ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ ಮೃತ್ಯು

Posted by Vidyamaana on 2024-02-04 19:35:22 |

Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ  ಮೃತ್ಯು

ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ. 



ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ. 


ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

Posted by Vidyamaana on 2024-03-29 11:32:14 |

Share: | | | | |


ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

ಬೆಳ್ತಂಗಡಿ, ಮಾ.29: ತುಮಕೂರಿನಲ್ಲಿ ಇತ್ತೀಚೆಗೆ ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದವರ ಮೃತದೇಹಗಳು ಇಂದು (ಮಾ.29) ಮುಂಜಾನೆ ಬೆಳ್ತಂಗಡಿಯ ಮನೆಗಳಿಗೆ ತಲುಪಿದೆ.


ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದೀಕ್ ಯಾನೆ ಇಮ್ಮಿಯಾಝ್ ಎಂಬವರ ಮೃತದೇಹಗಳು ಕೊಲೆಗೈದು ಕಾರು ಸಹಿತ ಸುಟ್ಟು ಹಾಕಿದ ಸ್ಥಿತಿಯಲ್ಲಿ ಮಾ.22ರಂದು ತುಮಕೂರಿನ ಕುಚ್ಚಂಗಿ ಕೆರೆ ಎಂಬಲ್ಲಿ ಪತ್ತೆಯಾಗಿದ್ದವು.ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿರುವ ಕಾರಣ ಇದೀಗ ಮೂವರ ಮೃತದೇಹಗಳನ್ನು ಹಸ್ತಾಂತರಿಸಲಾಗಿದ್ದು, ಕೃತ್ಯ ಬೆಳಕಿಗೆ ಬಂದ ಏಳು ದಿನಗಳ ಬಳಿಕ ಅಂದರೆ ಇಂದು ಬೆಳಗ್ಗೆ ಉಜಿರೆಗೆ ತಲುಪಿವೆ.


.

ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

Posted by Vidyamaana on 2024-06-30 16:40:20 |

Share: | | | | |


ಮಧುರಾ ಬೀಡಿ ಉದ್ಯಮಿ ಮರೀಲ್ ಅಬ್ದುಲ್ ಖಾದ‌ರ್ ನಿಧನ

ಪುತ್ತೂರು: ಮಧುರಾ ಬೀಡಿ ಉದ್ಯಮಿ, ಮರಿಲ್ ನಿವಾಸಿ ಡಿ.ಎ ಅಬ್ದುಲ್ ಖಾದರ್ (81 ವ) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮಧುರಾ ಗ್ರೂಪ್ ನ ಸ್ಥಾಪಕರಾಗಿರುವ ಡಿ ಎ ಅಬ್ದುಲ್ ಖಾದರ್ ಮಧುರಾ

ಬೆಳ್ತಂಗಡಿ ಪಿಕಪ್ ವಾಹನ ಡಿಕ್ಕಿಯಾಗಿ ವಿದ್ಯಾರ್ಥಿ ಮಹಮ್ಮದ್ ರಂಝಿನ್ ಮೃತ್ಯು

Posted by Vidyamaana on 2023-10-18 19:18:01 |

Share: | | | | |


ಬೆಳ್ತಂಗಡಿ  ಪಿಕಪ್ ವಾಹನ ಡಿಕ್ಕಿಯಾಗಿ ವಿದ್ಯಾರ್ಥಿ ಮಹಮ್ಮದ್ ರಂಝಿನ್ ಮೃತ್ಯು

ಬೆಳ್ತಂಗಡಿ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಬಾಲಕ ಮೃತಪಟ್ಟಿರುವ ಘಟನೆ ಲಾಯಿಲ ಜಂಕ್ಷನ್ ನಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಮಹಮ್ಮದ್ ರಂಝಿನ್(10) ಮೃತ ಬಾಲಕ.



ಶಾಲಾ ರಜೆಯ ಹಿನ್ನೆಲೆ ಮಹಮ್ಮದ್ ರಂಝಿನ್ ಸಂಬಂಧಿಕರ ಮನೆಗೆ ಬಂದಿದ್ದು, 11:50ರ ಸುಮಾರಿಗೆ ಅಂಗಡಿಗೆ ಹೋಗಿ ವಾಪಾಸ್ ರಸ್ತೆ ದಾಟುವಾಗ ಲಾಯಿಲ ಜಂಕ್ಷನ್ ಬಳಿ ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೈಫೈ ಎಳನೀರು ಕಳ್ಳ : ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ

Posted by Vidyamaana on 2023-11-22 18:14:59 |

Share: | | | | |


ಹೈಫೈ ಎಳನೀರು ಕಳ್ಳ : ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ

ಬೆಂಗಳೂರು : ಕಳ್ಳರೆಂದರೆ ಯಾವಾಗಲೂ ಶ್ರೀಮಂತರ ಮನೆ, ಶಾಪ್‌ಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಇವನು ಯಾರ ಮನೆಗೂ ನುಗ್ಗೋದಿಲ್ಲ. ನಗನಾಣ್ಯ ಕದಿಯೋದಿಲ್ಲ. ಆದರೆ ಇವನ ಕಣ್ಣಿಗೆ ಎಲ್ಲೇ ಎಳೆನೀರು ಕಂಡ್ರೂ ಕ್ಷಣಾರ್ಧದಲ್ಲಿ ಕದಿಯುತ್ತಾನೆ.ಹೌದು, ನಗರದಲ್ಲಿ ಎಳನೀರು ಕದಿಯುತ್ತಿದ್ದ ಮೋಹನ್ ಎಂಬ ವಿಚಿತ್ರ ಆಸಾಮಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನವನಾದ ಆರೋಪಿ ಮೋಹನ್, ಮಡಿವಾಳದಲ್ಲಿ ವಾಸವಾಗಿದ್ದ. ಕಳೆದ ಮೂರು ತಿಂಗಳಿಂದ ಎಳನೀರು ಕಳ್ಳತನ ಮಾಡುತ್ತಿದ್ದ.


ಎಳನೀರು ಕದಿಯಲು ಬರುತ್ತಿದ್ದುದ್ದು ಮಾತ್ರ ಕಾರಿನಲ್ಲೇ ರಾತ್ರಿ ವೇಳೆ ಕಾರಿನಲ್ಲಿ ಬಂದು ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ.ಇತ್ತೀಚೆಗೆ ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ರಾಜಣ್ಣ ಎಂಬುವರ 1150 ಎಳನೀರು ಕದ್ದಿದ್ದ ಆರೋಪಿ. ಈ ಬಗ್ಗೆ ರಾಜಣ್ಣ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಆಗಿತ್ತು.


ರಾತ್ರಿವೇಳೆ ಕಾರಿನಲ್ಲಿ ಬಂದು ಎಳನೀರು ಕದಿಯುತ್ತಿದ್ದ ಆಸಾಮಿ ಮೋಹನ್ ಎಂಬುದು ಖಚಿತವಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರು. ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ಪೊಲೀಸರ್ ವಶಕ್ಕೆ ಪಡೆದುಕೊಂಡಿದ್ದಾರೆ.ಎಳನೀರು ಕದ್ದ ಪ್ರಕರಣ ಸಂಬಂಧ ಆರೋಪಿ ಮೋಹನ ವಿಚಾರಣೆ ಮಾಡುವ ವೇಳೆ ಎಳನೀರು ಕಳ್ಳನ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ. ಜೂಜಾಟದ ಹುಚ್ಚು ಹತ್ತಿಸಿಕೊಂಡಿದ್ದ ಆರೋಪಿ, ಆನ್‌ಲೈನ್‌ನಲ್ಲಿ ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಇದರಿಂದ ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ.


ಮೊದಲು ಎಳನೀರು ವ್ಯಾಪಾರಿಯಾಗಿದ್ದ ಆರೋಪಿ


ಪ್ರತಿದಿನ ರಾತ್ರಿ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಬರುತ್ತಿದ್ದ ಅಸಾಮಿ. ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್‌. ಹೀಗಾಗಿ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಮೊದಲಿಗೆ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ ಆರೋಪಿ ಬಳಿಕ ರಾತ್ರಿ ಆಗ್ತಿದ್ದಂತೆ ಕಾರು ಬಾಡಿಗೆ ಪಡೆದುಕೊಂಡು ಎಳನೀರು ಕದಿಯುವ ಕಾಯಕ ಮಾಡಿಕೊಂಡಿದ್ದೇನೆ.ಕದ್ದ ಎಳನೀರು ಮಾರಲು ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದಇವನೆಂಥ ಕಾನ್ಫಿಡೆಂಟ್ ಕಳ್ಳನೆಂದರೆ ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟಾಗಿ ಕಸ್ಟಮರ್‌ಗಳನ್ನ ಇಟ್ಟುಕೊಂಡಿದ್ದ ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ. ಹೀಗೆ ದಿನಕ್ಕೆ 100-150 ಎಳನೀರು ಕದ್ದು ಮಾರಾಟ ಮಾಡ್ತಿದ್ದ.

ನಡುರಸ್ತೆಯಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

Posted by Vidyamaana on 2023-10-13 13:03:13 |

Share: | | | | |


ನಡುರಸ್ತೆಯಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಪುರ ಗ್ರಾಮದಲ್ಲಿ ನಡೆದಿದೆ.

ಮದರಾ ಬಿ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೌಡಪ್ಪಗೌಡ ಪಾಟೀಲ್(50) ಎನ್ನುವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಗೌಡಪ್ಪಗೌಡ, ಅಫಜಲಪುರ ತಾಲೂಕಿನ ಮದರಿ ಗ್ರಾಮದ ನಿವಾಸಿಯಾಗಿದ್ದು. ಹಳೇ ವೈಷಮ್ಯ ಹಿನ್ನೆಲೆ ಗೌಡಪ್ಪಗೌಡನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.



Leave a Comment: