ತು ಚಿಕ್ಕಪುತ್ತೂರು ನೆಲ್ಲಿಕಟ್ಟೆ ವಾರ್ಡ್ ನಂ. 11 ರಲ್ಲಿ  ಚಿಂತನ್.ಪಿ ಪುತ್ತಿಲ ಪರಿವಾರದ ವತಿಯಿಂದ ಪಕ್ಷೇತರ ಸ್ಪರ್ಧಿಸುತ್ತಿದ್ದು ಇಬ್ಬರಿಗೂ ಚುನಾವಣೆ ಆಯೋಗ ಬ್ಯಾಟ್ ಚಿಹ್ನೆ ನೀಡಿದೆ.


ಪುತ್ತೂರಿನ ವಿಧಾನಸೌಧ ಚುನಾವಣ ಸಂದರ್ಭ ಅರುಣ್ ಕುಮಾರ್ ಪುತ್ತಿಲರಿಗೂ ಇದೇ ಚಿಹ್ನೆ ಲಭಿಸಿತ್ತು.  ಪುತ್ತೂರು ನಗರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭ ಚಿಹ್ನೆ ಆಯ್ಕೆ ಸಂದರ್ಭ ಎರಡು ಕಡೆಯೂ ಅರ್ಜಿಯಲ್ಲಿ ಬ್ಯಾಟ್ ಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಚುನಾವಣ ಆಯೋಗ ನಾಮಪತ್ರ  ಪರಿಶೀಲಿಸಿ ಬ್ಯಾಟ್ ಚಿಹ್ನೆಯನ್ನೇ ಅಧಿಕೃತಗೊಳಿಸಿದೆ.


ಡಿ.27ರಂದು ಎರಡು ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಗೋವಾದ ಹೊಟೇಲಿನಲ್ಲಿ ಹೆತ್ತ ಮಗುವನ್ನೇ ಹತ್ಯೆ ಮಾಡಿದ ಮಹಿಳಾ ಉದ್ಯಮಿ

Posted by Vidyamaana on 2024-01-09 15:24:41 |

Share: | | | | |


ಗೋವಾದ ಹೊಟೇಲಿನಲ್ಲಿ ಹೆತ್ತ ಮಗುವನ್ನೇ ಹತ್ಯೆ ಮಾಡಿದ ಮಹಿಳಾ ಉದ್ಯಮಿ

ಬೆಂಗಳೂರು, ಜ.9: ಗೋವಾದ ಹೋಟೆಲ್​ ಒಂದರಲ್ಲಿ ಮಗುವಿನ ಹತ್ಯೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಉದ್ಯಮಿ, ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಗೋವಾಗೆ ತೆರಳಿದ್ದಾಗ ಹೋಟೆಲ್​ನಲ್ಲಿ ತಂಗಿದ್ದ ಸುಚನಾ ಸೇಠ್ ಕೊಠಡಿಯಲ್ಲಿ ತನ್ನ ಮಗನ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. 


ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ (ಎಐ) ಲ್ಯಾಬ್‌ ಎಂಬ ಸಂಸ್ಥೆಯ ಸಿಇಓ ಆಗಿರುವ ಸುಚನಾ ಸೇಠ್ ಸೋಮವಾರ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ ಆರೋಪಿಯನ್ನು ಗೋವಾ ಪೊಲೀಸರ ಸೂಚನೆ ಮೇರೆಗೆ ಐಮಂಗಲದಲ್ಲಿ ಬಂಧಿಸಲಾಗಿದೆ. 




ಹೋಟೆಲ್​ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದರು. ಈ ವೇಳೆ ಅನುಮಾನಗೊಂಡ ಹೋಟೆಲ್​ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರು ಟ್ಯಾಕ್ಸಿ ಡ್ರೈವರ್‌ ಸಂಪರ್ಕ ಮಾಡಿ, ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.


ಇದರಂತೆ, ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಪೊಲೀಸ್ ಠಾಣೆ ಬಳಿ ಟ್ಯಾಕ್ಸಿ ಚಾಲಕ ಕಾರು ನಿಲ್ಲಿಸಿದ್ದು ಪೊಲೀಸರು ಆರೋಪಿ ಸುಚನಾ ಸೇಠ್‌ ರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸುಚನಾ ಸೇಠ್‌ ಪತಿ ವೆಂಕಟ ರಾಮನ್‌ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸುಚನಾ ಸೇಠಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆದೊಯ್ಯಲಾಗಿದೆ. 


ತನ್ನ ಮಾಜಿ ಪತಿಯ ಮೇಲಿನ ವಿರಸದಿಂದಾಗಿಯೇ ಮಗುವನ್ನು ಕೊಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಸೇಠ್‌ ಮಗುವನ್ನೇ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. 2010ರಲ್ಲಿ ವಿವಾಹವಾಗಿದ್ದ ಸೇಠ್ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್‌ ಅನುಮತಿ ನೀಡಿದ್ದರಿಂದ ಇದೇ ವಿಚಾರ ಗಲಾಟೆಗೆ ಕಾರಣವಾಗಿತ್ತು.

ಗೃಹಲಕ್ಷ್ಮಿ ಯೋಜನೆ ದುಡ್ಡಲ್ಲಿ ಮೊಬೈಲ್ ಖರೀದಿಸಿದ ಹಾವೇರಿಯ ಮಹಿಳೆ

Posted by Vidyamaana on 2024-04-29 14:57:20 |

Share: | | | | |


ಗೃಹಲಕ್ಷ್ಮಿ ಯೋಜನೆ ದುಡ್ಡಲ್ಲಿ ಮೊಬೈಲ್ ಖರೀದಿಸಿದ ಹಾವೇರಿಯ ಮಹಿಳೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಮಹಿಳೆಯೊಬ್ಬರು ಮೊಬೈಲ್ ಖರೀದಿಸಿದ್ದು, ವಾಲ್ಪೇಪರ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೋಟೋ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ಥಕತೆಯ ಮನೋಭಾವ ವ್ಯಕ್ತಪಡಿಸಿದ್ದಾರೆ.

ಹಾವೇರಿ ಕಾಂಗ್ರೆಸ್ ಸಮಾವೇಶದಲ್ಲಿ ಮಹಿಳೆಯೊಬ್ಬರು ತಾವು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು ಮೊಬೈಲ್ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದು, ಮೊಬೈಲ್ ವಾಲ್ ಪೇಪರ್ ನಲ್ಲಿ ಸಿಎಂ ಹಾಕಿಕೊಂಡಿರುವುದನ್ನು ತೋರಿಸಿದ್ದಾರೆ. ಈ ಕುರಿತ ಫೋಟೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ

ಹತ್ತೂರ ಒಡೆಯನ ಸಂಭ್ರಮದ ಜಾತ್ರೋತ್ಸವಕ್ಕೆ ಇನ್ನು ಹತ್ತೇ ದಿನ

Posted by Vidyamaana on 2024-04-01 16:39:12 |

Share: | | | | |


ಹತ್ತೂರ ಒಡೆಯನ ಸಂಭ್ರಮದ ಜಾತ್ರೋತ್ಸವಕ್ಕೆ ಇನ್ನು ಹತ್ತೇ ದಿನ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಇಂದು ಗೊನೆ ಮುಹೂರ್ತ ನಡೆಯಿತು.ಬೆಳಿಗ್ಗೆ ಪೂರ್ವ ಶಿಷ್ಟಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ತೆರಳಿ ಗೊನೆ ಮುಹೂರ್ತ ನೆರವೇರಿಸಲಾಯಿತು.



Leave a Comment: