ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಬಿಗ್ ಬಾಸ್‌ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ

Posted by Vidyamaana on 2024-01-30 07:25:20 |

Share: | | | | |


ಬಿಗ್ ಬಾಸ್‌ನಲ್ಲಿ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಕಡಬದ ಯುವಕ

ಕಡಬ: ಬಿಗ್ ಬಾಸ್ ಸೀಸನ್ 10 ರಲ್ಲಿ ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಕಡಬದ ಯುವಕ ಝೈನುಲ್ ಆಬಿದ್ ಎಂಬ ಯುವಕ ಅರ್ಧ ಗಡ್ಡ, ಮೀಸೆ ತೆಗೆದು ವೈರಲ್ ಆಗಿದ್ದಾನೆ.ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್, ಈ ಸಲದ ಬಿಗ್ ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರಲಿದ್ದಾರೆ. ಪ್ರತಾಪ್ ಏನಾದರೂ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ವೀಡಿಯೋ ಷೇರ್ ಮಾಡಿದ್ದನು. ಜೊತೆಗೆ ಹಾಗಾದರೆ ಹಸಿ ಮೆಣಸಿನಕಾಯಿ ತಿನ್ನುವುದಾಗಿಯೂ ಮತ್ತೊಂದು ವೀಡಿಯೋ ಹರಿಯಬಿಟ್ಟಿದ್ದನು.


ಕೊನೆಗೂ ಬಿಗ್ ಬಾಸ್‌ನಲ್ಲಿ ಕಾರ್ತಿಕ್ ವಿನ್ನರ್ ಆಗಿ ಹೊರ ಬಂದಿದ್ದು, ಪ್ರತಾಪ್ ರನ್ನರ್ ಅಪ್ ಅಷ್ಟೇ ಆಗಿದ್ದಾರೆ. ಫಲಿತಾಂಶ ಹೊರ ಬರುತ್ತಲೇ ಆಬಿದ್ ತಾನು ಹಾಕಿದ ಚಾಲೆಂಜ್‌ನಂತೆ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ವೀಡಿಯೋ ವೈರಲ್ ಆಗಿದೆ.

ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಎಸಿ ಸ್ಫೋಟ

Posted by Vidyamaana on 2024-05-04 08:27:14 |

Share: | | | | |


ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಎಸಿ ಸ್ಫೋಟ

ಬಳ್ಳಾರಿ, ಮೇ.03: ಬಳ್ಳಾರಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡ ಪರಿಣಾಮ ಅಲ್ಲಿದ್ದವರ ಪೈಕಿ 6 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡು ಘಟನೆ ಗುರುವಾರ ಸಂಜೆ ನಡೆದಿದ್ದು, ಬಳ್ಳಾರಿ ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್‌ ಮಳಿಗೆಯಲ್ಲಿ ಈ ದುರಂತ ಸಂಭವಿಸಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿಂಜಾವೇ ಕಾರ್ಯಕರ್ತರಿಗೆ ಭವ್ಯ ಸ್ವಾಗತ

Posted by Vidyamaana on 2023-05-29 16:59:13 |

Share: | | | | |


ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿಂಜಾವೇ ಕಾರ್ಯಕರ್ತರಿಗೆ ಭವ್ಯ ಸ್ವಾಗತ

ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಿದರು


ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಹಿನ್ನೆಲೆ ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆ ಕಾರ್ಯಕರ್ತರು ಪುರುಷರಕಟ್ಟೆ ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಯಕರ್ತರನ್ನು ಹಲವಾರು ಪ್ರಮುಖರು ಭೇಟಿಯಾಗಿ ಧೈರ್ಯ ತುಂಬಿದ್ದು, ಈ ರೀತಿ ದೌರ್ಜನ್ಯವೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು

ವಿಟ್ಲದಲ್ಲಿ ಅಶೋಕ್ ರೈಗೆ ಸನ್ಮಾನ, ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆ

Posted by Vidyamaana on 2023-05-30 14:14:58 |

Share: | | | | |


ವಿಟ್ಲದಲ್ಲಿ ಅಶೋಕ್ ರೈಗೆ ಸನ್ಮಾನ, ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆ

ಪುತ್ತೂರು: ಚುನಾವಣಾ ಪೂರ್ವದಲ್ಲಿ ಹೇಳಿರುವಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ. ಅಧಿಕಾರಿಗಳನ್ನು ಕೈಹಿಡಿದು ಗ್ರಾಮ ಗ್ರಾಮಗಳಿಗೆ ಕರೆತಂದು 94 ಸಿ, ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಿಸುತ್ತೇನೆ. ಆದ್ದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಲಂಚವಾಗಿ ಹಣ ನೀಡದಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ವಿಟ್ಲ ಚರ್ಚ್ ಬಳಿಯ ಶತಮಾನೋತ್ಸವ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರಾಗಿ ಆಯ್ಕೆಯಾದ ಅಶೋಕ್ ರೈಗೆ ಸನ್ಮಾನ ಹಾಗೂ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಅಶೋಕ್ ರೈಯನ್ನು ಶಾಸಕರಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಾಗೆಂದು ಸರ್ಕಾರದ ಸೌಲಭ್ಯಗಳನ್ನು ನನ್ನ ಕ್ಷೇತ್ರದ ಎಲ್ಲಾ ಜನರಿಗೂ ತಲುಪಿಸುವ ಕೆಲಸ ಮಾಡುತ್ತೇನೆ. ಯಾಕೆಂದರೆ ನನ್ನ ಕ್ಷೇತ್ರದ ಎಲ್ಲಾ ಜನರ ಶಾಸಕ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ, ಮುಂದಿನ ಚುನಾವಣೆಯಲ್ಲಿ ಇತರ ಪಕ್ಷದ ಕಾರ್ಯಕರ್ತರು, ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮಾಡುತ್ತೇನೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಮಾತನಾಡಲು ಇರುವ ಏಕೈಕ ಶಾಸಕ ಅಶೋಕ್ ಕುಮಾರ್ ರೈ ಅವರು. ಯು.ಟಿ.ಖಾದರ್ ಇದ್ದರೂ ಅವರು ಸ್ಪೀಕರ್ ಆಗಿದ್ದಾರೆ.‌ ಆದ್ದರಿಂದ ಉಭಯ ಜಿಲ್ಲೆಗಳ ಜನರ ಅಹವಾಲು ಸ್ವೀಕರಿಸಲು ಉದಾರ ಮನಸ್ಸಿನ, ಸೇವಾ ಮನೋಭಾವದ ಅಶೋಕ್ ರೈ ಅವರು ಶಾಸಕರಾಗಿ ನಮ್ಮ‌ ಜೊತೆಗಿದ್ದಾರೆ. ಇದು ನಮ್ಮ ಭಾಗ್ಯವೂ ಹೌದು ಎಂದರು.


ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಚುನಾವಣೆಯಲ್ಲಿ ಉಳ್ಳಾಲ ಮತ್ತು ಪುತ್ತೂರು ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ. ಪಕ್ಷದ ಮೇಲೆ ನಂಬಿಕೆಯಿಟ್ಟು, ಅಶೋಕ್ ಕುಮಾರ್ ರೈ ಅವರ ಮೇಲೆ ವಿಶ್ವಾಸವಿಟ್ಟು ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದರು, ಜನರು ಮತ ಹಾಕಿದರು. 

ಎಂ.ಎಸ್. ಮಹಮ್ಮದ್ ಮಾತನಾಡಿದರು. ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಮತದಾರರ ಸ್ನೇಹ ಸಮ್ಮಿಲನ

Posted by Vidyamaana on 2024-04-07 13:53:08 |

Share: | | | | |


ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಮತದಾರರ ಸ್ನೇಹ ಸಮ್ಮಿಲನ

ಬೆಂಗಳೂರು:ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಉಡುಪಿ- ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಪುಕ್ಕಟೆ ಕಾರ್ಯಕ್ರಮಗಳನ್ನು ಘೋಷಿಸಿ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಬಹುಶಃ ಇದನ್ನು ಸುಧಾರಿಸಲು ನಮಗೆ 10 ವರ್ಷ ಬೇಕಾಗಬಹುದು ಮತ, ಇರುವವರು ಹಿಂದಿನ ದಿನವೇ ಬಂದು ಮತ ಚಲಾಯಿಸಿ ಎಂದು ವಿನಂತಿಸಿದರು.

ದ.ಕ. ಲೋಕಸಭಾ ಚುನಾವಣೆ: ಸೌಜನ್ಯಾ ಹೋರಾಟ ಸಮಿತಿಯಿಂದ ನೋಟ ಅಭಿಯಾನ

Posted by Vidyamaana on 2024-04-05 14:27:16 |

Share: | | | | |


ದ.ಕ. ಲೋಕಸಭಾ ಚುನಾವಣೆ: ಸೌಜನ್ಯಾ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು, ಎ. 5: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ಸೌಜನ್ಯಾ ಪರ ಹೋರಾಟ ಸಮಿತಿ ನೋಟ ಅಭಿಯಾನ ಹಮ್ಮಿಕೊಂಡಿದ್ದು, ಹೋರಾಟ ಗಾರರು ಈ ಬಾರಿ ನೋಟ ಮತ ಚಲಾಯಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ ಎಂದು ಸಮಿತಿಯ ಮುಖಂಡ ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ ಮಾತ್ರವಲ್ಲ ಅದಕ್ಕಿಂತಲೂ ಹಿಂದೆ ನಡೆದ ಆನೆ ಮಾವುತ ಪ್ರಕರಣ, ಪದ್ಮಾವತಿ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಡೆದ ಎಲ್ಲಾ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗನೀಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರುವುದಾಗಿ ಹೇಳಿದರು.



Leave a Comment: